ನಮೀಬಿಯಾದಿಂದ ಭಾರತಕ್ಕೆ ಬಂದ ಚೀತಾ ‘ಆಶಾ’ ಗರ್ಭಿಣಿ

By Kannadaprabha News  |  First Published Oct 2, 2022, 2:00 AM IST

ಗರ್ಭಧಾರಣೆ ಖಚಿತಪಟ್ಟು ಮರಿ ಜನಿಸಿದರೆ ಇದು ಅದರ ಮೊದಲ ಮರಿಯಾಗಲಿದೆ


ಭೋಪಾಲ್‌(ಅ.02): ನಮೀಬಿಯಾದಿಂದ ಭಾರತಕ್ಕೆ ತರಲಾಗಿದ್ದ ಚೀತಾಗಳ ಪೈಕಿ ‘ಆಶಾ’ ಎಂಬ ಚೀತಾ ಗರ್ಭಿಣಿ ಎಂಬ ಸುದ್ದಿ ಹೊರಬಿದ್ದಿದೆ.

‘ಭಾರತದಲ್ಲಿ ನಶಿಸಿಹೋಗಿದ್ದ ಚೀತಾ ಸಂತತಿಗೆ ಮರು ಜೀವ ನೀಡುವ ಸಲುವಾಗಿ ಚೀತಾ ಪ್ರಾಜೆಕ್ಟ್ ಆರಂಭಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನಮೀಬಿಯಾದಿಂದ 8 ಚೀತಾಗಳನ್ನು ಮಧ್ಯಪ್ರದೇಶದ ಕುನೋ ಅರಣ್ಯಕ್ಕೆ ತಂದು ಬಿಡಲಾಗಿತ್ತು. ಇವುಗಳ ಪೈಕಿ ಆಶಾ ಎಂಬ ಚೀತಾ ಗರ್ಭಿಣಿಯಾಗಿರುವ ಲಕ್ಷಣಗಳು ಕಂಡುಬಂದಿವೆ. ಇದಕ್ಕಾಗಿ ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

Tap to resize

Latest Videos

ಭಾರತಕ್ಕೆ ಬಂದಿಳಿದ ಆಫ್ರಿಕನ್ ಚೀತಾಗೆ ಯಾಕಿಷ್ಟು ಮಹತ್ವ: ವನ್ಯಜೀವಿ ತಜ್ಞರ ಮಾತು ಕೇಳಿ

‘ಗರ್ಭಧಾರಣೆ ಖಚಿತಪಟ್ಟು ಮರಿ ಜನಿಸಿದರೆ ಇದು ಅದರ ಮೊದಲ ಮರಿಯಾಗಲಿದೆ. ಈ ಚೀತಾವನ್ನು ಕಾಡಿನಲ್ಲಿ ಸೆರೆ ಹಿಡಿಯಲಾಗಿತ್ತು. ಹಾಗಾಗಿ ಅದು ನಮೀಬಿಯಾದಲ್ಲೇ ಗರ್ಭಿಣಿಯಾಗಿರಬಹುದು. ಅದು ಮರಿ ಹಾಕಿದ ಬಳಿಕ ಅವುಗಳಿಗೆ ಅಗತ್ಯವಾದ ಏಕಾಂತತೆಯನ್ನು ನಾವು ನೀಡಬೇಕಾಗುತ್ತದೆ’ ಎಂದು ಚೀತಾ ಕನ್ಸರ್ವೇಶನ್‌ ಫಂಡ್‌ (ಸಿಸಿಎಫ್‌)ನ ನಿರ್ದೇಶಕ ಲೌರಿ ಮಾರ್ಕರ್‌ ಹೇಳಿದ್ದಾರೆ. ಅರಣ್ಯ ಬಿಟ್ಟ ಬಳಿಕ ಚೀತಾ ತನ್ನ ಕಿನೋದಲ್ಲಿ ಮನೆಯನ್ನು ಗುರುತಿಸಿಕೊಂಡಿದ್ದು, ಆರಾಮವಾಗಿ ಓಡಾಡಿಕೊಂಡಿದೆ.
 

click me!