PM Modi Birthday ಸೆ.17ಕ್ಕೆ ದೇಶವನ್ನುದ್ದೇಶಿ ಪ್ರಧಾನಿ ಮೋದಿ ಭಾಷಣ, ನಾಲ್ಕು ಕಾರ್ಯಕ್ರಮ!

By Suvarna NewsFirst Published Sep 16, 2022, 5:09 PM IST
Highlights

ಸೆಪ್ಟೆಂಬರ್ 17ಕ್ಕೆ ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬ. ಮೋದಿ 72ನೇ ವಸಂತಕ್ಕೆ ಕಾಲಿಡಲಿದ್ದಾರೆ. ಇದೇ ದಿನ ಮೋದಿ ದೇಶವನ್ನುದ್ದೇಶಿ ಮಾತನಾಡಲಿದ್ದಾರೆ. ಪ್ರಮುಖವಾಗಿ ನಾಲ್ಕು ಭಾಷಣ ಮಾಡಲಿದ್ದಾರೆ. ಮೋದಿ ಹುಟ್ಟು ಹಬ್ಬದ ದಿನ ದಿನಚರಿ ಇಲ್ಲಿದೆ

ನವದೆಹಲಿ(ಸೆ.16):  ಪ್ರಧಾನಿ ನರೇಂದ್ರ ಮೋದಿಗೆ ನಾಳೆ ಹುಟ್ಟು ಹಬ್ಬದ ಸಂಭ್ರಮ. ಸೆಪ್ಟೆಂಬರ್ 17 ರಂದು ಮೋದಿ 72ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈಗಾಗಲೇ ಬಿಜೆಪಿ ರಾಜ್ಯ ರಾಜ್ಯಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಪ್ರಮುಖವಾಗಿ ನಾಲ್ಕು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಭಾಷಣ ಮಾಡಲಿದ್ದಾರೆ. ಮೋದಿ ಹುಟ್ಟು ಹಬ್ಬದ ಸಂಭ್ರಮ ಈಗಾಗಲೇ ದೇಶದಲ್ಲಿ ಮನೆ ಮಾಡಿದೆ. ಇದೇ ಸಂದರ್ಭದಲ್ಲಿ ಮೋದಿ ವನ್ಯ ಜೀವ  ಹಾಗೂ ಪರಿಸರ, ಮಹಿಳಾ ಸಬಲೀಕರಣ, ಕೌಶಲ್ಯ ಮತ್ತು ಅಭಿವೃದ್ಧಿ, ಜನ್ ಇನ್ಫ್ರಾ ಸೇರಿದಂತೆ ನಾಲ್ಕು ಪ್ರಮುಖ ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ. ಹುಟ್ಟು ಹಬ್ಬದ ದಿನ ಪ್ರಧಾನಿ ಮೋದಿ ಮೊದಲಿಗೆ ಭಾರತಕ್ಕೆ ನಮೀಬಿಯಾದಿಂದ ಚಿರತೆಗಳನ್ನು ತಂದಿರುವ ಸಂತಸ ಹಾಗೂ ವನ್ಯ ಜೀವಿ ಸಮತೋಲನ ಕುರಿತು ಭಾಷಣ ಮಾಡಲಿದ್ದಾರೆ. ಚೀತಾ ಆಗಮನ ಐತಿಹಾಸಿಕವಾಗಿದೆ. 

ಮಧ್ಯಪ್ರದೇಶದ ಮಹಿಳಾ ಸ್ವಸಹಾಯ ಸಂಘದ ಸಮಾವೇಶದಲ್ಲಿ ಪಾಲ್ಗೊಳ್ಳಲಿರುವ ಮೋದಿ(PM Narendra Modi) ಭಾಷಣ ಮಾಡಲಿದ್ದರೆ. ಈ ಸಮಾವೇಶ ಬಳಿಕ ವಿಶ್ವಕರ್ಮ ಜಯಂತಿ ದಿನ  ಐಟಿಐ ವಿದ್ಯಾರ್ಥಿಗಳ ಪ್ರಥಮ ದೀಕ್ಷಾಂತ್ ಸಮಾರೋಹದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ 40 ಲಕ್ಷ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.  ಇದೇ ದಿನ ಸಂಜೆ ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿ ಬಿಡುಗಡೆ ಮಾಡಿ ಮಾತನಾಡಲಿದ್ದಾರೆ. 

PM Modi Birthday: ಮೋದಿ ಬರ್ತ್ ಡೇಗೆ ಭರ್ಜರಿಯಾಗಿ ರೆಡಿಯಾಗಿದೆ ಕಮಲ ಪಡೆ..!

75 ವರ್ಷಗಳ ಬಳಿಕ ಭಾರತದ ಕಾಡಿಗೆ ಚಿರತೆ
ನಮಿಬಿಯಾದಿಂದ ಭಾರತಕ್ಕೆ ತಂದಿರುವ ಚಿರತೆಗಳನ್ನು(Cheetah) ಪ್ರಧಾನಿ ನರೇಂದ್ರ ಮೋದಿ ನಾಳೆ ಬೆಳಗ್ಗೆ 10.45ಕ್ಕೆ  ದೇಶದ ಅರಣ್ಯಕ್ಕೆ ಬಿಡುಗಡೆ ಮಾಡಲಿದ್ದಾರೆ. ಆಫ್ರಿಕಾ ಖಂಡದ ನಮೀಬಿಯಾದಿಂದ(Namibia) ಒಟ್ಟು 8 ಚೀತಾಗಳನ್ನು ತರಿಸಿಕೊಳ್ಳಲಾಗುತ್ತಿದೆ. ಈ ಸಂಬಂಧ ವರ್ಷಾರಂಭದಲ್ಲಿ ಒಪ್ಪಂದ ಕೂಡ ಆಗಿದೆ. 8ರಲ್ಲಿ ಐದು ಹೆಣ್ಣು ಚೀತಾಗಳಾದರೆ, ಉಳಿದ ಮೂರು ಗಂಡು ಚೀತಾಗಳಾಗಿವೆ. ಈ ಚೀತಾಗಳನ್ನು ಕರೆತರಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ಬೋಯಿಂಗ್‌ ‘ಎ ಬಿ747 ಜಂಬೋಜೆಟ್‌’ ವಿಮಾನ ಈಗಾಗಲೇ ನಮೀಬಿಯಾ ರಾಜಧಾನಿ ವಿಂಡ್‌ಹೋಕ್‌ ತಲುಪಿದೆ. ಭಾರತದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಿರುವುದರಿಂದ ಈ ವಿಮಾನದ ಮೂತಿಯನ್ನು ಹುಲಿಯ ರೀತಿಯಲ್ಲೇ ಚಿತ್ರಿಸಿರುವುದು ವಿಶೇಷ. ಮಹಾರಾಜ ರಾಮಾನುಜ ಪ್ರತಾಪ್‌ ಸಿಂಗ್‌ ದೇವ್‌ ಅವರು 1947ರಲ್ಲಿ ಕೊನೆಯ ಚೀತಾವನ್ನು ಕೊಂದಿದ್ದರು. 1952ರಲ್ಲಿ ಭಾರತದಿಂದ ಚೀತಾ ನಾಮಾವಶೇಷವಾಗಿದೆ ಎಂದು ಘೋಷಿಸಲಾಗಿತ್ತು. 2009ರಿಂದ ಚೀತಾ ತರುವ ಪ್ರಯತ್ನಗಳು ನಡೆಯುತ್ತಿದ್ದವಾದರೂ ಅದು ಈಗ ತಾರ್ಕಿಕ ಘಟ್ಟಕ್ಕೆ ತಲುಪಿದೆ. 

PM Narendra Modi Birthday: ತಮಿಳುನಾಡು ಬಿಜೆಪಿಯಿಂದ ನವಜಾತ ಶಿಶುಗಳಿಗೆ ಚಿನ್ನದ ಉಂಗುರ

 ಮೋದಿ ಜನ್ಮದಿನ: ಭಾವಚಿತ್ರಕ್ಕೆ ಹಾಲೆರೆಯುವುದಕ್ಕೆ ಬಿಜೆಪಿ ನಿರ್ಬಂಧ
ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬವನ್ನು(PM Modi Birthday) ಶನಿವಾರ ಜನಸ್ನೇಹಿ ಕಾರ್ಯಕ್ರಮವನ್ನಾಗಿ ರಾಜ್ಯಾದ್ಯಂತ ಆಚರಿಸಲಾಗುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ತಿಳಿಸಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಅವರ ಭಾವಚಿತ್ರಕ್ಕೆ ಹಾಲು ಎರೆಯುವುದು, ಭಾವಚಿತ್ರಕ್ಕೆ ಪೂಜೆ-ಹೋಮ ಹವನ ಮಾಡಬಾರದು. ಈ ಬಗ್ಗೆ ಪಕ್ಷದ ಜಿಲ್ಲಾ ಮತ್ತು ಮಂಡಲ ಘಟಕಗಳಿಗೂ ಸೂಚನೆ ನೀಡಲಾಗಿದೆ ಎಂದರು.

click me!