ಲೈಂಗಿಕ ದೌರ್ಜನ್ಯದ ಕಾನೂನುಗಳೇ ಪುರುಷ ವಿರೋಧಿ: ಅಲಹಾಬಾದ್‌ ಹೈಕೋರ್ಟ್‌

By Santosh Naik  |  First Published Aug 2, 2023, 5:43 PM IST

ಲೈಂಗಿಕ ಅಪರಾಧಗಳ ನಿಜವಾದ ಪ್ರಕರಣಗಳ ಬಗ್ಗೆ ಗಮನ ನೀಡುತ್ತಲೇ, ಇಂಥ ಕಾನೂನುಗಳು ಪುರುಷರ ವಿರುದ್ಧ ಹೆಚ್ಚು ಪಕ್ಷಪಾತಿ ಇರುವಂತಿದೆ ಎಂದು ಅಲಹಾಬಾದ್‌ ಹೈ ಕೋರ್ಟ್‌ ಅಭಿಪ್ರಾಯಪಟ್ಟಿದೆ.


ನವದೆಹಲಿ (ಆ.2): ಇಂದಿನ ದಿನಗಳಲ್ಲಿ ಲೈಂಗಿಕ ಅಪರಾಧಗಳ ನಿಜವಾದ ಪ್ರಕರಣಗಳನ್ನು ಗುರುತಿಸುವುದೇ ಸವಾಲಾಗಿದೆ. ಇಂಥ ನಿಜವಾದ ಪ್ರಕರಣಗಳ ಬಗ್ಗೆ ಆಘಾತ ವ್ಯಕ್ತಪಡಿಸುತ್ತಲೇ, ಲೈಂಗಿಕ ದೌರ್ಜನ್ಯದ ಕಾನೂನುಗಳು ಹೆಚ್ಚಾಗಿ ಪುರುಷರ ಕುರಿತಾಗಿ ಪಕ್ಷಪಾತಿಯಾಗಿವೆ. ಈಗಿರುವ ಪ್ರವೃತ್ತಿಯ ಪ್ರಕಾರ ಹೆಚ್ಚಿನ ಅತ್ಯಾಚಾರದ ಪ್ರಕರಣಗಳು ಸುಳ್ಳು ಆರೋಪಗಳನ್ನೇ ಒಳಗೊಂಡಿರುತ್ತದೆ ಎಂದು ಇತ್ತೀಚೆಗೆ ಅಲಹಾಬಾದ್ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಆರೋಪಿಗಳೊಂದಿಗೆ ಸುದೀರ್ಘ ದೈಹಿಕ ಸಂಬಂಧದಲ್ಲಿ ಒಳಪಟ್ಟ ಬಳಿಕ ಹುಡುಗಿ ಅಥವಾ ಮಹಿಳೆಯು ಲೈಂಗಿಕ ದೌರ್ಜನ್ಯದ ಕಾನೂನಿನ ಲಾಭ ಪಡೆದು ಆತನ ವಿರುದ್ಧವೇ ಎಫ್‌ಐಆರ್‌ ದಾಖಲಿಸುವ ಗಮನಾರ್ಹ ಸಂಖ್ಯೆಯ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದು ನ್ಯಾಯಾಲಯವು ಗಮನಿಸಿದೆ. 

ಏಕಸದಸ್ಯ ನ್ಯಾಯಮೂರ್ತಿ ಸಿದ್ಧಾರ್ಥ್ ಅವರು ಕಾನೂನು ಪುರುಷರ ವಿರುದ್ಧ ಹೆಚ್ಚು ಪಕ್ಷಪಾತವನ್ನು ಹೊಂದಿದೆ ಮತ್ತು ಅಂತಹ ವಿಷಯಗಳಲ್ಲಿ ಜಾಮೀನು ಅರ್ಜಿಗಳನ್ನು ವ್ಯವಹರಿಸುವಾಗ ನ್ಯಾಯಾಲಯಗಳು ಜಾಗರೂಕರಾಗಿರಬೇಕು ಎಂದು ಹೇಳಿದರು.

ಇಂತಹ ಜಾಮೀನು ಅರ್ಜಿಗಳನ್ನು ಪರಿಗಣಿಸುವಾಗ ನ್ಯಾಯಾಲಯಗಳು ಬಹಳ ಎಚ್ಚರಿಕೆಯಿಂದ ಇರಬೇಕಾದ ಸಮಯ ಬಂದಿದೆ. ಕಾನೂನು ಪುರುಷ ವಿರುದ್ಧ ಹೆಚ್ಚು ಪಕ್ಷಪಾತ ಹೊಂದಿದೆ. ಎಫ್‌ಐಅರ್‌ಗಳಲ್ಲಿ ಸುಖಾಸುಮ್ಮನೆ ಬೇಕಾಬಿಟ್ಟಿ ಆರೋಪ ಮಾಡುವುದು ಬಹಳ ಸುಲಭ. ಇಂಥ ಆರೋಪಗಳನ್ನು ಯಾರ ವಿರುದ್ಧ ಬೇಕಾದರೂ ಬಹಳ ಸುಲಭವಾಗಿ ಮಾಡಲಾಗುತ್ತಿದೆ' ಎಂದು ಕೋರ್ಟ್‌ ಹೇಳಿದೆ.

ಹೆಚ್ಚುವರಿಯಾಗಿ, ಸಾಮಾಜಿಕ ಮಾಧ್ಯಮಗಳು, ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳ ಪ್ರಭಾವವು ಯುವ ಹುಡುಗರು ಮತ್ತು ಹುಡುಗಿಯರು ಅಳವಡಿಸಿಕೊಂಡ "ಮುಕ್ತತೆಯ ಸಂಸ್ಕೃತಿ" ಯನ್ನು ಉತ್ತೇಜಿಸುತ್ತಿದೆ ಎಂದು ನ್ಯಾಯಾಲಯ ಹೇಳಿದೆ. ಅದೇನೇ ಇದ್ದರೂ, ಈ ನಡವಳಿಕೆಯು ಭಾರತೀಯ ಸಾಮಾಜಿಕ ಮತ್ತು ಕೌಟುಂಬಿಕ ಮೌಲ್ಯಗಳೊಂದಿಗೆ ಘರ್ಷಣೆಯಾದಾಗ, ಕುಟುಂಬ ಮತ್ತು ಹುಡುಗಿಯ ಗೌರವದ ರಕ್ಷಣೆಗೆ ಕಾರಣವಾದಾಗ, ಅದು ಕೆಲವೊಮ್ಮೆ ಸುಳ್ಳು ಪ್ರಕರಣಗಳನ್ನು ದಾಖಲಿಸುವಲ್ಲಿ ಕಾರಣವಾಗುತ್ತದೆ ಎಂದು ನ್ಯಾಯಾಲಯವು ಗಮನಿಸಿದೆ.

Tap to resize

Latest Videos

ಕುರಾನ್‌ ಬಗ್ಗೆ ಒಂದು ಡಾಕ್ಯುಮೆಂಟರಿ ಮಾಡಿ ನೋಡಿ, ಪರಿಣಾಮ ಗೊತ್ತಾಗುತ್ತೆ: ಅಲಹಾಬಾದ್‌ ಹೈಕೋರ್ಟ್‌

ಸುದೀರ್ಘ ಅವಧಿಯ ಕಾಲ ಒಟ್ಟಿಗೆ ಇದ್ದ ಹುಡುಗ ಹುಡುಗಿ ನಡುವೆ ಏನಾದರೂ ಸಣ್ಣ ವ್ಯತ್ಯಾಸಗಳು ಆದಾಗ ಸಮಸ್ಯೆ ಆರಂಭವಾಗುತ್ತದೆ. ಇಂಥ ಪ್ರಕರಣಗಳಲ್ಲಿ ಅವರ ಬಾಂಧವ್ಯ ಮುಂದುವರಿಯದೇ ಇದ್ದಾಗ, ಟ್ರಬಲ್‌ ಆರಂಭವಾಗುತ್ತದೆ ಎಂದಿದೆ. ಇನ್ನು ಕಾನೂನಿನ ರಕ್ಷಣೆಯಲ್ಲಿ ಹುಡುಗಿಯರು ಅಥವಾ ಮಹಿಳೆಯರಿಗೆ ಹೆಚ್ಚಿನ ಮನ್ನಣೆ ಸಿಗುತ್ತದೆ. ಹಾಗಾಗಿ ಪುರುಷರನ್ನು ಸುಲಭವಾಗಿ ಇಂಥ ಕೇಸ್‌ಗಳನ್ನು ಫಿಟ್‌ ಮಾಡಲಾಗುತ್ತಿದೆ ಎಂದು ಹೇಳಿದೆ.

ಇಸ್ಲಾಂನಲ್ಲಿ ವಿವಾಹಪೂರ್ವ ಲೈಂಗಿಕತೆ, ಚುಂಬನ, ಸ್ಪರ್ಶ ನಿಷಿದ್ಧ: ಹೈಕೋರ್ಟ್‌ ಆದೇಶ

click me!