ದಾಖಲೆ ಸಮೇತ ರಾಹುಲ್ ಗಾಂಧಿ ಕೇಂಬ್ರಿಡ್ಜ್ ಭಾಷಣದ ಷಡ್ಯಂತ್ರ ಬಟಾ ಬಯಲು, ಕಾಂಗ್ರೆಸ್ ಕಂಗಾಲು!

Published : Mar 03, 2023, 11:07 PM ISTUpdated : Mar 03, 2023, 11:10 PM IST
ದಾಖಲೆ ಸಮೇತ ರಾಹುಲ್ ಗಾಂಧಿ ಕೇಂಬ್ರಿಡ್ಜ್ ಭಾಷಣದ ಷಡ್ಯಂತ್ರ ಬಟಾ ಬಯಲು, ಕಾಂಗ್ರೆಸ್ ಕಂಗಾಲು!

ಸಾರಾಂಶ

ರಾಹುಲ್ ಗಾಂಧಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿನ ಮಾಡಿದ ಭಾಷಣದಲ್ಲಿ ಭಾರತ ಹಾಗೂ ಮೋದಿ ಸರ್ಕಾರದ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ. ಆದರೆ ಈ ಆರೋಪಗಳ ಹಿಂದಿರುವ ಅಸಲಿ ಷಡ್ಯಂತ್ರವನ್ನು ಅಸ್ಸಾಂ ಸಿಎಂ ಹಿಮಂತ ಶರ್ಮಾ ದಾಖಲೆ ಸಮೇತ ಬಯಲು ಮಾಡಿದ್ದಾರೆ. ಹಿಮಂತಾ ಒಂದೊಂದು ದಾಖಲೆಗೆ ಕಾಂಗ್ರೆಸ್ ಕಂಗಾಲಾಗಿದೆ.

ನವದೆಹಲಿ(ಮಾ.03): ಭಾರತದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿಯಾಗುತ್ತಿದೆ. ಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ. ಅಲ್ಪಸಂಖ್ಯಾತರ ಮೇಲೆ ದಾಳಿಗಳಾಗುತ್ತಿದೆ ಎಂದು ರಾಹುಲ್ ಗಾಂಧಿ ತಮ್ಮ ಕೆಂಬ್ರಿಡ್ಜ್ ವಿವಿಯಲ್ಲಿನ ಭಾಷಣದಲ್ಲಿ ಹೇಳಿದ್ದಾರೆ. ರಾಹುಲ್ ಗಾಂಧಿ ಆಡಿದ ಪ್ರತಿಯೊಂದು ಮಾತು ವಿವಾದಕ್ಕೆ ಕಾರಣವಾಗಿದೆ. ಸುಳ್ಳು ಆರೋಪಗಳನ್ನು ಮಾಡಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತ ಹಾಗೂ ಮೋದಿ ವಿರುದ್ಧ ಕಾಂಗ್ರೆಸ್ ಷಡ್ಯಂತ್ರ ರೂಪಿಸುತ್ತಿದೆ ಎಂದು ಬಿಜೆಪಿ ಹೇಳಿತ್ತು. ಆಧರೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ, ರಾಹುಲ್ ಆಡಿದ ಪ್ರತಿಯೊಂದು ಮಾತಿನ ಹಿಂದಿನ ಅಸಲಿ ವರ್ಮ ಹಾಗೂ ಅದಕ್ಕೂ ಪೂರಕ ದಾಖಲೆ ಬಹಿರಂಗ ಪಡಿಸಿದ್ದಾರೆ. ಹಿಮಂತ ಬಿಸ್ವಾ ಶರ್ಮಾ ಏಟಿಕೆಗೆ ಕಾಂಗ್ರೆಸ್ ಕಂಗಾಲಾಗಿದೆ.

ಮೊದಲು ವಿದೇಶಿ ಎಜೆನ್ಸಿಗಳು ನಮ್ಮನ್ನು ಟಾರ್ಗೆಟ್ ಮಾಡಿ ಪಿತೂರಿ ನಡೆಸಿತು. ಇದೀಗ ನಮ್ಮವರೇ ವಿದೇಶಿ ನಲೆದಲ್ಲಿ ನಮ್ಮನ್ನು ಟಾರ್ಗೆಟ್ ಮಾಡಿದ್ದಾರೆ. ರಾಹುಲ್ ಗಾಂಧಿ ಕೇಂಬ್ರಿಡ್ಜ್‌ನಲ್ಲಿ ಮಾಡಿದ ಭಾಷಣ , ಭಾರತ ಹಾಗೂ ಪ್ರಧಾನಿ ಮೋದಿಯನ್ನು ಗುರಿಯಾಗಿಸಿ ನಡೆಸಿದ ವ್ಯವಸ್ಥಿತಿ ಷಡ್ಯಂತ್ರ ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಇಷ್ಟೇ ಅಲ್ಲ ರಾಹುಲ್ ಗಾಂಧಿ ಪ್ರತಿ ಆರೋಪಕ್ಕೆ ದಾಖಲೆ ನೀಡಿದ್ದಾರೆ. ಜೊತೆಗೆ ರಾಹುಲ್ ಭಾಷಣ ಹಿಂದಿನ ಅಸಲಿಯತ್ತು ಬಹಿರಂಗಪಡಿಸಿದ್ದಾರೆ. 

ಕೆಂಬ್ರಿಜ್‌ನಲ್ಲಿ ಕುಳಿತು ದೇಶದ ಪ್ರಜಾಪ್ರಭುತ್ವ ಆತಂಕದಲ್ಲಿದೆ ಎಂದ ರಾಹುಲ್‌ ಗಾಂಧಿ!

ರಾಹುಲ್ ಆರೋಪ: ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ, ಇದರಿಂದ ಸ್ವತಂತ್ರವಾಗಿ ಏನೂ ವ್ಯಕ್ತಪಡಿಸಲು ಸಾಧ್ಯವಿಲ್ಲ
ಹಿಮಂತ ಉತ್ತರ: ರಾಹುಲ್ ಗಾಂಧಿ ಇತ್ತೀಚೆಗೆ 40,000 ಕಿಲೋಮೀಟರ್ ಯಾತ್ರೆ ಪೂರೈಸಿದ್ದಾರೆ. ಮೋದಿ ಸರ್ಕಾರ ನೀಡಿದ ಭದ್ರತೆಯಲ್ಲಿ ಯಾವುದೇ ಆತಂಕವಿಲ್ಲದೆ ಸಾಗಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಬಿಜೆಪಿ ನಾಯಕರನ್ನು ಹೇಗೆ ನಡೆಸಿಕೊಳ್ಳಲಾಗಿದೆ ಎಂಬುದನ್ನು ನೆನಪಿಸಿಕೊಳ್ಳಿ.

ರಾಹುಲ್ ಆರೋಪ: ನನ್ನ ಫೋನ್‌ನಲ್ಲಿ ಪೆಗಾಸಿಸ್ ಮಾಲ್‌ವೆರ್ ಇದೆ. ಮಾತನಾಡುವಾಗ ಎಚ್ಚರಿಕೆಂಯಿಂದ ಇರಿ ಎಂದು ಗುಪ್ರಚರ ಅಧಿಕಾರಿಗಳು ಸೂಚಿಸಿದ್ದಾರೆ.
ಹಿಮಂತ ಉತ್ತರ: ಪೆಗಾಸಿಸ್ ಕುರಿತು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದೆ. ರಾಹುಲ್ ಗಾಂಧಿ ತಮ್ಮ ಫೋನ್ ವಿಚಾರಣೆಗಾಗಿ ಸಲ್ಲಿಕೆ ಮಾಡಿ ಎಂದು ಕೋರ್ಟ್ ಸೂಚಿಸಿತ್ತು. ಆದರೆ ರಾಹುಲ್ ಗಾಂಧಿ ಫೋನ್ ನೀಡಲು ನಿರಾಕರಿಸಿದ್ದಾರೆ. ಈ ಕುರಿತು ವಿಚಾರಣೆ ನಡೆಸಿ ಪೆಗಾಸಿಸ್ ಕುರಿತು ಯಾವುದೇ ಆಧಾರವಿಲ್ಲ, ವಿಪಕ್ಷಗಳ ಆರೋಪಗಳನ್ನು ತಳ್ಳಿ ಹಾಕಿದೆ.

 

 

ರಾಹುಲ್ ಆರೋಪ: ಅಲ್ಪಸಂಖ್ಯಾತರ ಮೇಲೆ ದಾಳಿಯಾಗುತ್ತಿದೆ. ಅವರನ್ನು ಎರಡನೇ ದರ್ಜೆ ನಾಗರೀಕರಾಗಿ ನೋಡಲಾಗುತ್ತಿದೆ.
ಹಿಮಂತ ಉತ್ತರ: 2014ರ ಬಳಿಕ ಭಾರತದಲ್ಲಿ ದಾಖಲಾದ ಕೋಮುಗಲಭೆ ಸಂಖ್ಯೆ ಅತೀ ಕಡಿಮೆ. ಇನ್ನು ಅಲ್ಪಸಂಖ್ಯಾತ ಕುಟುಂಬಗಳು ನೆಮ್ಮದಿಯ ಜೀವನ ನಡೆಸುತ್ತಿದೆ. ಹಲವು ಅಲ್ಪಸಂಖ್ಯಾತ ನಾಯಕರು ಮೋದಿ ನಾಯಕತ್ವ ಮೆಚ್ಚಿಕೊಂಡು, ಬೆಂಬಲ ಸೂಚಿಸಿದ್ದಾರೆ.

ರಾಹುಲ್ ಆರೋಪ:ಭಾರತ ಯುರೋಪ್ ಮಾದರಿ ರಾಜ್ಯಗಳ ಒಕ್ಕೂಟ
ಹಿಮಂತ ಉತ್ತರ:ಭಾರತ ಹಾಗೂ ಭಾರತದ ನಾಗರೀಕತೆಯೂ ಯೂರೋಪ್ ರಾಜಕೀಯ ಅಸ್ತಿತ್ವಕ್ಕೆ ಬರುವುದಕ್ಕೂ ಸಾವಿರಾರೂ ವರ್ಷಗಳ ಮೊದಲೇ ಅಸ್ತಿತ್ವದಲ್ಲಿದೆ. ಅದರೂ ನಾವು ಅವರ ಮಾದರಿಯನ್ನು ಹೊಂದ್ದಿದೇವೆ?

ಕೇಂಬ್ರಿಡ್ಡ್ ವಿಶ್ವವಿದ್ಯಾಲಯಕ್ಕಾಗಿ ರಾಹುಲ್ ಲುಕ್ ಬದಲು, ಕಳೆದೆರಡು ವರ್ಷದಲ್ಲಿ ರಾಗಾ ಸ್ಟೈಲ್ ಹತ್ತು ಹಲವು!

ರಾಹುಲ್ ಆರೋಪ:ಚೀನಾ ಸೂಪರ್ ಪವರ್ ದೇಶ. ಬೆಲ್ಟ್ ಅಂಡರ್ ರೋಡ್ (BRI) ಉದಾಹರಣೆಯಾಗಿ ನೀಡಿದ್ದಾರೆ.
ಹಿಮಂತ ಉತ್ತರ: BRI ಇಂದು ಹಲವು ದೇಶಗಳಲ್ಲಿ ಎದುರಿಸುತ್ತಿರುವ ಆರ್ಥಿಕ ಹಾಗೂ ಸಾಲದ ಬಿಕ್ಕಟ್ಟಿಗೆ ಕಾರಣವಾಗಿದೆ.ಅಂಕಲ್ ಪಿತ್ರೋಡಾ ಇದನ್ನು ರಾಹುಲ್ ಗಾಂಧಿಗೆ ಹೇಳಬೇಕು

ರಾಹುಲ್ ಆರೋಪ: ಪ್ರಜಾಪ್ರಭುತ್ವ ದೇಶದಲ್ಲಿ ಉತ್ಪಾದನೆ ಸೂಕ್ತವಲ್ಲ 
ಹಿಮಂತ ಉತ್ತರ: ಇಂದಿರಾ ಗಾಂಧಿ ಪ್ರಜಾಪ್ರಭುತ್ವವನ್ನು ಅಮಾನತುಗೊಳಿಸಿದಾಗ, ಉತ್ಪಾದನೆ ಅಧಿಕವಾಗಲಿಲ್ಲ. ಮೋದಿ ಸರ್ಕಾರ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟೀವ್(PIL) ಯೋಜನೆ ಜಾರಿಗೆ ತಂದಿದ್ದಾರೆ.ಭಾರತವನ್ನು ಕಮ್ಯೂನಿಸ್ಟ್ ಸರ್ವಾಧಾಕಿ ಯುಗಕ್ಕೆ ಮತ್ತೆ ಕೊಂಡೊಯ್ಯಲು ಇದು ಕಾಂಗ್ರೆಸ್ ಅಜೆಂಡ?

ರಾಹುಲ್ ಆರೋಪ:ಚೀನಾ ಇಂಟೆಲೆಕ್ಚುವಲ್ ಪ್ರಾಪರ್ಟಿ ಹಕ್ಕುಗಳು ಆಳವಾದ ಮತ್ತು ಶಕ್ತಿಯುತ ಪರಿಕಲ್ಪನೆ ಅನ್ನೋದನ್ನು ಚೀನಾ ನಂಬುವುದಿಲ್ಲ
ಹಿಮಂತ ಉತ್ತರ:  ಕಾಪಿ ರೈಟ್ ಕಾನೂನು ತಿರಸ್ಕರಿಸುವುದು, ಕಡಲ್ ಕಳ್ಳತನ ಪ್ರೋತ್ಸಾಹಿಸುವುದನ್ನು ಪಿ ಚಿದಂಬರಂ ಉತ್ತೇಜಿಸುತ್ತಾರ ಅನ್ನೋದನ್ನು ಕೇಳಲು ಬಯಸುತ್ತೇನೆ?

ರಾಹುಲ್ ಆರೋಪ: ಕಮ್ಯೂನಿಸ್ಟ್ ಪಕ್ಷದ ಸದಸ್ಯರು ತಮ್ಮ ಆಲೋಚನೆಗಳಿಂದ ಭದ್ರ ದೇಶವನ್ನು ರೂಪಿಸಿದ್ದಾರೆ. ಚೀನಾದಿಂದ ಆಕರ್ಷಿತನಾಗಿದ್ದೇನೆ.
ಹಿಮಂತ ಉತ್ತರ: ಚೀನಾದಿಂದ ಗಾಂಧಿ ಕುಟುಂಬ ದೇಣಿಗೆ ಪಡೆದ ಋಣ ತೀರಿಸಲು ರಾಹಲ್ ಗಾಂದಿಯ ಶ್ರೀಮಂತ ಪ್ರಶಂಸೆ ಅರ್ಥವಾಗುತ್ತದೆ.

ರಾಹುಲ್ ಆರೋಪ: ಕಾಶ್ಮೀರದಲ್ಲಿ ಉಗ್ರರನ್ನು ನಾನು ನೋಡಿದೆ. ಅವರು ನನ್ನನ್ನು ನೋಡಿದರು. ಆದರೆ ಅವರು ನನ್ನನ್ನು ಗುರಿಯಾಗಿಸಿ ದಾಳಿ ಮಾಡುವುದಿಲ್ಲ ಅನ್ನೋದು ಖಚಿತ.
ಹಿಮಂತ ಉತ್ತರ: ಈ ಘಟನೆಯನ್ನು ಭದ್ರತಾ ಪಡೆಗೆ ರಾಹುಲ್ ಗಾಂಧಿ ಯಾಕೆ ವರದಿ ಮಾಡಿಲ್ಲ? ರಾಹುಲ್ ಗಾಂಧಿ ಹಾಗೂ ಉಗ್ರರ ನಡುವೆ ಯಾವುದಾದರೂ ಒಪ್ಪಂದ ಆಗಿದೆಯಾ? 

ರಾಹುಲ್ ಆರೋಪ: ಕಾರ್ ಬಾಂಬ್ ದಾಳಿಯಿಂದ ಪುಲ್ವಾಮಾದಲ್ಲಿ 40 ಯೋಧರು ಹತ್ಯೆಯಾಗಿದ್ದಾರೆ. 
ಹಿಮಂತ ಉತ್ತರ: ನಮ್ಮ ಯೋಧರನ್ನು ಅವಮಾನಿಸುವ ಧೈರ್ಯ ಹೇಗೆ ಬಂತು? ಅದು ಕೇವಲ ಬಾಂಬ್ ಅಲ್ಲ, ಅದು ಭಯೋತ್ಪಾದಕ ದಾಳಿ. ಈ ದಾಳಿ ಹಿಂದೆ ಪಾಕಿಸ್ತಾನ ಇದೆ ಅನ್ನೋದನ್ನು ರಾಹುಲ್ ಗಾಂಧಿ ಹೇಳಿಲ್ಲ. ಹಾಗಾದರೆ ಉಗ್ರರು ಹಾಗೂ ಕಾಂಗ್ರೆಸ್ ನಡುವ ಏನಾದರು ಸಂಬಧವಿದೆಯಾ?

ರಾಹುಲ್ ಗಾಂಧಿ ಆಡಿದ ಪ್ರತಿಯೊಂದು ಮಾತಿಗೂ ಹಿಮಂತ ಬಿಸ್ವಾ ಶರ್ಮಾ ದಾಖಲೆಯೊಂದಿಗೆ ಉತ್ತರ ನೀಡಿದ್ದಾರೆ. ಈ ಉತ್ತರಕ್ಕೆ ಕಾಂಗ್ರೆಸ್ ಕಕ್ಕಾಬಿಕ್ಕಿಯಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..