ಗೋಲ್ಡನ್ ರಿಟ್ರೈವರ್ ನಾಯಿಮರಿಯೊಂದು ಸುಮಾರು ಐದು ವರ್ಷಗಳನ್ನು ಗೂಡಿನಲ್ಲಿ ಬಂಧಿಯಾಗಿ ಕಳೆದ ನಂತರ ಶೀಘ್ರದಲ್ಲೇ ತನನ್ನು ಪ್ರೀತಿಸುವವರು ಸಿಗಬಹುದು ಎಂಬ ನಿರೀಕ್ಷೆಯಿರಲಿಲ್ಲ. ಆದರೆ ಅಧಿಕಾರಿಗಳು ಈ ವಿಚಾರದಲ್ಲಿ ಮಧ್ಯಪ್ರವೇಶಿಸಿದಾಗ, ಅಯೋವಾ (Iowa) ರಾಜ್ಯದ ಪಶುವೈದ್ಯ ಪ್ರಾಧ್ಯಾಪಕ ಡಾ. ರಾಡ್ ಬ್ಯಾಗ್ಲೆ (Dr. Rod Bagley) ಆಕೆಗೆ ನಡೆಯಲು ಕಲಿಸಲು ಸಹಾಯ ಮಾಡಿದರು. ಈಗ, ಡಾ. ಬಾಗ್ಲೆ ಈ ಶ್ವಾನಕ್ಕಾಗಿ ತಮ್ಮ ಪೂರ್ಣ ಸಮಯವನ್ನು ಮೀಸಲಿಟ್ಟಿದ್ದು, ಇವರಿಬ್ಬರು ಉತ್ತಮ ಸ್ನೇಹಿತರಾಗಿದ್ದಾರೆ.
ಅಯೋವಾದ ಸೆಮೌರ್‌ನಲ್ಲಿ (Seymour) ಬ್ರೀಡರ್‌ನಿಂದ ನವೆಂಬರ್‌ನಲ್ಲಿ ಡೋರಿ ಹೆಸರಿನ ಗೋಲ್ಡನ್ ರಿಟ್ರೈವರ್ ನಾಯಿಮರಿಯನ್ನು ರಕ್ಷಿಸಲಾಯಿತು. ಡೇನಿಯಲ್ ಜಿಂಜೆರಿಚ್ ( Daniel Gingerich) ಅವರು ಮಾರ್ಚ್ 2001 ರಿಂದ ಇಲ್ಲಿವರೆಗೆ 120 ಕ್ಕೂ ಹೆಚ್ಚು ಬಾರಿ ಪ್ರಾಣಿ ಕಲ್ಯಾಣ ಕಾಯಿದೆಯನ್ನು ಉಲ್ಲಂಘಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಜಿಂಜೆರಿಚ್ ಅವರು ಡೋರಿ ಸೇರಿದಂತೆ ಒಟ್ಟು 514 ನಾಯಿಗಳನ್ನು ಹೊಂದಿದ್ದಾರೆ ಎಂದು KCCI-TV ವರದಿ ಮಾಡಿದೆ. ಮಾರ್ಚ್‌ನಲ್ಲಿ, ಜಿಂಜೆರಿಚ್ ಮನವಿ ಒಪ್ಪಂದದಲ್ಲಿ ಪ್ರಾಣಿಗಳ ನಿರ್ಲಕ್ಷ್ಯದ ಮಾಡಿದ ಎರಡು ಪ್ರಕರಣಗಳಲ್ಲಿ ತಪ್ಪೊಪ್ಪಿಕೊಂಡು 30 ದಿನಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ.
ಕಾದಾಡಿ ಪ್ರಾಣ ಉಳಿಸಿಕೊಂಡ ಸಾಕು ನಾಯಿ, ಬೇಟೆಯಾಡಲು ಬಂದ ಚಿರತೆ ಬರಿಗೈಲಿ ವಾಪಸ್
ಈಗ ಡಾ. ಬಾಗ್ಲಿ ಅವರಿಗೆ ಸಿಕ್ಕಿದ ಶ್ವಾನ ಡೋರಿ ತನ್ನ ಜೀವನದುದ್ದಕ್ಕೂ ಗೂಡಿನಲ್ಲೇ ಬಂಧಿಯಾಗಿದ್ದ ಶ್ವಾನಗಳಲ್ಲಿ ಒಂದಾಗಿದೆ. ಇದನ್ನು ಬಂಧಮುಕ್ತಗೊಳಿಸಿದರು ಅದಕ್ಕೆ ಡೋರಿಗೆ ನಿಲ್ಲಲು ಕೂಡ ಸಾಧ್ಯವಾಗುತ್ತಿರಲಿಲ್ಲ ಬದಲಿಗೆ ಡೋರಿ ತೆವಳಲು ಶುರು ಮಾಡಿದ್ದಳು. ಡೋರಿ ಭಾವನಾತ್ಮಕವಾಗಿ ತುಂಬಾ ಅಂಜಿಕೆಯನ್ನು ಹೊಂದಿತ್ತು. ಎದ್ದು ನಡೆಯುತ್ತಿರಲಿಲ್ಲ. ನರವಿಜ್ಞಾನಿಯಾಗಿ, ನಾನು ನನ್ನ ವೃತ್ತಿಜೀವನದ ಮೂಲಕ ನಡೆಯಲು ಸಾಧ್ಯವಾಗದ ಬಹಳಷ್ಟು ಪ್ರಾಣಿಗಳೊಂದಿಗೆ ವ್ಯವಹರಿಸಿದ್ದೇನೆ, ಆದರೆ ಡೋರಿ ವಿಭಿನ್ನವಾಗಿತ್ತು.
ಡೋರಿಯ ಸಮಸ್ಯೆ ಏನೆಂದರೆ ಆಕೆಗೆ ನಡೆಯಲು ಅಥವಾ ನಿಲ್ಲಲು ಸಹ ತಿಳಿದಿಲ್ಲ ಎಂದು ಅವರು ಔಟ್ಲೆಟ್‌ಗೆ ತಿಳಿಸಿದರು. ಹೀಗಾಗಿ ಡಾ.ಬಾಗ್ಲಿ ತನ್ನ ವಿದ್ಯಾರ್ಥಿಗಳೊಂದಿಗೆ ಕೆಲಸ ಮಾಡುತ್ತಾ, ಆಕೆಗೆ ನೇರವಾಗಿ ನಿಲ್ಲುವುದು ಮತ್ತು ನಡೆಯುವುದು ಹೇಗೆ ಎಂದು ಕಲಿಸಲು ಡೋರಿಯನ್ನು ಈಜುಕೊಳದಲ್ಲಿ ಬಿಟ್ಟರು. ಕೊಳದಲ್ಲಿನ ನೀರು ಅವಳ ದೇಹವನ್ನು ಬೆಂಬಲಿಸಿತು ಈ ವೇಳೆ ಮೇಲೆ ಉಳಿಯಲು ಡೋರಿ ತೋರಿದ ಪ್ರತಿರೋಧ ಅವಳ ಕಾಲುಗಳನ್ನು ಬಲಪಡಿಸಿತು ಎಂದು ಡಾ.ಬಾಗ್ಲಿ ಹೇಳಿದರು. ತಿಂಗಳ ನಂತರ ಡೋರಿ ಈಗ ಸಾಧಾರಣ ನಾಯಿಯಂತೆ ನಿಲ್ಲಲು, ನಡೆಯಲು ಮತ್ತು ಆಟವಾಡಲು ಸಮರ್ಥವಾಗಿದೆ. ಮತ್ತು ಅದಕ್ಕಿಂತ ಹೆಚ್ಚಾಗಿ, ಡಾ.ಬಾಗ್ಲಿ ಡೋರಿಯನ್ನು ದತ್ತು ಪಡೆದರು. ಅಲ್ಲದೇ ಡೋರಿ ಬಯಸಬಹುದಾದ ಎಲ್ಲಾ ಪ್ರೀತಿ ಮತ್ತು ಸ್ನೇಹವನ್ನು ಅದಕ್ಕೆ ನೀಡಲು ಅವರು ಸಿದ್ದರಾಗಿದ್ದಾರೆ.
ಯಜಮಾನನನ್ನು ಕಳೆದುಕೊಂಡ ಶ್ವಾನದ ಮೌನ ರೋಧನೆ
ಕೆಲವು ನಾಯಿಮರಿ ಸಾಕಾಣಿಕ ಕೇಂದ್ರಗಳು ಭಯಾನಕ ಪರಿಸ್ಥಿತಿಗಳನ್ನು ಹೊಂದಿವೆ. 2019 ರಲ್ಲಿ, ಜಾರ್ಜಿಯಾದಲ್ಲಿ 630 ನಾಯಿಗಳನ್ನು ಹೊಂದಿರುವ ಸಾಕಾಣಿಕ ಕೇಂದ್ರವನ್ನು ಮುಚ್ಚಲಾಯಿತು. ಆ ಸಂದರ್ಭದಲ್ಲಿ, ಮಾಲೀಕರು ನಾಯಿಗಳನ್ನು ಒಪ್ಪಿಸುವಂತೆ ರಾಜ್ಯದ ಅಧಿಕಾರಿಗಳನ್ನು ಕೇಳಿದರು. ಆ ವೇಳೆ ಆ ಸ್ಥಳದಿಂದ ಸ್ವೀಕರಿಸಿದ ನಾಯಿಗಳು ಗಾಯಗಳು ಮತ್ತು ರೋಗಗಳನ್ನು ಹೊಂದಿದ್ದವು ಎಂದು ನಾಯಿಗಳನ್ನು ರಕ್ಷಿಸುವ ಸಂಸ್ಥೆಯಾದ ರಿಲೀಶ್ ಅಟ್ಲಾಂಟಾ (Releash Atlanta) ಹೇಳಿದೆ.
ಇಲ್ಲಿ ಈ ನಾಯಿಗಳು ತಮ್ಮ ಇಡೀ ಜೀವನವನ್ನು ಕ್ರೇಟ್‌ಗಳಲ್ಲಿ ಕಳೆಯುತ್ತವೆ. ಒಂದು ಸಣ್ಣ ಕ್ರೇಟ್ ಅನ್ನು ಇನ್ನೊಂದರ ಮೇಲೆ ಜೋಡಿಸಲಾಗಿರುತ್ತದೆ ಎಂದು ಕೆಲವು ನಾಯಿಗಳನ್ನು ಅಲ್ಲಿಂದ ತೆಗೆದುಕೊಂಡ ಮತ್ತೊಂದು ಆಶ್ರಯ ಅಟ್ಲಾಂಟಾ ಹ್ಯೂಮನ್ ಸೊಸೈಟಿ (Atlanta Humane Society) ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದೆ. ಸಂಪೂರ್ಣ ಬಂಧನವಸ್ಥೆಯಲ್ಲಿ ಅವುಗಳಿದ್ದು, ಮಲ ಮೂತ್ರವನ್ನು ಅಲ್ಲೇ ಮಾಡುತ್ತಿರುತ್ತವೆ. ಹೊರ ಪ್ರಪಂಚದ ನೋಟವೂ ಅವುಗಳಿಗಿರುವುದಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ