PM Modi Address ತೇಘ್‌ ಬಹಾದ್ದೂರ್‌ 400ನೇ ಜನ್ಮದಿನ, ಏ.21ಕ್ಕೆ ಮೋದಿ ಕೆಂಪುಕೋಟೆ ಮೇಲೆ ಭಾಷಣ!

By Kannadaprabha News  |  First Published Apr 19, 2022, 4:10 AM IST
  • ಸಿಖ್‌ ಗುರು ತೇಘ್‌ ಬಹದ್ದೂರ್‌ ಅವರ 400ನೇ ಜನ್ಮದಿನದ ಕಾರ್ಯಕ್ರಮ
  • ಬಹದ್ದೂರ್‌ ಸ್ಮರಣಾರ್ಥ ನಾಣ್ಯ ಮತ್ತು ಪೋಸ್ಟಲ್‌ ಸ್ಟ್ಯಾಂಪ್‌ ಬಿಡುಗಡೆ
  • ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ಗಣ್ಯರು ಭಾಗಿ
     

ನವದೆಹಲಿ(ಏ.19): ಸಿಖ್‌ ಗುರು ತೇಘ್‌ ಬಹದ್ದೂರ್‌ ಅವರ 400ನೇ ಜನ್ಮದಿನದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಏ.21ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆಯಿಂದ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಸಂಸ್ಕೃತಿ ಸಚಿವಾಲಯ ಸೋಮವಾರ ತಿಳಿಸಿದೆ. 

ಕಾರ‍್ಯಕ್ರಮದಲ್ಲಿ ಬಹದ್ದೂರ್‌ ಅವರ ಸ್ಮರಣಾರ್ಥ ನಾಣ್ಯ ಮತ್ತು ಪೋಸ್ಟಲ್‌ ಸ್ಟ್ಯಾಂಪ್‌ ಬಿಡುಗಡೆ ಮಾಡಲಿದ್ದಾರೆ. ಈ ವೇಳೆ 400 ಸಿಖ್‌ ಸಂಗೀತಕಾರರು ಶಬಾದ್‌ ಕೀರ್ತನೆಯನ್ನು ಹಾಡಲಿದ್ದಾರೆ ಎಂದು ತಿಳಿಸಿದೆ. ಸಂಸ್ಕೃತಿ ಸಚಿವಾಲಯ ಮತ್ತು ದೆಹಲಿ ಸಿಖ್‌ ಗುರುದ್ವಾರ ನಿರ್ವಹಣಾ ಸಮಿತಿ ಜಂಟಿಯಾಗಿ ಕಾರ‍್ಯಕ್ರಮ ಆಯೀಜಿಸಿದ್ದು, ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ಗಣ್ಯರು ಭಾಗಿಯಾಗಲಿದ್ದಾರೆ. ಸ್ವಾತಂತ್ರ್ಯದ ಅಮೃತಮಹೋತ್ಸವದ ಭಾಗವಾಗಿ ತೇಘ್‌ ಬಹದ್ದೂರ್‌ ಅವರ 400ನೇ ಜನ್ಮದಿನ ಆಚರಣೆ ಮಾಡಲಾಗುತ್ತಿದೆ.

Tap to resize

Latest Videos

undefined

ಮೋದಿ ಸೈಲೆಂಟ್? ಸಾಲು ಸಾಲು ಗಲಭೆ ವಿಚಾರದಲ್ಲಿ ಮೋದಿ ಮೌನ ಯಾಕೆ?

ನಿರುದ್ಯೋಗಕ್ಕೆ ಆತ್ಮನಿರ್ಭರತೆಯೇ ಮದ್ದು: ಮೋದಿ
ಭಾರತವು ಜಡವಾಗಿರಲು ಸಾಧ್ಯವಿಲ್ಲ ಮತ್ತು ಅದು ಸ್ವಾವಲಂಬಿಯಾಗಬೇಕು, ಆತ್ಮನಿರ್ಭರವಾಗಬೇಕು. ಹಾಗಾಗಿ ಜನರು ಸ್ಥಳೀಯವಾಗಿ ತಯಾರಿಸಿದ ಉತ್ಪನ್ನಗಳನ್ನು ಮಾತ್ರ ಖರೀದಿಸಬೇಕು ಎಂದು ಶನಿವಾರ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.ಭಾರತವು ಇಂದು ಜಡವಾಗಿ ಉಳಿಯಲು ಸಾಧ್ಯವಿಲ್ಲ. ನಾವು ಎಚ್ಚರವಾಗಿರಲಿ ಅಥವಾ ನಿದ್ರಿಸುತ್ತಿರಲಿ ಇರುವಲ್ಲಿಯೇ ಇರಲು ಸಾಧ್ಯವಿಲ್ಲ. ಜಗತ್ತು ‘ಆತ್ಮನಿರ್ಭರ’ ಆಗುವುದು ಹೇಗೆ ಎಂದು ಯೋಚಿಸುತ್ತಿದೆ. ಹಾಗಾಗಿ ಸ್ಥಳೀಯ ಉತ್ಪನ್ನಗಳನ್ನು ಮಾತ್ರ ಖರೀದಿಸಲು ದೇಶವಾಸಿಗಳಲ್ಲಿ ವಿನಂತಿಸುತ್ತೇನೆ. ನಮ್ಮ ಮನೆಗಳಲ್ಲಿ ನಮ್ಮ ಜನರೇ ತಯಾರಿಸಿದ ವಸ್ತುಗಳನ್ನು ಉಪಯೋಗಿಸೋಣ. ಇದರಿಂದ ಹೆಚ್ಚೆಚ್ಚು ಜನರಿಗೆ ಉದ್ಯೋಗ ಸಿಗುತ್ತದೆ ಎಂದು ಹೇಳಿದರು.

ಮುಂದಿನ 10 ವರ್ಷದಲ್ಲಿ ದೇಶದಲ್ಲಿ ದಾಖಲೆಯ ವೈದ್ಯರು: ಮೋದಿ
ಮುಂದಿನ 10 ವರ್ಷಗಳಲ್ಲಿ ದೇಶದಲ್ಲಿ ದಾಖಲೆಯ ಸಂಖ್ಯೆಯ ವೈದ್ಯರಿರುತ್ತಾರೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ. ದೇಶದ ಪ್ರತಿ ಜಿಲ್ಲೆಯಲ್ಲಿಯೂ ಕನಿಷ್ಠ 1 ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವ ಕೇಂದ್ರ ಸರ್ಕಾರದ ಕಾರ್ಯನೀತಿಯಿಂದ ಇದು ಸಾಧ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.

ಬಹುತೇಕ ಬಡತ ನಿರ್ಮೂಲನ ಮಾಡಿದ ಭಾರತ, ಪವರ್ಟಿ ಶೇ.12.3ಕ್ಕೆ ಇಳಿಕೆ ಎಂದು ವಿಶ್ವಬ್ಯಾಂಕ್ ವರದಿ

ರೋಪ್‌ವೇ ರಕ್ಷಣಾ ಕಾರ್ಯಕ್ಕೆ ಮೋದಿ ಶ್ಲಾಘನೆ
ಜಾರ್ಖಂಡಿನ ದೇವ್‌ಗಢ್‌ನಲ್ಲಿ ಸಂಭವಿಸಿದ ರೋಪ್‌ ವೇ ದುರಂತದ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವವರ ವೀರೋಚಿತ ಪ್ರಯತ್ನಗಳನ್ನು ಇಡೀ ದೇಶವೇ ಶ್ಲಾಘಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದ ಪ್ರಧಾನಿ, ‘ಭಾನುವಾರ ತ್ರಿಕೂಟ ಪರ್ವತದ ರೋಪ್‌ ವೇಯಲ್ಲಿ ಸಿಲುಕಿದ 60 ಜನರ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಭಾರತೀಯ ವಾಯುಪಡೆ, ಸೇನೆ, ಇಂಡೋ-ಟಿಬೇಟಿಯನ್‌ ಗಡಿ ಪೊಲೀಸರು ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿ ದೇಶದ ಜನರನ್ನು ಸರ್ವರೀತಿಯ ಬಿಕ್ಕಟ್ಟಿನಿಂದ ಸುರಕ್ಷಿತವಾಗಿ ಹೊರತರಲು ಸಮರ್ಥರಾಗಿದ್ದಾರೆ’ ಎಂದರು.

click me!