* ಅರ್ಚಕನ ಅಶ್ಲೀಲ ಮಾತಿನಾಟ
* ಅರ್ಚಕನ ಮಾತಿಗೆ ಬೆಸತ್ತು ದೂರು ಕೊಟ್ಟ ಅರ್ವತ್ತಕ್ಕೂ ಹೆಚ್ಚು ಮಹಿಳೆಯರು
* ದೂರಿನ ಬೆನ್ನಲ್ಲೇ ಅರ್ಚಕನ ಬಂಧನ
ಲಕ್ನೋ(ಡಿ.07): ಸೋಮವಾರ, ಮಹಿಳಾ ಪವರ್ ಲೈನ್-1090 ರ ತಂಡವು ಫೋನ್‌ನಲ್ಲಿ ಮಹಿಳೆಯರೊಂದಿಗೆ ಅಶ್ಲೀಲವಾಗಿ ಮಾತನಾಡುತ್ತಿದ್ದ ವಿಚಾರವಾಗಿ ಆರೋಪಿ ಅರ್ಚಕ ದೇವೇಂದ್ರ ಕುಮಾರ್ (ಪೂರ್ವ ದೇವೇಂದ್ರ ಕುಮಾರ್) ನನ್ನು ಜಿಲ್ಲಾ ರಾಯ್‌ಬರೇಲಿ ಪೊಲೀಸರಿಂದ ಬಂಧಿಸಿದ್ದಾರೆ. ಲಕ್ನೋದ ಈ ತಂಡವು ರಾಯ್ ಬರೇಲಿಗೆ ಹೋಗಿ ಆರೋಪಿಯನ್ನು ಬಂಧಿಸಿ ನಂತರ ಭಡೋಖರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದೆ ಎಂಬುವುದು ಉಲ್ಲೇಖನೀಯ. ಆರೋಪಿಯಿಂದ ಮೊಬೈಲ್‌ನಲ್ಲಿದ್ದ ಎರಡು ಸಿಮ್‌ಗಳು ಮತ್ತು ನಕಲಿ ಐಡಿಯನ್ನೂ ವಶಪಡಿಸಿಕೊಳ್ಳಲಾಗಿದೆ.
ಅರ್ಚಕರ ವಿರುದ್ಧ ಸಹಾಯವಾಣಿಯಲ್ಲಿ 60ಕ್ಕೂ ಹೆಚ್ಚು ದೂರುಗಳು ದಾಖಲು
undefined
ಆರೋಪಿ ಅರ್ಚಕ ದೇವೇಂದ್ರ ಕುಮಾರ್‌ನನ್ನು ಬಂಧಿಸಲು ಮಹಿಳಾ ಪವರ್ ಲೈನ್‌ನ ತಂಡವು ಸಾಕಷ್ಟು ಹರಸಾಹಸ ಪಡಬೇಕಾಯಿತು ಎಂಬುವುದು ಉಲ್ಲೇಖನೀಯ. ತಂಡದ ಪ್ರಕಾರ, ಲಕ್ನೋ, ರಾಯ್ ಬರೇಲಿ, ಉನ್ನಾವ್, ಕನೌಜ್, ಶಹಜಾನ್‌ಪುರ, ಜೌನ್‌ಪುರ ಸೇರಿದಂತೆ ಹಲವು ಜಿಲ್ಲೆಗಳ ಮಹಿಳೆಯರು ಆರೋಪಿ ದೇವೇಂದ್ರ ವಿರುದ್ಧ ಇಂತಹ ದೂರುಗಳನ್ನು ನೀಡಿದ್ದಾರೆ. ಇದರೊಂದಿಗೆ, 1090 ಸಹಾಯವಾಣಿಗೆ ಇದುವರೆಗೆ 60 ಕ್ಕೂ ಹೆಚ್ಚು ಮಹಿಳೆಯರು ದೂರು ನೀಡಿದ್ದರು. ಇದಾದ ನಂತರವೇ ಡಿಐಜಿ ಮಹಿಳಾ ಪವರ್‌ಲೈನ್ ಕಟ್ಟುನಿಟ್ಟಿನ ಕ್ರಮಕ್ಕೆ ತಂಡ ರಚಿಸಿದ್ದರು. ರಚಿಸಿದ ತಂಡದ ನೆರವಿನೊಂದಿಗೆ ಆರೋಪಿ ಅರ್ಚಕನನ್ನು ಸೋಮವಾರ ಬಂಧಿಸಲಾಯಿತು.
1090 ರಿಂದ ಮೊದಲ;ೇ ಅರ್ತೈಸಲು ಯತ್ನಿಸಲಾಗಿತ್ತು, ಆದರೆ ಅರ್ಚನಿಗೆ ಬುದ್ಧಿಯೇ ಬರಲಿಲ್ಲ
ಮಹಿಳಾ ಪವರ್ ಲೈನ್‌ನ ಡಿಐಜಿ ರವಿಶಂಕರ ಛಾವಿ ಮಾತನಾಡಿ, ಹಲವು ದಿನಗಳಿಂದ ಕೆಲವು ಮಹಿಳೆಯರು ಎರಡು ಮೊಬೈಲ್ ಸಂಖ್ಯೆಗಳಿಂದ ಕರೆ ಮಾಡಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದ್ದಾರೆ. ಕರೆ ಮಾಡಿದ ಬಳಿಕ ಮಹಿಳೆಯರ ಜೊತೆ ಅಶ್ಲೀಲವಾಗಿ ಮಾತನಾಡುತ್ತಿದ್ದು, ವಿರೋಧಿಸಿದರೆ ಅವನು ಬೆದರಿಕೆ ಹಾಕಲು ಪ್ರಾರಂಭಿಸುತ್ತಿದ್ದ. ಮಹಿಳಾ ಪವರ್ ಲೈನ್ ತಂಡವು ಆರೋಪಿಗೆ ಹೀಗೆ ಮಾಡದಂತೆ ಎಚ್ಚರಿಕೆ ನೀಡಿದೆ ಆದರೆ ಅರ್ಚಕ ಮಾತ್ರ ತನ್ನ ಚಟುವಟಿಕೆಗಳನ್ನು ನಿಲ್ಲಿಸಲಿಲ್ಲ. ದೂರುಗಳ ಸಂಖ್ಯೆ 60 ದಾಟಿದಾಗ ಆರೋಪಿಗೆ ತಕ್ಕ ಪಾಠ ಕಲಿಸಲು 1090 ತಂಡ ರಚಿಸಿತ್ತು. ಡಿಐಜಿ ತನಿಖೆಯಲ್ಲಿ ಇನ್ಸ್‌ಪೆಕ್ಟರ್ ಅಜಯ್ ಪಾಲ್ ಸಿಂಗ್ ಅವರನ್ನು ಸೇರಿಸಿದ್ದಾರೆ.
ಸಾಮಾನ್ಯ ವ್ಯಕ್ತಿಯಾಗಿ ರಾಯ್ ಬರೇಲಿ ತಲುಪಿದ ತಂಡ
ತಹಶೀಲ್ದಾರರು ಎರಡೂ ನಂಬರ್‌ಗಳನ್ನು ಪರಿಶೀಲಿಸಿದಾಗ, ಈ ಸಂಖ್ಯೆಗಳನ್ನು ನಕಲಿ ಐಡಿಯಲ್ಲಿ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಎರಡೂ ಸಿಮ್‌ಗಳನ್ನು ಒಂದೇ ಮೊಬೈಲ್‌ನಲ್ಲಿ ಬಳಸಲಾಗುತ್ತಿತ್ತು. ರಾಯ್ ಬರೇಲಿಯ ಭಡೋಖರ್ ಪ್ರದೇಶದಲ್ಲಿ ಎರಡೂ ಸಂಖ್ಯೆಗಳ ಲೊಕೇಷನ್ ಪತ್ತೆಯಾಗಿದೆ. ಇದಾದ ಬಳಿಕ ತಂಡವು ಸಾಮಾನ್ಯ ಪ್ರಜೆಯಾಗಿ ಭಡೋಖರ್ ತಲುಪಿತು. ಕಲ್ಯಾಣಪುರ ರ್ಯಾಲಿ ಗ್ರಾಮದಲ್ಲಿ ವಾಸವಾಗಿರುವ ಅರ್ಚಕ ದೇವೇಂದ್ರಕುಮಾರ್ ಈ ಕೃತ್ಯ ಎಸಗುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ತಂಡವು ಭಡೋಖರ್ ಪೊಲೀಸ್ ಠಾಣೆಯಲ್ಲಿ ವರದಿ ನೀಡಿದೆ. ಇದಾದ ಬಳಿಕವಷ್ಟೇ ಆರೋಪಿಯನ್ನು ಬಂಧಿಸಲಾಗಿದೆ. ಭಡೋಖರ್ ಪೊಲೀಸ್ ಠಾಣೆಯಲ್ಲಿಯೇ ದೇವೇಂದ್ರ ಕುಮಾರ್ ವಿರುದ್ಧ ಕಿರುಕುಳ, ಅಶ್ಲೀಲ ಮಾತು, ನಕಲಿ ದಾಖಲೆಗಳಿಂದ ಸಿಮ್ ತೆಗೆದುಕೊಂಡು ಬೆದರಿಕೆ ಹಾಕಿದ್ದಕ್ಕಾಗಿ ಎಫ್‌ಐಆರ್ ದಾಖಲಾಗಿದೆ. ದೇವೇಂದ್ರ ಒಬ್ಬ ಅರ್ಚಕನಾಗಿದ್ದು, ಮನೆಗಳಲ್ಲಿ ಪೂಜೆ ಸಲ್ಲಿಸುವ ಹಾಗೂ ಇತರೆ ಕಾರ್ಯಕ್ರಮಗಳನ್ನು ಮಾಡುತ್ತಾನೆ ಎಂದು ಡಿಐಜಿ ತಿಳಿಸಿದ್ದಾರೆ.
ಹೆಚ್ಚಿನ ದೂರುಗಳು ಲಕ್ನೋದಲ್ಲಿ ದಾಖಲು
ಆರೋಪಿ ದೇವೇಂದ್ರಕುಮಾರ್ ವಿರುದ್ಧ 23 ಜಿಲ್ಲೆಗಳ 60ಕ್ಕೂ ಹೆಚ್ಚು ಮಹಿಳೆಯರು ದೂರು ದಾಖಲಿಸಿದ್ದಾರೆ ಎಂದು ಡಿಐಜಿ ರವಿಶಂಕರ್ ತಿಳಿಸಿದ್ದಾರೆ. ಲಕ್ನೋದಲ್ಲಿ ಗರಿಷ್ಠ 10 ದೂರುಗಳು ದಾಖಲಾಗಿವೆ. ಇದಲ್ಲದೆ, ಕಾನ್ಪುರ ನಗರದಿಂದ ಏಳು, ಪ್ರಯಾಗರಾಜ್‌ನಿಂದ ಎಂಟು, ವಾರಣಾಸಿಯಿಂದ ಐದು, ಬಾರಾಬಂಕಿಯಿಂದ 4, ಲಖಿಂಪುರ ಖೇರಿ ಮತ್ತು ಫತೇಪುರ್‌ನಿಂದ ತಲಾ ಮೂರು, ಬಲ್ಲಿಯಾ, ಉನ್ನಾವ್, ಜೌನ್‌ಪುರ್ ಮತ್ತು ಕನೌಜ್, ಬಸ್ತಿ, ಘಾಜಿಯಾಬಾದ್, ಶ್ರಾವಸ್ತಿ, ಅಜಂಗಢ, ಹಮೀರ್‌ಪುರದಿಂದ ತಲಾ ಇಬ್ಬರು. ಡಿಯೋರಿಯಾ, ರಾಯ್ ಬರೇಲಿ, ಕಾನ್ಪುರ್ ದೇಹತ್, ಸೀತಾಪುರ್, ಗೊಂಡಾ, ಹರ್ದೋಯ್ ಮತ್ತು ಗೋರಖ್‌ಪುರದಿಂದ ತಲಾ ಒಂದು ದೂರು ದಾಖಲಾಗಿದೆ.