
ಅಯೋಧ್ಯೆ(ಆ.03): ಶ್ರೀ ರಾಮ ಜನ್ಮ ಭೂಮಿ ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಕಲ ತಯಾರಿ ನಡೆಯುತ್ತಿದೆ. ಆಗಸ್ಟ್ 5 ರಂದು ಪ್ರಧಾನಿ ನರೇಂದ್ರ ಮೋದಿ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಸಲಿದ್ದಾರೆ. ಪ್ರಮುಖ ಗಣ್ಯರು ಕಾರ್ಯಕ್ರಮಲ್ಲಿ ಪಾಲ್ಗೊಳ್ಳಲಿದ್ದಾರೆ. ಶ್ರೀ ರಾಮ ಮಂದಿರ ನಿರ್ಮಾಣ ದೇಶದಲ್ಲಿ ಸಂಭ್ರಮದ ವಾತಾವರಣ ನಿರ್ಮಿಸಿದೆ. ಈ ಸಂಭ್ರಮ ಇದೀಗ ಡಬಲ್ ಆಗಿದೆ. ಕಾರಣ ಭಾರತೀಯ ರೈಲ್ವೇ ಇಲಾಖೆ ಇದೀಗ ಆಯೋಧ್ಯೆಯಲ್ಲಿ ರಾಮ ಮಂದಿರ ಹೋಲುವ ರೀತಿಯಲ್ಲೇ ರೈಲು ನಿಲ್ದಾಣ ನಿರ್ಮಿಸುತ್ತಿದೆ.
ರಾಮ ಮಂದಿರ ಭೂಮಿ ಪೂಜೆ ಆಮಂತ್ರಣ ಪತ್ರಿಕೆ ವೈರಲ್: ಮೋದಿ ಜೊತೆ ಮೂವರ ಹೆಸರು!
ಬರೋಬ್ಬರಿ 104 ಕೋಟಿ ರೂಪಾಯಿ ವೆಚ್ಚದಲ್ಲಿ ಅಯೋಧ್ಯೆ ರೈಲು ನಿಲ್ದಾಣ ನಿರ್ಮಾಣವಾಗಲಿದೆ. ಈ ರೈಲ ನಿಲ್ದಾಣ ಶ್ರೀ ರಾಮ ಮಂದಿರ ರೀತಿಯಲ್ಲೇ ಇರಲಿದೆ. ಶ್ರೀ ರಾಮ ಜನ್ಮ ಭೂಮಿಯಾದ ಕಾರಣ, ಇಲ್ಲಿಗೆ ಆಗಮಿಸುವ ಭಕ್ತರಿಗೆ ವಿಶೇಷ ಸೌಲಭ್ಯ, ಶುಚಿತ್ವ ಹಾಗೂ ಶ್ರೇಷ್ಠ ಮಟ್ಟದ ಸೌಲಭ್ಯ ಸಿಗುವಂತಾಗಬೇಕು. ಇದಕ್ಕಾಗಿ ಸುಸಜ್ಜಿತ ಅಯೋಧ್ಯೆ ರೈಲು ನಿಲ್ದಾಣ ನಿರ್ಮಾಣ ಮಾಡಲಿದ್ದೇವೆ ಎಂದು ರೈಲ್ವೇ ಇಲಾಖೆ ಹೇಳಿದೆ.
ಸದ್ಯ ಅಯೋಧ್ಯೆಯಲ್ಲಿರವ ಸಣ್ಣ ರೈಲು ನಿಲ್ದಾಣದ ಸಂಪೂರ್ಣ ಸ್ವರೂಪವೇ ಬದಲಾಗಲಿದೆ. ಎರಡು ಹಂತದಲ್ಲಿ ಕಾಮಾಗಾರಿ ನಡೆಯಲಿದೆ. ಮೊದಲ ಹಂತದ ಕಾಮಾಗಾರಿ 2021ರ ಜೂನ್ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. 2ನೇ ಹಂತದ ಕಾಮಗಾರಿ 2024ರಲ್ಲಿ ಪೂರ್ಣಗೊಳ್ಳಲಿದೆ. ಆರಂಭದಲ್ಲಿ 3 ಪ್ಲಾಟ್ ಫಾರ್ಮ್ ಕಾರ್ಯಗಳು ಆರಂಭಗೊಳ್ಳಲಿದೆ. ಎರಡನೇ ಹಂತದಲ್ಲಿ ಕಟ್ಟಡ ನಿರ್ಮಾಣ, ರಾಮ ಮಂದಿರ ಗೋಪುರದ ರೀತಿಯಲ್ಲಿನ ಕಟ್ಟಡ, ಇತರ ಸೌಲಭ್ಯಗಳ ನಿರ್ಮಾಣ ಕಾರ್ಯಗಳು ನಡೆಯಲಿದೆ.
ಅಯೋಧ್ಯೆ ರೈಲು ನಿಲ್ದಾಣ ನಿರ್ಮಾಣ ಕುರಿತು ರೈಲ್ವೇ ಸಚಿವ ಪಿಯೂಷ್ ಗೊಯೆಲ್ ಟ್ವೀಟ್ ಮಾಡಿದ್ದಾರೆ. ಶ್ರೀ ರಾಮನ ದರ್ಶನಕ್ಕಾಗಿ ಆಗಮಿಸುವ ಭಕ್ತರಿಗಾಗಿ ಆಯೋಧ್ಯೆ ರೈಲು ನಿಲ್ದಾಣವನ್ನು ಮೇಲ್ದದರ್ಜೆ ಏರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನೂತನ ಅಯೋಧ್ಯೆ ರೈಲು ನಿಲ್ದಾಣ ನಿರ್ಮಾಣವಾಗಲಿದೆ ಎಂದು ಗೊಯೆಲ್ ಟ್ವೀಟ್ ಮಾಡಿದ್ದಾರೆ.
ರಾಮ ಮಂದಿರ ಭೂಮಿ ಪೂಜೆ ಕಾರ್ಯಕ್ರಮ ಬೆನ್ನಲ್ಲೇ ರೈಲು ಇಲಾಖೆ ಕೂಡ ಶ್ರೀ ರಾಮ ಭಕ್ತರಿಗೆ ಸಿಹಿ ಸುದ್ದಿ ನೀಡಿದೆ. ರಾಮ ಮಂದಿರ ನಿರ್ಮಾಣ ಕಾರ್ಯದ ಜೊತೆಗೆ ರೈಲು ನಿಲ್ದಾಣ ಕೂಡ ನಿರ್ಮಾಣವಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ