ಗೋರಖ್‌ಪುರ(ಡಿ.7): ಮದುವೆ ಮನೆಗೆ ನುಗ್ಗಿದ ಹುಚ್ಚು ಪ್ರೇಮಿಯೊಬ್ಬ ವರ ವೇದಿಕೆಯಲ್ಲಿದ್ದಾಗಲೇ ವಧುವಿನ ಹಣೆಗೆ ಸಿಂಧೂರವಿಟ್ಟ ವಿಚಿತ್ರ ಘಟನೆ ಉತ್ತರಪ್ರದೇಶ(Uttar Pradesh)ದ ಗೋರಖ್‌ಪುರ(Gorakhpur)ದಲ್ಲಿ ನಡೆದಿದೆ. ಇನ್ನೇನು ವರ ವಧುವಿನ ಕುತ್ತಿಗೆಗೆ ಹೂವಿನ ಹಾರ ಹಾಕಲು ಹೊರಟಿದ್ದ, ಅಷ್ಟರಲ್ಲಿ ಎಲ್ಲಿಂದಲೋ ಬಂದ ವ್ಯಕ್ತಿಯೊಬ್ಬ ವಧುವಿನ ಹಣೆಗೆ ಕುಂಕುಮ(ಸಿಂಧೂರ)ವಿಟ್ಟು ಆಕೆಯ ತಲೆ ಮೇಲೆಲ್ಲಾ ಕುಂಕುಮವನ್ನು ಹಾಕಿದ್ದಾನೆ. (ಉತ್ತರ ಭಾರತದ ಕಡೆ ಗಂಡು ಹೆಣ್ಣಿಗೆ ಸಿಂಧೂರವಿಟ್ಟರೆ ಮದುವೆಯಾದಂತೆ, ನಮ್ಮಲ್ಲಿ ಮದುವೆಗೆ ತಾಳಿ ಎಷ್ಟು ಮುಖ್ಯವೋ ಉತ್ತರಭಾರತದಲ್ಲಿ ಸಿಂಧೂರವೂ).
ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ವಧು-ವರರು ತಮ್ಮ ಕುಟುಂಬದ ಸದಸ್ಯರೊಂದಿಗೆ ವೇದಿಕೆ ಮೇಲಿದ್ದು, ಇನ್ನೇನು ಪರಸ್ಪರರ ಕೊರಳಿಗೆ ಹಾರ ಹಾಕಲು ಮುಂದಾಗಿದ್ದರು. ಅಷ್ಟರಲ್ಲಿ ಎಲ್ಲಿಂದಲೋ ಬಂದ ಮುಸುಕುಧಾರಿಯೊಬ್ಬ ವಧುವಿಗೆ ಸಿಂಧೂರವಿಟ್ಟು ಮದುವೆಯ ಸಂಭ್ರಮವನ್ನೇ ಹಾಳು ಮಾಡಿದ್ದಾನೆ. ವಧು ಈ ವೇಳೆ ಸಾಲಿನಿಂದ ಮುಖವನ್ನು ಮುಚ್ಚಿಕೊಂಡಿದ್ದಾಳೆ. ಆದರೂ ಒತ್ತಾಯಪೂರ್ವಕವಾಗಿ ವಧುವಿನ ಹಣೆಗೆ ಸಿಂಧೂರವಿಟ್ಟ ಈತ, ಬಳಿಕ ಡಬ್ಬಿಯಲ್ಲಿದ್ದ ಕುಂಕುಮವನ್ನೆಲ್ಲಾ ತೆಗೆದು ವಧುವಿನ ತಲೆ ಮೇಲೆ ಸುರಿದಿದ್ದಾನೆ. ಇದರಿಂದ ಗಾಬರಿಯಾದ ಎರಡು ಕುಟುಂಬದ ಸದಸ್ಯರು ಈ ಭಗ್ನಪ್ರೇಮಿಯನ್ನು ಹಿಡಿದು ಸರಿಯಾಗಿ ಬಾರಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿರುವ ಬಗ್ಗೆ ವರದಿಯಾಗಿಲ್ಲ.
ಪರಸ್ಪರ ಮದುವೆಯಾದ್ರು ಯುವಕರು: ಗೆಳೆಯನನ್ನೇ ವರಿಸಿದ ಗಂಡು!
ಕೆಲ ಮೂಲಗಳ ಪ್ರಕಾರ ಕೃತ್ಯವೆಸಗಿದ್ದ ಯುವಕನು ಯುವತಿಯ ಮಾಜಿ ಪ್ರೇಮಿ ಎಂದು ಹೇಳಲಾಗುತ್ತಿದ್ದು, ಈತ ಕೆಲವು ತಿಂಗಳ ಹಿಂದೆ ತಾನಿರುವ ಊರು ಬಿಟ್ಟು ಬೇರೆಡೆ ಕೆಲಸಕ್ಕಾಗಿ ಹೊರಟು ಹೋಗಿದ್ದ ಈ ಸಂದರ್ಭದಲ್ಲಿ ಯುವತಿಗೆ ಬೇರೊಬ್ಬರೊಂದಿಗೆ ಮದುವೆ ನಿಶ್ಚಯಗೊಂಡಿದೆ. ಇದನ್ನು ತಿಳಿದು ಮರಳಿ ಊರಿಗೆ ಬಂದ ಪ್ರೇಮಿ ತನ್ನ ಪ್ರಿಯತಮೆಯನ್ನು ಸಿನಿಮಾ ಶೈಲಿಯಲ್ಲಿ ಮದುವೆಯಾಗಲು ನಿರ್ಧರಿಸಿದ್ದಾನೆ. ಡಿಸೆಂಬರ್ ಒಂದರಂದು ಈ ಘಟನೆ ನಡೆದಿದ್ದು, ಘಟನೆಯ ದೃಶ್ಯಾವಳಿಗಳು ಸೋಶಿಯಲ್ ಮೀಡಿಯಾ(Social Media)ದಲ್ಲಿ ವೈರಲ್ ಆಗಿದೆ.
ಇತ್ತೀಚೆಗೆ ರಾಜ್ಯದ ಹಾಸನ(Hassan)ದಲ್ಲೂ ಒಂದು ವಿಚಿತ್ರ ಘಟನೆ ನಡೆದಿತ್ತು. ಮದುವೆಗೆ ಇನ್ನೇನು ನಾಲ್ಕು ದಿನವಿರುವಾದ ವಿಷಯ ತಿಳಿದು ಯುವತಿ ಮನೆಗೆ ತಾಳಿಯೊಂದಿಗೆ ಬಂದ ಯುವತಿಯ ಬಾಯ್‌ಫ್ರೆಂಡ್ ಆಕೆಗೆ ತಾಳಿ ಕಟ್ಟಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
ಹಿಂದೂ ಸಂಪ್ರದಾಯದಲ್ಲಿ ತುಳಸಿ ಹಬ್ಬದ ಬಳಿಕ ಮದುವೆ ಸಮಾರಂಭಗಳು ಆರಂಭವಾಗುತ್ತವೆ. ಪ್ರಸ್ತುತ ಭಾರತದಲ್ಲಿ ಇದು ಮದುವೆ ನಡೆಯುವ ಸಮಯವಾಗಿದ್ದು, ಕೆಲವು ಮದುವೆಗಳಲ್ಲಿ ಬಾಲಿವುಡ್ ಸಿನಿಮಾವನ್ನು ಮೀರಿಸುವಂತಹ ಘಟನೆಗಳು ನಡೆಯುತ್ತಿವೆ. ಮುಹೂರ್ತಗಳು ಪ್ರಶಸ್ತವಾಗಿರುವ ಡಿಸೆಂಬರ್‌ನಲ್ಲೇ ಒಮಿಕ್ರಾನ್(Omicron) ವೈರಸ್ ರಾಜ್ಯಕ್ಕೆ ಕಾಲಿಟ್ಟಿದ್ದರಿಂದ ಮದುವೆ ನಿಶ್ಚಯವಾಗಿದ್ದ ನವ ಜೋಡಿಗಳಲ್ಲಿ ಮತ್ತೆ ಆತಂಕ ಶುರುವಾಗಿದೆ. ಮುಂದಿನ ತಿಂಗಳಿಂದ ವಿವಾಹ ಮುಹೂರ್ತ ಕಡಿಮೆ ಇರುವುದರಿಂದ ಎಲ್ಲೆಡೆ ಮದುವೆ ಗಡಿಬಿಡಿ ಹೆಚ್ಚಾಗಿದೆ.
ಅಪ್ಪಂದಿರನ್ನು ಮದುವೆಯಾಗುವ ಹೆಣ್ಣು ಮಕ್ಕಳು: ಹೀಗೊಂದು ಸಂಪ್ರದಾಯ!
ಕಳೆದ ವರ್ಷವೂ ಕೊರೊನಾ ಎರಡನೇ ಅಲೆಯಿಂದ ಮದುವೆ ಸಮಾರಂಭಗಳು ನಿಂತಿದ್ದವು. ಅನೇಕರು ಅದ್ಧೂರಿ ಮದುವೆ ಸಲುವಾಗಿ ದಿನಾಂಕ ಮುಂದೂಡಿ ಒಂದು ವರ್ಷ ಮೊದಲೇ ಕಲ್ಯಾಣ ಮಂಟಪ ಬುಕ್ಕಿಂಗ್ ಮಾಡಿದ್ದರು. ಈ ವರ್ಷ ಡಿಸೆಂಬರ್‌ನಲ್ಲಿ ಬುಕ್ಕಿಂಗ್ ಆಗಿರುವ ಮದುವೆಗಳ ಪೈಕಿ ಬಹುತೇಕ ಹಿಂದಿನ ವರ್ಷ ರದ್ದಾದ ಮದುವೆಗಳೇ ಆಗಿವೆ. ಅದರ ಜತೆಗೆ ಈ ವರ್ಷ ಮದುವೆ ನಿಶ್ಚಯ ಮಾಡಿಕೊಳ್ಳುವವರಿಗೆ ಕಲ್ಯಾಣ ಮಂಟಪ ಹುಡುಕುವುದೇ ಸವಾಲಾಗುತ್ತಿದೆ.
ಜಿಲ್ಲೆಯ ಕರಾವಳಿ ಭಾಗದಲ್ಲಿ ಜೂನ್, ಜುಲೈ ತಿಂಗಳಲ್ಲಿ ಹೆಚ್ಚಿನ ಮದುವೆಗಳು ನಡೆಯುತ್ತವೆ. ಮಳೆಗಾಲದಲ್ಲಿ ಕೆಲಸಕ್ಕೆ ಬಿಡುವು ಇರುವುದರಿಂದ ಈ ಎರಡು ತಿಂಗಳಲ್ಲಿ ಮದುವೆ ಹೆಚ್ಚು. ಕಳೆದ ವರ್ಷ ಈ ಎರಡು ತಿಂಗಳಲ್ಲಿಯೇ ಕೊರೊನಾ ಭೀತಿ ಜತೆಗೆ ಅತಿವೃಷ್ಟಿ, ಪ್ರವಾಹ ಬಂದು ಮದುವೆ ನಡೆಸುವುದಿರಲಿ, ಜೀವನ ಉಳಿಸಿಕೊಂಡರೆ ಸಾಕು ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಈ ಬಾರಿ ಜೂನ್, ಜುಲೈವರೆಗೆ ಕಾಯದೆ ಬೇಗ ಮದುವೆ ಮುಗಿಸುತ್ತಿದ್ದಾರೆ.