ದೇಶದಲ್ಲಿ 5ಜಿ ದೂರಸಂಪರ್ಕ ಸೇವೆಗೆ ಅಧಿಕೃತವಾಗಿ ಚಾಲನೆ ನೀಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲೇ ಕುಳಿತು 5ಜಿ ಸಹಾಯದಿಂದ ಐರೋಪ್ಯ ದೇಶ ಸ್ವೀಡನ್‌ನಲ್ಲಿದ್ದ ಕಾರೊಂದನ್ನು ಚಾಲನೆ ಮಾಡಿ ಗಮನ ಸೆಳೆದರು. ಈ ಮೂಲಕ ತಂತ್ರಜ್ಞಾನ ಎಷ್ಟುಬೆಳೆದಿದೆ ಎಂಬುದಕ್ಕೆ ಇದು ಸಾಕ್ಷಿಯಾಯಿತು.
ನವದೆಹಲಿ: ದೇಶದಲ್ಲಿ 5ಜಿ ದೂರಸಂಪರ್ಕ ಸೇವೆಗೆ ಅಧಿಕೃತವಾಗಿ ಚಾಲನೆ ನೀಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲೇ ಕುಳಿತು 5ಜಿ ಸಹಾಯದಿಂದ ಐರೋಪ್ಯ ದೇಶ ಸ್ವೀಡನ್‌ನಲ್ಲಿದ್ದ ಕಾರೊಂದನ್ನು ಚಾಲನೆ ಮಾಡಿ ಗಮನ ಸೆಳೆದರು. ಈ ಮೂಲಕ ತಂತ್ರಜ್ಞಾನ ಎಷ್ಟುಬೆಳೆದಿದೆ ಎಂಬುದಕ್ಕೆ ಇದು ಸಾಕ್ಷಿಯಾಯಿತು.
ದೆಹಲಿಯ (New delhi) ಪ್ರಗತಿ ಮೈದಾನದಲ್ಲಿ (Pragati ground) ಆಯೋಜನೆಯಾಗಿರುವ ಇಂಡಿಯಾ ಮೊಬೈಲ್ ಕಾಂಗ್ರೆಸ್‌ನಲ್ಲಿ(INdia mobile congress) ‘ಎರಿಕ್ಸನ್’ ಕಂಪನಿ ತನ್ನ ಮಳಿಗೆ ತೆರೆದಿತ್ತು. ಆ ಮಳಿಗೆಗೆ ತೆರಳಿದ ಮೋದಿ ಅವರು ಸ್ವೀಡನ್‌ನಲ್ಲಿ(Sweden) ನಿಂತಿದ್ದ ಕಾರನ್ನು ದೆಹಲಿಯಿಂದಲೇ ಓಡಿಸಿದರು.
WATCH | Prime Minister tries his hands on virtual wheels at the exhibition put up at Pragati Maidan before the launch of 5G services in the country. pic.twitter.com/zpbHW9OiOU
— Prasar Bharati News Services & Digital Platform (@PBNS_India)ಕಾರಿನ ನಿಯಂತ್ರಣ ಘಟಕವನ್ನು 5ಜಿ ಸಹಾಯದಿಂದ ದೆಹಲಿಯಲ್ಲೇ (New delhi) ನಿರ್ವಹಿಸಲು ಅವಕಾಶ ಕಲ್ಪಿಸಲಾಗಿತ್ತು. ಇದು ರಿಮೋಟ್ ಆಧರಿತವಾಗಿದ್ದು, ದೂರದಿಂದಲೇ ಕುಳಿತು ಕಾರನ್ನು ಚಲಾಯಿಸಬಹುದು. ಕಾರು ಚಾಲನೆ ಮಾಡುವಾಗ ಸಿಮ್ಯುಲೇಟರ್ ರೀತಿಯ ಸ್ಕ್ರೀನ್ ಚಾಲಕನ ಮುಂದೆ ಇರುತ್ತದೆ. ಅದನ್ನು ನೋಡಿ ಕಾರು ಚಲಾಯಿಸಬಹುದು.
5G services in 🇮🇳 launched by PM Ji. pic.twitter.com/OIQuOe1efl
— Ashwini Vaishnaw (@AshwiniVaishnaw)ಇದೇ ವೇಳೆ, ರಿಲಯನ್ಸ್ ಮಳಿಗೆಗೆ ಮೋದಿ ಅವರು ಭೇಟಿ ನೀಡಿದಾಗ ಉದ್ಯಮಿ ಮುಕೇಶ್ ಅಂಬಾನಿ(Mukesh Ambani) ಅವರ ಪುತ್ರ ಆಕಾಶ್ ಅಂಬಾನಿ (Akash Ambani) ವಿವಿಧ ಸೇವೆಗಳನ್ನು ಮೋದಿ ಅವರಿಗೆ ಪರಿಚಯಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ ಬಹುನಿರೀಕ್ಷಿತ 5ಜಿ ಸೇವೆಗೆ ಚಾಲನೆ ನೀಡಿದರು. ಅದರೊಂದಿಗೆ ದೇಶದಲ್ಲಿ ಹೈಸ್ಪೀಡ್ ಇಂಟರ್ನೆಟ್ ದುನಿಯಾ ಆರಂಭವಾಗಿದೆ. 4ಜಿ ಸೇವೆಯಲ್ಲಿ 50 ಎಂಬಿಪಿಎಸ್ ಕನಿಷ್ಠ ವೇಗವಾಗಿದ್ದರೆ, 5ಜಿ ಸೇವೆಯಲ್ಲಿ ಇಂಟರ್‌ನೆಟ್‌ನ ವೇಗ ಕನಿಷ್ಠ 1 ಜಿಬಿ ಇರಲಿದೆ. ದೇಶದ ಅಗ್ರ ಟೆಲಿಕಾಂ ಸೇವಾ ಸಂಸ್ಥೆಗಳಾಗಿರುವ ಏರ್‌ಟೆಲ್ ವಾರಣಾಸಿಯಿಂದ ಈ ಸೇವೆಯನ್ನು ಆರಂಭ ಮಾಡಲಿದ್ದರೆ, ಜಿಯೋ ಸಂಸ್ಥೆಯು ಅಹಮದಾಬಾದ್‌ನ ಹಳ್ಳಿಯಿಂದ 5ಜಿ ಸೇವೆಯನ್ನು ಆರಂಭ ಮಾಡಲಿದೆ. ಈ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನವದೆಹಲಿಯ ಪ್ರಗತಿ ಮೈದಾನದಲ್ಲಿ 5ಜಿಯನ್ನು ದೇಶಕ್ಕೆ ಅರ್ಪಣೆ ಮಾಡಿದರು. ಇಂದಿನಿಂದ ನಾಲ್ಕು ದಿನಗಳ ಕಾಲ 6ನೇ ಅವೃತ್ತಿಯ ಇಂಡಿಯಾ ಮೊಬೈಲ್ ಕಾಂಗ್ರೆಸ್, ಪ್ರಗತಿ ಮೈದಾನದಲ್ಲಿ ಆರಂಭವಾಗಲಿದೆ. 5ಜಿ ಅನಾವರಣ ಮಾಡುವುದರೊಂದಿಗೆ ಪ್ರಧಾನಿ ಟೆಲಿಕಾಂ ಉದ್ಯಮದ ಪ್ರಮುಖ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ದೇಶದ ಪ್ರಮುಖ ಉದ್ಯಮಿಗಳಾದ ಮುಖೇಶ್ ಅಂಬಾನಿ, ಅವರ ಪುತ್ರ ಹಾಗೂ ಜಿಯೋ ಚೇರ್ಮನ್ ಆಕಾಶ್ ಅಂಬಾನಿ, ಕುಮಾರ ಮಂಗಲಂ ಬಿರ್ಲಾ ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.
5G Launch In India: ಮೊದಲ ಹಂತದಲ್ಲಿ 13 ನಗರಗಳಲ್ಲಿ 5ಜಿ ಸೇವೆ, ಲಿಸ್ಟ್‌ನಲ್ಲಿದ್ಯಾ ಬೆಂಗಳೂರು?
ಲೈವ್ ಡೆಮೊ ನೀಡಿದ ಜಿಯೋ, ವೊಡಾಫೋನ್ ಮತ್ತು ಏರ್‌ಟೆಲ್: ಭಾರತದಲ್ಲಿ 5G ತಂತ್ರಜ್ಞಾನದ ಸಾಮರ್ಥ್ಯವನ್ನು ಪ್ರದರ್ಶಿಸಲು, ದೇಶದ ಮೂರು ಪ್ರಮುಖ ಟೆಲಿಕಾಂ ಆಪರೇಟರ್‌ಗಳು ಪ್ರಧಾನ ಮಂತ್ರಿಗೆ ತಮ್ಮ 5ಜಿ ಸೇವೆಯನ್ನು ಪ್ರದರ್ಶಿಸಲಿದ್ದಾರೆ. ಅದೇ ಸಮಯದಲ್ಲಿ, ವಿಆರ್ (VR) ಮತ್ತು ಕೃತಕ ಬುದ್ಧಿಮತ್ತೆಯನ್ನು (AI) ಬಳಸಿಕೊಂಡು ನೈಜ ಸಮಯದಲ್ಲಿ ಕೆಲಸವನ್ನು ಮೇಲ್ವಿಚಾರಣೆ ಮಾಡಲು ಪಿಎಂ ಮೋದಿ ಡಿಯಾಸ್‌ನಿಂದ ಲೈವ್ ಡೆಮೊ ತೆಗೆದುಕೊಂಡಿದ್ದಾರೆ. ಡ್ರೋನ್ ಆಧಾರಿತ ಕೃಷಿ, ಸ್ವಯಂಚಾಲಿತ ಮಾರ್ಗದರ್ಶಿ ವಾಹನಗಳು, ಸ್ಮಾರ್ಟ್ ಆಂಬ್ಯುಲೆನ್ಸ್‌ಗಳು, ಸ್ಮಾರ್ಟ್-ಅಗ್ರಿ ಕಾರ್ಯಕ್ರಮಗಳು ಮತ್ತು ಆರೋಗ್ಯ ರೋಗನಿರ್ಣಯದಂತಹ ವಿಷಯಗಳನ್ನು ಸಹ ಪ್ರಧಾನಿ ಮುಂದೆ ಪ್ರದರ್ಶಿಸಲಾಗಿದೆ.
5G Launch In India: ಹಳೆಯದಾಯ್ತು 4ಜಿ, ಇನ್ನು 5ಜಿ ಯುಗ..!