Global Approval Rating: ಈ ವರ್ಷವೂ ಪ್ರಧಾನಿ ಮೋದಿ ವಿಶ್ವದ ನಂ.1 ಜನಪ್ರಿಯ ನಾಯಕ

By Kannadaprabha NewsFirst Published Mar 19, 2022, 7:46 AM IST
Highlights

*ಮೋದಿಗೆ ಶೇ.77ರಷ್ಟುಅನುಮೋದನೆ ರೇಟಿಂಗ್‌: ಮಾರ್ನಿಂಗ್‌ ಕನ್ಸಲ್ಟ್‌ ಸಮೀಕ್ಷೆ
*ಮಾಧ್ಯಮಗಳ ಸಮಾಜಸೇವೆಗೆ ಮೋದಿ ಶ್ಲಾಘನೆ
*ಜನರ ಜೀವನ ಬದಲಿಸುವಲ್ಲಿ ಮಾಧ್ಯಮದ ಪಾತ್ರ ಹಿರಿದು
*ಮಾತೃಭೂಮಿ ಪತ್ರಿಕೆಯ ಶತಮಾನೋತ್ಸವದಲ್ಲಿ ಭಾಷಣ

ನವದೆಹಲಿ (ಮಾ. 19): ವಿಶ್ವದ ಅತ್ಯಂತ ಜನಪ್ರಿಯ ನಾಯಕರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಳೆದ ವರ್ಷದಂತೆ ಮೊದಲ ಸ್ಥಾನದಲ್ಲಿಯೇ ಉಳಿದುಕೊಂಡಿದ್ದಾರೆ.ಅಮೆರಿಕ ಮೂಲದ ಮಾರ್ನಿಂಗ್‌ ಕನ್ಸಲ್ಟ್‌ ಸಂಸ್ಥೆ ನಡೆಸಿರುವ ಸಮೀಕ್ಷೆಯಲ್ಲಿ ಮೋದಿ ಶೇ.77ರಷ್ಟುಅನುಮೋದನೆಯ ರೇಟಿಂಗ್‌ ಪಡೆದಿದ್ದಾರೆ. ಕಳೆದ ಬಾರಿಯ ಸಮೀಕ್ಷೆಯಲ್ಲೂ ಶೇ.71ರಷ್ಟುಅನುಮೋದನೆಯ ರೇಟಿಂಗ್‌ನೊಂದಿಗೆ ಮೋದಿ ಮೊದಲ ಸ್ಥಾನದಲ್ಲಿದ್ದರು.

ಮಾರ್ನಿಂಗ್‌ ಕನ್ಸಲ್ಟ್‌ ವಿಶ್ವದ 13 ರಾಷ್ಟ್ರಗಳ ನಾಯಕರ ಸಮೀಕ್ಷೆ ನಡೆಸಿದ್ದು ಮೋದಿ ಮೊದಲ ಸ್ಥಾನದಲ್ಲಿದ್ದರೆ, ಮೆಕ್ಸಿಕೋದ ಅಧ್ಯಕ್ಷ ಲೋಪೆಜ್‌ ಒಬ್ರಾಡೋರ್‌ ಶೇ.63ರಷ್ಟುರೇಟಿಂಗ್‌ನೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಇಟಲಿಯ ಪ್ರಧಾನಿ ಮಾರಿಯೋ ಡ್ರಗಿ (ಶೇ.54) 3ನೇ ಸ್ಥಾನದಲ್ಲಿ, ಜರ್ಮನಿಯ ಚಾನ್ಸಲರ್‌ ಒಲಾಫ್‌ ಸ್ಕೋಲ್ಜ್‌ (ಶೇ.45) 4ನೇ ಸ್ಥಾನದಲ್ಲಿ, ಜಪಾನಿನ ಪ್ರಧಾನಮಂತ್ರಿ ಫುಮಿಯೋ ಕಿಶಿಡಾ ಮತ್ತು ಕೆನಡಾ ಪ್ರಧಾನಿ ಟ್ರುಡ್ಯು (ತಲಾ ಶೇ.42) ಕ್ರಮವಾಗಿ 5 ಮತ್ತು 6ನೇ ಹಾಗೂಅಮೆರಿಕ ಅಧ್ಯಕ್ಷ ಜೋ ಬೈಡೆನ್‌ (ಶೇ.41) 7ನೇ ಸ್ಥಾನದಲ್ಲಿದ್ದಾರೆ.

Latest Videos

"

ಸ್ಥಾನ- ನಾಯಕರು - ದೇಶ- ರೇಟಿಂಗ್‌

1)  ನರೇಂದ್ರ ಮೋದಿ ಭಾರತ 77%

2) ಲೋಪೆಜ್‌ ಒಬ್ರಾಡೋರ್‌ ಮೆಕ್ಸಿಕೋ 63%

3) ಧಾನಿ ಮಾರಿಯೋ ಡ್ರಗಿ ಇಟಲಿ 54%

4) ಒಲಾಫ್‌ ಸ್ಕೋಲ್‌್ಜ ಜರ್ಮನಿ 45%

5) ಫಿಮಿಯೋ ಕಿಶಿಡಾ ಜಪಾನ್‌ 42%

ಇದನ್ನೂ ಓದಿ: 4 ರಾಜ್ಯಗಳ ಸಂಪುಟ ರಚನೆಗೆ ಸ್ವತಃ ಮೋದಿ ಮಾಸ್ಟರ್‌ ಪ್ಲಾನ್‌..!

ಮಾಧ್ಯಮಗಳ ಸಮಾಜಸೇವೆಗೆ ಮೋದಿ ಶ್ಲಾಘನೆ:  ಸರ್ಕಾರ ಜಾರಿಗೆ ತರುವ ಯೋಜನೆಗಳನ್ನು ಜನರಿಗೆ ತೋರಿಸುವಲ್ಲಿ ಮತ್ತು ಜನರ ಜೀವನವನ್ನು ಬದಲಾಯಿಸುವುದರಲ್ಲಿ ಮಾಧ್ಯಮಗಳು ನಿರ್ಣಾಯಕ ಮತ್ತು ಸಕಾರಾತ್ಮಕ ಪಾತ್ರ ವಹಿಸುತ್ತವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ. ಇದರೊಂದಿಗೆ ರಾಜಕೀಯವಲ್ಲದ ಯೋಜನೆಗಳಾದ ಸ್ವಚ್ಛ ಭಾರತ ಮಿಶನ್‌ ಮತ್ತು ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆಗಳನ್ನು ಜನಪ್ರಿಯಗೊಳಿಸುವಲ್ಲಿ ಮಾಧ್ಯಮಗಳ ಕೊಡುಗೆಯನ್ನು ಅವರು ಸ್ಮರಿಸಿದರು.

ಕೇರಳದ ಪ್ರಮುಖ ಮಾಧ್ಯಮ ಮಾತೃಭೂಮಿಯ ಶತಮಾನೊತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ದೇಶದ ಅಭಿವೃದ್ಧಿಗೆ ಉತ್ತಮ ಯೋಜನೆಗಳನ್ನು ರೂಪಿಸಬೇಕು. ಅವು ಪರಿಣಾಮಕಾರಿಯಾಗಿ ಜನರಿಗೆ ಅರ್ಥ ಮಾಡಿಸುವಲ್ಲಿ ಮಾಧ್ಯಮಗಳ ಪಾತ್ರ ಪ್ರಮುಖವಾದುದು. ಇಷ್ಟೇ ಅಲ್ಲದೇ ಭಾರತ ಸ್ವಾತಂತ್ರ್ಯ ಹೋರಾಟವನ್ನು ದೇಶದ ಮೂಲೆ ಮೂಲೆಗೂ ತಲುಪಿಸಿದ್ದು ಇದೇ ಮಾಧ್ಯಮಗಳು ಎಂದು ಅವರು ಹೇಳಿದರು.

ಇದನ್ನೂ ಓದಿ: The Kashmir Files: ಎಲ್ಲರೂ ಕಾಶ್ಮೀರ್‌ ಫೈಲ್ಸ್‌ ಸಿನಿಮಾ ನೋಡಿ: ಮೋದಿ

ನಂತರ ಭಾರತ ಸರ್ಕಾರ ಕೋವಿಡ್‌ ಸಮಯದಲ್ಲಿ ಮಾಡಿದ ಸಾಧನೆಗಳನ್ನು ವಿವರಿಸಿದ ಅವರು ಈ ಟೀಕಾಕಾರರನ್ನು ಸುಳ್ಳು ಎಂದು ಸಾಬೀತು ಮಾಡಲಾಗಿದೆ. ಪ್ರಪಂಚದ ಇತರ ದೇಶಗಳು ಲಸಿಕೆಯ ಕುರಿತಾಗಿ ಹಲವು ಗೊಂದಲಗಳನ್ನು ಹೊಂದಿರುವ ಸಮಯದಲ್ಲಿ ಭಾರತ 180 ಕೋಟಿ ಡೋಸ್‌ ಲಸಿಕೆ ವಿತರಿಸಿದೆ. 80 ಕೋಟಿ ಜನರಿಗೆ ಉಚಿತ ಪಡಿತರ ವಿತರಿಸಿದೆ ಎಂದು ಅವರು ಹೇಳಿದರು. ಈ ಕಾರ್ಯಕ್ರಮದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯ್‌ ವಿಜಯನ್‌ ಸೇರಿರಂತೆ ಹಲವು ಸಚಿವರು ಭಾಗವಹಸಿದ್ದರು.

ಇಂದು ಭಾರತಕ್ಕೆ ಜಪಾನ್‌ ಪ್ರಧಾನಿ ಕಿಶಿದಾ ಭೇಟಿ:  ರಷ್ಯಾ-ಉಕ್ರೇನ್‌ ಬಿಕ್ಕಟ್ಟಿನ ನಡುವೆಯೇ 14ನೇ ಭಾರತ-ಜಪಾನ್‌ ಶೃಂಗದ ಹಿನ್ನೆಲೆಯಲ್ಲಿ ಜಪಾನ್‌ ಪ್ರಧಾನಿ ಫ್ಯೂಮಿಯೋ ಕಿಶಿದಾ ಅವರು ಶನಿವಾರ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಎರಡು ದಿನ ಭಾರತದಲ್ಲಿ ಇರಲಿರುವ ಕಿಶಿದಾ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಜಾಗತಿಕ ಮತ್ತು ಪ್ರಾದೇಶಿಕ ವಿಷಯಗಳ ಕುರಿತು ದ್ವಿಪಕ್ಷೀಯ ಚರ್ಚೆಗಳನ್ನು ನಡೆಸಲಿದ್ದಾರೆ ಮತ್ತು ಯುದ್ಧಪೀಡಿತ ಉಕ್ರೇನ್‌ನಲ್ಲಿನ ಸದ್ಯದ ಪರಿಸ್ಥಿತಿಯ ಕುರಿತು ಚರ್ಚೆ ಸಹ ಮಾಡಲಿದ್ದಾರೆ ನಿರೀಕ್ಷಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ… ಬಾಗ್ಚಿ, ಮಾಚ್‌ರ್‍ 19ರಂದು ಭಾರತ ಮತ್ತು ಜಪಾನ್‌ ಶೃಂಗಸಭೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ, ಜಪಾನ್‌ ಪ್ರಧಾನಿ ಫä್ಯಮಿಯೊ ಕಿಶಿದಾ ಭಾರತಕ್ಕೆ ಶನಿವಾರ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

click me!