Punjab Cabinet: ಮಾನ್ ಸಂಪುಟದಲ್ಲಿ ಓರ್ವ ಮಹಿಳೆ, 2ನೇ ಬಾರಿ ಶಾಸಕರಾದವರ ನಿರ್ಲಕ್ಷ್ಯ!

By Suvarna NewsFirst Published Mar 19, 2022, 8:27 AM IST
Highlights

* ಪಂಜಾಬ್‌ನಲ್ಲಿ ಗೆದ್ದ ಆಪ್

* ಸರ್ಕಾರ ರಚನೆಗೆ ಆಪ್‌ ಕಸರತ್ತು

* ಎರಡನೇ ಬಾರಿ ಶಾಸಕರಾದವರಿಗೆ ಕ್ಯಾಬಿನೆಟ್‌ನಲ್ಲಿ ನಿರ್ಲಕ್ಷ್ಯ

ಚಂಡೀಗಢ(ಮಾ.19): ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಸಂಪುಟದಲ್ಲಿರುವ 10 ಸಚಿವರ ಹೆಸರನ್ನು ಆಮ್ ಆದ್ಮಿ ಪಕ್ಷ (ಎಎಪಿ) ಶುಕ್ರವಾರ ಅಂತಿಮಗೊಳಿಸಿದೆ. 2022ರ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಬಾದಲ್ ತಂದೆ-ಮಗ, ಚರಂಜಿತ್ ಸಿಂಗ್ ಚನ್ನಿ, ನವಜೋತ್ ಸಿಂಗ್ ಸಿಧು ಅವರನ್ನು ಸೋಲಿಸಿ ದೊಡ್ಡ ಬದಲಾವಣೆ ಸಾಕ್ಷಿಯಾದ ಎಲ್ಲಾ ಶಾಸಕರಿಗೆ ಮಣೆ ಹಾಕಿಲ್ಲ.

ಪಂಜಾಬ್ ನಲ್ಲಿ ಎರಡನೇ ಬಾರಿಗೆ ಶಾಸಕರಾದ ಆಮ್ ಆದ್ಮಿ ಪಕ್ಷದ ಬಹುತೇಕ ನಾಯಕರನ್ನು ಕಡೆಗಣಿಸಲಾಗಿದೆ. ದಿರ್ಬಾದಿಂದ ಎರಡನೇ ಬಾರಿಗೆ ಶಾಸಕರಾಗಿರುವ ಮಾಜಿ ವಿರೋಧ ಪಕ್ಷದ ನಾಯಕ ಹರ್ಪಾಲ್ ಸಿಂಗ್ ಚೀಮಾ ಮತ್ತು ಬರ್ನಾಲಾದಿಂದ ಎರಡನೇ ಬಾರಿಗೆ ಗೆದ್ದ ಗುರ್ಮೀತ್ ಸಿಂಗ್ ಮೀತ್ ಹೈರ್ ಅವರನ್ನು ಹೊರತುಪಡಿಸಿ, ಉಳಿದ ಎಂಟು ಸಚಿವರು ಮೊದಲ ಬಾರಿಗೆ ಶಾಸಕರಾದವರೆಂಬುವುದು ಉಲ್ಲೇಖನೀಯ.

ಭಗವಂತ್ ಮಾನ್ ಅವರ ಸಂಪುಟದಲ್ಲಿ ಈ 10 ಹೆಸರುಗಳು ಸೇರ್ಪಡೆ

ಹರ್ಪಾಲ್ ಸಿಂಗ್ ಚೀಮಾ, ಡಾ. ಬಲ್ಜಿತ್ ಕೌರ್, ಹರ್ಭಜನ್ ಸಿಂಗ್ ಇಟಿಒ, ಡಾ. ವಿಜಯ್ ಸಿಂಗ್ಲಾ, ಗುರ್ಮಿರ್ ಸಿಂಗ್ ಮೀಟ್ ಹೈರ್, ಹರ್ಜೋತ್ ಸಿಂಗ್ ಬೈನ್ಸ್, ಲಾಲ್ ಚಂದ್ ಕಟಾರುಚಕ್, ಕುಲದೀಪ್ ಸಿಂಗ್ ಧಲಿವಾಲ್, ಲಾಲ್ಜಿತ್ ಸಿಂಗ್ ಭುಲ್ಲರ್, ಬ್ರಹ್ಮ.ಶಂಕರ್ ಜಿಂಪಾ ಈ ಹತ್ತು ಮಂದಿ ಭಗವಂತ್ ಮಾನ್ ಅವರ ಸಂಪುಟದಲ್ಲಿ ಸೇರ್ಪಡೆಗೊಳ್ಳುವ ಸಚಿವರೆನ್ನಲಘಾಇದೆ.

ದೊಡ್ಡ ಬದಲಾವಣೆ ಸಾಕ್ಷಿಯಾದವರಿಗೆ ಸಂಪಪುಟದಲ್ಲಿ ಸ್ಥಾನವಿಲ್ಲ

2022 ರ ಪಂಜಾಬ್ ಅಸೆಂಬ್ಲಿ ಚುನಾವಣೆಯಲ್ಲಿ ಡಾ. ವಿಜಯ್ ಸಿಂಗ್ಲಾ ಕಾಂಗ್ರೆಸ್ ಅಭ್ಯರ್ಥಿ ಮತ್ತು ಜನಪ್ರಿಯ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಸೋಲಿಸಿದರು. ಮತ್ತೊಂದೆಡೆ, ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರನ್ನು ಸೋಲಿಸಿದ ಗುರ್ಮೀತ್ ಸಿಂಗ್ ಖುದ್ದಿಯಾನ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಸುಖ್ಬೀರ್ ಸಿಂಗ್ ಬಾದಲ್ ಅವರನ್ನು ಸೋಲಿಸಿದ ಜಗದೀಪ್ ಸಿಂಗ್ ಕಾಂಬೋಜ್ ಗೋಲ್ಡಿ ಅವರಿಗೆ ಭಗವಂತ್ ಮಾನ್ ಅವರ ಸಂಪುಟದಲ್ಲಿ ಸ್ಥಾನ ಸಿಗಲಿಲ್ಲ.

ಅದೇ ಸಮಯದಲ್ಲಿ, 2022 ರ ಪಂಜಾಬ್ ಚುನಾವಣೆಯಲ್ಲಿ ಚಮಕೌರ್ ಸಾಹಿಬ್‌ನಿಂದ ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿ ಚರಣ್‌ಜಿತ್ ಸಿಂಗ್ ಚನ್ನಿ ಅವರನ್ನು ಸೋಲಿಸಿದ ಡಾ. ಚರಣ್‌ಜಿತ್ ಸಿಂಗ್ ಮತ್ತು ಭದೌರ್ ಅವರನ್ನು ಸೋಲಿಸಿದ ಲಾಭ್ ಸಿಂಗ್ ಉಘೋಕೆ ಅವರನ್ನು ಆಮ್ ಆದ್ಮಿ ಪಕ್ಷವು ಸೇರಿಸದೆ ಆಶ್ಚರ್ಯಕರವಾಗಿ ಕಡೆಗಣಿಸಿದೆ. ಅಲ್ಲದೆ, ಪಟಿಯಾಲ ನಗರದಿಂದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಸೋಲಿಸಿದ ಅಜಿತ್ ಪಾಲ್ ಸಿಂಗ್ ಕೊಹ್ಲಿ ಹೆಸರು ಕೂಡ ಸಚಿವರ ಪಟ್ಟಿಯಲ್ಲಿ ಸೇರಿಲ್ಲ.

ಪರಿಶಿಷ್ಟ ಜಾತಿಯ 4 ಶಾಸಕರು 

ಅದೇ ರೀತಿ ಆಮ್ ಆದ್ಮಿ ಪಕ್ಷ ಕೂಡ ಸತತ ಎರಡನೇ ಬಾರಿಗೆ ಶಾಸಕರಾಗುವವರನ್ನು ಕಡೆಗಣಿಸಿದೆ. 70,000 ಕ್ಕೂ ಹೆಚ್ಚು ಮತಗಳ ಅಂತರದಿಂದ ರಾಜ್ಯವನ್ನು ಗೆದ್ದ ಸುನಮ್ ಶಾಸಕ ಅಮನ್ ಅರೋರಾ ಅವರನ್ನೂ ಕಡೆಗಣಿಸಲಾಗಿದೆ. ಸಚಿವರ ಮೊದಲ ಪಟ್ಟಿಯಲ್ಲಿ ಆಮ್ ಆದ್ಮಿ ಪಕ್ಷವು ಪರಿಶಿಷ್ಟ ಜಾತಿಯ 4 ಶಾಸಕರಿಗೆ ಸ್ಥಾನ ನೀಡಿದೆ.

ಮಾನ್ ಕ್ಯಾಬಿನೆಟ್ ,ಕೇವಲ 1 ಮಹಿಳಾ ಸಚಿವೆ

ಮಾಲ್ವಾದಿಂದ 5 ಶಾಸಕರು (ದಿರ್ಬಾ, ಮಾಲೌಟ್, ಮಾನ್ಸಾ, ಬರ್ನಾಲಾ ಮತ್ತು ಆನಂದಪುರ ಸಾಹಿಬ್) ಮತ್ತು 4 ಮಜಾ (ಜಾಂಡಿಯಾಲಾ, ಭೋವಾ, ಅಜ್ನಾಲಾ ಮತ್ತು ಪಟ್ಟಿ) ಭಗವಂತ್ ಮಾನ್ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಲಾಗಿದೆ. ಅದೇ ಸಮಯದಲ್ಲಿ, ದೋಬಾ (ಹೊಶಿಯಾರ್‌ಪುರ) ನಿಂದ ಕೇವಲ 1 ಶಾಸಕರಿಗೆ ಮಾತ್ರ ಸಚಿವ ಸ್ಥಾನ ಸಿಕ್ಕಿದೆ. ಪಂಜಾಬ್‌ನಲ್ಲಿ ಸಚಿವ ಸ್ಥಾನಕ್ಕಾಗಿ ಆಮ್ ಆದ್ಮಿ ಪಕ್ಷದ ಪಟ್ಟಿಯಲ್ಲಿ 4 ಜಾಟ್‌ಗಳು, 4 ಪರಿಶಿಷ್ಟ ಜಾತಿಗಳು, 2 ಹಿಂದೂಗಳು ಮತ್ತು 1 ಮಹಿಳೆ ಮಾತ್ರ ಸೇರಿದ್ದಾರೆ.

ಕುಲತಾರ್ ಸಿಂಗ್ ಸಂಧ್ವಾನ್‌ಗೆ ಸ್ಪೀಕರ್ ಸ್ಥಾನ

ನಿಯಮಗಳ ಪ್ರಕಾರ, ಭಗವಂತ್ ಮಾನ್ ತಮ್ಮ ಸಂಪುಟದಲ್ಲಿ ಗರಿಷ್ಠ 17 ಸಚಿವರನ್ನು ಉಳಿಸಿಕೊಳ್ಳಬಹುದು. ಪಂಜಾಬ್ ವಿಧಾನಸಭೆಯಲ್ಲಿ 117 ಸದಸ್ಯರಿದ್ದಾರೆ. ಏತನ್ಮಧ್ಯೆ, ಕೋಟ್ಕಾಪುರದಿಂದ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ಕುಲ್ತಾರ್ ಸಿಂಗ್ ಸಂಧ್ವನ್ ಅವರು ಪಂಜಾಬ್ ವಿಧಾನಸಭೆಯ ಸ್ಪೀಕರ್ ಆಗಲಿದ್ದಾರೆ. ಅವರು ಟ್ವೀಟ್ ಮೂಲಕ ಈ ಮಾಹಿತಿ ನೀಡಿದ್ದಾರೆ.

click me!