ವಿಮಾನದಲ್ಲಿ ಬಂದ ತನ್ನ ಪೋಷಕರಿಗೆ ಪೈಲಟ್‌ ಮಗಳ ಭಾವುಕ ಸ್ವಾಗತ : ಹೆಮ್ಮೆಯಿಂದ ಎದೆಯುಬ್ಬಿಸಿದ ಅಪ್ಪ..!

Published : Sep 03, 2025, 07:32 PM IST
Indigo Flight Female Pilot  Welcomes Parents Onboard

ಸಾರಾಂಶ

ಮಕ್ಕಳ ಸಾಧನೆ ಪೋಷಕರಿಗೆ ದೊಡ್ಡ ವಿಚಾರ ಹಾಗೆಯೇ ಇಲ್ಲೊಬ್ಬರು ಅಪ್ಪಅಮ್ಮ ಪೈಲಟ್ ಮಗಳ ಸಾಧನೆ ನೋಡಿ ಹೆಮ್ಮೆಯಿಂದ ಎದೆಯುಬ್ಬಿಸಿದ್ದಾರೆ. ಅವರ ವೀಡಿಯೋ ವೈರಲ್ ಆಗಿದೆ.

ಮಕ್ಕಳ ಸಾಧನೆ ಪೋಷಕರಿಗೆ ಸದಾ ಹೆಮ್ಮೆಯ ವಿಷಯ ತಾವು ಮಾಡದ ಸಾಧನೆಯನ್ನು ಮಕ್ಕಳು ಮಾಡಿದರಲ್ಲ ಎಂದು ಅವರು ಹೆಮ್ಮೆಯಿಂದ ಅದನ್ನು ಎಲ್ಲರ ಬಳಿ ಹೇಳಿಕೊಳ್ಳುತ್ತಾರೆ. ಮಕ್ಕಳ ಸಣ್ಣ ಸಾಧನೆಯನ್ನು ಕೆಲ ಪೋಷಕರು ಮಕ್ಕಳಿಗೆ ಮುಜುಗರವಾಗುವಂತೆ ಮನೆಗೆ ಬಂದವರ ಮುಂದೆ ಹೇಳಿಕೊಳ್ಳುತ್ತಾರೆ. ಮಕ್ಕಳಿಗೆ ಅದು ಸಣ್ಣ ಸಾಧನೆ ಎನಿಸಿದರು ಪೋಷಕರಿಗೆ ಅದೊಂದು ದೊಡ್ಡ ವಿಚಾರ ಏಕೆಂದರೆ ಮಕ್ಕಳು ಅಷ್ಟೆತ್ತರವನ್ನು ಏರುವುದಕ್ಕೆ ಪೋಷಕರು ಹಲವು ತ್ಯಾಗಗಳನ್ನು ಮಾಡಿರುತ್ತಾರೆ. ಬೆವರಿನ ಜೊತೆ ರಕ್ತವನ್ನು ಸುರಿಸಿರುತ್ತಾರೆ. ಹಾಗೆಯೇ ಇಲ್ಲೊಬ್ಬರು ಅಪ್ಪಅಮ್ಮ ಮಗಳ ಸಾಧನೆ ನೋಡಿ ಹೆಮ್ಮೆಯಿಂದ ಎದೆಯುಬ್ಬಿಸಿದ್ದಾರೆ.

ಪೈಲಟ್ ಮಗಳ ಸಾಧನೆಗೆ ಹೆಮ್ಮೆಯಿಂದ ಎದೆಯುಬ್ಬಿಸಿದ ಅಪ್ಪ:

ಹೌದು ಮಹಿಳಾ ಪೈಲಟ್ ಒಬ್ಬರು ತಮ್ಮ ಪೋಷಕರನ್ನು ತಾವೇ ಹಾರಿಸುತ್ತಿರುವ ವಿಮಾನದಲ್ಲಿ ಬಹಳ ಆತ್ಮೀಯವಾಗಿ ಸ್ವಾಗತಿಸಿದರು. ಈ ವೇಳೆ ಆ ಪೋಷಕರು ಮಗಳ ಸಾಧನೆ ವಿಮಾನದಲ್ಲಿ ಅವಳ ಸ್ಥಾನಮಾನವನ್ನು ನೋಡಿ ಬಹಳ ಭಾವುಕರಾದರು. ಅಂದಹಾಗೆ ಸಾಮಾಜಿಕ ಜಾಲತಾಣದಲ್ಲಿ ಹಲವು ಭಾವುಕ ವೀಡಿಯೋಗಳನ್ನು ಪೋಸ್ಟ್ ಮಾಡುವ ಇಂಡಿಗೋ ವಿಮಾನವೂ ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯ್ತು. ಸ್ವತಃ ಇಂಡಿಗೋ ಸಂಸ್ಥೆಯೇ ಈ ವೀಡಿಯೋವನ್ನು ತನ್ನ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದೆ.

ಅಪ್ಪ ಅಮ್ಮನ ಮೊದಲ ಬಾರಿ ಆಕಾಶದಲ್ಲಿ ಹಾರಿಸಿದ ತನಿಷ್ಕಾ

ಅವಳು ಅವರ ಕೈಗಳನ್ನು ಹಿಡಿದು ಬೆಳೆದಳು, ಮತ್ತು ಈಗ ಅವಳು ಅವರನ್ನು ಸುರಕ್ಷಿತವಾಗಿ ಆಕಾಶದಲ್ಲಿ ಹಾರಿಸುತ್ತಿದ್ದಾಳೆ. ವಿಮಾನದ ಫಸ್ಟ್ ಆಫೀಸರ್ ತನಿಷ್ಕಾ ತನ್ನ ಕುಟುಂಬವನ್ನು ವಿಮಾನದಲ್ಲಿ ಹೇಗೆ ಸ್ವಾಗತಿಸಿದರು ನೋಡಿ ಎಂದು ಬರೆದು ಈ ಭಾವುಕ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ. 24 ಸೆಕೆಂಡ್‌ಗಳ ಈ ವೀಡಿಯೋವನ್ನು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ವೀಡಿಯೋದಲ್ಲಿ ತಂದೆ ಹೆಮ್ಮೆಯಿಂದ ಮಗಳ ತಲೆಸವರುವುದನ್ನು ವೀಡಿಯೋದಲ್ಲಿ ಕಾಣಬಹುದು. ಬಿಳಿ ಪೈಜಾಮ, ಪ್ಯಾಂಟು ಹೆಗಲಿನ ಮೇಲೊಂದು ಟವೆಲ್ ಹಾಕಿಕೊಂಡಿರುವ ತಂದೆಗೆ ತಮ್ಮ ಪುತ್ರಿಯನ್ನು ವಿಮಾನದಲ್ಲಿ ನೋಡುತ್ತಿದ್ದಂತೆ ಮುಖ ಖುಷಿಯಿಂದ ಅರಳುವುದನ್ನು ನೋಡಬಹುದು. ಆಕೆಯ ಅಮ್ಮ ಹಾಗೂ ಮತ್ತೊಬ್ಬ ಕುಟುಂಬ ಸದಸ್ಯರನ್ನು ವೀಡಿಯೋದಲ್ಲಿ ಕಾಣಬಹುದು. ಅಲ್ಲದೇ ವಿಮಾನದಿಂದ ಇಳಿದ ನಂತರ ಅವರಿಗೆ ಆಕೆ ಅಲ್ಲಿ ಪುಟ್ಟ ಪತ್ರವನ್ನು ಉಡುಗೊರೆಯನ್ನು ನೀಡುವುದನ್ನು ಕಾಣಬಹುದು.

ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಇಂಡಿಗೋ:

ವೀಡಿಯೋ ನೋಡಿದ ಅನೇಕರು ಬಹಳ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಮಹಿಳಾ ಪೈಲಟ್‌ಗೆ ತನ್ನ ಪೋಷಕರನ್ನು ಸ್ವಾಗತಿಸುವುದಕ್ಕೆ ಅವಕಾಶ ನೀಡಿದ ಇಂಡಿಗೋಗೆ ಧನ್ಯವಾದ ಹೇಳಿದ್ದಾರೆ. ಇಂತಹ ದೃಶ್ಯಗಳು ನಿಜಕ್ಕೂ ಖುಷಿ ಹಾಗೂ ರೋಮಾಂಚನ ನೀಡುತ್ತದೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಪೋಷಕರನ್ನು ವಿಮಾನದಲ್ಲಿ ಸ್ವಾಗತಿಸುವುದಕ್ಕೆ ಆಕೆ ತುಂಬಾ ಖುಷಿಯಿಂದ ತುದಿಗಾಲಲ್ಲಿ ನಿಂತಿದ್ದಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈಕೆಯ ಈ ಪಯಣ ಹಲವರಿಗೆ ಸ್ಪೂರ್ತಿ ನೀಡಬಹುದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.. ಪೋಷಕರಿಗೆ ಇದು ಎಂಥಹಾ ಹೆಮ್ಮೆಯ ಕ್ಷಣ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ತನಿಷ್ಕಾ ಅವರು ಇದೇ ಮೊದಲ ಬಾರಿಗೆ ತಮ್ಮ ಪೋಷಕರನ್ನು ತಾವು ಹಾರಿಸುತ್ತಿರುವ ವಿಮಾನದಲ್ಲಿ ಕರೆತಂದಿದ್ದಾರೆ ಎಂಬ ಮಾಹಿತಿ ಇದೆ.

ಅವಳ ಹೆತ್ತವರ ಪಕ್ಕದಲ್ಲಿರುವ ಸಣ್ಣ ಹೆಜ್ಜೆಗಳಿಂದ ಹಿಡಿದು ಅವರೊಂದಿಗೆ ಮೋಡಗಳ ಮೇಲೆ ಹಾರುವವರೆಗೆ, ಇದು ವೃತ್ತಿಜೀವನದ ಮೈಲಿಗಲ್ಲಿಗಿಂತ ಹೆಚ್ಚಿನದಾಗಿದೆ. ಇದು ಪ್ರೀತಿ, ಹೆಮ್ಮೆ ಮತ್ತು ಉದ್ದೇಶದ ಸಾಕಾರದ ಕ್ಷಣವಾಗಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಕಳೆದ ಜುಲೈನಲ್ಲಿ, ಗೋವಾದ ಪೈಲಟ್ ಗೌರಿ ಧವಳೀಕರ್ ಅವರು ಚೆನ್ನೈನಿಂದ ಗೋವಾಕ್ಕೆ ಹಾರುತ್ತಿದ್ದ ಇಂಡಿಗೋ ವಿಮಾನದಲ್ಲಿ ತಮ್ಮ ತಂದೆ, ಗೋವಾ ಮಾಜಿ ಸಚಿವ ದೀಪಕ್ ಧವಳೀಕರ್ ಅವರನ್ನು ಸ್ವಾಗತಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವಿಮಾನದಲ್ಲಿ ಫಸ್ಟ್ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಿದ್ದ ಗೌರಿ, ತಮ್ಮ ವೃತ್ತಿಜೀವನವನ್ನು ನಿರ್ಮಿಸಲು ಸಹಾಯ ಮಾಡಿದ ತಂದೆಯ ಅಚಲ ಬೆಂಬಲಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾ, ಭಾವನಾತ್ಮಕ ಘೋಷಣೆ ಮಾಡಿದ್ದರು.

ಇದನ್ನೂ ಓದಿ: ಕೆನಡಾದಲ್ಲಿ ಗುಜರಾತಿಗಳ ಕಾರುಬಾರು: ಕೆನಡಿಯನ್ ಮಹಿಳೆಗೆ ಫ್ಲಾಟ್ ಕೊಡಲು ನಿರಾಕರಣೆ

ಇದನ್ನೂ ಓದಿ:  ಮಧ್ಯ ಆಗಸದಲ್ಲಿ ಟಾಯ್ಲೆಟ್ ಬ್ಲಾಕ್: ಮೂತ್ರ ವಿಸರ್ಜನೆಗೆ ವೃದ್ಧೆಗೆ ಬಾಟಲಿ ನೀಡಿದ ಏರ್‌ಲೈನ್ಸ್

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ
ಸೆಂಟ್ರಲ್ ಮೆಟ್ರೋ ಮತ್ತು ಹೈಕೋರ್ಟ್ ನಿಲ್ದಾಣಗಳ ನಡುವೆ ನೀಲಿ ಮಾರ್ಗದ ಸುರಂಗದಲ್ಲಿ ಹಠಾತ್ ನಿಂತ ಮೆಟ್ರೋ ರೈಲು