ಪಂಜಾಬ್(ನ.13): ಕೇಂದ್ರ ಸಕ್ರಾದ ಮೂರು ಕೃಷಿ ಕಾಯ್ದೆ(Farm Law) ವಿರೋಧಿಸಿ ರೈತರು ನಡೆಸುತ್ತಿರವ ಪ್ರತಿಭಟನೆ(Farmers Protest) ಈಗಲೂ ನಡೆಯುತ್ತಿದೆ. ಒಂದು ವರ್ಷದಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ನಡುವೆ 2021ರ ಜನವರಿ 26 ರಂದು ರೈತರು ದೆಹಲಿಯಲ್ಲಿ ಟ್ರಾಕ್ಟರ್ ರ‍್ಯಾಲಿ(Tractor Rally) ಆಯೋಜಿಸಿದ್ದರು. ಆದರೆ ಈ ರ‍್ಯಾಲಿ ಹಿಂಸಾಚಾರ ರೂಪಕ್ಕೆ ತಿರುಗಿತ್ತು. ಕೆಂಪು ಕೋಟೆಗೆ ಮುತ್ತಿಗೆ, ರಾಷ್ಟ್ರಧ್ವಜಕ್ಕೆ ಅವಮಾನ, 500ಕ್ಕೂ ಹೆಚ್ಚು ಪೊಲೀಸರ ಮೇಲೆ ಹಲ್ಲೆ ಸೇರಿದಂತೆ ಹತ್ತು ಹಲವು ಘಟನೆಗಳು ನಡೆದಿತ್ತು. ರ‍್ಯಾಲಿ ಬಳಿಕ 83 ಮಂದಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಇದೀಗ ಪಂಜಾಬ್ ಸರ್ಕಾರ ಮುಂದಿನ ಚುನಾವಣೆ ಮುಂದಿಟ್ಟುಕೊಂಡು ಇದೇ 83 ದಂಗೆಕೋರರಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.
ಪಂಜಾಬ್ ವಿಧಾನಸಭೆಗೆ ಸಜ್ಜಾಗುತ್ತಿದೆ. ಕ್ಯಾಪ್ಟನ್ ಅಮರಿಂದರ್ ಸಿಂಗ್ ನಿರ್ಗಮನದ ಬಳಿಕ ಪಂಜಾಬ್ ಕಾಂಗ್ರೆಸ್ ಬಡವಾಗಿದೆ. ಹೀಗಾಗಿ ರೈತರ ಒಲೈಕೆಗೆ ಪಂಜಾಬ್ ಸರ್ಕಾರ ಮುಂದಾಗಿದೆ. ದೆಹಲಿ ಟ್ರಾಕ್ಟರ್ ರ‍್ಯಾಲಿಯಲ್ಲಿ ಬಂಧಿತರಾಗಿರುವ 83 ಮಂದಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರವನ್ನು ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನಿ(Punjab CM Charanjit Singh Channi) ಘೋಷಿಸಿದ್ದಾರೆ. ಕೇಂದ್ರದ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲವಾಗಿ ಈ ಪರಿಹಾರ ಮೊತ್ತ ನೀಡಲಾಗುತ್ತಿದೆ ಎಂದು ಚನಿ ಹೇಳಿದ್ದಾರೆ.
undefined
ಕೆಂಪುಕೋಟೆ ವಶಪಡಿಸಲು ಸಂಚು ನಡೆದಿತ್ತು;ಟ್ರಾಕ್ಟರ್ ರ‍್ಯಾಲಿ ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ಮಾಹಿತಿ!
ಕೇಂದ್ರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ನಡೆಸುತ್ತಿರು ಪ್ರತಿಭಟನೆಗೆ ಪಂಜಾಬ್ ಸರ್ಕಾರದ(Punjab Government) ಬೆಂಬಲವನ್ನು ವಿಸ್ತರಿಸುತ್ತಾ ಇದೀಗ ಈ ಘೋಷಣೆ ಮಾಡುತ್ತಿದ್ದೇವೆ. ಅಮಾಯಕ ರೈತರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ಚನಿ ಹೇಳಿದ್ದಾರೆ.
ಪಂಜಾಬ್ ಸರ್ಕಾರದ ನಡೆಯನ್ನು ಬಿಜೆಪಿ, ಶಿರೋಮಣಿ ಅಕಾಲಿದಳ ಖಂಡಿಸಿದೆ. ದೆಹಲಿಯಲ್ಲಿ ರೈತರು ನಡೆಸಿದ ಟ್ರಾಕ್ಟರ್ ರ್ಯಾಲಿ ಯಾವ ಮಟ್ಟಿಗೆ ಹಿಂಸಾಚಾರ ರೂಪ ತಾಳಿದೆ ಅನ್ನೋದು ಎಲ್ಲರಿಗೂ ತಿಳಿದಿದೆ. ಈ ದಂಗೆಯೆಬ್ಬಿಸಿ ಪೊಲೀಸರು ಹಾಕಿದ ಬ್ಯಾರಿಕೇಡ್‌ಗಳನ್ನು ರೈತರು ಮುರಿದಿದ್ದರು. ಸಿಕ್ಕ ಸಿಕ್ಕ ಪೊಲೀಸರ ಮೇಲೆ ಹಲ್ಲೆ ಮಾಡುತ್ತಾ ಐತಿಹಾಸಿಕ ಕೆಂಪು ಕೋಟೆಗೆ ಮುತ್ತಿಗೆ ಹಾಕಿದ್ದರು. ಬಳಿಕ ಕೆಂಪು ಕೋಟೆಯಲ್ಲಿ ಹಾರಾಡುತ್ತಿರುವ ರಾಷ್ಟ್ರ ಧ್ವಜವನ್ನು ಕೆಳಗಿಳಿಸಿ ಧರ್ಮದ ಧ್ವಜವನ್ನು ಹಕಲಾಗಿತ್ತು. ಕೆಂಪು ಕೋಟೆಯಲ್ಲಿನ ಪಿಠೋಪಕರಣಗಳನ್ನು ಪುಡಿ ಪುಡಿ ಮಾಡಲಾಗಿತ್ತು.
ದಿಲ್ಲಿ ದಂಗೆಕೋರರಿಂದ ಕೆಂಪುಕೋಟೆ ಕ್ಯಾಮರಾ, ಸೇರಿ ಹಲವು ವಸ್ತು ಜಖಂ!
ರೈತ ಪ್ರತಿಭಟನೆ ಹೆಸರಿನಲ್ಲಿನ ಟ್ರಾಕ್ಟರ್ ರ್ಯಾಲಿ ಸಾಗಿದ ದಾರಿಯುದ್ದಕ್ಕೂ ಸಾರ್ವಜನಿಕ ಆಸ್ತಿಪಾಸ್ತಿಯನ್ನು ನಾಶಮಾಡಲಾಗಿತ್ತು. ಈ ದಂಗೆಯೆಬ್ಬಿಸಿದ ದಂಗೆಕೋರರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಇದೀಗ ಇವರಿಗೆ ಪಂಜಾಬ್ ಸರ್ಕಾರ ಪರಿಹಾರ ನೀಡುತ್ತಿದೆ ಅಂದರೆ ಇದಕ್ಕಿಂತ ದುರಂತ ಇನ್ಯಾವುದಿದೆ. ರೈತರ ಒಲೈಕೆ ಮಾಡಲು ಸರ್ಕಾರ ಈ ಮಟ್ಟಿಗೆ ಇಳಿಯಬಾರದು. ಇದು ರಾಜ್ಯ ಹಾಗೂ ದೇಶದ ಭದ್ರತೆಗೆ ಅಪಾಯ ಎಂದು ಬಿಜೆಪಿ ಹೇಳಿದೆ.
ನವೆಂಬರ್ 29 ರಿಂದ ಪ್ರತಿ ದಿನ ಟ್ರಾಕ್ಟರ್ ಚಲೋ
ಪಂಜಾಬ್ ಸರ್ಕಾರ ದಂಗೆಕೋರರಿಗೆ ಬಹಿರಂಗ ಬೆಂಬಲ ಹಾಗೂ 2 ಲಕ್ಷ ರೂಪಾಯಿ ಪರಿಹಾರ ಘೋಷಿಸುತ್ತಿದ್ದಂತೆ ರೈತ ಸಂಘಟನೆಗಳು ಮೈಕೊಡವಿ ನಿಂತಿದೆ. ನವೆಂಬರ್ 29 ರಿಂದ ಪ್ರತಿಭಟನಾ ನಿರತ ರೈತರು ಪ್ರತಿದಿನ ಟ್ರಾಕ್ಟರ್ ಮೂಲಕ ಸಂಸತ್ ಚಲೋ ರ್ಯಾಲಿ ಆಯೋಜಿಸುವುದಾಗಿ ಘೋಷಿಸಿದ್ದಾರೆ. ಚಳಿಗಾಲದ ಅಧಿವೇಶನದ ವೇಳೆ ರೈತರು ಪ್ರತಿಭಟನೆ ಚುರುಗೊಳಿಸಲು ಮುಂದಾಗಿದೆ. ಹೀಗಾಗಿ ಸಂಸತ್ ಚಲೋ ಟ್ರಾಕ್ಟರ್ ರ್ಯಾಲಿಯನ್ನು ಹಮ್ಮಿಕೊಂಡಿದೆ.
ಸಿಸಿಟಿವಿ ಸೇರಿದಂತೆ ಲಭ್ಯವಿರುವ ಎಲ್ಲಾ ಆಧಾರಗಳನ್ನು ಬಳಸಿಕೊಂಡು ದೆಹಲಿ ಪೊಲೀಸರು ಬಂಧಿಸಿದ ದಂಗೆಕೋರರನ್ನು ಪಂಜಾಬ್ ಸರ್ಕಾರ ರೈತರು ಎಂದು ಘೋಷಿಸಿದೆ ಅವರಿಗೆ ಪರಿಹಾರ ನೀಡುತ್ತಿದೆ. ಇದು ರಾಷ್ಟ್ರೀಯ ಭದ್ರತೆಗೆ ತೀವ್ರ ಸವಾಲಾಗಿ ಪರಿಣಮಿಸಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.