Sidhu Moosewala ಆಸ್ವಸ್ಥಗೊಂಡ ಸಿಧು ಮೂಸೆವಾಲಾ ತಂದೆ, ಪಟಿಯಾಲ ಆಸ್ಪತ್ರೆಗೆ ದಾಖಲು!

By Suvarna NewsFirst Published Sep 16, 2022, 6:41 PM IST
Highlights

ಎದೆನೋವಿನಿಂದ ಬಳಲಿ ಅಸ್ವಸ್ಥಗೊಂಡ ಸಿಧು ಮೂಸೆವಾಲ ತಂದೆ ಬಲ್ಕೌರ್ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ.

ಪಂಜಾಬ್(ಸೆ.16): ಗ್ಯಾಂಗ್‌ಸ್ಟರ್‌ಗಳಿಂದ ಹತ್ಯೆಯಾದ ಸಿಂಗರ್ ಸಿಧು ಮೂಸೆವಾಲ ಕುಟುಂಬ ನಗುವಿನ ದಿನವನ್ನೇ ಮರೆತಿದೆ. ಸಿಧು ಮೂಸೆವಾಲ ಹತ್ಯೆ ನೋವಿನಿಂದ ಕುಟುಂಬ ಇನ್ನೂ ಹೊರಬಂದಿಲ್ಲ. ಇದೀಗ ಸಿಧು ತಂದೆ ಬಲ್ಕೌರ್ ಸಿಂಗ್ ತೀವ್ರ ಎದೆನೋವಿನಿಂದ ಆಸ್ಪಸ್ಥಗೊಂಡಿದ್ದಾರೆ. ಗುರುವಾರ ತಡ ರಾತ್ರಿ ಬಲ್ಕೌರ್ ಸಿಂಗ್‌ಗೆ ಎದನೋವು ಕಾಣಿಸಿಕೊಂಡಿತ್ತು. ಇದರಿಂದ ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಪಟಿಯಾಲದಿಂದ ಇದೀಗ ಮೊಹಾಲಿಯಲ್ಲಿರುವ ಖಾಸಗಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಾರ್ಟ್ ಪೇಶೆಂಟ್ ಆಗಿರುವ ಬಲ್ಕೌರ್ ಸಿಂಗ್ ಇದೀಗ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಅನ್ನೋ ಮಾಹಿತಿಯನ್ನು ವೈದ್ಯರು ಬಹಿರಂಗಪಡಿಸಿದ್ದಾರೆ. ಬಲ್ಕೌರ್ ಸಿಂಗ್‌ಗೆ ಬೈಪಾಸ್ ಗ್ರಾಫ್ಟ್ ಸರ್ಜರಿಗೆ ವೈದ್ಯರು ಸೂಚಿಸಿದ್ದಾರೆ.

ಗುರುವಾರ(ಸೆ.15) ಬಲ್ಕೌರ್ ಸಿಂಗ್ ಪುತ್ರ ಸಿಧು ಮೂಸೆವಾಲ(Sidhu Moosewala) ಕುರಿತು ಹಳೇ ನೆನಪುಗಳನ್ನು ಬಿಚ್ಚಿಟ್ಟು ಬಿಕ್ಕಿ ಬಿಕ್ಕಿ ಅತ್ತಿದ್ದರು. ಬಳಿಕ ಕುಟುಂಬ ಸದಸ್ಯರು ಸಮಾಧಾನ ಪಡಿಸಿದ್ದರು. ಆದರೆ ತಡ ರಾತ್ರಿ ಇದ್ದಕ್ಕಿದ್ದಂತೆ ಎದನೋವು ಕಾಣಿಸಿಕೊಂಡಿದೆ. ಜೊತೆಗೆ ಉಸಿರಾಟದ ಸಮಸ್ಯೆಯೂ ಕಾಣಸಿಕೊಂಡಿದೆ. ಪರಿಸ್ಥಿತಿಯ ಗಂಭೀರತೆ ಅರಿತ ಕುಟುಂಬಸ್ಥರು ತಕ್ಷಣವೇ ಪಟಿಯಾಲದಲ್ಲಿನ ಆಸ್ಪತ್ರೆಗೆ(Hospital) ದಾಖಲಿಸಿದ್ದಾರೆ. ಮಧ್ಯಾಹ್ನದವರೆಗೆ ಪಟಿಯಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಆದರೆ ಚೇತರಿಕೆ ಕಾಣದ ಕಾರಣ, ಹೆಚ್ಚಿನ ಚಿಕಿತ್ಸೆಗಾಗಿ ಮೊಹಾಲಿಯ ಖಾಸಗಿ ಆಸ್ಪತ್ರೆ ದಾಖಲಿಸಲಾಗಿದೆ.  

 

ಸಿಧು ಮೂಸೇವಾಲಾ ಹಾಡಿಗೆ ಭಾರತ, ಪಾಕ್‌ ಸೈನಿಕರ ನೃತ್ಯ: ವಿಡಿಯೋ ವೈರಲ್

ಹೆಚ್ಚಿನ ಚಿಕಿತ್ಸೆಗಾಗಿ ಬಲ್ಕೌರ್ ಸಿಂಗ್(Balkaur Singh) ಅವರನ್ನು ಮೊಹಾಲಿ ಆಸ್ಪತ್ರೆಗೆ ದಾಖಲಿಸಿದ ಬೆನ್ನಲ್ಲೇ ಹಲವು ರಾಜಕೀಯ(Political Leaders) ಮುಖಂಡರು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಬಲ್ಕೌರ್ ಸಿಂಗ್ ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿದ್ದಾರೆ. ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ.

ಮೂಸೆವಾಲಾ ಹಂತಕರಿಂದ ‘ಡ್ರಗ್ಸ್ ಭಯೋತ್ಪಾದನೆ’ ಶಂಕೆ
ಪಂಜಾಬ್‌ನ ಗಾಯಕ ಸಿಧು ಮೂಸೆವಾಲಾ ಹತ್ಯೆ(Sidhu Moosewala Murder) ಪ್ರಕರಣದ ಕೆಲ ಆರೋಪಿಗಳು, ‘ಮಾದಕ ವಸ್ತು ಭಯೋತ್ಪಾದನೆ’ ಕೃತ್ಯದಲ್ಲೂ ಭಾಗಿಯಾಗಿರುವ ಶಂಕೆ ಹಿನ್ನೆಲೆಯಲ್ಲಿ, ಎನ್‌ಐಎ ಅಧಿಕಾರಿಗಳ ತಂಡ ಸೋಮವಾರ 4 ರಾಜ್ಯಗಳ 50ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ನಡೆಸಿದೆ. ದೆಹಲಿ, ಪಂಜಾಬ್‌, ಹರ್ಯಾಣ ಮತ್ತು ಉತ್ತರಪ್ರದೇಶದಲ್ಲಿ ಮೂಸೇವಾಲಾ ಹತ್ಯೆ ಪ್ರಕರಣದ ಆರೋಪಿಗಳಾದ ಗೋಲ್ಡಿ ಬ್ರಾರ್‌ ಮತ್ತು ಜಗ್ಗು ಭಗವಾನ್‌ಪುರಿಯಾ ಸೇರಿದಂತೆ ಇತರೆ ಹಲವು ಮನೆ, ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ಪಂಜಾಬ್‌ನಲ್ಲಿ ಕೆಲವು ಸಂಘಟಿತ ಗ್ಯಾಂಗ್‌ಸ್ಟರ್‌ಗಳು ಪಾಕಿಸ್ತಾನದಿಂದ ಮಾದಕ ವಸ್ತು ಆಮದು ಮಾಡಿಕೊಂಡು ಅದನ್ನು ಇಲ್ಲಿ ಮಾರಾಟ ಮಾಡಿ ಬಂದ ಹಣವನ್ನು ಭಯೋತ್ಪಾದನಾ ಕೃತ್ಯಗಳಿಗೆ ಬಳುಸುತ್ತಿರುವ ಶಂಕೆ ಇದೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಎನ್‌ಐಎ ಸೋಮವಾರ ದಾಳಿ ನಡೆಸಿದೆ. ಕಳೆದ ಮೇ 29ರಂದು ಮೂಸೇವಾಲಾ ಜೀಪ್‌ನಲ್ಲಿ ಪ್ರಯಾಣಿಸುವ ವೇಳೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಈಗಾಗಲೇ 23 ಜನರನ್ನು ಪ್ರಕರಣದ ತನಿಖೆ ನಡೆಸುತ್ತಿರುವ ಪಂಜಾಬ್‌ ಪೊಲೀಸರು ಬಂಧಿಸಿದ್ದಾರೆ.

ಪುತ್ರ ಶೋಕಂ ನಿರಂತರಂ : ಅಗಲಿದ ಮಗನ ಹಚ್ಚೆ ಹಾಕಿಸಿಕೊಂಡ ಸಿಧು ಮೂಸೆವಾಲಾ ಅಪ್ಪ

ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಯಲ್ಲಿ ಭಾಗಿಯಾಗಿದ್ದರು ಎನ್ನಲಾದ ಪಾತಕಿ ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ನ 4 ಶಾಪ್‌ರ್‍ ಶೂಟರ್‌ಗಳನ್ನು ಹರ್ಯಾಣದ ಅಂಬಾಲಾ ಜಿಲ್ಲೆಯಲ್ಲಿ ಭಾನುವಾರ ಬಂಧಿಸಲಾಗಿದೆ. ಇವರ ಬಳಿಯಿಂದ 3 ಪಿಸ್ತೂಲು, 22 ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. 

click me!