ಪಂಜಾಬ್(ಸೆ.19): ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆ ಬಳಿಕ ತೆರವಾಗಿದ್ದ ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಕಾಂಗ್ರೆಸ್ ಹೈಕಮಾಂಡ್ ಹಾಗೂ ಪಂಜಾಬ್ ಕಾಂಗ್ರೆಸ್ ಅವಿರೋಧವಾಗಿ ನಾಯಕ ಚರಣಜಿತ್ ಸಿಂಗ್ ಚನ್ನಿ ಅವರನ್ನು ನೂತನ ಸಿಎಂ ಆಗಿ ಆಯ್ಕೆ ಮಾಡಲಾಗಿದೆ.
ಸೋನಿಯಾ ಸಮ್ಮತಿ ಇದ್ರೂ ಸಿಎಂ ಹುದ್ದೆ ನಿರಾಕರಿಸಿದ ಅಂಬಿಕಾ ಸೋನಿ, ಕಾರಣವೇನು?
ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಸಚಿವ ಹರೀಶ್ ರಾವತ್ ಈ ಕುರಿತು ಟ್ವೀಟ್ ಮಾಡಿದ್ದಾರೆ. ಪಂಜಾಬ್ ಹೊಸ ಮುಖ್ಯಮಂತ್ರಿಯನ್ನು ಪರಿಚಯಿಸಲು ಸಂತಸವಾಗುತ್ತಿದೆ. ಕಾಂಗ್ರೆಸ್ ಶಾಸಂಗ ಸಭೆಯಲ್ಲಿ ಅವಿರೋಧವಾಗಿ ಚರಣಜಿತ್ ಸಿಂಗ್ ಚನ್ನಿಯನ್ನು ಆಯ್ಕೆ ಮಾಡಲಾಗಿದೆ ಎಂದು ರಾವತ್ ಟ್ವೀಟ್ ಮಾಡಿದ್ದಾರೆ.
It gives me immense pleasure to announce that Sh. has been unanimously elected as the Leader of the Congress Legislature Party of Punjab. pic.twitter.com/iboTOvavPd
— Harish Rawat (@harishrawatcmuk)ಅಮರಿಂದರ್ ಸಿಂಗ್ ಸರ್ಕಾರದಲ್ಲಿ ಚರಣಜಿತ್ ಸಿಂಗ್ ತಾಂತ್ರಿಕ ಶಿಕ್ಷಣ ಹಾಗೂ ಕೈಗಾರಿಕಾ ತರಬೇತಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಸಿಎಂ ರೇಸ್‌ನಲ್ಲಿ ಚರಣಜಿತ್ ಸಿಂಗ್ ಹೆಸರು ಕೇಳಿಬಂದಿರಲಿಲ್ಲ. ಬಿಜೆಪಿ ಸಿಎಂ ಆಯ್ಕೆ ರೀತಿ ಕಾಂಗ್ರೆಸ್‌ನಲ್ಲಿ ಅಂತಿಮ ಹಂತದಲ್ಲಿ ಅಚ್ಚರಿ ಆಯ್ಕೆ ಮಾಡಲಾಗಿದೆ.
ಪಂಜಾಬ್ ಕಾಂಗ್ರೆಸ್‌ನಲ್ಲಿ ಬಿರುಕು: ಪಂಜಾಬ್ ಸಿಎಂ ಸ್ಥಾನಕ್ಕೆ ಕ್ಯಾಪ್ಟನ್ ಅಮರಿಂದ್ ಸಿಂಗ್ ರಾಜೀನಾಮೆ!
ಕಾಂಗ್ರೆಸ್ ನಾಯಕಿ ಅಂಬಿಕಾ ಸೋನಿಗೆ ಸಿಎಂ ಸ್ಥಾನ ನೀಡಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿತ್ತು. ಆದರೆ ಸಿಖ್ ಸಮುದಾಯದವರೇ ಸಿಎಂ ಆಗಬೇಕು ಎಂದು ಅಂಬಿಕಾ ಸೋನಿ ಸಿಎಂ ಆಫರ್ ತಿರಸ್ಕರಿಸಿದ್ದರು. ಬಳಿಕ ಸುಖಿಂದರ್ ಸಿಂಗ್ ರಾಂಧವ ಹೆಸರು ಬಲವಾಗಿ ಕೇಳಿಬಂದಿತ್ತು. ಹಲವು ಕಾಂಗ್ರೆಸ್ ನಾಯಕರು ಸುಖಿಂದರ್ ಹೆಸರು ಪ್ರಸ್ತಾಪಿಸಿದ್ದರು. ಆದರೆ ಅಂತಿಮವಾಗಿ ಅದೃಷ್ಠ ಚರಣಜಿತ್ ಸಿಂಗ್ ಪಾಲಾಗಿದೆ.