ವಿಧಾನಸಭೆ, ಲೋಕಸಭೆ ಮೀರಿಸಿದ ಪಾಲಿಕೆ ಎಲೆಕ್ಷನ್ , ಗೆದ್ರೆ ಥಾಯ್ಲೆಂಡ್ ಟ್ರಿಪ್, ಕಾರು ಸೇರಿ ಭರ್ಜರಿ ಭರವಸೆ

Published : Dec 26, 2025, 06:10 PM IST
election second phase

ಸಾರಾಂಶ

ವಿಧಾನಸಭೆ, ಲೋಕಸಭೆ ಮೀರಿಸಿದ ಪಾಲಿಕೆ ಎಲೆಕ್ಷನ್ , ಗೆದ್ರೆ ಥಾಯ್ಲೆಂಡ್ ಟ್ರಿಪ್, ಕಾರು ಸೇರಿ ಭರ್ಜರಿ ಭರವಸೆ ನೀಡಲಾಗಿದೆ. 1,100 ಚದರ ಅಡಿ ನಿವೇಷನ, ಚಿನ್ನದ ಸೇರಿ ಸೇರಿದಂತೆ ಹಲವು ಆಫರ್ ನೀಡಲಾಗಿದೆ. ಇದು ಭಾರತದ ಚುನಾವಣೆ ವ್ಯವಸ್ಥೆಯನ್ನು ಪ್ರಶ್ನಿಸಿದೆ. 

ಪುಣೆ (ಡಿ.26) ವಿಧಾನಸಭೆ ಚುನಾವಣೆ, ಲೋಕಸಭೆ ಚುನಾವಣೆಗಳಲ್ಲಿ ಅಭ್ಯರ್ಥಿಗಳು ಮತದಾರರಿಗೆ ಹಲವು ಆಫರ್ ನೀಡುತ್ತಾರೆ. ಇನ್ನು ಹಣ, ಸೀರೆ, ಕುಕ್ಕರ್, ಬಿರಿಯಾನಿ ಊಟ ಸೇರಿದಂತೆ ಹಲವು ರೀತಿಯಲ್ಲಿ ಮತದಾರರ ಮತ ಪಡೆಯಲು ಅಭ್ಯರ್ಥಿಗಳು ಕಸರತ್ತು ನಡೆಸುತ್ತಾರೆ. ಆದರೆ ಪಾಲಿಕೆ ಚುನಾವಣೆ ಇವೆಲ್ಲವನ್ನೂ ಮೀರಿದೆ. ಪಾಲಿಕೆ ಚುನಾವಣೆಯಲ್ಲಿ ಕೌನ್ಸಿಲರ್ ಅಬ್ಯರ್ಥಿಗಳ ಗ್ಯಾರೆಂಟಿ ನೋಡಿದರರೆ ಬೆಚ್ಚಿ ಬೀಳುವುದು ಖಚಿತ. ಕಾರಣ ಗೆದ್ದರೆ ಮತದಾರರಿಗೆ ಥಾಯ್ಲೆಂಡ್ ಪ್ರವಾಸ, ಎಸ್‌ಯುವಿ ಕಾರು, ಚಿನ್ನದ ಸರ, ನಿವೇಷನ ಸೇರಿದಂತೆ ಹಲವು ಆಫರ್ ನೀಡಲಾಗಿದೆ. ಇದು ಪುಣೆ ನಗರ ಪಾಲಿಕೆ ಚುನಾವಣೆಯಲ್ಲಿ ಅಭ್ಯರ್ಥಿಗಳು ನೀಡಿರುವ ಗ್ಯಾರೆಂಟಿ.

ಪುಣೆ ಪಾಲಿಕೆ ಒಂದೊಂದು ವಾರ್ಡ್‌ನಲ್ಲು ದುಬಾರಿ ಗಿಫ್ಟ್

ಪುಣೆ ನಗರ ಪಾಲಿಕೆ ಚುನಾವಣೆಯಲ್ಲಿನ ಪ್ರತಿ ವಾರ್ಡ್‌ನಲ್ಲಿ ಕೌನ್ಸಿಲರ್ಸ್ ಅಭ್ಯರ್ಥಿಗಳ ಭರವಸೆಯಿಂದ ಮತದಾರರು ಪುಳಕಿತರಾಗಿದ್ದಾರೆ. ವಿಮನ್ ನಗರದ ಓರ್ವ ಅಭ್ಯರ್ಥಿ ಗೆಲುವು ಸಾಧಿಸಿದರೆ 5 ದಿನ ಲಕ್ಷುರಿ ಥಾಯ್ಲೆಂಡ್ ಪ್ರವಾಸ ನೀಡುವುದಾಗಿ ಭರವಸೆ ನೀಡಿದ್ದಾರೆ.5 ದಿನದ ಪ್ರವಾಸದಲ್ಲಿ ವಿಮಾನ ಟಿಕೆಟ್ ಸೇರಿದಂತೆ ಎಲ್ಲಾ ಖರ್ಚು ವೆಚ್ಚ ಭರಿಸುವುದಾಗಿ ಅಭ್ಯರ್ಥಿ ಭರವಸೆ ನೀಡಿದ್ದಾರೆ. ಇದೇ ವೇಳೆ ಮತೊರ್ವ ಅಭ್ಯರ್ಥಿ ಎಸ್‌ಯುವಿ ಕಾರು, ದ್ವಿಚಕ್ರ ವಾಹನ ಹಾಗೂ ಚಿನ್ನದ ಸರ ಆಫರ್ ಮಾಡಿದ್ದಾರೆ. ಗೆದ್ದರೆ ಲಕ್ಕಿ ಡ್ರಾ ಮೂಲಕ ನೀಡಲಾಗುವುದು ಎಂದಿದ್ದಾರೆ.

ಲೋಹಗಾಂವ್ ದನೋರಿ ವಾರ್ಡ್ ಅಭ್ಯರ್ಥಿ ಗೆದ್ದರೆ, ಲಕ್ಕಿ ಡ್ರಾ ಮೂಲಕ ಮತದಾರರಿಗೆ 1,100 ಚದರ ಅಡಿ ನಿವೇಷ ನೀಡುವುದಾಗಿ ಹೇಳಿದ್ದಾರೆ. ವಾರ್ಡ್‌ನ ಮತದಾರರ ಹೆಸರಿನಲ್ಲಿ ಲಕ್ಕಿ ಡ್ರಾ ಮಾಡಲಾಗುವುದು, ಈ ಲಕ್ಕಿ ಡ್ರಾ ಮೂಲಕ ಯಾರ ಹೆಸರು ಘೋಷಣೆಯಾಗುತ್ತೋ ಅವರಿಗೆ ನಿವೇಷನ ಸ್ಥಳ ನೀಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

ಮಹಿಳಾ ಮತದಾರರ ಸೀರೆ ಮೇಳ

ಮಹಿಳಾ ಮತದಾರರಿಗೆ ಅಭ್ಯರ್ಥಿಗಳು ಭರ್ಜರಿ ಸೀರೆ ನೀಡುತ್ತಿದ್ದಾರೆ. ರಾಜಸ್ಥಾನಿ, ಪೈಥಾನಿ ಸೇರಿದಂತೆ ಹಲವು ರೀತಿಯ ಸೀರೆಗಳನ್ನು ನೀಡುತ್ತಿದ್ದಾರೆ. ಇನ್ನು ಬಿರಿಯಾನಿ ಊಟ, ಬೆಳ್ಳಿ ಸೇರಿದಂತೆ ಹಲವು ರೀತಿಯ ಆಫರ್ ನೀಡಲಾಗುತ್ತಿದೆ. ಇದೇ ವೇಳೆ ಕೆಲ ಅಭ್ಯರ್ಥಿಗಳು ಯುವ ಮತದಾರರ ಸೆಳೆಯಲು ಕ್ರಿಕೆಟ್ ಲೀಗ್ ಟೂರ್ನಿ ಆಯೋಜಿಸಿದ್ದಾರೆ.ಗೆದ್ದವರಿಗೆ 1 ಲಕ್ಷ ರೂಪಾಯಿ ಬಹುಮಾನ, ಬೈಕ್ ಸೇರಿದಂತೆ ಹಲವು ಉಡುಗೊರೆ ಘೋಷಣೆಯಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

20 ಮಕ್ಕಳಿಗೆ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಧಾನ, ಇಬ್ಬರು ಮಕ್ಕಳಿಗೆ ಮರಣೋತ್ತರ ಪ್ರಶಸ್ತಿ ಕೊಟ್ಟಿದ್ಯಾಕೆ?
ಸಾಕ್ಷರತೆಯಲ್ಲಿ ನಂ:1 ರಾಜ್ಯವಾದ್ರೂ, ರಾಹುಕಾಲಕ್ಕೆ ಹೆದರಿಕೆ; ಕಚೇರಿಯೊಳಗೆ ಹೋಗಲು ಹಿಂಜರಿದ ಅಧ್ಯಕ್ಷೆ!