
ಕಪೂರ್ತಲಾ (ಪಂಜಾಬ್): ಸಿಖ್ಖರ ನಿಹಾಂಗ್ ಪಂಗಡದವರು ಪೊಲೀಸರ ಮೇಲೆ ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಪೇದೆ ಸಾವನ್ನಪ್ಪಿದ್ದು, ನಾಲ್ವರು ಪೇದೆಗಳು ಗಾಯಗೊಂಡಿದ್ದಾರೆ. ಘಟನೆ ಪಂಜಾಬ್‌ನ ಕರ್ಪುತಲಾ ಜಿಲ್ಲೆಯ ಸುಲ್ತಾನ್‌ಪುರ ಲೋಧಿಯಲ್ಲಿ ಗುರುವಾರ ನಡೆದಿದೆ. ನಿಹಾಂಗರ 2 ಪಂಗಡದ ನಡುವೆ ಕಪೂರ್ತಲಾ ಗುರುದ್ವಾರವೊಂದರ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ವಿವಾದ ಇದೆ. ಇದರ ಇತ್ಯರ್ಥಕ್ಕಾಗಿ ಪೊಲೀಸರು ಗುರುದ್ವಾರಕ್ಕೆ ತೆರಳುತ್ತಿದ್ದರು. ಆಗ ಅವರ ಗುರುದ್ವಾರ ಪ್ರವೇಶ ತಡೆಗೆ ನಿಹಾಂಗ್‌ನ ಒಂದು ಪಂಗಡದವರು ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ ಓರ್ವ ಪೇದೆ ಮೃತಪಟ್ಟು, ನಾಲ್ವರು ಗಾಯಗೊಂಡಿದ್ದಾರೆ. ಘಟನೆ ಸಂಬಂಧ ದಾಳಿ ನಡೆಸಿದವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.
ರಾಜಸ್ಥಾನ ವಿಧಾನಸಭಾ ಚುನಾವಣೆ: ಬಹಿರಂಗ ಪ್ರಚಾರಕ್ಕೆ ತೆರೆ
ಜೈಪುರ: ಪಂಚರಾಜ್ಯಗಳಲ್ಲಿ ಒಂದಾದ ರಾಜಸ್ಥಾನ ಚುನಾವಣೆಗೆ ಪಕ್ಷಗಳ ಬಹಿರಂಗ ಪ್ರಚಾರವು ನಿನ್ನೆ ಅಂತ್ಯಗೊಂಡಿತು. ನ.25 ರಂದು ಚುನಾವಣೆ ನಡೆಯಲಿರುವ ರಾಜಸ್ಥಾನದಲ್ಲಿ ಕಳೆದ ಹಲವು ದಿನಗಳಿಂದ ಬಿಜೆಪಿ, ಕಾಂಗ್ರೆಸ್ ಸೇರಿ ಹಲವು ಪಕ್ಷಗಳು ತಮ್ಮ ಅಭ್ಯರ್ಥಿಗಳ ಪರ ಭಾರೀ ಅಬ್ಬರದ ಪ್ರಚಾರ ನಡೆಸಿದವು. ಇನ್ನು ಶುಕ್ರವಾರ ಯಾವುದೇ ಆಡಂಬರವಿಲ್ಲದೇ ಮನೆ ಮನೆ ಪ್ರಚಾರ ನಡೆಸಬಹುದಾಗಿದೆ. ಶನಿವಾರ ಚುನಾವಣೆ ನಡೆಯಲಿದೆ. ಡಿ.3 ರಂದು ಫಲಿತಾಂಶ ಹೊರಬೀಳಲಿದೆ. ರಾಜ್ಯದಲ್ಲಿ 200 ಕ್ಷೇತ್ರಗಳಿದ್ದು ಹಾಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಹಣಿಯಲು ಬಿಜೆಪಿ ಸರ್ವಯತ್ನ ನಡೆಸಿದೆ.
ತ್ಯಾಜ್ಯ ಸುಡುವ ರೈತರಿಗೆ ಬಿತ್ತನೆ ಬೀಜ ಕೊಡಬೇಡಿ, ಎಂಎಸ್‌ಪಿ ಸ್ಥಗಿತ ಮಾಡಿ: ಕೋರ್ಟ್
ಸೇನಾ ಸಮಾರಂಭದ ಮೇಲೆ ಉಕ್ರೇನ್ ದಾಳಿ: ರಷ್ಯಾ ನಟಿ ಬಲಿ
ಮಾಸ್ಕೋ: ರಷ್ಯಾ ಸೇನೆಯ ವಿರುದ್ಧ ಯುಕ್ರೇನ್ ನಡೆಸಿದ ದಾಳಿಯಲ್ಲಿ ರಷ್ಯಾದ ಕಲಾವಿದೆ ಪೊಲಿನಾ ಮೆನ್ಶಿಖ್ (40) ಮೃತಪಟ್ಟಿದ್ದಾರೆ. ನ.19 ರಂದು ರಷ್ಯಾದ ನಿಯಂತ್ರಣದಲ್ಲಿರುವ ಪೂರ್ವ ಉಕ್ರೇನ್ ಪ್ರದೇಶದಲ್ಲಿ ಸೈನಿಕರಿಗಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನಟಿ ಪೊಲಿನಾ ವೇದಿಕೆ ಮೇಲೆ ಪ್ರದರ್ಶನ ನೀಡುತ್ತಿದ್ದಾಗಲೇ ಯುಕ್ರೇನ್ ದಾಳಿಗೆ ಬಲಿಯಾಗಿದ್ದಾರೆ. ರಷ್ಯಾದ ಮಿಲಿಟರಿ ಪ್ರಶಸ್ತಿ ಸಮಾರಂಭದಲ್ಲಿ ಈ ದಾಳಿ ನಡೆದಿದೆ. ಈ ವೇಳೆ 25 ಜನರು ಸಾವನ್ನಪ್ಪಿದ್ದು 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ’ ಎಂದು ಉಕ್ರೇನ್ ಮಿಲಿಟರಿ ಕಮಾಂಡರ್ ರಾಬರ್ಟ್ ಬ್ರೋವ್ಡಿ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ. ಆದರೆ ಯಾವುದೇ ಸಾವು ನೋವುಗಳ ಬಗ್ಗೆ ರಷ್ಯಾ ಈವರೆಗೆ ಮಾಹಿತಿ ನೀಡಿಲ್ಲ. ಇನ್ನು ಕ್ಯಾಮರಾದಲ್ಲಿ ಸೆರೆಯಾಗಿರುವ ದಾಳಿಯ ವಿಡಿಯೋದಲ್ಲಿ ಪೊಲಿನಾ ವೇದಿಕೆ ಮೇಲೆ ಹಾಡುತ್ತಿರುತ್ತಾರೆ. ಆಗ ಇದ್ದಕ್ಕಿದ್ದಂತೆ ಕಟ್ಟಡದ ಮೇಲೆ ಭೀಕರ ಸ್ಫೋಟ ಸಂಭವಿಸಿದೆ.
ಐಷಾರಾಮಿ ಕಾರಿಗೆ ಲೆಕ್ಕವೇ ಇಲ್ಲ,ಪಂಜಾಬಿ ಉದ್ಯಮಿ ಬಳಿ ಇದೆ ಒಟ್ಟು 200 ಕೋಟಿ ಮೌಲ್ಯದ ವಾಹನ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ