ನೀಟ್ ಪ್ರೊಟೆಸ್ಟ್ ಆಯ್ತು; ಈಗ ಎಥೆನಾಲ್ ಮಿಶ್ರಿತ ಪೆಟ್ರೋಲ್ ವಿರುದ್ಧ 'ಗಾಡಿ ಮಾರ್ಚ್' ಪ್ರತಿಭಟನೆ ಆರಂಭ!

Sathish Kumar KH   | Kannada Prabha
Published : Jul 27, 2026, 06:07 AM IST
CJP ethanol protest

ಸಾರಾಂಶ

ನೀಟ್ ಹೋರಾಟ ಮುಗಿಯುತ್ತಿದ್ದಂತೆ ಇದೀಗ ಇ-20 ಪೆಟ್ರೋಲ್ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ತೆಹ್ಸೀನ್ ಪೂನಾವಾಲಾ ಮತ್ತು ದೆಹಲಿ ಸಾರಿಗೆದಾರರ ಸಂಘವು ಜು.31 ಮತ್ತು ಆ.4 ರಂದು ಪ್ರತ್ಯೇಕ ಪ್ರತಿಭಟನಾ ಮೆರವಣಿಗೆಗಳನ್ನು ಘೋಷಿಸಿವೆ. ಇ-10 ಇಂಧನದ ಆಯ್ಕೆ ಹಾಗೂ ಪೆಟ್ರೋಲ್ ಬೆಲೆ ಇಳಿಕೆಗೆ ಆಗ್ರಹಿಸಲಾಗುತ್ತಿದೆ.

ನವದೆಹಲಿ (ಜು.27): ದೇಶದಲ್ಲಿ ಭಾರೀ ಕೋಲಾಹಲವೆಬ್ಬಿಸಿದ್ದ ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಹಗರಣವು ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಯೊಂದಿಗೆ ಶಾಂತವಾಗುತ್ತಿದ್ದಂತೆ, ಇ-20 ಪೆಟ್ರೋಲ್‌ ವಿರುದ್ಧ ಚಳವಳಿ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿವೆ. ರಾಜಕೀಯ ವಿಶ್ಲೇಷಕ ತೆಹ್ಸೀನ್‌ ಪೂನಾವಾಲಾ ಮತ್ತು ದೆಹಲಿ ಸಾರಿಗೆದಾರರ ಸಂಘದವರು ಪೆಟ್ರೋಲ್‌ಗೆ ಎಥನಾಲ್‌ ಮಿಶ್ರಣ ವಿರೋಧಿಸಿ 2 ಪ್ರತ್ಯೇಕ ದಿನ ಸಂಸತ್‌ವರೆಗೆ ಮೆರವಣಿಗೆ ನಡೆಸುವುದಾಗಿ ಘೋಷಿಸಿದ್ದಾರೆ.

ಜು.31 ಹಾಗೂ ಆ.4ರಂದು ಈ ಪ್ರತ್ಯೇಕ ಪ್ರತಿಭಟನೆಗಳು ನಡೆಯಲಿವೆ.

ಏಪ್ರಿಲ್‌ನಿಂದ ಸರ್ಕಾರ ಕಡ್ಡಾಯಗೊಳಿಸಿರುವ ಇ-20ರಿಂದಾಗಿ ವಾಹನಗಳ ಮೈಲೇಜ್‌ ಕುಸಿಯುತ್ತಿದೆ ಹಾಗೂ ಕೆಲ ಭಾಗಗಳು ಹಾಳಾಗುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ, ಇ-10 ಇಂಧನದ ಆಯ್ಕೆಯನ್ನೂ ಕೊಡುವುದು, ಪೆಟ್ರೋಲ್‌ ಬೆಲೆಯನ್ನು ಶೇ.20ರಷ್ಟು ಇಳಿಸುವುದು, ಇದಕ್ಕೆ ಸಂಬಂಧಿಸಿದ ನೀತಿಯನ್ನು ಪಾರದರ್ಶಕವಾಗಿರಿಸುವುದು, 2023ಕ್ಕಿಂತ ಹಳೆಯ(ಇ-20 ಬೆಂಬಲಿಸದ) ಗಾಡಿಗಳಿಗಾಗಿರುವ ಹಾನಿಗೆ ಪರಿಹಾರ ನೀಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪೂನಾವಾಲಾ ಮತ್ತು ಟೀಂ ಭಾರತ್‌, ಜು.31ರಂದು ‘ಗಾಡಿ ಮಾರ್ಚ್‌’ಗೆ ಕರೆ ನೀಡಿದ್ದಾರೆ. ಇಂಡಿಯಾ ಗೇಟ್‌ನಿಂದ ಶುರುವಾಗುವ ಈ ಮೆರವಣಿಗೆ, ಸಾರಿಗೆ ಸಚಿವ ನತಿನ್‌ ಗಡ್ಕರಿ ಮತ್ತು ಇಂಧನ ಸಚಿವ ಹರ್ದೀಪ್‌ ಪುರಿ ಅವರ ನಿವಾಸದೆದುರು ಸಾಗಿ ಪಾರ್ಲಿಮೆಂಟ್‌ ಸ್ಟ್ರೀಟ್‌ ತಲುಪಲಿದೆ.

ಅತ್ತ ದೆಹಲಿ ಸಾರಿಗೆದಾರರ ಸಂಘ ಆ.4ರಂದು ಸಂಸತ್‌ ವರೆಗೆ ಮೆರವಣಿಗೆಗೆ ಕರೆ ನೀಡಿದೆ. ವಾಹನ ತಯಾರಕರು, ಮಾಲೀಕರು, ಗ್ರಾಹಕರು, ಸಾರಿಗೆ ನಿರ್ವಾಹಕರು ಮತ್ತು ತಾಂತ್ರಿಕ ತಜ್ಞರನ್ನು ಒಳಗೊಂಡಂತೆ, ಎಥನಾಲ್ ಮಿಶ್ರಣ ನೀತಿಯ ಕುರಿತು ಸ್ವತಂತ್ರ ವೈಜ್ಞಾನಿಕ ಪರಿಶೀಲನೆಗೆ ಅದು ಆಗ್ರಹಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ಟಾರ್ ಹೊಟೆಲ್‌ನಲ್ಲಿ ರಾಜೀನಾಮೆ ಪಾರ್ಟಿ ವಿಡಿಯೋ, ಕಾಕ್ರೋಚ್ ಫಂಡಿಂಗ್ ಪ್ರಶ್ನಿಸಿದ ವಕೀಲ ಜೇಠ್ಮಲಾನಿ
ಜೀವಾವಧಿ ಶಿಕ್ಷೆ ಪ್ರಸ್ತಾಪ, 10 ಕೋಟಿ ದಂಡ! Anti-Paper Leak ಮಸೂದೆಯಲ್ಲಿ 6 ಪ್ರಮುಖ ಬದಲಾವಣೆ!