ರಾಹುಲ್‌, ಪ್ರಿಯಾಂಕಗೆ ಮೀರತ್ ಪ್ರವೇಶ ನಿರ್ಬಂಧ

By Suvarna NewsFirst Published Dec 25, 2019, 10:29 AM IST
Highlights

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಉತ್ತರಪ್ರದೇಶದ ಮೇರಠ್‌ನಲ್ಲಿ ಸಾವಿಗೀಡಾದ ಐವರು ವ್ಯಕ್ತಿಗಳ ಕುಟುಂಬಸ್ಥರ ಭೇಟಿಗೆ ತೆರಳುತ್ತಿದ್ದ ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಅವರನ್ನು ಪೊಲೀಸರು ತಡೆದಿದ್ದಾರೆ.

ನವದೆಹಲಿ (ಡಿ. 25): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಉತ್ತರಪ್ರದೇಶದ ಮೇರಠ್‌ನಲ್ಲಿ ಸಾವಿಗೀಡಾದ ಐವರು ವ್ಯಕ್ತಿಗಳ ಕುಟುಂಬಸ್ಥರ ಭೇಟಿಗೆ ತೆರಳುತ್ತಿದ್ದ ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಅವರನ್ನು ಪೊಲೀಸರು ತಡೆದಿದ್ದಾರೆ.

‘ಕೈ’ಗೆ ಮೋದಿ ಸವಾಲ್‌!: ಎರಡು ಪಂಥಾಹ್ವಾನ ನೀಡಿದ ಪ್ರಧಾನಿ!

ಮಂಗಳವಾರ ಮೇರಠ್‌ಗೆ ತೆರಳುತ್ತಿದ್ದ ರಾಹುಲ್‌ ಹಾಗೂ ಪ್ರಿಯಾಂಕಾರನ್ನು ಮಾರ್ಗಮಧ್ಯೆ ಪರ್ತಾಪುರ ಬಳಿಯೇ ತಡೆದ ಪೊಲೀಸರು, ಮೇರಠ್‌ ಪ್ರವೇಶಿಸದಂತೆ ನಿರ್ಬಂಧಿಸಿದರು. ತಮ್ಮ ನಿರ್ಬಂಧಕ್ಕೆ ಅಸಮಾಧಾನ ವ್ಯಕ್ತಪಡಿಸಿದ ರಾಹುಲ್‌, ‘ಮೇರಠ್‌ ಪ್ರವೇಶಿಸದಂತೆ ನಿರ್ಬಂಧಿಸಿದ ಆದೇಶದ ಪ್ರತಿಯನ್ನು ನೀಡುವಂತೆ ಪೊಲೀಸರಿಗೆ ಒತ್ತಾಯಿಸಿದೆವು.

ಆದರೆ, ಆದೇಶದ ಪ್ರತಿ ತೋರಿಸದ ಪೊಲೀಸರು, ನಮ್ಮನ್ನು ಇಲ್ಲಿಂದ ವಾಪಸ್‌ ಹೋಗುವಂತೆ ಹೇಳಿದರು’ ಎಂದು ಹೇಳಿದ್ದಾರೆ. ಭಾನುವಾರವಷ್ಟೇ ಉತ್ತರ ಪ್ರದೇಶದ ಬಿಜ್ನೋರ್‌ಗೆ ಭೇಟಿ ನೀಡಿದ್ದ ಪ್ರಿಯಾಂಕಾ ವಾದ್ರಾ ಅವರು, ಕೆಲ ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಿದ್ದರು.

click me!