ಪ್ರಿಯಾಂಕಾ ಗಾಂಧಿ ಪ್ರತಿದಿನ 'ನೀಲಿ ಅರಿಶಿನ' ಸೇವಿಸುತ್ತಾರೆ, ಇಲ್ಲಿದೆ ಇದರ ಅದ್ಭುತ ಪ್ರಯೋಜನಗಳ ಲಿಸ್ಟ್!

Published : Dec 24, 2025, 09:50 PM IST
Priyanka Gandhi's Health Secret Discover the Benefits and Uses of Rare Blue Turmeric

ಸಾರಾಂಶ

ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರು ತಮ್ಮ ಆರೋಗ್ಯಕ್ಕಾಗಿ ಬಳಸುವ 'ನೀಲಿ ಅರಿಶಿನ' ಈಗ ಚರ್ಚೆಯಲ್ಲಿದೆ. ಕರ್ಕ್ಯುಮಾ ಕ್ಯಾಸಿಯಾ ಎಂದೂ ಕರೆಯಲ್ಪಡುವ ಈ ಅಪರೂಪದ ಅರಿಶಿನವು ರೋಗನಿರೋಧಕ ಶಕ್ತಿ ಹೆಚ್ಚಿಸಲು, ಶ್ವಾಸಕೋಶದ ಆರೋಗ್ಯ ಕಾಪಾಡಲು, ಸಂಧಿವಾತ ಸಮಸ್ಯೆಗಳಿಗೆ ಪರಿಹಾರ ನೀಡುವ ಔಷಧೀಯ ಗುಣ ಹೊಂದಿದೆ.

Priyanka Gandhi's Health Secret in Rare Blue Turmeric: ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪ್ರಸ್ತಾಪಿಸಿದ 'ನೀಲಿ ಅರಿಶಿನ' (Blue Turmeric) ಈಗ ದೇಶಾದ್ಯಂತ ಕುತೂಹಲ ಕೆರಳಿಸಿದೆ. ಪ್ರಧಾನಿ ಮೋದಿ ಅವರೊಂದಿಗಿನ ಸಂಭಾಷಣೆಯ ವೇಳೆ ತಾವು ಪ್ರತಿದಿನ ನೀಲಿ ಅರಿಶಿನ ಸೇವಿಸುವುದಾಗಿ ಪ್ರಿಯಾಂಕಾ ತಿಳಿಸಿದ್ದು, ಅದರ ಔಷಧೀಯ ಗುಣಗಳ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರಿಯಾಂಕಾ ಗಾಂಧಿ ನೀಲಿ ಅರಿಶಿನ ಬಳಸುವುದೇಕೆ?

ಪ್ರಿಯಾಂಕಾ ಗಾಂಧಿ ಅವರ ಪ್ರಕಾರ, ಹೆಚ್ಚುತ್ತಿರುವ ವಾಯು ಮಾಲಿನ್ಯದಿಂದ ದೇಹವನ್ನು ರಕ್ಷಿಸಿಕೊಳ್ಳಲು ಅವರು ನೀಲಿ ಅರಿಶಿನದ ಮೊರೆ ಹೋಗಿದ್ದಾರೆ. ವಿಶೇಷವಾಗಿ ಗಂಟಲು ನೋವು ಶಮನಗೊಳಿಸಲು ಮತ್ತು ಅಲರ್ಜಿ ಸಮಸ್ಯೆಗಳನ್ನು ನಿವಾರಿಸಲು ಇದು ರಾಮಬಾಣವಾಗಿ ಕೆಲಸ ಮಾಡುತ್ತದೆ. ಪ್ರಿಯಾಂಕಾ ಪ್ರತಿನಿಧಿಸುವ ಕೇರಳದ ವಯನಾಡ್ ಜಿಲ್ಲೆಯ ಮಣ್ಣಿನಲ್ಲಿ ಈ ಅಪರೂಪದ ನೀಲಿ ಅರಿಶಿನ ಸಮೃದ್ಧವಾಗಿ ಬೆಳೆಯುತ್ತದೆ.

ಏನಿದು ನೀಲಿ ಅರಿಶಿನ? ಇದರ ರೂಪ ಹೇಗಿರುತ್ತದೆ?

ಸಾಮಾನ್ಯವಾಗಿ ನಾವು ಬಳಸುವ ಹಳದಿ ಅರಿಶಿನಕ್ಕಿಂತ ಇದು ಭಿನ್ನವಾಗಿದೆ. ಇದನ್ನು 'ಕಪ್ಪು ಅರಿಶಿನ' ಅಥವಾ 'ಕರ್ಕ್ಯುಮಾ ಕ್ಯಾಸಿಯಾ' ಎಂದೂ ಕರೆಯಲಾಗುತ್ತದೆ. ಇದರ ಹೊರಭಾಗ ಕಂದು ಬಣ್ಣದ್ದಾಗಿದ್ದರೂ, ಒಳಭಾಗವು ಆಕರ್ಷಕ ನೀಲಿ ಅಥವಾ ನೇರಳೆ ಬಣ್ಣವನ್ನು ಹೊಂದಿರುತ್ತದೆ. ಕರ್ಪೂರದಂತಹ ಸುವಾಸನೆ ಹೊಂದಿರುವ ಇದು ಈಶಾನ್ಯ ಭಾರತ, ಕೇರಳ ಮತ್ತು ಮಧ್ಯಪ್ರದೇಶದ ಕೆಲವು ಭಾಗಗಳಲ್ಲಿ ಮಾತ್ರ ಬೆಳೆಯುವ ಕಾರಣ ಬಹಳ ದುಬಾರಿಯಾಗಿದೆ.

ರೋಗನಿರೋಧಕ ಶಕ್ತಿ ಹೆ್ಚ್ಚಿಸುತ್ತದೆ:

ನೀಲಿ ಅರಿಶಿನವು ಅತಿ ಹೆಚ್ಚು ಉತ್ಕರ್ಷಣ ನಿರೋಧಕ (Antioxidant) ಮತ್ತು ಉರಿಯೂತ ನಿವಾರಕ (Anti-inflammatory) ಗುಣಗಳನ್ನು ಹೊಂದಿದೆ. ಇದರಲ್ಲಿರುವ ಕರ್ಕ್ಯುಮಿನ್ ಅಂಶವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಶ್ವಾಸಕೋಶದ ಆರೋಗ್ಯವನ್ನು ಕಾಪಾಡುತ್ತದೆ. ಮಾಲಿನ್ಯದಿಂದ ಹಾನಿಗೊಳಗಾಗುವ ಗಂಟಲು ಮತ್ತು ಶ್ವಾಸಕೋಶವನ್ನು ಬಲಪಡಿಸಲು ಇದು ಸಹಕಾರಿಯಾಗಿದೆ.

ಕ್ಯಾನ್ಸರ್ ಮತ್ತು ಸಂಧಿವಾತಕ್ಕೂ ಇದು ಮದ್ದು?

ತಜ್ಞರ ಪ್ರಕಾರ, ನೀಲಿ ಅರಿಶಿನದಲ್ಲಿರುವ ಕ್ಯಾನ್ಸರ್ ವಿರೋಧಿ ಗುಣಗಳು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯಲು ಸಹಕಾರಿ ಎಂದು ಪ್ರಯೋಗಾಲಯದ ಅಧ್ಯಯನಗಳು ತಿಳಿಸಿವೆ. ಆದಾಗ್ಯೂ, ಇದನ್ನು ವೈದ್ಯಕೀಯ ಚಿಕಿತ್ಸೆಗೆ ಬದಲಿಯಾಗಿ ಬಳಸಬಾರದು. ಇನ್ನು ಆಯುರ್ವೇದ ತಜ್ಞರ ಪ್ರಕಾರ, ಕೀಲು ನೋವು ಮತ್ತು ಸಂಧಿವಾತದಿಂದ ಬಳಲುವವರು ಇದನ್ನು ಹಾಲಿನೊಂದಿಗೆ ಸೇವಿಸಿದರೆ ಉರಿಯೂತ ಕಡಿಮೆಯಾಗಿ ನೋವಿನಿಂದ ಮುಕ್ತಿ ಪಡೆಯಬಹುದು.

ನೀಲಿ ಅರಿಶಿನವನ್ನು ಬಳಸುವ ವಿಧಾನ

  • ನೀಲಿ ಅರಿಶಿನವನ್ನು ವಿವಿಧ ರೀತಿಗಳಲ್ಲಿ ಬಳಸಬಹುದಾಗಿದೆ:
  •  ಹಾಲಿನೊಂದಿಗೆ: ಅರ್ಧ ಚಮಚ ಪುಡಿಯನ್ನು ಬಿಸಿ ಹಾಲಿಗೆ ಬೆರೆಸಿ ಕುಡಿಯಬಹುದು.
  •  ಚಹಾ: ಪ್ರತಿದಿನ ಕುಡಿಯುವ ಚಹಾಕ್ಕೆ ಸ್ವಲ್ಪ ಅರಿಶಿನ ಪುಡಿ ಸೇರಿಸಬಹುದು.
  •  ಲೇಪನ: ಕೀಲು ನೋವು ಇರುವ ಕಡೆ ಪೇಸ್ಟ್ ಮಾಡಿ ಹಚ್ಚಬಹುದು.
  •  ಆಹಾರ: ಸಲಾಡ್ ಅಥವಾ ತರಕಾರಿ ಪಲ್ಯಗಳಿಗೂ ಇದನ್ನು ಬೆರೆಸಿ ಸೇವಿಸಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗಿಗ್‌, ಡೆಲಿವರಿ ಏಜೆಂಟ್‌ ರಾಷ್ಟ್ರವ್ಯಾಪಿ ಮುಷ್ಕರ: ಕ್ರಿಸ್‌ಮಸ್‌, ಹೊಸ ವರ್ಷಕ್ಕೆ ಶಾಕ್‌, ಫುಡ್‌ ಆರ್ಡರ್‌ ಮನೆಗೆ ಬರೋದಿಲ್ಲ!
ಭಾರತಕ್ಕೆ ಮರಳಿ ಯಾವಾಗ ಬರುತ್ತೀರಿ? ಪರಾರಿಯಾಗಿರುವ ವಿಜಯ್‌ ಮಲ್ಯಗೆ ಬಾಂಬೆ ಹೈಕೋರ್ಟ್ ಪ್ರಶ್ನೆ