
ಪಂಜಾಬ್(ಸೆ.26): ಪಂಜಾಬ್‌ನ(Punjab) ನೂತನ ಮುಖ್ಯಮಂತ್ರಿಯಾಗಿ ಚರಣ್‌ಜಿತ್ ಸಿಂಗ್(Charanjit Singh Channi) ಪ್ರಮಾಣ ವಚನ ಸ್ವೀಕರಿಸಿದ ಒಂದು ವಾರದ ಬಳಿಕ ಇದೀಗ 15 ಸಚಿವರು ಸಂಪುಟ ಸೇರಿದ್ದಾರೆ. ರಾಜಭವನದಲ್ಲಿ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ 15 ಸಚಿವರು ಪ್ರಮಾಣ ವಚನ ಸ್ವೀಕರಿಸಿ ಚರಣ್‌ಜಿತ್ ಚನಿ ಸಂಪುಟ(Cabinet Expansion) ಸೇರಿದ್ದಾರೆ.
ಸಖತ್ ವೈರಲ್ ಆಯ್ತು ಪಂಜಾಬ್ ಹೊಸ ಸಿಎಂ ಭಾಂಗ್ರಾ ಡ್ಯಾನ್ಸ್!
ಪ್ರಮಾಣವಚನ ಸ್ವೀಕರಿಸಿದ ನೂತನ ಸಚಿವರ ಪಟ್ಟಿ:
ಬ್ರಹ್ಮ ಮೊಹಿಂದ್ರಾ
ಮನ್ ಪ್ರೀತ್ ಸಿಂಗ್ ಬಾದಲ್
ಟ್ರಿಪ್ಟ್ ರಾಜೇಂದ್ರ ಸಿಂಗ್ ಬಾಜ್ವಾ
ಸುಖಬಿಂದರ್ ಸಿಂಗ್ ಸರ್ಕಾರಿಯಾ
ರಾಣಾ ಗುರ್ಜಿತ್ ಸಿಂಗ್
ಅರುಣ ಚೌದರಿ
ರಜಿಯಾ ಸುಲ್ತಾನ
ವಿಜಯ್ ಇಂದರ್ ಸಿಂಗ್ಲಾ
ಭರತ್ ಭೂಷಣ್ ಅಶು
ರಣದೀಪ್ ಸಿಂಗ್ ನಭಾ
ರಾಜ್ ಕುಮಾರ್ ವರ್ಕಾ
ಸಂಗತ್ ಸಿಂಗ್ ಗಿಲ್ಜಿಯಾನ್
ಪರ್ಗತ್ ಸಿಂಗ್
ಅಮರಿಂದರ್ ಸಿಂಗ್ ರಾಜಾ ವಾರ್ರಿಂಗ್
ಗುಕ್ರೀರತ್ ಸಿಂಗ್ ಕೊಟ್ಲಿ
ಪಂಜಾಬ್ ಕಾಂಗ್ರೆಸ್(Punjab Congress) ಅಧ್ಯಕ್ಷ ನವಜೋತ್ ಸಿಂಗ್ ಸಿಧು(Navjot singh sidhu) ಬಣದ 15 ಸಚಿವರಿಗೆ ಸ್ಥಾನ ನೀಡಲಾಗಿದೆ. ಆದರೆ ಮಾಜಿ ಸಿಎಂ ಅಮರಿಂದರ್ ಸಿಂಗ್(Amrinder Singh) ಐವರು ಆಪ್ತರಿಗೆ ಕೊಕ್ ನೀಡಲಾಗಿದೆ. ಈ ಮೂಲಕ ಮತ್ತೊಂದು ಗುದ್ದಾಟಕ್ಕೆ ವೇದಿಕೆ ಸಿದ್ಧವಾಗಿದೆ.
ಅಂತೂ ಕಣ್ಣುಬಿಟ್ಟಿತು ಕೈ ಹೈಕಮಾಂಡ್: ವರ್ಷಗಳ ಬಳಿಕ ಪ್ರಿಯಾಂಕಾ, ರಾಹುಲ್ ರಣತಂತ್ರ!
ಪರ್ಗತ್ ಸಿಂಗ್, ರಾಜ್ ಕುಮಾರ್ ವರ್ಕಾ, ಗುರ್ಕೀರತ್ ಸಿಂಗ್ ಕೊಟ್ಲಿ, ಸಂಗತ್ ಸಿಂಗ್ ಗಿಲ್ಜಿಯಾನ್, ಅಮರಿಂದರ್ ಸಿಂಗ್ ರಾಜಾ ವಾರಿಂಗ್, ರಣದೀಪ್ ಸಿಂಗ್ ನಭಾ ಮತ್ತು ರಾಣಾ ಗುರ್ಜಿತ್ ಸಿಂಗ್ ಇದೇ ಮೊದಲ ಬಾರಿಗೆ ಸಚಿವರಾಗಿ ಭಡ್ತಿ ಪಡೆದಿದ್ದಾರೆ.
ಸಿಧು, ಹೈಕಮಾಂಡ್ ವಿರುದ್ಧ ಮತ್ತೆ ಸಿಡಿದೆದ್ದ ಅಮರೀಂದರ್ ಸಿಂಗ್: ಬಿಗ್ ಚಾಲೆಂಜ್!
ಅಮರಿಂದರ್ ಸಿಂಗ್ ಸರ್ಕಾರದ ಸಚಿವರಾಗಿದ್ದ ಇಜಯ್ ಇಂದರ್ ಸಿಂಗ್ಲಾ, ಮನ್ ಪ್ರೀತ್ ಸಿಂಗ್ ಬಾದಲ್, ಬ್ರಹ್ಮ ಮೊಹಿಂದ್ರಾ, ಸುಖಬಿಂದರ್ ಸಿಂಗ್ ಸರ್ಕಾರಿಯಾ, ಟ್ರಿಪ್ಟ್ ರಾಜಿಂದರ್ ಸಿಂಗ್ ಬಾಜ್ವಾ, ಅರುಣ ಚೌಧರಿ, ರಜಿಯಾ ಸುಲ್ತಾನ ಮತ್ತು ಭರತ್ ಭೂಷಣ್ ಅಶು ಅವರನ್ನು ಉಳಿಸಿಕೊಳ್ಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ