ಆಪ್‌  ಏಕೈಕ ನೆಲೆ ಪಂಜಾಬ್‌ನಲ್ಲಿ ಬಂಡಾಯದ ಬಾವುಟ? ಕೇಜ್ರಿವಾಲ್‌ ಸಭೆ ಸಿಎಂ ಮಾನ್  ಹೇಳಿದ್ದೇನು?

Published : Feb 12, 2025, 09:14 AM IST
ಆಪ್‌  ಏಕೈಕ ನೆಲೆ ಪಂಜಾಬ್‌ನಲ್ಲಿ ಬಂಡಾಯದ ಬಾವುಟ? ಕೇಜ್ರಿವಾಲ್‌ ಸಭೆ ಸಿಎಂ ಮಾನ್  ಹೇಳಿದ್ದೇನು?

ಸಾರಾಂಶ

ದಿಲ್ಲಿ ಚುನಾವಣೆ ಸೋಲಿನ ಬಳಿಕ ಪಂಜಾಬ್‌ನಲ್ಲಿ ಆಪ್‌ ಸರ್ಕಾರದಲ್ಲಿ ಬಂಡಾಯದ ವರದಿಗಳ ಹಿನ್ನೆಲೆಯಲ್ಲಿ, ಅರವಿಂದ್ ಕೇಜ್ರಿವಾಲ್ ಪಂಜಾಬ್‌ನ ಆಪ್‌ ಶಾಸಕರೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ದೆಹಲಿ ಸೋಲಿನ ಕಾರಣಗಳು ಮತ್ತು ಪಂಜಾಬ್‌ನಲ್ಲಿ ಆಪ್‌ ಸರ್ಕಾರದಲ್ಲಿ ಕಂಡುಬಂದಿರುವ ಭಿನ್ನಮತದ ಬಗ್ಗೆ ಚರ್ಚಿಸಲಾಯಿತು.

ನವದೆಹಲಿ: ದಿಲ್ಲಿ ಚುನಾವಣೆ ಸೋಲಿನ ಬಳಿಕ ಆಪ್‌ನ ಏಕೈಕ ನೆಲೆಯಾಗಿರುವ ಪಂಜಾಬ್‌ ಸರ್ಕಾರದಲ್ಲಿ ಬಂಡಾಯದ ಅಲೆ ಬೀಸಿದೆ ಎಂಬ ವರದಿಗಳ ಬೆನ್ನಲ್ಲೇ, ಪಂಜಾಬ್‌ನ ಆಪ್‌ ಶಾಸಕರ ಜೊತೆ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್‌ ಸೋಮವಾರ ಇಲ್ಲಿ ಸಭೆ ನಡೆಸಿದರು.

ಸಭೆಯಲ್ಲಿ ದೆಹಲಿ ಸೋಲಿನ ಕಾರಣಗಳ ಬಗ್ಗೆ ಸಣ್ಣ ಚರ್ಚೆಯ ಜೊತೆಗೆ, ಪಂಜಾಬ್‌ನಲ್ಲಿ ಆಪ್‌ ಸರ್ಕಾರದಲ್ಲಿ ಕಂಡುಬಂದಿರುವ ಭಿನ್ನಮತ, ಅದಕ್ಕೆ ಕಾರಣಗಳು, ಪಕ್ಷ ಮತ್ತು ಸರ್ಕಾರವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಬಗ್ಗೆ ಕೇಜ್ರಿವಾಲ್‌ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಕೇಜ್ರಿವಾಲ್‌ ಅವರ ಹಲಿಯ ಕಪುರ್ತಲಾ ನಿವಾಸದಲ್ಲಿ ನಡೆದ ಸಭೆಯಲ್ಲಿ ಪಂಜಾಬ್‌ ಸಿಎಂ ಭಗವಂತ್‌ ಮಾನ್‌, ಸಂಸದ ರಾಘವ್‌ ಛಡ್ಡಾ, ಸಂದೀಪ್‌ ಪಾಠಕ್‌, ಶಾಸಕರು ಭಾಗವಹಿಸಿದ್ದರು.

ಇದನ್ನೂ ಓದಿ: ದೆಹಲಿ ಸೋಲಿನ ಬೆನ್ನಲ್ಲೇ ಪಂಜಾಬ್‌ನಲ್ಲಿ ಆಪ್‌ಗೆ ಶಾಕ್‌ ಕೊಟ್ಟ ಕಾಂಗ್ರೆಸ್?

ಸಭೆಯ ಬಳಿಕ ಮಾತನಾಡಿದ ಸಿಎಂ ಭಗವಂತ್‌ ಮಾನ್‌, ‘ಆಗಾಗ ಮೈತ್ರಿ ಪಕ್ಷಗಳನ್ನು ಬದಲಿಸುವುದು ಕಾಂಗ್ರೆಸ್‌ನ ಅಭ್ಯಾಸ. ಆದರೆ ಆಪ್‌ ನಾಯಕರು ಹಾಗಲ್ಲ. ಪಕ್ಷದಲ್ಲಿ ಎಲ್ಲವೂ ಚೆನ್ನಾಗಿದೆ. ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ ಎಂದಿದ್ದಾರೆ. ಪಂಜಾಬ್‌ನ 30 ಆಪ್‌ ಶಾಸಕರು ತಮ್ಮ ಪಕ್ಷದೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ಕಾಂಗ್ರೆಸ್‌ ನಾಯಕ ಪ್ರತಾಪ್‌ ಸಿಂಗ್‌ ಬಾಜ್ವಾ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾನ್‌, ‘ಅವರು ಹಲವು ವರ್ಷಗಳಿಂದ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಅವರ ನಮ್ಮ ಶಾಸಕರನ್ನು ಎಣಿಸುವ ಬದಲು, ಮೊದಲು ದೆಹಲಿಯಲ್ಲಿ ಕಾಂಗ್ರೆಸ್‌ ಎಷ್ಟು ಶಾಸಕರನ್ನು ಹೊಂದಿದೆ ಎಂದು ನೋಡಿಕೊಳ್ಳಲಿ’ ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ: ಕೇಜ್ರಿ ಸೋಲಿಗೆ 'ಸಪ್ತ' ಕಾರಣ ನೀಡಿದ ಪಿಕೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!
ಹೆಸರು ಸರ್ವಜ್ಞ: ಹಿರಿಯ ಆಟಗಾರನ ಸೋಲಿಸಿ ಜಾಗತಿಕ ಚೆಸ್ ಶ್ರೇಯಾಂಕ ಪ್ರವೇಶಿಸಿದ 3 ವರ್ಷದ ಪೋರ