10 ತಿಂಗಳ ಶಿಕ್ಷೆಯ ಬಳಿಕ ಪಟಿಯಾಲಾ ಜೈಲಿನಿಂದ ಹೊರಬಂದ 'ಸಿಕ್ಸರ್‌ ಸಿಧು'!

Published : Apr 01, 2023, 02:49 PM IST
10 ತಿಂಗಳ ಶಿಕ್ಷೆಯ ಬಳಿಕ ಪಟಿಯಾಲಾ ಜೈಲಿನಿಂದ ಹೊರಬಂದ 'ಸಿಕ್ಸರ್‌ ಸಿಧು'!

ಸಾರಾಂಶ

ಪಂಜಾಬ್‌ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಹಾಗೂ ಮಾಜಿ ಕ್ರಿಕೆಟಿಗ ನವಜೋತ್‌ ಸಿಂಗ್‌ ಸಿಧು 10 ತಿಂಗಳ ಶಿಕ್ಷೆ ಅನುಭವಿಸಿ ಪಟಿಯಾಲಾ ಜೈಲಿನಿಂದ ಶನಿವಾರ ಬಿಡುಗಡೆಗೊಂಡಿದ್ದಾರೆ.

ನವದೆಹಲಿ (ಏ.1): ಒಂದು ವರ್ಷಗಳ ಜೈಲು ಶಿಕ್ಷೆಯಲ್ಲಿ 10 ತಿಂಗಳ ಜೈಲು ಶಿಕ್ಷೆ ಪೂರೈಸಿರುವ ಪಂಜಾಬ್‌ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಹಾಗೂ ಮಾಜಿ ಕ್ರಿಕೆಟಿಗ ನವಜೋತ್‌ ಸಿಂಗ್‌ ಸಿಧು ಶನಿವಾರ ಪಟಿಯಾಲಾ ಕೇಂದ್ರ ಕಾರಾಗೃಹದಿಂದ ಹೊರಬಂದಿದ್ದಾರೆ. ಶನಿವಾರ ಜೈಲಿನಿಂದ ಹೊರಬರುತ್ತಿರುವುದಾಗಿ ನವಜೋತ್‌ ಸಿಂಗ್‌ ಸಿಧು ಅವರ ಟ್ವಿಟರ್‌ ಹ್ಯಾಂಡಲ್‌ನಿಂದ ಟ್ವೀಟ್‌ ದಾಖಲಾಗಿತ್ತು. ಶನಿವಾರ ಹೆಚ್ಚಿನ ಸಮಯ ಜೈಲಿನ ಅಧಿಕಾರಿಗಳೊಂದಿಗೆ ಮಾತನಾಡಿದ ಬಳಿಕ, ಸಂಜೆಯ ವೇಳೆಗೆ ಜೈಲಿನಿಂದ ಹೊರಬಂದರು. ಜೈಲಿನ ಒಳಗೆ ಅಧಿಕಾರಿಗಳಿಗೆ ಸಿಧು ಥ್ಯಾಂಕ್ಸ್‌ ಕೂಡ ಹೇಳಿದ್ದಾರೆ.  ಪಂಜಾಬ್ ಕಾಂಗ್ರೆಸ್ ನ ಮಾಜಿ ಮುಖ್ಯಸ್ಥ ಶಂಶೇರ್ ಸಿಂಗ್ ಡುಲ್ಲೋ ಲಾಲ್ ಸಿಂಗ್ ಮತ್ತು ಮೊಹಿಂದರ್ ಸಿಂಗ್ ಕೆಪಿ, ಅಮೃತಸರ ಸಂಸದ ಗುರ್ಜಿತ್ ಔಜ್ಲಾ, ಮಾಜಿ ಶಾಸಕರಾದ ಹರದಯಾಳ್ ಕಾಂಬೋಜ್, ಅಶ್ವಿನಿ ಸೆಖ್ರಿ ಸಹ ಪಟಿಯಾಲ ಕೇಂದ್ರ ಕಾರಾಗೃಹದ ಹೊರಗೆ ಮುಂಜಾನೆಯಿಂದಲೇ ಕಾಯುತ್ತಿದ್ದರು. ನವಜೋತ್ ಸಿಂಗ್ ಸಿಧು ಬಿಡುಗಡೆಯ ಮಾಹಿತಿಯನ್ನು ಸಿಧು ಅವರ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ಶುಕ್ರವಾರ ನೀಡಲಾಗಿತ್ತು. ಇದರೊಂದಿಗೆ ಅವರ ಕುಟುಂಬ ಸದಸ್ಯರೂ ಇದನ್ನು ಖಚಿತಪಡಿಸಿದ್ದರು. ಮೂಲದಲ್ಲಿ ಅವರ ಮೇ 16 ರಂದು ಜೈಲಿನಿಂದ ಬಿಡುಗಡೆಯಾಗಬೇಕಿತ್ತು.  ಆದರೆ ಅವರ ಉತ್ತಮ ನಡತೆಯಿಂದಾಗಿ, ಸಿಧುಗೆ ಸುಪ್ರೀಂ ಕೋರ್ಟ್ ನೀಡಿದ ಒಂದು ವರ್ಷದ ಶಿಕ್ಷೆಯಿಂದ 45 ದಿನಗಳ ವಿನಾಯಿತಿ ನೀಡಿದೆ.

ಸ್ವಾಗತಕ್ಕಾಗಿ ಭರ್ಜರಿ ಹೋರ್ಡಿಂಗ್‌ಗಳು: ನವಜೋತ್ ಸಿಂಗ್ ಸಿಧು ಇಂದು ಪಟಿಯಾಲ ಸೆಂಟ್ರಲ್ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಸ್ವಾಗತಿಸಲು ಅವರ ಬೆಂಬಲಿಗರು ಜೈಲ್ ರಸ್ತೆಯಲ್ಲಿ ಹೋರ್ಡಿಂಗ್ಸ್ ಹಾಕಿದ್ದಾರೆ. ಈ ವೇಳೆ ನವಜೋತ್ ಸಿಧು ಬೆಂಬಲಿಗರು ಪಟಿಯಾಲ ಸೆಂಟ್ರಲ್ ಜೈಲಿನ ಮುಂದೆ ಜಮಾಯಿಸಿದ್ದಾರೆ. ಜೈಲಿನ ಹೊರಗೆ ಅಪಾರ ಸಂಖ್ಯೆಯಲ್ಲಿ ಬೆಂಬಲಿಗರು ಜಮಾಯಿಸಿದಾಗ ಮಾತ್ರವೇ ಸಿಧು ಜೈಲಿನಿಂದ ಹೊರಬರಲಿದ್ದಾರೆ ಎಂದು ಆಪ್ತರು ತಿಳಿಸಿದ್ದರು.

ನವಜೋತ್ ಸಿಧು ಅವರ ಸ್ವಾಗತದ ಸಿದ್ಧತೆಯ ಜವಾಬ್ದಾರಿಯನ್ನು ಪಟಿಯಾಲ ನಗರ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ ನರೇಂದ್ರ ಪಾಲ್ ಲಾಲಿ ನಿರ್ವಹಿಸುತ್ತಿದ್ದಾರೆ. ಸಿದ್ದು ಅವರನ್ನು ಸ್ವಾಗತಿಸಲು ಇಂದು ರಾಜ್ಯದೆಲ್ಲೆಡೆಯಿಂದ ಕಾಂಗ್ರೆಸ್‌ ಪಕ್ಷದವರು ಸೇರಿದ್ದರು. ಮತ್ತೊಂದೆಡೆ, ಸಿಧು ಅವರನ್ನು ಸ್ವಾಗತಿಸಲು ಕಾಂಗ್ರೆಸ್‌ನಲ್ಲಿ ಒಗ್ಗಟ್ಟು ಕಾಣಿಸುತ್ತಿಲ್ಲ. ಪಟಿಯಾಲ ನಗರ ಕಾಂಗ್ರೆಸ್‌ನ ಪ್ರಸ್ತುತ ಅಧ್ಯಕ್ಷ ನರೇಶ್ ದುಗ್ಗಲ್ ಮಾತನಾಡಿ, ಬಿಡುಗಡೆಯ ಸಂದರ್ಭದಲ್ಲಿ ಯಾವುದೇ ರೀತಿಯ ಸ್ವಾಗತ ಕಾರ್ಯಕ್ರಮವನ್ನು ಆಯೋಜಿಸಲು ಪಕ್ಷದಿಂದ ಯಾವುದೇ ಸೂಚನೆ ಬಂದಿಲ್ಲ ಎಂದಿದ್ದಾರೆ.

ಪಟಿಯಾಲ ಜೈಲಿನಲ್ಲಿ ನವಜೋತ್‌ ಸಿಧು ಕ್ಲರ್ಕ್, ದಲೇರ್‌ ಮೆಹಂದಿ ರೈಟರ್!

2022ರ ಮೇ 19ರಂದು, ಸುಪ್ರೀಂ ಕೋರ್ಟ್ ಸಿಧುಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿತು. ಮೇ 20ರಂದು ಸಿಧು ಪಟಿಯಾಲ ನ್ಯಾಯಾಲಯಕ್ಕೆ ಶರಣಾಗಿದ್ದರು. ಸಿಧು ಒಂದು ವರ್ಷದಲ್ಲಿ ಯಾವುದೇ ಪೆರೋಲ್ ಅಥವಾ ರಜೆ ತೆಗೆದುಕೊಂಡಿಲ್ಲ.

ಜೈಲಿನಲ್ಲಿ ಸಿಧುಗೆ ಕ್ಲರ್ಕ್ ಹುದ್ದೆ, ವೈದ್ಯರ ಸಲಹೆಯಂತೆ ಐಶಾರಾಮಿ ಆಹಾರ ಸೌಲಭ್ಯ!

ಪತ್ನಿಯಿಂದ ಮನವಿ: ನವಜೋತ್ ಕೌರ್ ಸಿಧು ತಮ್ಮ ಪತಿಯನ್ನು ಉದ್ದೇಶಿಸಿ ಟ್ವಿಟರ್‌ನಲ್ಲಿ ಭಾವನಾತ್ಮಕ ಪೋಸ್ಟ್ ಅನ್ನು ಹಂಚಿಕೊಂಡಿದ್ದುರ. ತನಗೆ 2ನೇ ಹಂತದ ಸ್ತನ ಕ್ಯಾನ್ಸರ್‌ ಇದ್ದು, ನಿಮ್ಮ ಬಿಡುಗಡೆಗಾಗಿ ದಿನವೂ ಹೊರಗೆ ಕಾಯುತ್ತಿರುವುದು ನೋವು ತಂದಿದೆ ಎಂದು ಬರೆದುಕೊಂಡಿದ್ದಾರೆ. ಎಂದಿನಂತೆ ನಾನು ನಿಮ್ಮ ನೋವನ್ನು ದೂರ ಮಾಡಲು ಪ್ರಯತ್ನಿಸುತ್ತಿದ್ದೇನೆ.  ಸತ್ಯವು ತುಂಬಾ ಶಕ್ತಿಯುತವಾಗಿದೆ, ಆದರೆ ಪರೀಕ್ಷೆಯು ಪುನರಾವರ್ತನೆಯಾಗುತ್ತದೆ ಎಂದು ಅವರು ಹೇಳಿದ್ದರು. ಕ್ಷಮಿಸಿ, ಈಗ ನಿಮಗಾಗಿ ಕಾಯಲು ಸಾಧ್ಯವಿಲ್ಲ. ಇದಕ್ಕೆ ಯಾರನ್ನೂ ದೂಷಿಸಲಾಗುವುದಿಲ್ಲ, ಏಕೆಂದರೆ ಇದು ದೇವರ ಚಿತ್ತವಾಗಿದೆ. ನವಜೋತ್ ಸಿಂಗ್ ಸಿಧು ಅವರ ಪತ್ನಿ ನವಜೋತ್ ಕೌರ್ ಅವರು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದು, ಪತಿಯನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಕ್ರಮ ಸಂಬಂಧದ ಹಾದಿ ಹಿಡಿದ ಅಮ್ಮ: ಆಕೆಯ ಇಬ್ಬರು ಪುಟ್ಟ ಮಕ್ಕಳ ಮೋರಿಗೆಸೆದ ಪ್ರಿಯಕರ
19ರ ತರುಣನ ಜೊತೆ ಮಗಳ ಮದುವೆಗೆ ನಿರಾಕರಿಸಿದ ಪ್ರೇಯಸಿ ಮನೆಯವರು: ಕರೆಂಟ್ ಟವರ್ ಏರಿ ಪ್ರಿಯಕರನ ಹೈಡ್ರಾಮಾ