ವಿದೇಶಿ ನೆಲದಲ್ಲಿ ಪಾಕಿಸ್ತಾನವನ್ನ ಹೊಗಳಿ ಭಾರತವನ್ನ ತೆಗಳಿ ರಾಹುಲ್ ಗಾಂಧಿ ಹೊಸ ವಿವಾದ

Kannadaprabha News   | Kannada Prabha
Published : Nov 21, 2026, 07:17 AM IST
Rahul Gandhi Calls India Side Player In Geopolitics

ಸಾರಾಂಶ

ವಿದೇಶಿ ನೆಲದಲ್ಲಿ ರಾಹುಲ್ ಗಾಂಧಿ ಅವರು ಭಾರತದ ಆಂತರಿಕ ವಿಚಾರಗಳನ್ನು ಪ್ರಸ್ತಾಪಿಸಿ, ಜಾಗತಿಕ ವ್ಯವಹಾರಗಳಲ್ಲಿ ಭಾರತ ಇಂದು ಕೇವಲ ಸೈಡ್ ಪ್ಲೇಯರ್ ಆಗಿದೆ ಎಂದು ಮೋದಿ ಸರ್ಕಾರದ ವಿರುದ್ಧ ಟೀಕಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, ರಾಹುಲ್ ಅವರನ್ನು ಪಾಕಿಸ್ತಾನದ ಚಿಯರ್‌ಲೀಡರ್ ಎಂದು ಜರಿದಿದೆ.

ಪಿಟಿಐ ಶಿಕಾಗೋ/ನವದೆಹಲಿ (ನ.21): ವಿದೇಶಿ ನೆಲದಲ್ಲಿ ಭಾರತದ ಆಂತರಿಕ ವಿಚಾರಗಳನ್ನು ಮತ್ತೆ ಪ್ರಸ್ತಾಪಿಸಿರುವ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ(Rahul Gandhi), ಪಾಕಿಸ್ತಾನವು ಅಮೆರಿಕ-ಇರಾನ್ ಶಾಂತಿ ಮಾತುಕತೆಗಳಲ್ಲಿ ತೊಡಗಿಸಿಕೊಂಡಿರುವುದನ್ನು ಪ್ರಸ್ತಾಪಿಸಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ಜಾಗತಿಕ ವ್ಯವಹಾರಗಳಲ್ಲಿ ಭಾರತ ಇಂದು ಸೈಡ್ ಪ್ಲೇಯರ್ ಆಗಿದೆ(India is a side player today.)’ ಎಂದು ಮೋದಿಗೆ ಕುಟುಕಿದ್ದಾರೆ. ಅವರ ಹೇಳಿಕೆಗೆ ಕಿಡಿಕಾರಿರುವ ಬಿಜೆಪಿ, ರಾಹುಲ್‌ ಅವರನ್ನು ‘ಪಾಕಿಸ್ತಾನದ ಫ್ಯಾನ್ ಬಾಯ್’ ಮತ್ತು ‘ಪಾಕಿಸ್ತಾನದ ಚಿಯರ್‌ಲೀಡರ್’ ಎಂದು ಜರಿದಿದ್ದಾರೆ.

ವಿದೇಶಿ ನೆಲದಲ್ಲಿ ಪಾಕಿಸ್ತಾನ ಹೊಗಳಿದ ರಾಹುಲ್ ಗಾಂಧಿ:

ಶಿಕಾಗೋ ವಿವಿಯಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ‘ಭಾರತಕ್ಕೆ ತನ್ನದೇ ಆದ ಶಕ್ತಿಯಿದೆ. ಹಿಂದೆಲ್ಲಾ ಭಾರತ ಜಾಗತಿಕ ವಿಚಾರಗಳಲ್ಲಿ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುತ್ತಿತ್ತು. ಆದರೆ ಈಗ ಭಾರತ ಜಾಗತಿಕ ರಾಜಕೀಯದಲ್ಲಿ ಕೇವಲ ‘ಸೈಡ್ ಪ್ಲೇಯರ್’ ಆಗಿ ಬದಲಾಗಿದೆ. ಆದರೆ ಇದೇ ವೇಳೆ ನೆರೆಯ ಪಾಕಿಸ್ತಾನ, ಅಮೆರಿಕ ಮತ್ತು ಇರಾನ್‌ನಂತಹ ಪ್ರಮುಖ ದೇಶಗಳೊಂದಿಗೆ ಮಧ್ಯಸ್ಥಿಕೆ ಮಾಡುತ್ತಿದೆ’ ಎಂದು ಹೇಳಿದರು.

ಮಾತುಕತೆ ಅಸಾಧ್ಯ:

ಆದರೆ ಇದೇ ವೇಳೆ, ‘ಗಡಿಯಾಚೆಗಿನ ಭಯೋತ್ಪಾದನೆಗೆ ಬೆಂಬಲವನ್ನು ಸಂಪೂರ್ಣವಾಗಿ ನಿಲ್ಲಿಸದ ಹೊರತು ಪಾಕ್‌ ಜತೆ ಯಾವುದೇ ದ್ವಿಪಕ್ಷೀಯ ಮಾತುಕತೆ ಸಾಧ್ಯವಿಲ್ಲ’ ಎಂಬ ಸ್ಪಷ್ಟ ಸಂದೇಶವನ್ನೂ ರಾಹುಲ್‌ ನೀಡಿದರು.

ಬಿಜೆಪಿ ಕಿಡಿ:

ರಾಹುಲ್ ಟೀಕೆಗೆ ಬಿಜೆಪಿ ವಕ್ತಾರ ಸಿ.ಆರ್. ಕೇಶವನ್ ಪ್ರತಿಕ್ರಿಯಿಸಿ, ‘ರಾಹುಲ್ ಗಾಂಧಿ ಅವರ ಮಾತುಗಳು ಅಕ್ಷಮ್ಯ. ಅವರು ಪಾಕಿಸ್ತಾನದ ಚಿಯರ್‌ಲೀಡರ್‌ನಂತೆ ಮಾತನಾಡುತ್ತಿದ್ದಾರೆ. ಅವರಿಗೆ ಜಾಗತಿಕ ರಾಜಕೀಯದ ಬಗ್ಗೆ ಎಷ್ಟು ಅಜ್ಞಾನವಿದೆ ಎಂಬುದು ಇದರಿಂದ ಗೊತ್ತಾಗುತ್ತದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತ ಇಂದು ಜಗತ್ತಿನ ಪ್ರಮುಖ ಶಕ್ತಿಯಾಗಿ ಬೆಳೆದಿದೆ, ಅದನ್ನು ಸಹಿಸಿಕೊಳ್ಳಲು ಕಾಂಗ್ರೆಸ್‌ಗೆ ಆಗುತ್ತಿಲ್ಲ’ ಎಂದು ಕುಟುಕಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಕ್ತಸಂಬಂಧಿಗಳ ಮದುವೆ: ಬೆಂಗಳೂರು ವಿದ್ಯಾರ್ಥಿನಿ ಅರ್ಜಿಗೆ ಸುಪ್ರೀಂ ಕೋರ್ಟ್ ನೋಟಿಸ್
India Latest News Live: ರಕ್ತಸಂಬಂಧಿಗಳ ಮದುವೆ - ಬೆಂಗಳೂರು ವಿದ್ಯಾರ್ಥಿನಿ ಅರ್ಜಿಗೆ ಸುಪ್ರೀಂ ಕೋರ್ಟ್ ನೋಟಿಸ್