ಉತ್ತರ ಪ್ರದೇಶ ಚುನಾವಣೆಗೂ ಮುನ್ನ ಬಿಜೆಪಿಯ ರಣತಂತ್ರ: ಯೋಗಿ ಸಂಪುಟ ವಿಸ್ತರಣೆ!

By Suvarna NewsFirst Published Sep 26, 2021, 4:28 PM IST
Highlights

* ಉತ್ತರ ಪ್ರದೇಶ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ

* ಚುನಾವಣಾ ಹೊಸ್ತಿಲಲ್ಲಿ ಬಿಜೆಪಿಯ ರಣತಂತ್ರ

* ಸಂಪುಟ ವಿಸ್ತರಣೆಗೆ ಮುಂದಾದ ಯೋಗಿ ಆದಿತ್ಯನಾಥ್

ಲಕ್ನೋ(ಸೆ.26): ಉತ್ತರ ಪ್ರದೇಶ ಚುನಾವಣೆಗೆ(Uttar Pradesh Elections) ಇನ್ನು ಕೆಲವೇ ತಿಂಗಳು ಬಾಕಿ ಇದೆ. ಹೀಗಿರುವಾಗ ಪ್ರಮುಖ ಸದ್ದಿಯೊಂದು ಹೊರ ಬಿದ್ದಿದೆ. ಮಾಧ್ಯಮ ವರದಿಗಳ ಅನ್ವಯ ಇಂದು, ಭಾನುವಾರ ಯೋಗಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಲಿದೆ(Cabinet Expansion). ಯೋಗಿಯ ಹೊಸ ತಂಡದಲ್ಲಿ ಸುಮಾರು 6 ರಿಂದ 7 ಮಂತ್ರಿಗಳು ಪ್ರಮಾಣವಚನ ಸ್ವೀಕರಿಸಬಹುದು ಎಂದು ಅಂದಾಜಿಸಲಾಗಿದೆ. ಅದರ ತಯಾರಿ ಬಗ್ಗೆ ಮಧ್ಯಾಹ್ನ 2 ಗಂಟೆಗೆ ರಾಜಭವನದಲ್ಲಿ ಸಭೆ ಆರಂಭವಾಗಿದೆ. ಅಲ್ಲದೇ, ರಾಜ್ಯಪಾಲ ಆನಂದಿಬೆನ್ ಪಟೇಲ್(Anandiben Patel) ಗುಜರಾತಿನಿಂದ ಲಕ್ನೋ ರಾಜಭವನಕ್ಕೆ ಆಗಮಿಸಲಿದ್ದಾರೆ

ಮಂತ್ರಿಗಳಾಗಲು ಸಜ್ಜಾದ ನಾಯಕರು

ಮೂಲಗಳ ಪ್ರಕಾರ, ಈ ಪ್ರಮಾಣ ವಚನ ಸಮಾರಂಭ ಇಂದು ಸಂಜೆ 6:00 ಗಂಟೆ ಸುಮಾರಿಗೆ ನಡೆಯಲಿದೆ. ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿರುವ ಸಂಭಾವ್ಯ ನಾಯಕರ ಪಟ್ಟಿ ಹೀಗಿದೆ.

* ಜಿತಿನ್ ಪ್ರಸಾದ್

* ಸಂಜಯ್ ನಿಶಾದ್'

* ಬೇಬಿ ರಾಣಿ ಮೌರ್ಯ

* ಸಂಗೀತ ಬಲವಂತ ಬಿಂಡ್

* ಛತ್ರಪಾಲ್ ಗಂಗ್ವಾರ್ 

* ದಿನೇಶ್ ಖಾತಿಕ್ 

* ಕೃಷ್ಣ ಪಾಸ್ವಾನ್.

ದೆಹಲಿಯಿಂದ ಲಕ್ನೋಗೆ ಬಂದ ಜಿತಿನ್ ಪ್ರಸಾದ್

ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಜಿತಿನ್ ಪ್ರಸಾದ್ ಅವರನ್ನು ದೆಹಲಿಯಿಂದ ಲಕ್ನೋಗೆ ಕರೆಸಲಾಗಿದೆ ಎಂದು ಹೇಳಲಾಗುತ್ತಿದೆ. ಅವರು ಕ್ಯಾಬಿನೆಟ್ ಮಂತ್ರಿಯಾಗುವುದು ಬಹುತೇಕ ಖಚಿತ ಎನ್ನಲಾಗಿದೆ. ಮುಖ್ಯಮಂತ್ರಿ ನಿವಾಸದಲ್ಲಿ ಹೊಸ ಸಚಿವ ಸಂಪುಟ ವಿಸ್ತರಣೆಗಾಗಿ ಉನ್ನತ ಮಟ್ಟದ ಸಭೆ ನಡೆಯುತ್ತಿದೆ.

ಸಚಿವ ಸಂಪುಟ ವಿಸ್ತರಣೆ ಯಾಕೆ?

ಉತ್ತರಪ್ರದೇಶದಲ್ಲಿ 2022 ರ ನಂತರ ಅಂದರೆ ನಾಲ್ಕರಿಂದ ಐದು ತಿಂಗಳ ನಂತರ ವಿಧಾನಸಭೆ ಚುನಾವಣೆ ನಡೆಯಲಿದೆ ಎಂಬುವುದು ಉಲ್ಲೇಖನೀಯ. ಇಂತಹ ಪರಿಸ್ಥಿತಿಯಲ್ಲಿ, ಚುನಾವಣೆಯ ದೃಷ್ಟಿಯಿಂದ, ಯೋಗಿ ಸರ್ಕಾರದ ಸಚಿವ ಸಂಪುಟವನ್ನು ವಿಸ್ತರಿಸಲಾಗುತ್ತಿದೆ. ಕ್ಯಾಬಿನೆಟ್‌ನ ಈ ಹೊಸ ವಿಸ್ತರಣೆಯಲ್ಲಿ, ಜಾತಿ ಲೆಕ್ಕಾಚಾರವನ್ನೂ ಗಮನದಲ್ಲಿಡಲಾಗಿದೆ ಎನ್ನಲಾಗಿದೆ. ಇನ್ನು ಎರಡು ತಿಂಗಳ ಹಿಂದೆ ನಡೆದ ಮೋದಿ ಸಂಪುಟ ವಿಸ್ತರಣೆಯಲ್ಲೂ, ಉತ್ತರ ಪ್ರದೇಶದ ನಾಯಕರಿಗೆ ವಿಶೇಷ ಆದ್ಯತೆ ನಿಡಲಾಗಿದ್ದು, 7 ಮಂದಿಗೆ ಕೇಂದ್ರ ಸಚಿವ ಸ್ಥಾನ ನೀಡಲಾಗಿದೆ

ಕೊರೋನಾಗೆ ಬಲಿಯಾದ ಸಚಿವರು

ನಾಲ್ಕೂವರೆ ವರ್ಷಗಳ ಹಿಂದೆ ಯುಪಿಯಲ್ಲಿ ಯೋಗಿ ಸರ್ಕಾರ ರಚನೆಯಾದ ಬಳಿಕ, 22 ನೇ ಆಗಸ್ಟ್ 2019 ರಂದು ಎರಡನೇ ಬಾರಿ ಕ್ಯಾಬಿನೆಟ್ ವಿಸ್ತರಣೆ ಮಾಡಲಾಯಿತು. ಇದೀಗ ಮತ್ತೆ ಚುನಾವಣೆಗೆಗೂ ಮುನ್ನ, ಅದು ಮತ್ತೊಮ್ಮೆ ವಿಸ್ತರಿಸಲಾಗುತ್ತಿದೆ. ಕೊರೋನಾದಿಂದ ಮೂವರು ಮಂತ್ರಿಗಳು ಸಾವನ್ನಪ್ಪಿದ್ದಾರೆ. ಅದರಂತೆ ಇನ್ನೂ ಹಲವು ಸ್ಥಾನಗಳು ಖಾಲಿ ಇವೆ.

ಮಂತ್ರಿಗಳ ಸಂಖ್ಯೆ 60ಕ್ಕೇರಿಕೆ

ಯೋಗಿ ಸರ್ಕಾರದಲ್ಲಿ 23 ಕ್ಯಾಬಿನೆಟ್ ಮಂತ್ರಿಗಳಿದ್ದಾರೆ ಮತ್ತು 9 ಸಚಿವರು ಸ್ವತಂತ್ರ ಉಸ್ತುವಾರಿ ಹೊಂದಿದ್ದಾರೆ ಎಂಬುವುದು ಉಲ್ಲೇಖನೀಯ. ರಾಜ್ಯದ 22 ಮಂತ್ರಿಗಳು ಇದ್ದಾರೆ. ಅದರಂತೆ, ಯುಪಿ ಕ್ಯಾಬಿನೆಟ್‌ನಲ್ಲಿ ಒಟ್ಟು 54 ಸಚಿವರು ಇದ್ದಾರೆ. ಯುಪಿಯಲ್ಲಿ ಗರಿಷ್ಠ 60 ಮಂದಿ ಸಚಿವರಾಗಲಿದ್ದಾರೆ. ಹೀಗಾಗಿ ಇಂದು ಆರು ಮಂದಿ ಸಚಿವರಾಗಬಹುದೆನ್ನಲಾಗಿದೆ. 

click me!