2022 ಕ್ಕೆ ಪ್ರಿಯಾಂಕಾ ಇನ್‌ ಉತ್ತರ ಪ್ರದೇಶ?

By Kannadaprabha News  |  First Published Aug 7, 2020, 10:16 AM IST

ಕೊರೋನಾ ಸಂಕಟ ಮುಗಿದ ನಂತರ ಎಐಸಿಸಿ ಸಮಾವೇಶ ಮಾಡಿ ರಾಹು ಗಾಂಧಿಗೆ ಮತ್ತೊಮ್ಮೆ ರಾಷ್ಟ್ರೀಯ ಅಧ್ಯಕ್ಷ ಪಟ್ಟಕಟ್ಟಿಪ್ರಿಯಾಂಕಾ ಗಾಂಧಿಗೆ 2022ರ ಉತ್ತರ ಪ್ರದೇಶ ಚುನಾವಣೆಯ ಹೊಣೆಗಾರಿಕೆ ಕೊಡಲಿದ್ದಾರೆ ಸೋನಿಯಾ ಗಾಂಧಿ ಎಂಬ ಮಾತು ಕೇಳಿಬರುತ್ತಿದೆ. 


ದೆಹಲಿ (ಆ. 07): ಕೊರೋನಾ ಸಂಕಟ ಮುಗಿದ ನಂತರ ಎಐಸಿಸಿ ಸಮಾವೇಶ ಮಾಡಿ ರಾಹುಲ್ ಗಾಂಧಿಗೆ ಮತ್ತೊಮ್ಮೆ ರಾಷ್ಟ್ರೀಯ ಅಧ್ಯಕ್ಷ ಪಟ್ಟಕಟ್ಟಿಪ್ರಿಯಾಂಕಾ ಗಾಂಧಿಗೆ 2022 ರ ಉತ್ತರ ಪ್ರದೇಶ ಚುನಾವಣೆಯ ಹೊಣೆಗಾರಿಕೆ ಕೊಡಲಿದ್ದಾರೆ ಸೋನಿಯಾ ಗಾಂಧಿ ಎಂಬ ಮಾತು ಕೇಳಿಬರುತ್ತಿದೆ.

ಕಾಂಗ್ರೆಸ್‌ನಲ್ಲಿ ಚಪ್ಪಾಳೆಗೆ ಗಾಂಧಿ ಕುಟುಂಬದವರೇ ಆಗಬೇಕು, ಬೈಗುಳಕ್ಕೆ ಮಾತ್ರ ಬೇರೆಯವರು..!

Tap to resize

Latest Videos

undefined

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆರೂವರೆ ಪ್ರತಿಶತ ವೋಟು ಮತ್ತು 7 ಸೀಟು ಗೆದ್ದಿದ್ದ ಕಾಂಗ್ರೆಸ್‌ಗೆ ಮುಂದಿನ ಚುನಾವಣೆಯಲ್ಲಿ ತಾನೇ ಗೆಲ್ಲಲು ಆಗದಿದ್ದರೆ ಪರವಾಗಿಲ್ಲ, ಆದರೆ ಯೋಗಿ ಗೆಲ್ಲಬಾರದು ಎಂಬ ಯೋಚನೆಯಿದೆ. ರಾಜಕೀಯದಲ್ಲಿ ಬರೀ ಯೋಚನೆ ಇದ್ದರೆ ಸಾಲದು, ಪರಿಶ್ರಮ ಮತ್ತು ನಸೀಬು ಕೂಡ ಬೇಕು. 2022ರಲ್ಲಿ ಪ್ರಿಯಾಂಕಾ ಕ್ಲಿಕ್‌ ಆದರೆ ಸರಿ, ಇಲ್ಲವಾದರೆ ಕಾಂಗ್ರೆಸ್ಸನ್ನು ಉಳಿಸಿಕೊಳ್ಳೋದು ಕಷ್ಟಎನಿಸುತ್ತದೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ

click me!