ಕೆಲಸ ಆರಂಭಿಸಿದ ಅಪ್ಪು PRK ಪ್ರೊಡಕ್ಷನ್‌, ಮೋದಿ ನಿರ್ಧಾರ ವಿಪಕ್ಷಗಳಿಗೆ ಟೆನ್ಶನ್; ನ.21ರ ಟಾಪ್ 10 ಸುದ್ದಿ!

Published : Nov 21, 2021, 05:37 PM IST
ಕೆಲಸ ಆರಂಭಿಸಿದ ಅಪ್ಪು PRK ಪ್ರೊಡಕ್ಷನ್‌, ಮೋದಿ ನಿರ್ಧಾರ ವಿಪಕ್ಷಗಳಿಗೆ ಟೆನ್ಶನ್; ನ.21ರ ಟಾಪ್ 10 ಸುದ್ದಿ!

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಕೃಷಿ ಕಾಯ್ದೆ ಹಿಂಪಡೆಯುವ ಮೂಲಕ ವಿಪಕ್ಷಗಳ ಟೆನ್ಶನ್ ಹೆಚ್ಚಿಸಿದ್ದಾರೆ. ಕೃಷಿ ಮಸೂದೆ ಹಿಡಿದು ಹೋರಾಟಕ್ಕಿಳಿಯುವ ಎಲ್ಲಾ ಪ್ಲಾನ್ ಉಲ್ಟಾ ಆಗಿದೆ. ಇದರ ನಡುವೆ ಕಾಯ್ದೆ ಮತ್ತೆ ಜಾರಿಯಾಗುತ್ತೆ ಅನ್ನೋ ಮಾತುಗಳು ಕೇಳಿಬಂದಿದೆ. ಮುಂದಿನ ಐಪಿಎಲ್ ಟೂರ್ನಿ ಆಡುವ ಕುರಿತು ಧೋನಿ ತುಟಿಬಿಚ್ಚಿದ್ದಾರೆ. ಬ್ಲೌಸ್‌ನಿಂದ ಟ್ರೋಲ್ ಆದ ಆಲಿಯಾ ಭಟ್, ಕೆಲಸ ಆರಂಭಿಸಿದ ಪುನೀತ್ ರಾಜ್‌ಕುಮಾರ್ ಪ್ರೊಡಕ್ಷನ್ ಹೌಸ್ ಸೇರಿದಂತೆ ನವೆಂಬರ್ 21ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

Farm Laws ಹಿಂಪಡೆಯುವ ಘೋಷಣೆ, ತಲೆಕೆಳಗಾದ ಚುನಾವಣಾ ಲೆಕ್ಕಾಚಾರ, ಗೊಂದಲದಲ್ಲಿ ಪಕ್ಷಗಳು!

 ಎಲ್ಲಾ ಮೂರು ಕೃಷಿ ಕಾನೂನುಗಳನ್ನು (Farm Laws) ಹಿಂತೆಗೆದುಕೊಳ್ಳುವ ಪ್ರಧಾನಿ ನರೇಂದ್ರ ಮೋದಿಯವರ (Prime Minister Narendra Modi) ದೊಡ್ಡ ನಿರ್ಧಾರದ ನಂತರ, ಈಗ 2022 ರ ಚುನಾವಣೆಗೆ ಬಹಳ ಮುಖ್ಯವಾದ ಉತ್ತರ ಪ್ರದೇಶ ರಾಜಕೀಯದಲ್ಲಿ ಮಹತ್ವದ ಬದಲಾವಣೆಗಳಾಗುವ ಸುಳಿವು ಲಭಿಸಿದೆ.

Farm Bill| ಮತ್ತೆ ಜಾರಿಯಾಗುತ್ತಾ ಕೃಷಿ ಕಾನೂನು?: ಸೂಚನೆ ಕೊಟ್ಟ ರಾಜಸ್ಥಾನ ರಾಜ್ಯಪಾಲ!

ಮೂರು ಹೊಸ ಕೃಷಿ ಕಾನೂನುಗಳನ್ನು (Farm Law) ಹಿಂಪಡೆಯುವುದಾಗಿ ಪ್ರಧಾನಿ ಮೋದಿ (Narendra Modi) ಶುಕ್ರವಾರ ಘೋಷಿಸಿದ್ದಾರೆ. ಅಂದಿನಿಂದ, ರೈತರು ಮತ್ತು ಸರ್ಕಾರದ ನಡುವೆ ಒಂದು ವರ್ಷದ ಕಾಲದ ಬಿಕ್ಕಟ್ಟು ಕೊನೆಗೊಳ್ಳುವ ಹಂತದಲ್ಲಿದೆ. ಏತನ್ಮಧ್ಯೆ, ಕೇಂದ್ರ ಸರ್ಕಾರವು ಕೃಷಿ ಕಾನೂನುಗಳನ್ನು ಮರು ಜಾರಿಗೊಳಿಸಬಹುದು ಎಂದು ರಾಜಸ್ಥಾನದ ರಾಜ್ಯಪಾಲ ಕಲ್ರಾಜ್ ಮಿಶ್ರಾ (Rajasthan Governor Kalraj Mishra)ಹೇಳಿದ್ದಾರೆ.

MS Dhoni IPL 2022 ಟೂರ್ನಿ ಆಡ್ತಾರಾ? ಮಿಲಿಯನ್ ಡಾಲರ್ ಪ್ರಶ್ನೆಗೆ ಚುಟುಕಾಗಿ ಉತ್ತರಿಸಿದ CSK ನಾಯಕ..!

ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) 2022ರ ಐಪಿಎಲ್‌ (IPL 2022) ಟೂರ್ನಿಯಲ್ಲಿ ಆಟಗಾರನಾಗಿ ಕಾಣಿಸಿಕೊಳ್ಳುತ್ತಾರಾ ಎನ್ನುವುದು ಅವರ ಅಭಿಮಾನಿಗಳ ಪಾಲಿಗೆ ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಕಾಡುತ್ತಿದೆ. ಇದೀಗ ಚೆನ್ನೈನಲ್ಲೇ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶ್ನೆಗೆ ಕ್ಯಾಪ್ಟನ್ ಕೂಲ್ ಖ್ಯಾತಿಯ ಧೋನಿ ಚುಟುಕಾಗಿ ಉತ್ತರಿಸಿದ್ದಾರೆ.

Alia Bhatt: ಬ್ಲೌಸ್‌ ಉಲ್ಟಾ ಹಾಕಿದ್ರಾ ನಟಿ, ಉರ್ಫಿ ಪಾರ್ಟ್‌ 2 ಎಂದ ನೆಟ್ಟಿಗರು

ಬಾಲಿವುಡ್ ನಟಿ ಅಲಿಯಾ ಭಟ್(Alia bhatt)  ಧರಿಸಿದ ಬ್ಲೌಸ್‌ನಿಂದಾಗಿ ಟ್ರೋಲ್ ಆಗಿದ್ದಾರೆ. ಲೆಮನ್ ಕಲರ್ ಲೆಹಂಗಾ ಧರಿಸಿದ್ದ ನಟಿಯ ಬ್ಲೌಸ್(Blouse) ಟ್ರೆಂಡಿಯಾಗಿದ್ದರೂ ಎಕ್ಸ್‌ಪೋಸಿಂಗ್ ಆಗಿತ್ತು

CoWIN ಲಸಿಕೆ ಪೋರ್ಟಲ್‌ನಲ್ಲಿ ಮಹತ್ವದ ಬದಲಾವಣೆ!

 ದೇಶದ ಪ್ರತಿಯೊಬ್ಬ ವ್ಯಕ್ತಿಯ ಲಸಿಕಾಕರಣದ (Vaccination) ಪ್ರಕ್ರಿಯೆಯನ್ನು ಯಾವುದೇ ವ್ಯಕ್ತಿ ನೋಡಲು ಅವಕಾಶ ನೀಡುವ ಸೇವೆಯನ್ನು ಕೋವಿನ್‌ ಪೋರ್ಟಲ್‌ನಲ್ಲಿ (CoWIN Portal) ಕೇಂದ್ರ ಆರೋಗ್ಯ ಸಚಿವಾಲಯ ಸಕ್ರಿಯಗೊಳಿಸಿದೆ.

PF Account| ಉದ್ಯೋಗಿಗಳಿಗೆ ಗುಡ್‌ನ್ಯೂಸ್: ಕೆಲಸ ಬದಲಾವಣೆ ವೇಳೆ ಇನ್ನು ಚಿಂತೆ ಇಲ್ಲ!

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (EPFO) ಕೇಂದ್ರೀಯ ಟ್ರಸ್ಟಿಗಳ ಮಂಡಳಿಯ ಸಭೆಯಲ್ಲಿ ದೊಡ್ಡ ಘೋಷಣೆಯನ್ನು ಮಾಡಲಾಗಿದೆ, ಮಾಹಿತಿಯ ಪ್ರಕಾರ,  ಪ್ರಾವಿಡೆಂಟ್ ಫಂಡ್ ಖಾತೆಯ (PF Account) ಕೇಂದ್ರೀಕೃತ ಐಟಿ ಸಿಸ್ಟಂಗೆ ಅನುಮೋದನೆ ನೀಡಲಾಗುತ್ತದೆ.

ಎಲಾನ್‌ ಮಸ್ಕ್‌ರ Tesla ವಿರುದ್ಧ ಲೈಂಗಿಕ ಕಿರುಕುಳ ಮೊಕದ್ದಮೆ!

 ಮಹಿಳಾ ಉದ್ಯೋಗಿಯೊಬ್ಬರು ಎಲಾನ್‌ ಮಸ್ಕ್‌ (Elon Musk) ಒಡೆತನದ ಟೆಸ್ಲಾ ಎಲೆಕ್ಟ್ರಿಕ್‌ ಕಾರ್‌ ಕಂಪನಿಯ ವಿರುದ್ಧ ಲೈಂಗಿಕ ಕಿರುಕುಳದ (Sexual Harassment) ಮೊಕದ್ದಮೆಯನ್ನು ದಾಖಲಿಸಿದ್ದಾರೆ.

Puneeth Rajkumar: PRK ಪ್ರೊಡಕ್ಷನ್‌ ಕೆಲಸಗಳು ಆರಂಭ

ಪುನೀತ್ ರಾಜ್‌ಕುಮಾರ್(Puneeth Rajkumar) ನಿಧನದ ಬಳಿಕ ಪಿ.ಆರ್‌.ಕೆ.ಪ್ರೊಡಕ್ಷನ್ಸ್ ಮುನ್ನಡೆಸುವವರು ಯಾರು ಎಂಬ ಪ್ರಶ್ನೆ ಹಲವರಿಗೆ ಕಾಡಿತ್ತು. ಅಸಲಿಗೆ, ಪಿ.ಆರ್.ಕೆ.ಪ್ರೊಡಕ್ಷನ್ಸ್(PRK Productions) ಸ್ಥಾಪನೆಯಾದಾಗಿನಿಂದಲೂ ಅದನ್ನ ಮ್ಯಾನೇಜ್ ಮಾಡುತ್ತಿದ್ದವರು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್. ಈಗಲೂ ಪಿ.ಆರ್.ಕೆ.ಪ್ರೊಡಕ್ಷನ್ಸ್ ಹಾಗೂ ಪಿ.ಆರ್.ಕೆ.ಆಡಿಯೋ ಸಂಸ್ಥೆಯನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರೇ ಮುನ್ನಡೆಸಲಿದ್ದಾರೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್