
ನವದೆಹಲಿ: ರಾಜಕೀಯ ಅಪರಾಧೀಕರಣ ದತ್ತಾಂಶವನ್ನು ಸೋಮವಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗಿದೆ. ವರದಿ ಅನ್ವಯ, 543 ಲೋಕಸಭಾ ಸಂಸದರ ಪೈಕಿ 251 ಜನರ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ. 170 ಸಂಸದರ ಮೇಲೆ 5 ಅಥವಾ ಹೆಚ್ಚು ವರ್ಷಗಳ ಜೈಲುಶಿಕ್ಷೆ ವಿಧಿಸಬಹುದಾದ ಅಪರಾಧದ ಆರೋಪವಿದೆ ಎಂಬ ಸಂಗತಿ ಹೊರಬಿದ್ದಿದೆ. ಹನ್ಸಾರಿಯಾ ಅವರು ವಿವಿಧ ಹೈಕೋರ್ಟ್ ಗಳಿಂದ ಮಾಹಿತಿ ಪಡೆದು 83 ಪುಟಗಳ ವರದಿಯನ್ನು ಸಿದ್ದಪಡಿಸಿ ನ್ಯಾ.ದೀಪಂಕರ್ ದತ್ತಾ ಮತ್ತು ನ್ಯಾ. ಮನಮೋಹನ್ ಅವರ ಪೀಠಕ್ಕೆ ಸಲ್ಲಿಸಿದ್ದಾರೆ.
ಕೇರಳದ 20 ಸಂಸದರ ಪೈಕಿ 19 (ಶೇ.95), ತೆಲಂಗಾಣದ 17ರಲ್ಲಿ 14 (ಶೇ.82), ಬಿಹಾರದ 40ರಲ್ಲಿ 16 (ಶೇ.76), ಜಾರ್ಖಂಡದ 14ರಲ್ಲಿ 10 (ಶೇ.71), ತಮಿಳುನಾಡಿನ 39ರಲ್ಲಿ 26 (ಶೇ.67) ಸಂಸದರ ಮೇಲೆ ಅಪರಾಧ ಪ್ರಕರಣಗಳಿವೆ. ಕರ್ನಾಟಕ, ಉತ್ತರ ಪ್ರದೇಶ, ಮಹಾರಾಷ್ಟ್ರ, ಪ.ಬಂಗಾಳ, ಬಿಹಾರ, ಆಂಧ್ರ ಪ್ರದೇಶಗಳಲ್ಲಿ ಈ ಸಂಖ್ಯೆ ಶೇ.50 ಇದೆ.
ಹರ್ಯಾಣ (10) ಮತ್ತು ಛತ್ತೀಸಗಢದ (11) ತಲಾ ಒಬ್ಬೊಬ್ಬ ಸಂಸದರು ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಪಂಜಾಬ್‌ನ 13ರಲ್ಲಿ 2, ಅಸ್ಸಾಂನ 14ರಲ್ಲಿ 3, ದೆಹಲಿಯ 7ರಲ್ಲಿ 3, ರಾಜಸ್ಥಾನದ 25ರಲ್ಲಿ 5. ಗುಜರಾತ್‌ನ 25ರಲ್ಲಿ 5, ಮಧ್ಯ ಪ್ರದೇಶದ 29ರಲ್ಲಿ 9 ಸಂಸದರ ಮೇಲೆ ಅಪರಾಧ ಪ್ರಕರಣಗಳಿರುವುದು ವರದಿಯಿಂದ ತಿಳಿದುಬಂದಿದೆ.
ಇದನ್ನೂ ಓದಿ: ಎಐನಿಂದ ಕೆಲಸಕ್ಕೆ ಕುತ್ತಿಲ್ಲ, ಕೆಲಸದ ಸ್ವರೂಪ ಬದಲು: ಮೋದಿ ಭರವಸೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ