'ಬಣ್ಣಬಣ್ಣದ ಹೂಗಳ ನನ್ನೂರು, ಬೆಂಗಳೂರು..' 'ಗಾರ್ಡನ್‌ ಸಿಟಿ' ಕುರಿತಾಗಿ ಅದ್ಭುತ ಥ್ರೆಡ್‌ ಹಂಚಿಕೊಂಡ ಪ್ರಧಾನಿ!

By Santosh NaikFirst Published Apr 1, 2023, 4:06 PM IST
Highlights

ಉದ್ಯಾನ ನಗರಿ ಬೆಂಗಳೂರು ಈಗ ಪಿಂಕ್‌ ಸಿಟಿಯಾಗಿ ಬದಲಾಗಿದೆ. ಬೆಂಗಳೂರಿನ ಬೀದಿ ಬೀದಿಗಳಲ್ಲಿ ನೆಡಲಾಗಿದ್ದ ಗುಲಾಬಿ ಟಬೆಬುಯಾ ರೋಸಿಯಾ ಗಿಡಗಳು ಹೂಬಿಟ್ಟಿರುವ ಕಾರಣ, ನಗರ ಗುಲಾಬಿ ಬಣ್ಣದಲ್ಲಿ ಕಂಗೊಳಿಸಿವೆ. ಈ ನಡುವೆ ಬೆಂಗಳೂರಿನ ಮರಗಳ ಕುರಿತಾಗಿ ಪ್ರಧಾನಿ ಮೋದಿ ಆಕರ್ಷಕ ಟ್ವಿಟರ್‌ ಥ್ರೆಡ್‌ ಹಂಚಿಕೊಂಡಿದ್ದಾರೆ.
 

ಬೆಂಗಳೂರು (ಏ.1): ವಿಶ್ವವಿಖ್ಯಾತ ಲಾಲ್‌ಬಾಗ್‌, ಕಬ್ಬನ್‌ ಪಾರ್ಕ್‌ ಜೊತೆಗೆ ಅತ್ಯಾಕರ್ಷಕ ಕೆರೆಗಳಿಂದ ತುಂಬಿರುವ ರಾಜ್ಯ ರಾಜಧಾನಿ ಬೆಂಗಳೂರು ಸಾಕಷ್ಟು ಕಾರಣಗಳಿಂದಾಗಿ ಸುದ್ದಿಯಲ್ಲಿರುತ್ತದೆ. ಇಲ್ಲಿನ ಪರಿಸರವನ್ನು ಹಾಳು ಮಾಡುವಂಥ ಯಾವುದೇ ಉದ್ದೇಶಗಳನ್ನು ರಾಜಧಾನಿಯ ಜನರು ತಡೆದಿದ್ದಾರೆ. ಅದರಿಂದಾಗಿಯಯೇ ಇಂದಿಗೂ ಬೆಂಗಳೂರಿನ ಪ್ರತಿ ಗಲ್ಲಿಗಲ್ಲಿಗಳಲ್ಲೂ ಆಕಷರ್ಕವಾದ ಮರಗಳು ಸಿಗುತ್ತವೆ. ಹೊಂಗೆ ಮರದ ನೆರಳು ಕಾಣುತ್ತದೆ. ವಸಂತ ಮಾಸದಲ್ಲಿ ಬೆಂಗಳೂರಿನಲ್ಲಿ ಮರಗಳು ಹೂಬಿಟ್ಟು ಕಂಗೊಳಿಸುತ್ತಿವೆ. ಗಾರ್ಡನ್‌ ಸಿಟಿ ಪೂರ್ತಿ ಗುಲಾಬಿ ಹೂವುಗಳಿಂದ ತುಂಬಿಹೋಗಿದೆ. ಉದ್ಯಾನನಗರಿ ಈಗ ಗುಲಾಬಿ ನಗರಿ ಆಗಿದೆ. ಈ ನಡುವೆ ಬೆಂಗಳೂರಿನಲ್ಲಿ ಇರುವ ಮರಗಳ ಬಗ್ಗೆ ಸುಭಾಷಿಣಿ ಚಂದ್ರಮಣಿ ಎನ್ನುವವರು ಬರೆದ 19 ಟ್ವೀಟ್‌ಗಳ ಆಸಕ್ತಿದಾಯಕ ಥ್ರೆಡ್‌ಅನ್ನು ಪ್ರಧಾನಿ ನನರೇಂದ್ರ ಮೋದಿ ಹಂಚಿಕೊಂಡಿದ್ದಾರೆ. ಪ್ರಕೃತಿಯೊಂದಿಗೆ ಬೆಂಗಳೂರಿಗೆ ಇರುವ ಗಾಢ ಸಂಬಂಧದ ಬಗ್ಗೆಯೂ ಅವರು ಮಾತನಾಡಿದ್ದಾರೆ. 'ಇದು ಬೆಂಗಳೂರು ಮತ್ತು ಅಲ್ಲಿನ ಮರಗಳ ಬಗ್ಗೆ ಆಸಕ್ತಿದಾಯಕ ಥ್ರೆಡ್‌ ಆಗಿದೆ. ಬೆಂಗಳೂರು ಮರಗಳು ಮತ್ತು ಸರೋವರಗಳು ಸೇರಿದಂತೆ ಪ್ರಕೃತಿಯೊಂದಿಗೆ ಬಹಳ ಆಳವಾದ ಬಾಂಧವ್ಯವನ್ನು ಹೊಂದಿದೆ. ತಮ್ಮ ಪಟ್ಟಣಗಳು ಮತ್ತು ನಗರಗಳ ಇಂಥ ಅಂಶಗಳನ್ನು ತಿಳಿಸಿಕೊಡಿ ಎಂದು ನಾನು ಇತರರನ್ನು ಒತ್ತಾಯಿಸುತ್ತೇನೆ. ಓದಲು ಇದು ಬಹಳ ಖುಷಿ ನೀಡುತ್ತದೆ' ಎಂದು ಮೋದಿ ಬಬರೆದುಕೊಂಡಿದ್ದಾರೆ.

- ಸುಭಾಷಿಣಿ ಚಂದ್ರಮಣಿ ಅವರು ಬರೆದಿರುವ ಟ್ವಿಟರ್‌ ಥ್ರೆಡ್‌ನ ಅಂಶಗಳು

- ಬೆಂಗಳೂರಿನಲ್ಲಿ ವರ್ಷಪೂರ್ತಿ ಅರಳುವ ವೈವಿಧ್ಯಮಯ ಹೂವಿನ ಮರಗಳ ಸಂಗ್ರಹವಿದೆ ಎನ್ನುವುದು ನಿಮಗೆ ಗೊತ್ತೇ? ಹಲವು ವರ್ಷಗಳ ಹಿಂದೆ ನಗರದ ಯೋಜನೆ ಸಿದ್ಧವಾದಾಗ, ಒಂದು ಮರವು ಹೂಗಳನ್ನು ಬಿಡುವುದು ನಿಲ್ಲಿಸಿದಾಗ ಇನ್ನೊಂದು ಮರವು ಅದರ ಸ್ಥಾನವನ್ನು ಪಡೆದುಕೊಳ್ಳುವ ರೀತಿಯಲ್ಲಿ ಆಯ್ಕೆ ಮಾಡಲಾಗಿದೆ. ಇದರಿಂದಾಗಿ ಬೆಂಗಳೂರಿನ ಋತುಗಳು ಹೂವಿನ ಸ್ವರಮೇಳ.

- ಅಪ್ಪಟ ಮಳೆಗಾಲದ ತಿಂಗಳುಗಳಲ್ಲಿಯೂ ಸಹ ಹೂವುಗಳನ್ನು ಬಿಡುವ ಮರಗಳು ಬೆಂಗಳೂರಿನಲ್ಲಿದೆ. ಕಾಲೋಚಿತ ಮರಗಳ ಹೊರತಾಗಿ, ವರ್ಷಪೂರ್ತಿ ಅರಳುವ ದೀರ್ಘಕಾಲಿಕ ಮರಗಳಿವೆ, ಹೂಬಿಡುವ ಋತುವಿನಲ್ಲಿ ಸಣ್ಣ ಅಂತರವನ್ನು ತುಂಬುತ್ತದೆ. ಬೆಂಗಳೂರಿನ ಗಾಳಿ ಹೂಗಳ ಘಮಲಿನಲ್ಲಿಯೇ ಇರುತ್ತದೆ. ಆ ಕಾರಣಕ್ಕಾಗಿ ಈ ನಗರಕ್ಕೆ ಬಂದಿರುವ ಹೆಸರು ದಿ ಗಾರ್ಡನ್‌ ಸಿಟಿ.

- ಇತ್ತೀಚೆಗೆ ಬೆಂಗಳೂರಿನ ಬೀದಿಗಳು ಗುಲಾಬಿ ಟಬೆಬುಯಾ ರೋಸಿಯಾ ಹೂವುಗಳಿಂದ ಕಂಗೊಳಿಸುತ್ತಿದೆ. ಬೆಂಗಳೂರಿನ ಈ ʼಚೆರ್ರಿ ಬ್ಲಾಸಮ್‌ʼ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತಿದ್ದು, ಸಾಕಷ್ಟು ಜನರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

- ಗುಲಾಬಿ ಟಬೆಬುಯಾಸ್‌ನ ಹೊರತಾಗಿ, ಸುಂದರವಾದ ಹಳದಿ ಟಬೆಬುಯಾ ಅರ್ಜೆಂಟೀಯಾ ಕೂಡ ಇವೆ, ಇದು ನಗರದ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ಇಲ್ಲಿ ನೇರಳೆ ನೀಲಿ ಜಕರಂಡಾ ಹೂವುಗಳು ಇತರ ನಗರಗಳಿಗೆ ಹೋಲಿಸಿದರೆ ಗಾಢವಾದ ಬಣ್ಣವನ್ನು ಹೊಂದಿರುವ ಹೂಗಳಾಗಿದೆ.

- ಮಾವು, ಬೇವು, ಮಹೋಗಾನಿ, ಹೊಂಗೆ ಮರ (ಪೊಂಗಾಮಿಯಾ), ಫಾಲ್ಸ್ ಅಶೋಕ ಟ್ರೀ (ಪಾಲಿಯಾಲ್ಥಿಯಾ ಲಾಂಗಿಫೋಲಿಯಾ), ಜರುಲ್/ಪ್ರೈಡ್ ಆಫ್ ಇಂಡಿಯಾ (ಲಾಗರ್‌ಸ್ಟ್ರೋಮಿಯಾ ಸ್ಪೆಸಿಯೋಸಾ), ಅಂಬ್ರೆಲಾ ಅಥವಾ ಆಕ್ಟೋಪಸ್ ಮರ (ಷೆಫ್ಲೆರಾ ಆಕ್ಟಿನೋಫಿಲ್ಲಾ), ರೇಷ್ಮೆ ಹತ್ತಿ (ಬೊಂಬಾಕ್ಸ್ ಸೀಬಾ), ಮಳೆ ಮರ (ಅಲ್ಬಿಜಿಯಾ ಸಮನ್) ವರ್ಷದ ಮೊದಲ ಮೂರು ತಿಂಗಳುಗಳಲ್ಲಿ ನಗರದ ಅಂದ ಏರಿಸುತ್ತದೆ. ಇವುಗಳ ಹೂಬಿಡುವ ಅವಧಿಯು ಮುಕ್ತಾಯಗೊಂಡಾಗ, ಸೆಪ್ಟೆಂಬರ್‌ವರೆಗೆ ಹಳದಿ ಹೂಗಳ (ಪೆಲ್ಟೋಫೊರಮ್ ಪ್ಟೆರೋಕಾರ್ಪಮ್) ಅಲಂಕಾರ ನಗರಕ್ಕೆ ಆಗುತ್ತದೆ. ಏಪ್ರಿಲ್, ಮೇ, ಜೂನ್ ಮತ್ತು ಜುಲೈನಲ್ಲಿ ಡೆಲೋನಿಕ್ಸ್ ರೆಜಿಯಾ, ಗುಲ್ಮೊಹರ್ ಮರಗಳು ಹೂಬಿಡಲು ಆರಂಭ ಮಾಡುತ್ತದೆ. ಕೆಂಪು ಹೂವುಗಳ ಗೊಂಚಲುಗಳು ಮರಗಳಿಗೆ ಕಿರೀಟವನ್ನು ಇಡುವಂತೆ ಕಾಣುವುದು ಮಾತ್ರವಲ್ಲ ಮಾನ್ಸೂನ್ ಮಳೆಗೆ ಕೆಂಪು ಕಾರ್ಪೆಟ್ ಸ್ವಾಗತವನ್ನು ನೀಡುತ್ತವೆ.

- ಕೆಂಜಿಗೆ/ರತ್ನಗಂಧಿ (ಕೇಸಲ್ಪಿನಿಯಾ ಪುಲ್ಚೆರಿಮಾ) ಬಹುಬಣ್ಣಗಳನ್ನು ಹೂಗಳು ಜುಲೈ ತಿಂಗಳವರೆಗೆ ಅರಳುತ್ತವೆ. ಸಾಸೇಜ್ ಮರ, ಕಿಗೆಲಿಯಾ ಪಿನಾಟಾ ಈ ಸಮಯದಲ್ಲಿ ಮುಂಜಾನೆ ವೇಳೆ ನೆಲಕ್ಕೆ ಬಿದ್ದಿತುತ್ತದೆ. ಆದರೆ ಬಿಳಿ ಮತ್ತು ಆಳವಾದ ಕೆಂಪು ಪ್ಲುಮೆರಿಯಾಗಳು ಎಂದಿಗೂ ನಗರದಲ್ಲಿ ಅಳಿಯೋದಿಲ್ಲ.

- ಬೇಸಿಗೆ ಮುಗಿದ ಬಳಿಕ ಆಗಸ್ಟ್‌ನಲ್ಲಿ ಸಂಪಿಗೆ (ಮ್ಯಾಗ್ನೋಲಿಯಾ ಚಂಪಾ) ಪರಿಮಳ ಬೆಂಗಳೂರನ್ನು ಆವರಿಸುತ್ತದೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ, ಆಕಾಶ ಮಲ್ಲಿಗೆ (ಮಿಲ್ಲಿಂಗ್ಟೋನಿಯಾ ಹಾರ್ಟೆನೆಸಿಸ್) ಅರಳುವುದು ಮಾತ್ರವಲ್ಲ, ತೇವಾಂಶ ಇರುವ ಗಾಳಿಯನ್ನು ತನ್ನ ಸಿಹಿ ಪರಿಮಳದೊಂದಿಗೆ ಜನರ ಬಳಿಗೆ ಬರುತ್ತದೆ.

-ಆಫ್ರಿಕನ್ ಟುಲಿಪ್‌ನ ಕಿತ್ತಳೆ ಬಣ್ಣದ ಕಡುಗೆಂಪು ಹೂವುಗಳು, ನೀರು ಕಾಯಿ (ಸ್ಪಥೋಡಿಯಾ ಕ್ಯಾಂಪನುಲಾಟಾ), ಆಗಸ್ಟ್‌ನಲ್ಲಿ ಅರಳಲು ಪ್ರಾರಂಭಿಸುತ್ತವೆ. ಇದು ಡಿಸೆಂಬರ್‌ವರೆಗೆ ಮುಂದುವರೆಯುತ್ತವೆ.  ಬಾದಾಮಿ ಮರದ ಎಲೆಗಳು (ಟರ್ಮಿನಾಲಿಯಾ ಕ್ಯಾಟಪ್ಪಾ) ಈ ಹಂತದಲ್ಲಿ ಕೆಂಪು ಗುಲಾಬಿ ಬಣ್ಣಕ್ಕೆ ತಿರುಗುತ್ತವೆ, ನಂತರ ಹಳದಿ ಬಣ್ಣಕ್ಕೆ ತಿರುಗುತ್ತವೆ, ಶೀತ ಋತುವಿಗೆ ಇನ್ನೊಂದು ಕಳೆ ನೀಡುತ್ತದೆ

- ನಗರದ ಬಹುವಾರ್ಷಿಕ ಹೂಬಿಡುವ ಮರಗಳಲ್ಲಿ ನಾಗಲಿಂಗ ಹೂವು (ಕೌರೊಪಿಟಾ ಗಯಾನೆನ್ಸಿಸ್), ನೈಲ್ ಟುಲಿಪ್ ಮರ (ಅಲೆಯಾದ ಬೀಜಗಳೊಂದಿಗೆ ಚಿನ್ನದ ಹೂವುಗಳು), ಪೋರ್ಟಿಯಾ ಮರ ಮತ್ತು ಕಿತ್ತಳೆ ಗೀಗರ್ ಹೂವುಗಳು ಸೇರಿವೆ.

- ಈ ಮಾದರಿಯು ಮುಂದಿನ ವರ್ಷವೂ ಮುಂದುವರಿಯುತ್ತದೆ. ಇದರ ನಡುವೆ ಸಮಯದ ಪರೀಕ್ಷೆಯಲ್ಲಿ ಯಶಸ್ವಿಯಾಗಿ ನಿಂತ ಮರಗಳು ಹೂಬಿಡಲು ಆರಂಭಮಾಡುತ್ತದೆ.ಇವು ಬೆಂಗಳೂರಿನ ಅತ್ಯಂತ ಪ್ರಚಲಿತದಲ್ಲಿರುವ ಕೆಲವು ಅವೆನ್ಯೂ ಮರಗಳು. ಇಲ್ಲಿ ನಾನು ಕೆಲವು ಹೆಸರುಗಳನ್ನು ಮಿಸ್‌ ಮಾಡಿರಬಹುದು. ಆದರೆ, ಬೆಂಗಳೂರು ಹೂಗಳ ಸ್ವರ್ಗ.

 

ಆಕಾಶದಿಂದ ಕಂಡ ನಮ್ಮ ಬೆಂಗಳೂರು... ಪಿಂಕ್ ಸಿಟಿಯಾಯ್ತು ಗಾರ್ಡನ್ ಸಿಟಿ!

-ಈ ನಗರದ ಅತ್ಯುತ್ತಮ ತೋಟಗಾರಿಕಾ ತಜ್ಞರು ಬಯಸಿದ್ದು ಅದನ್ನೇ. ತೋಟಗಾರಿಕಾ ತಜ್ಞರಾದ ಕ್ಯಾಮರೂನ್, ಕೃಂಬಿಗೆಲ್, ಜವರಯ್ಯ ಮತ್ತು ಮರಿ ಗೌಡ ಅವರು ಈ ಮಹಾನಗರವನ್ನು ಪರಿಮಳಯುಕ್ತ ಮತ್ತು ವರ್ಣರಂಜಿತವಾಗಿ ವಿನ್ಯಾಸ ಮಾಡಿದ್ದರು.

ಇದು ಬೆಂಗಳೂರು ಮತ್ತು ಅದರ ಮರಗಳ ಬಗೆಗಿನ ಆಸಕ್ತಿದಾಯಕ ವಿಷಯವಾಗಿದೆ. ಬೆಂಗಳೂರು ನಗರವು ಮರಗಳು ಮತ್ತು ಕೆರೆಗಳು ಸೇರಿದಂತೆ ಪ್ರಕೃತಿಯೊಂದಿಗೆ ಬಹಳ ಗಾಢವಾದ
ಬಾಂಧವ್ಯವನ್ನು ಹೊಂದಿದೆ.

ತಮ್ಮ ಪಟ್ಟಣಗಳು ಮತ್ತು ನಗರಗಳ ಬಗೆಗಿನ ಇಂತಹ ಅಂಶಗಳನ್ನು ಪ್ರಚುರಪಡಿಸುವಂತೆ ನಾನು ಇತರರನ್ನು ಒತ್ತಾಯಿಸುತ್ತೇನೆ. https://t.co/OiM7DBR8E9

— Narendra Modi (@narendramodi)

ಶ್ರೀನಗರದ ಸೌಂದರ್ಯಕ್ಕೆ ಕಳಶವಿಟ್ಟ ಟುಲಿಪ್ ಹೂಗಳು: ಈ ಬಾರಿಗೆ ಅತೀ ಹೆಚ್ಚು ಪ್ರವಾಸಿಗರ ನಿರೀಕ್ಷೆ

-ಇದರಲ್ಲಿ ಕೆಲವರು ಇಂದಿಗೂ ನಮ್ಮ ನಗರದ ಬಗ್ಗೆ ಬೇಸರ ಇರಬಹುದು. ಇಲ್ಲಿನ ಜನರು ಹಾಗೂ ಇಲ್ಲಿನ ಟ್ರಾಫಿಕ್‌ ಬಗ್ಗೆ ಬೇಸರವಿರಬಹುದು. ಇಲ್ಲಿ ಸಿಹಿ ಸಾಂಬಾರ್‌ನ ಬಗ್ಗೆ ತಗಾದೆ ಇರಬಹುದು. ಆದರೆ, ನಿಮಗೆ ಒಂದು ಮಾತು ಹೇಳಲು ಬಯಸುತ್ತೇವೆ. ಸರ್ವಋತುವಲ್ಲೂ ನಿಮಗೆ ಕಾಣುವ ಹೂಗಳು ಬೆಂಗಳೂರನ್ನು ಪ್ರೀತಿ ಮಾಡುವಂತೆ ಮಾಡುತ್ತದೆ.

click me!