ಕೃಷ್ಣ ಜನ್ಮಭೂಮಿ ಮಥುರಾಗೆ ಭೇಟಿ ನೀಡಿ ಕೃಷ್ಣನ ದರ್ಶನ ಪಡೆದ ಪ್ರಧಾನಿ

By Kannadaprabha News  |  First Published Nov 24, 2023, 7:10 AM IST

ಶ್ರೀಕೃಷ್ಣ ಜನ್ಮಭೂಮಿ ಸ್ಥಳವಾದ ಮಥುರಾಗೆ ಗುರುವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಪೂಜೆ ಸಲ್ಲಿಸಿದರು. ಈ ಮೂಲಕ ಕೃಷ್ಣ ಜನ್ಮಭೂಮಿಗೆ ಭೇಟಿ ನೀಡಿದ ದೇಶದ ಮೊದಲ ಪ್ರಧಾನಿ ಎಂಬ ಕೀರ್ತಿಗೆ ಪಾತ್ರರಾದರು. 


ಮಥುರಾ: ಶ್ರೀಕೃಷ್ಣ ಜನ್ಮಭೂಮಿ ಸ್ಥಳವಾದ ಮಥುರಾಗೆ ಗುರುವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಪೂಜೆ ಸಲ್ಲಿಸಿದರು. ಈ ಮೂಲಕ ಕೃಷ್ಣ ಜನ್ಮಭೂಮಿಗೆ ಭೇಟಿ ನೀಡಿದ ದೇಶದ ಮೊದಲ ಪ್ರಧಾನಿ ಎಂಬ ಕೀರ್ತಿಗೆ ಪಾತ್ರರಾದರು. ಇದೇ ವೇಳೆ ಇಲ್ಲಿ ಆಯೋಜಿಸಲಾಗಿದ್ದ ಮೀರಾಬಾಯಿ ಅವರ 525ನೇ ಜನ್ಮೋತ್ಸವ ಹಾಗೂ ಬೃಜ್‌ ಮಹೋತ್ಸವದಲ್ಲಿ ಅವರು ಭಾಗಿಯಾಗಿ ಸ್ಟಾಂಪ್‌ ಮತ್ತು ನಾಣ್ಯವನ್ನು ಬಿಡುಗಡೆ ಮಾಡಿದರು. 
ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ನಟಿ, ಬಿಜೆಪಿ ನಾಯಕಿ ಹೇಮಮಾಲಿನಿ (Hemamalini) ಅವರ ನೃತ್ಯ ಪ್ರದರ್ಶನವನ್ನು ವೀಕ್ಷಿಸಿದರು. ಬಳಿಕ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ಸ್ವಾತಂತ್ರ್ಯದ ಬಳಿಕ ವಸಹಾತುಶಾಹಿ ಮನಸ್ಥಿತಿಯಿಂದ ಭಾರತ ಹೊರ ಬಂದಿದೆ. ಅಲ್ಲದೇ ತನ್ನದೇ ಪರಂಪರೆಯ ಬಗ್ಗೆ ಹೆಮ್ಮೆ ಪಡಲು ಆರಂಭಿಸಿದೆ. ಕೆಂಪುಕೋಟೆಯಲ್ಲಿ ‘ಪಂಚಪ್ರಾಣ’ದ ಪ್ರಮಾಣ ಮಾಡಿದ್ದೆವು. ಈಗ ನಮ್ಮ ಪರಂಪರೆಯನ್ನು ಗೌರವಿಸುವ ನಿಟ್ಟಿನಲ್ಲಿ ಸಾಗುತ್ತಿದ್ದೇವೆ ಎಂದು ಹೇಳಿದರು.

ಪಿಎಂ ಅಂದ್ರೆ 'ಪನೌತಿ ಮೋದಿ' ಪ್ರೈಮ್‌ ಮಿನಿಸ್ಟರ್‌ ಘನತೆಗೆ ಅವಮಾನಿಸಿದ್ರಾ ರಾಹುಲ್‌ ಗಾಂಧಿ?

Tap to resize

Latest Videos

ರಾಹುಲ್‌  ಗಾಂಧಿಗೆ ಚುನಾವಣಾ ಆಯೋಗ ನೋಟಿಸ್‌

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ಅಪಶಕುನ, ಜೇಬುಗಳ್ಳ ಎಂಬ ಹೇಳಿಕೆಗಳನ್ನು ನೀಡಿದ್ದ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಅವರಿಗೆ ಚುನಾವಣಾ ಆಯೋಗ ನೋಟಿಸ್‌ ನೀಡಿದೆ. ಇದಕ್ಕೆ ಶನಿವಾರ ಸಂಜೆಯೊಳಗೆ ಪ್ರತಿಕ್ರಿಯಿಸುವಂತೆ ಸೂಚಿಸಿದೆ. ಹಿರಿಯ ರಾಜಕೀಯ ನಾಯಕನೊಬ್ಬನಿಂದ ಈ ರೀತಿಯ ಪದಬಳಕೆ ತಕ್ಕುದಾದುದಲ್ಲ ಎಂದು ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಇದಕ್ಕೆ ಸಂಬಂಧಿಸಿದಂತೆ ನೋಟಿಸ್‌ ಜಾರಿ ಮಾಡಿರುವ ಆಯೋಗ, ರಾಜಕೀಯ ಪ್ರತಿಸ್ಪರ್ಧಿಯ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡುವುದನ್ನು ನೀತಿ ಸಂಹಿತೆ ತಡೆಹಿಡಿಯುತ್ತದೆ ಎಂದು ಹೇಳಿದೆ.

ಇತ್ತೀಚೆಗೆ ರಾಜಸ್ಥಾನದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯ ವೇಳೆ ಪ್ರಧಾನಿ ಮೋದಿ ಅವರನ್ನು ಅಪಶಕುನ ಎಂದು ಕರೆದಿದ್ದ ರಾಹುಲ್‌, ಅವರು ಹೋಗಿದ್ದರಿಂದಲೇ ಭಾರತ ಫೈನಲ್‌ ಪಂದ್ಯ ಸೋತಿತ್ತು ಎಂದಿದ್ದರು. ಅಲ್ಲದೇ ಮೋದಿ ಅವರು ಜೇಬು ಕಳ್ಳತನ ಮಾಡಲು ಅದಾನಿಗೆ ಸಹಾಯ ಮಾಡುತ್ತಿದ್ದಾರೆ ಎಂಬರ್ಥದ ಹೇಳಿಕೆ ನೀಡಿದ್ದರು.

ರಾಹುಲ್ ಗಾಂಧಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ: ಖರ್ಗೆ ಹೇಳಿಕೆ ವೈರಲ್‌; ಬಿಜೆಪಿ ಲೇವಡಿ

click me!