Petrol Diesel Price Cut ಕೇಂದ್ರ ಸರ್ಕಾರದಿಂದ ಸುಂಕ ಇಳಿಕೆ ಬಳಿಕ ಬೆಂಗಳೂರು ಸೇರಿ ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಇಲ್ಲಿದೆ!

Published : May 21, 2022, 08:55 PM IST
Petrol Diesel Price Cut ಕೇಂದ್ರ ಸರ್ಕಾರದಿಂದ ಸುಂಕ ಇಳಿಕೆ ಬಳಿಕ ಬೆಂಗಳೂರು ಸೇರಿ ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಇಲ್ಲಿದೆ!

ಸಾರಾಂಶ

ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆ ಮಾಡಿದ ಕೇಂದ್ರ ಸರ್ಕಾರದ ಅಬಕಾರಿ ಸುಂಕ ಕಡಿತದಿಂದ ಪೆಟ್ರೋಲ್ ಬೆಲೆ 9.50 ರೂ ಇಳಿಕೆ ಡೀಸೆಲ್ ಬೆಲೆ 7 ರೂ ಇಳಿಕೆ, ಕರ್ನಾಟಕದಲ್ಲಿ ಪೆಟ್ರೋಲ್ ಬೆಲೆ  

ಬೆಂಗಳೂರು(ಮೇ.21): ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನತೆಗೆ ಕೇಂದ್ರ ಸರ್ಕಾರ ಭರ್ಜರಿ ಗಿಫ್ಟ್ ನೀಡಿದೆ. ಪೆಟ್ರೋಲ್ ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಿದ್ದರೆ, ಗ್ಯಾಸ್ ಮೇಲೆ 200 ರೂಪಾಯಿ ಸಬ್ಸಡಿ ಘೋಷಿಸಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆಯಾಗಿದೆ. 

ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 111.09 ರೂಪಾಯಿ ಆಗಿತ್ತು. ಸುಂಕ ಇಳಿಕೆಯಿಂದ ಬೆಂಗಳೂರಿನಲ್ಲಿ 101.59 ರೂಪಾಯಿಗೆ ಪೆಟ್ರೋಲ್ ಲಭ್ಯವಾಗಲಿದೆ. ಇನ್ನು ಡೀಸೆಲ್ ಬೆಲೆ ಇಂದು 94.79 ರೂಪಾಯಿ ಆಗಿತ್ತು. ಸುಂಕ ಇಳಿಕೆ ಬಳಿಕ ನಗರದಲ್ಲಿ ಡೀಸೆಲ್ ಬೆಲೆ 87.79 ರೂಪಾಯಿಗೆ ಇಳಿಕೆಯಾಗಲಿದೆ.ಕರ್ನಾಟಕದ ಎಲ್ಲಾ ಭಾಗಗಳಲ್ಲಿ ಪೆಟ್ರೋಲ್ ಮೇಲಿನ 9.50 ರೂಪಾಯಿ ಹಾಗೂ ಡೀಸೆಲ್ ಮೇಲೆ 7 ರೂಪಾಯಿ ಕಡಿಮೆಯಾಗಲಿದೆ

ಪೆಟ್ರೋಲ್‌ ಲೀಟರ್‌ಗೆ ರೂ 9.5, ಡೀಸೆಲ್‌ ರೂ 7 ಬೆಲೆ ಇಳಿಕೆ, ಗ್ಯಾಸ್‌ಗೆ ರೂ 200 ಸಬ್ಸಿಡಿ. 

ದೆಹಲಿಯಲ್ಲಿ 105.41 ರೂಪಾಯಿ ಆಗಿದ್ದ ಪೆಟ್ರೋಲ್ ಬೆಲೆ ಇದೀಗ 95.91 ರೂಪಾಯಿ ಆಗಿದೆ. 96.67 ರೂಪಾಯಿ ಆಗಿದ್ದ ಡೀಸೆಲ್ ಬೆಲೆ ಇದೀಗ 89.67 ರೂಪಾಯಿ ಆಗಿದೆ. ಇನ್ನು ಮುಂಬೈನಲ್ಲಿ ಸುಂಕ ಇಳಿಕೆ ಬಳಿಕ ಪೆಟ್ರೋಲ್ ಬೆಲೆ 111.01 ರೂಪಾಯಿ ಆಗಿದ್ದರೆ, ಡೀಸೆಲ್ ಬೆಲೆ  97.77 ರೂಪಾಯಿ ಆಗಿದೆ.

ಪ್ರತಿ ದಿನ ಬೆಳಗ್ಗೆ 6 ಗಂಟೆಗೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಪರಿಷ್ಕರಣೆಯಾಗಲಿದೆ. ನಾಳೆ(ಮೇ.22) ಬೆಳಗ್ಗೆಯಿಂದ ನೂತನ ಬೆಲೆ ಜಾರಿಯಾಗಲಿದೆ. 

ಅಬಕಾರಿ ಸುಂಕ ಇಳಿಕೆ, ಹಣಕಾಸು ಸಚಿವೆ ಘೋಷಣೆ
ಗಗನಕ್ಕೇರಿದ ತೈಲ ಬೆಲೆಯಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಹಣದುಬ್ಬರ ಸರಿದೂಗಿಸಲು ಇದೀಗ ಕೇಂದ್ರ ಸರ್ಕಾರ ಅಬಕಾರಿ ಸುಂಕ ಇಳಿಕೆ ಮಾಡಿದೆ. ಪೆಟ್ರೋಲ್ ಮೇಲೆ 9.50 ರೂಪಾಯಿ ಹಾಗೂ ಡೀಸೆಲ್ ಬೆಲೆ 7 ರೂಪಾಯಿ ಇಳಿಕೆ ಮಾಡಲಾಗಿದೆ.

MEA ಬದಲಾಗಿದೆ ನಿಜ, ಅಹಂಕಾರವಲ್ಲ ಅದು ಆತ್ಮವಿಶ್ವಾಸ, ರಾಹುಲ್ ಆರೋಪಕ್ಕೆ ಜೈಶಂಕರ್ ತಿರುಗೇಟು!

ಈ ಕುರಿತು ಟ್ವಿಟರ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ. ಬಿಜೆಪಿ ನಾಯಕರು ನಿರ್ಮಲಾ ಸೀತಾರಾಮನ್ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಜನರ ಧನಿಯಾಗಿರುವ ಕೇಂದ್ರ ಸರ್ಕಾರ ಇಂಧನ ಬೆಲೆ ಇಳಿಕೆ ಮಾಡುವ ಮೂಲಕ ಜನ ಸಾಮಾನ್ಯರಿಗೆ ನೆರವಾಗಿದೆ ಎಂದು ಪಿಯೂಷ್ ಗೋಯಲ್ ಹೇಳಿದ್ದಾರೆ.

ನರೇಂದ್ರ ಮೋದಿಗೆ ಧನ್ಯವಾದ. ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡುವ ಮೂಲಕ ಜನಸಾಮನ್ಯರ ಕಲ್ಯಾಣಕ್ಕೆ ಬದ್ಧರಾಗಿದ್ದಾರೆಂದ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?
ಗೆಳೆಯರ ಜೊತೆ ಟ್ರಿಪ್ ಹೋಗಿದ್ದ ಬೆಂಗಳೂರು ನಿವಾಸಿ ಗೋವಾ ನೈಟ್ ಕ್ಲಬ್ ದುರಂತದಲ್ಲಿ ಮೃತ