ರೋಗ ಇಲ್ಲದಿದ್ದರೂ ಹೈದರಾಬಾದ್ ಶ್ರೀಮಂತರಿಂದ ಆಸ್ಪತ್ರೆ ಬೆಡ್ ಬುಕ್!| ರಾಜಕಾರಣಿಗಳು, ಚಿತ್ರನಟರು ಸೇರಿದಂತೆ ಭಾರೀ ಶ್ರೀಮಂತರಿಂದ ‘ಅತಿ ಬುದ್ಧಿವಂತಿಕೆ’| ದಿನಕ್ಕೆ 1.5 ಲಕ್ಷವರೆಗೆ ನೀಡಿ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆ ಕಾದಿರಿಸುವ ವಿಐಪಿಗಳು
ಹೈದರಾಬಾದ್(ಆ.04): ತೆಲಂಗಾಣದ ಶ್ರೀಮಂತರು ಹಾಗೂ ವಿಐಪಿಗಳು ತಮಗೆ ಕೊರೋನಾ ಬಾರದಿದ್ದರೂ ಖಾಸಗಿ ಆತ್ರೆಗಳಲ್ಲಿ ಅಕ್ರಮವಾಗಿ ಬೆಡ್‌ಗಳನ್ನು ಮುಂಗಡ ಬುಕಿಂಗ್ ಮಾಡಿ ಕಾಯ್ದಿರಿಸಿಕೊಂಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಮಿತಿ ಮೀರಿ ಜನಸಾಮಾನ್ಯರು ಆಸ್ಪತ್ರೆಗಳಲ್ಲಿ ಬೆಡ್ ಹುಡುಕಿಕೊಂಡು ಅಲೆಯುತ್ತಿರುವಾಗ ಬೆಳಕಿಗೆ ಬಂದ ಘಟನೆ, ಕೆಲ ಖಾಸಗಿ ಆಸ್ಪತ್ರೆಗಳ ಹಣದಾಹವನ್ನು ಮತ್ತೊಮ್ಮೆ ಬಯಲಿಗೆಳೆದಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೂ ತಗುಲಿದ ಕೊರೋನಾ ಸೋಂಕು!
ಹೈದರಾಬಾದ್‌ನ ಕನಿಷ್ಠ ನಾಲ್ಕು ಆಸ್ಪತ್ರೆಗಳಲ್ಲಿ ಇಂತಹ ದಂಧೆ ನಡೆಯುತ್ತಿದ್ದು, ಶ್ರೀಮಂತರು, ರಾಜಕಾರಣಿಗಳು ಹಾಗೂ ಸಿನಿಮಾ ನಟರು ದಿನಕ್ಕೆ 1.5 ಲಕ್ಷ ರು. ನೀಡಿ ಐಸಿಯು ಬೆಡ್‌ಗಳನ್ನು ಕಾಯ್ದಿರಿಸುತ್ತಿದ್ದಾರೆ. ಮುಂದೆ ತಮಗೆ ಕೊರೋನಾ ಬರಬಹುದು, ಆಗ ಬೆಡ್ ಸಿಗದೇಹೋಗಬಹುದು ಎಂಬ ಭೀತಿಯಲ್ಲಿ ಅಲ್ಲಿಯವರೆಗೂ ನಿತ್ಯ 1.5 ಲಕ್ಷ ರು. ನೀಡಿ ಬೆಡ್‌ಗಳನ್ನು ಕಾಯ್ದಿರಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ದೂರು ದಾಖಲಾಗಿರುವುದನ್ನು ರಾಜ್ಯದ ಸಾರ್ವಜನಿಕ ಆರೋಗ್ಯ ಇಲಾಖೆಯ ನಿರ್ದೇಶಕ ಮತ್ತು ರಾಜ್ಯದಲ್ಲಿನ ಕೊರೋನಾ ಪ್ರಕರಣಗಳ ಸಮನ್ವಯಕಾರ ಡಾ. ಜಿ.ಶ್ರೀನಿವಾಸ್ ರಾವ್ ಖಚಿತಪಡಿಸಿದ್ದಾರೆ. ಅಲ್ಲದೆ ಈ ಕುರಿತು ತನಿಖೆಗೆ ಆದೇಶಿಸಿರುವುದಾಗಿಯೂ ತಿಳಿಸಿದ್ದಾರೆ.
ಸಿಎಂ ಯಡಿಯೂರಪ್ಪನವರ ಹೆಲ್ತ್ ಬುಲೆಟಿನ್ ಬಿಡುಗಡೆ....!
ಕಳೆದ ಕೆಲ ದಿನಗಳಿಂದ ತೆಲಂಗಾಣದಲ್ಲಿ ಭಾರೀ ಪ್ರಮಾಣದಲ್ಲಿ ಕೇಸು ಬೆಳಕಿಗೆ ಬರುತ್ತಿದೆ. ಪರಿಣಾಮ ಆಸ್ಪತ್ರೆಯಲ್ಲಿ ಐಸಿಯುಗಳ ಕೊರತೆ ಎದುರಾಗಿದೆ. ಇದು ಸಿರಿವಂತರು, ರಾಜಕಾರಣಿಗಳು ಮತ್ತು ಸಿನಿಮಾ ನಟರನ್ನು ಕಂಗಾಲಾಗಿಸಿದೆ. ಒಂದು ವೇಳೆ ಸೋಂಕು ಬಂದರೆ ಮುಂದೇನು ಎಂಬ ಆತಂಕ ಅವರನ್ನು ಕಾಡುತ್ತಿದೆ. ಕಾರಣ, ಪಾಸಿಟಿವ್ ಬಂದರೆ ರಾಜ್ಯದಲ್ಲೂ ಐಸಿಯೂ ಇಲ್ಲ, ನೆರೆ ರಾಜ್ಯಗಳಿಗೂ ಹೋಗುವಂತಿಲ್ಲ. ಹೀಗಾಗಿ ನಗರದ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಅವರೆಲ್ಲಾ ಮುಂಗಡವಾಗಿಯೇ ಐಸಿಯು ಬೆಡ್‌ಗಳನ್ನು ಕಾದಿರಿಸಿಕೊಳ್ಳುತ್ತಿದ್ದಾರೆ.
ಅಂದರೆ ಸೋಂಕು ಬಂದಿರದೇ ಇದ್ದರೂ, ಅವರ ಹೆಸರಿನಲ್ಲಿ ಆಸ್ಪತ್ರೆಯಲ್ಲಿ ಬೆಡ್‌ಗಳನ್ನು ಖಾಲಿ ಇಡಲಾಗುತ್ತಿದೆ. ಇಂಥ ಒಂದು ಬೆಡ್‌ಗೆ ನಿತ್ಯ 1.50 ಲಕ್ಷ ರು.ವರೆಗೂ ಹಣ ನೀಡಲಾಗುತ್ತಿದೆ. ಭಾರೀ ಶ್ರೀಮಂತರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ತಿಂಗಳುಗಟ್ಟಲೆ ಬೆಡ್‌ಗಳನ್ನು ಕಾದಿರಿಸಿದ್ದಾರೆ ಎನ್ನಲಾಗಿದೆ. ಪರಿಣಾಮ, ಹಾಲಿ ಸೋಂಕಿನಿಂದ ನರಳುತ್ತಿರುವವರು ಬಂದರೂ, ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇಲ್ಲ ಎಂದು ಹೇಳಿ ಚಿಕಿತ್ಸೆ ನಿರಾಕರಿಸಲಾಗುತ್ತಿದೆ.
ಏಮ್ಸ್‌ಗೆ ಯಾಕೆ ಹೋಗಿಲ್ಲ? ಖಾಸಗಿ ಆಸ್ಪತ್ರೆಯಲ್ಲಿರುವ ಅಮಿತ್ ಶಾಗೆ ತಿವಿದ ತರೂರ್!
ಆಗಿರುವುದೇನು?
- ತೆಲಂಗಾಣದಲ್ಲಿ ಕಳೆದ ಕೆಲ ದಿನಗಳಿಂದ ಕೊರೋನಾ ಕೇಸ್ ಭಾರೀ ಹೆಚ್ಚಳ
- ಇದರಿಂದ ರಾಜಕಾರಣಿಗಳು, ಚಿತ್ರನಟರು ಸೇರಿ ಶ್ರೀಮಂತರಿಗೆ ಆತಂಕ
- ಹೀಗಾಗಿ, ಆಸ್ಪತ್ರೆ ಬೆಡ್‌ಗಳನ್ನು ಮುಂಗಡ ಕಾದಿರಿಸುತ್ತಿರುವ ಸಿರಿವಂತರು
- ಬೆಡ್‌ವೊಂದಕ್ಕೆ ದಿನಕ್ಕೆ 1.5 ಲಕ್ಷ ರು.ವರೆಗೂ ನೀಡಿ ಕಾದಿರಿಸುತ್ತಿರುವ ಗಣ್ಯರು
- ಒಂದು ವೇಳೆ ಸೋಂಕು ತಗುಲಿದರೆ ಇರಲಿ ಎಂದು ಆಸ್ಪತ್ರೆ ಬೆಡ್ ಬುಕಿಂಗ್
- ಧನದಾಹದಿಂದಾಗಿ ಮುಂಗಡ ಬುಕಿಂಗ್ ಸೌಲಭ್ಯ ನೀಡಿವೆ ಕನಿಷ್ಠ 4 ಆಸ್ಪತ್ರೆ
- ಇದರಿಂದಾಗಿ ಚಿಕಿತ್ಸೆ ಸಿಗದೆ ಇತರೆ ಸಾಮಾನ್ಯ ರೋಗಿಗಳಿಗೆ ಭಾರೀ ತೊಂದರೆ