Gurgaon: Namaz ಸಲ್ಲಿಕೆಗೆ ವಿರೋಧ : ವಾಲಿಬಾಲ್ ಕೋರ್ಟ್ ನಿರ್ಮಿಸುತ್ತೇವೆ ಎಂದ ಪ್ರತಿಭಟನಾಕಾರರು!

By Suvarna NewsFirst Published Nov 12, 2021, 11:02 PM IST
Highlights

*ಸಾರ್ವಜನಿಕ ಜಾಗದಲ್ಲಿ ನಮಾಜ ಆರೋಪ
*ಪ್ರತಿ ವಾರ ಹಿಂದೂ ಮುಸ್ಲಿಂ ಘರ್ಷಣೆ!
*ಇದೇ ಜಾಗದಲ್ಲಿ ಪೂಜೆ ನೇರೆವೆರಿಸಿದ್ದ ಹಿಂದೂ ಸಂಘಟನೆಗಳು
*ತೆರೆದ ಸ್ಥಳದಲ್ಲಿ ನಮಾಜ್‌ಗೆ ಆಡಳಿತದ ಒಪ್ಪಿಗೆ ಅಗತ್ಯ
*ಹರಿಯಾಣಾ ಜಿಲ್ಲಾಡಳಿತದ ಸ್ಪಷ್ಟ ಸೂಚನೆ!

ಹರಿಯಾಣ (ನ.12) :  ಮುಸ್ಲಿಂಮರು (muslim) ನಮಾಜ್‌ ಮಾಡುತ್ತಿದ್ದ ಜಾಗಕ್ಕೆ ಹೋಗಿ ಕ್ಯಾತೆ ತೆಗೆದ ಗುಪೊಂದು ಆ ಜಾಗದಲ್ಲಿ ವಾಲಿಬಾಲ್‌ ಕೋರ್ಟ್‌ ನಿರ್ಮಿಸುವುದಾಗಿ ಹೇಳಿದ ಘಟನೆ ಶುಕ್ರವಾರ ನಡೆದಿದೆ. ಹರಿಯಾಣದ ಗುರ್‌ಗಾವ್‌ನಲ್ಲಿ (Haryana) ಈ ಘಟನೆ ನಡೆದಿದ್ದು ಬೆಳಿಗ್ಗೆ ನಮಾಜ್‌ (Namaz) ಮಾಡುವ ಜಾಗದಲ್ಲಿ ಸುತ್ತುವರೆದ ಜನರು ಅಲ್ಲಿ ವಾಲಿಬಾಲ್‌ ಕೋರ್ಟ್‌ ಮಾಡುತ್ತಿರುವುದಾಗಿ ಹೇಳಿ ನಮಾಜ್‌ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ವಾಲಿಬಾಲ್ ಅಂಕಣವನ್ನು ನಿರ್ಮಿಸುತ್ತೇವೆ, ಮಕ್ಕಳು ಆಟವಾಡುತ್ತಾರೆ!

"ನಾವು ಇಲ್ಲಿ ಸದ್ದಿಲ್ಲದೆ ಕುಳಿತಿದ್ದೇವೆ ... ಆದರೆ ಪ್ರಾರ್ಥನೆಗೆ ಅವಕಾಶ ನೀಡುವುದಿಲ್ಲ. ನಾವು ಇಲ್ಲಿ ಆಟಕ್ಕೆ ಆಡಲು ಯೋಜನೆ ಮಾಡುತ್ತಿದ್ದೇವೆ" ಎಂದು ಮೈದಾನವನ್ನು ಆಕ್ರಮಿಸಿಕೊಂಡವರಲ್ಲಿ ಒಬ್ಬರಾದ ಪರ್ಮಿಳಾ ಚಾಹರ್ ಹೇಳಿದ್ದಾರೆ,  : "ನಾವು ನೆಟ್ ಅನ್ನು ಸ್ಥಾಪಿಸುತ್ತೇವೆ. ಇಲ್ಲಿ ವಾಲಿಬಾಲ್ ಅಂಕಣವನ್ನು ನಿರ್ಮಿಸುತ್ತೇವೆ (ಮತ್ತು) ಮಕ್ಕಳು ಆಟವಾಡುತ್ತಾರೆ, ಏನೇ ಆದರೂ ನಮಾಜ್‌ಗೆ ಅವಕಾಶ ನೀಡುವುದಿಲ್ಲ. ಮತ್ತೊಬ್ಬ ವ್ಯಕ್ತಿ ವೀರ್ ಯಾದವ್ ಹೇಳಿದ್ದಾರೆ.

ಹಿಂದೂಗಳೆದುರು ನಮಾಜ್ ಮಾಡಿದ್ರೆ ಹೆಚ್ಚು ತೃಪ್ತಿ: ವಿವಾದ ಸೃಷ್ಟಿಸಿ, ಕ್ಷಮಿಸಿ ಎಂದ ವಕಾರ್!

ಇದೇ ಜಾಗದ ಸಮೀಪದಲ್ಲಿ, ಕಳೆದ ವಾರ  ಹಸುವಿನ ಸಗಣಿ ಸಾರಿಸುವ ಮೂಲಕ ಹಿಂದೂ ಪರ ಗುಂಪುಗಳು ಪೂಜೆ ನಡೆಸಿದ್ದವು. ಕಳೆದ ಹಲವು ವಾರಗಳಿಂದ ಈ ಜಾಗದಲ್ಲಿ ಮತ್ತು ಇತರ ಸೈಟ್‌ಗಳಲ್ಲಿ ಪ್ರತಿಭಟನೆ (Protest) ಮತ್ತು ಬೆದರಿಕೆಯ ಪ್ರದರ್ಶನಗಳನ್ನು ಎದುರಿಸುತ್ತಿರುವ ಮುಸ್ಲಿಂ ಸಂಘಟನೆಗಳು (Muslim organisations) ಇಂದು ಈ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ. ಹಿಂದೂ (Hindu) ಬಾಂಧವರ ಜತೆ ಒಪ್ಪಂದ ಮಾಡಿಕೊಳ್ಳುವವರೆಗೂ ಇಲ್ಲಿ ಪ್ರಾರ್ಥನೆ ಸಲ್ಲಿಸುವುದಿಲ್ಲ ಎಂದು ಎಲ್ಲರಿಗೂ ಹೇಳಿದ್ದೇವೆ. ಡಿಸಿ ಸಾಹೇಬರು ನಮಗೆ ಒಂದು ವಾರ ಕಾಲಾವಕಾಶವನ್ನೂ ನೀಡಿದ್ದಾರೆ ಎಂದು ಮುಸ್ಲಿಂ ಸಂಘಟನೆಗಳು ಹೇಳಿವೆ.

ಸಾರ್ವಜನಿಕ ಜಾಗದಲ್ಲಿ ಮುಸ್ಲಿಂಮರ ಪ್ರಾರ್ಥನೆ ಆರೋಪ!

ಈ ಜಾಗದಲ್ಲಿ ಪ್ರತಿ ವಾರವು ಹಿಂದು ಮತ್ತು ಮುಸ್ಲಿಂರ ನಡುವೆ ಇದೇ ರೀತಿ ಪ್ರತಿಭಟನೆಗಳು ನಡೆಯುತ್ತಿವೆ. ಕೆಲವು ಬಲಪಂಥೀಯ ಗುಂಪುಗಳ ಪ್ರಚೋದನೆಯೊಂದಿಗೆ  ಗುರ್ಗಾಂವ್ ನೆರೆಹೊರೆಗಳ ನಿವಾಸಿಗಳು ಈ ರೀತಿ ವರ್ತಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.  ಸಾರ್ವಜನಿಕ ಜಾಗದಲ್ಲಿ  ಮುಸ್ಲಿಂಮರು ಪ್ರಾರ್ಥನೆ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. 2018 ರಲ್ಲಿ ಇದೇ ರೀತಿಯ ಘರ್ಷಣೆಗಳ ನಂತರ ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಒಪ್ಪಂದದ ನಂತರ ನಮಾಜ್‌ಗಾಗಿ ನಿಯೋಜನೆಗೊಂಡ 29 ಸೈಟ್‌ಗಳಲ್ಲಿ ಸೆಕ್ಟರ್ 12A ಕೂಡ ಒಂದು.

ನಮಾಜ್ ಮಾಡಲು ಆಡಳಿತದ ಒಪ್ಪಿಗೆ ಅಗತ್ಯ!

ಕಳೆದ ವಾರ (ನವೆಂಬರ್ 5 ರಂದು ಶುಕ್ರವಾರದ ಪ್ರಾರ್ಥನೆಯ ಮೊದಲು) ಗುರ್ಗಾಂವ್ ಅಧಿಕಾರಿಗಳು ಈ ಎಂಟು "ನಿಯೋಜಿತ" ಸೈಟ್‌ಗಳಲ್ಲಿ ನಮಾಜ್ ಮಾಡಲು ಅನುಮತಿಯನ್ನು ಹಿಂತೆಗೆದುಕೊಂಡರು. ಇದು ಜನರಿಂದ ಬಂದ "ಆಕ್ಷೇಪಣೆಗಳ" ನಂತರ ಎಂದು ಆಡಳಿತವು ಹೇಳಿತ್ತು ಮತ್ತು ಇತರ ಸೈಟ್‌ಗಳಲ್ಲಿ ಇದೇ ರೀತಿಯ ಆಕ್ಷೇಪಣೆಗಳು ಬಂದರೆ, "ಅಲ್ಲಿ ಅನುಮತಿ ನೀಡಲಾಗುವುದಿಲ್ಲ" ಎಂದು ಆಡಳಿತ ಎಚ್ಚರಿಸಿದೆ. "ಯಾವುದೇ ಸಾರ್ವಜನಿಕ ಮತ್ತು ತೆರೆದ ಸ್ಥಳದಲ್ಲಿ ನಮಾಜ್ ಮಾಡಲು ಆಡಳಿತದ (Administartion) ಒಪ್ಪಿಗೆ ಅಗತ್ಯ" ಎಂದು ಅದು ಹೇಳಿದೆ, "ಸ್ಥಳೀಯ ಜನರು ಇತರ ಸ್ಥಳಗಳಲ್ಲಿ ಆಕ್ಷೇಪಣೆಗಳನ್ನು ಹೊಂದಿದ್ದರೆ, ಅನುಮತಿ ನೀಡಲಾಗುವುದಿಲ್ಲ." ಎಂದು ಆಡಳಿತ ತಿಳಿಸಿದೆ.

Fact Check: ಪಶ್ಚಿಮ ಬಂಗಾಳ: ದುರ್ಗಾಪೂಜೆ ಪೆಂಡಾಲ್‌ನಲ್ಲಿ ನಮಾಜ್ ಮಾಡಲಾಯ್ತಾ.?

ಡೆಪ್ಯೂಟಿ ಕಮಿಷನರ್ ಯಶ್ ಗಾರ್ಗ್ (Yash Garg) ಅವರು ರಚಿಸಿರುವ ಸಮಿತಿಯು, ಪರ್ಯಾಯ ಸೈಟ್‌ಗಳನ್ನು ಗುರುತಿಸುವ ಕುರಿತು ಚರ್ಚೆ ನಡೆಸಲಿದೆ ಎಂದು ಆಡಳಿತ ಹೇಳಿದೆ, ಆದರೆ ಸಮಿತಿಯು ಸಭೆ ನಡೆಸಿದೆಯೇ ಅಥವಾ ಅಂತಹ ಸ್ಥಳಗಳನ್ನು ಆಯ್ಕೆ ಮಾಡುವಲ್ಲಿ ಪ್ರಗತಿ ಕಂಡುಬಂದಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ನವೆಂಬರ್ 5 ರ ಹಿಂದಿನ ವಾರ ಪೊಲೀಸರು ಸೆಕ್ಟರ್ 12A ನಿಂದ 30 ಪ್ರತಿಭಟನಾಕಾರರನ್ನು ಬಂಧಿಸಿದ್ದರು.

ಜನರಿಗೆ ಪ್ರಾರ್ಥನೆ ಮಾಡಲು ಅವಕಾಶ ನೀಡಬೇಕು!

ಕಳೆದ ತಿಂಗಳು ಅವರು 12A ಮತ್ತು 47 ಸೇರಿದಂತೆ  ಇತರ ವಲಯಗಳಲ್ಲಿ ಅಬ್ಬರದ ಪ್ರತಿಭಟನೆಗಳಾಗಿದ್ದವು, ಅದರಲ್ಲಿ ಹತ್ತಾರು ಜನರು 'ಜೈ ಶ್ರೀ ರಾಮ್' (Jai Shri Ram) ಎಂದು ಜಪಿಸುತ್ತಿದ್ದರು ಮತ್ತು 'ತೆರೆದ ಜಾಗಗಳಲ್ಲಿ ನಮಾಜ್ ನಿಲ್ಲಿಸಿ' ಎಂಬ ಫಲಕಗಳನ್ನು ಹಿಡಿದಿದ್ದರು; ಹಾಗಾಗಿ ಇಲ್ಲಿ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸುವಂತೆ ಒತ್ತಾಯಿಸಲಾಗಿತ್ತು.

ಹರ್ಯಾಣ ಮುಖ್ಯಮಂತ್ರಿ ಎಂಎಲ್ ಖಟ್ಟರ್ (M L Khattar) ಅವರು ಎಲ್ಲರಿಗೂ ಪ್ರಾರ್ಥನೆ ಮಾಡುವ ಹಕ್ಕಿದೆ ಎಂದು ಹೇಳಿದ್ದಾರೆ, ಆದರೆ ಅವರು "ಪ್ರಾರ್ಥನೆ ಮಾಡುವವರು ರಸ್ತೆ ಸಂಚಾರವನ್ನು ನಿರ್ಬಂಧಿಸಬಾರದು" ಎಂದು ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ಸಚಿವ ಕ್ರಿಶನ್ ಪಾಲ್ ಗುರ್ಜರ್ ( Krishan Pal Gurjar) ಪ್ರಾರ್ಥನೆ ಉದ್ದೇಶಗಳಿಗಾಗಿ ಸೈಟ್‌ಗಳನ್ನು ಗೊತ್ತುಪಡಿಸಿದ್ದರೆ ಜನರಿಗೆ ಪ್ರಾರ್ಥನೆ ಮಾಡಲು ಅವಕಾಶ ನೀಡಬೇಕು ಎಂದು ಹೇಳಿದ್ದಾರೆ.

click me!