ಸಪ್ತಪದಿ ತುಳಿಯುವ ವೇಳೆ ವಧು ವರನಿಗೆ ಓಡಿ ಓಡಿ ಎಂದ ಪುರೋಹಿತರು: ವಿಡಿಯೋ ವೈರಲ್

Published : May 21, 2022, 04:31 PM IST
ಸಪ್ತಪದಿ ತುಳಿಯುವ ವೇಳೆ ವಧು ವರನಿಗೆ ಓಡಿ ಓಡಿ ಎಂದ ಪುರೋಹಿತರು: ವಿಡಿಯೋ ವೈರಲ್

ಸಾರಾಂಶ

ಸಪ್ತಪದಿ ವೇಳೆ ಅರ್ಚಕರ ತಮಾಷೆ ವಧುವರನಿಗೆ ಓಡಿ ಓಡಿ ಎಂದ ಅರ್ಚಕರು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಮದುವೆಗೆ ಸಂಬಂಧಿಸಿದ ತಮಾಷೆಯ ಹಲವರು ವಿಡಿಯೋಗಳನ್ನು ನೀವು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ನೋಡಿರಬಹುದು. ಆ ವಿಡಿಯೋಗಳು ನಿಮಗೆ ಮೋಜು ಮಸ್ತಿಯನ್ನು ನೀಡುತ್ತವೆ. ಹಾಗೆಯೇ ಈಗ ವೈರಲ್ ಆಗಿರುವ ಮದುವೆಯೊಂದರ ವಿಡಿಯೋವೊಂದರಲ್ಲಿ ಮದುವೆ ನಡೆಸಿಕೊಟ್ಟ ಅರ್ಚಕರು ವಧು ಹಾಗೂ ವರನಿಗೆ ಸಪ್ತಪದಿ ತುಳಿಯುವ ವೇಳೆ ಓಡಿ ಓಡಿ ಎಂದು ಹೇಳುತ್ತಿರುವ ತಮಾಷೆಯ ವಿಡಿಯೋ ವೈರಲ್ ಆಗಿದೆ. 

ಉತ್ತರ ಭಾರತದಲ್ಲಿ ಬಹುತೇಕ ಮದುವೆಗಳು ಸಂಜೆ ಹಾಗೂ ರಾತ್ರಿಯ ಸಮಯದಲ್ಲಿ ನಡೆಯುತ್ತದೆ. ಬೆಳಗ್ಗಿನಿಂದ ಶುರುವಾಗುವ ಈ ಮದ್ವೆಯ ಸಂಪ್ರದಾಯಗಳು ಅಲ್ಲಿ ಮಧ್ಯರಾತ್ರಿ ಕಳೆದು ಬೆಳಗ್ಗಿನ ಜಾವದವರೆಗೂ ಮುಂದುವರೆಯುತ್ತವೆ. ಹೀಗಾಗಿ ವಧು ಹಾಗೂ ವರ ಮದುವೆ ದಿನ ಪೂರ್ತಿ ಸುಸ್ತಿನಿಂದ ಮದುವೆ ಮಧ್ಯೆಯೇ ನಿದ್ರೆಗೆ ಜಾರುತ್ತಾರೆ. ವಧುವೊಬ್ಬಳು ತನ್ನ ಮದುವೆಯಂದೇ ನಿದ್ರೆಗೆ ಜಾರಿದ ವಿಡಿಯೋವೊಂದು ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 

ಪಟಾಕಿ ಸದ್ದಿಗೆ ಹೆದರಿ ಮದುವೆ ಗಂಡಿನೊಂದಿಗೆ ಓಡಿದ ಕುದುರೆ: ವಿಡಿಯೋ ವೈರಲ್

ಸಪ್ತಪದಿ ತುಳಿದ ನಂತರ ಪುರೋಹಿತರು ಮಂತ್ರೋಚ್ಛಾರಗಳನ್ನು ಘೋಷಿಸಿದ ಬಳಿಕ ವಧು ಹಾಗೂ ವರ ಗಂಡ ಹೆಂಡತಿಯಾಗುತ್ತಾರೆ. ಹಾಗೆಯೇ ಇಲ್ಲಿ ವಧು ಹಾಗೂ ವರ ತಮ್ಮ ಮದುವೆಯ ಸಂಪ್ರದಾಯಗಳ ಅಂತಿಮ ಹಂತದಲ್ಲಿದ್ದು, ಸಪ್ತಪದಿ ತುಳಿಯುತ್ತಿರುತ್ತಾರೆ. ಸಮಯ ಈಗಾಗಲೇ ಬೆಳಗ್ಗಿನ ಜಾವ ಮೂರು ಗಂಟೆಯಾಗಿದ್ದು, ಬಹುಶಃ ಅರ್ಚಕರಿಗೂ ಸುಸ್ತಾಗಿರಬೇಕು. ಅವರು ವಧು ವರರಿಗೆ ತಮಾಷೆಯಾಗಿ ಭಾಗ್ಲೊ ಬೇಟ ಬಾಗ್ಲೋ ( ಓಡು ಮಗನೇ ಓಡು) ಎಂದು ತಮಾಷೆಯಾಗಿ ಹೇಳುತ್ತಾರೆ. 

ಈ ವೇಳೆ ವಧು ಹಾಗೂ ವರ ಅಲ್ಲದೇ ಅಲ್ಲಿ ನೆರೆದಿದ್ದ ಬಂಧುಗಳು ನೆಂಟರು ಕುಟುಂಬಸ್ಥರೆಲ್ಲಾ ಅರ್ಚಕನ ಮಾತು ಕೇಳಿ ಜೋರಾಗಿ ನಗುತ್ತಾರೆ. ನಂತರ ಅರ್ಚಕರು ವಧು ಹಾಗೂ ವರನನ್ನು ಕುಳಿತುಕೊಳ್ಳುವಂತೆ ಹೇಳಿ ಮತ್ತೊಂದು ಸುತ್ತು ಬರುವ ಮೊದಲು ಮಾಡಬೇಕಾದ ಮಂತ್ರೋಚ್ಛಾರ ಹಾಗೂ ಪೂಜೆಯನ್ನು ಕೈಗೊಳ್ಳುತ್ತಾರೆ. ಈ ವಿಡಿಯೋವನ್ನು ವೆಡಾಬೌಟ್‌ ಎಂಬ ಇನ್ಸ್ಟಾಗ್ರಾಮ್‌ ಖಾತೆಯಿಂದ ಅಪ್ಲೋಡ್ ಮಾಡಲಾಗಿದೆ. ಈ ವಿಡಿಯೋವನ್ನು 20 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಈ ವಿಡಿಯೋ ನೋಡುಗರಲ್ಲಿ ನಗು ತರಿಸುತ್ತಿದೆ. ಹೀಗೆ ತಮಾಷೆಯ ಪಂಡಿತ್‌ಜೀ ಒಬ್ಬರು ನಿಮ್ಮ ಮದುವೆಯಲ್ಲಿದ್ದರೆ ಮದುವೆ ಇನ್ನು ತಮಾಷೆಯಿಂದ ಕೂಡಿರುತ್ತದೆ ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್‌ ಮಾಡಲಾಗಿದೆ.

ಮದುವೆ ಸಂಭ್ರಮದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ವಧು
ಮದುವೆ ದಿನ ರಾಣಿಯಂತೆ ಕಂಗೊಳಿಸಬೇಕು ಎಂಬುದು ಬಹುತೇಕ ಹೆಣ್ಣು ಮಕ್ಕಳ ಕನಸು. ಎಲ್ಲರ ಮದುವೆಗಿಂತ ತಮ್ಮ ಮದುವೆ ವಿಭಿನ್ನವಾಗಿರಬೇಕು ಎಂದು ಬಹುತೇಕರು ಬಯಸುತ್ತಾರೆ. ಅಲ್ಲದೇ ಎಲ್ಲರಿಗಿಂತ ಡಿಫರೆಂಟ್ ಆಗಿ ಮದುವೆ ಆಗೋದು ಇಂದಿನ ಟ್ರೆಂಡ್‌. ಅದಕ್ಕಾಗಿ ಏನೆಲ್ಲಾ ಕಸರತ್ತುಗಳನ್ನು ಮಾಡುತ್ತಾರೆ. ಮದುವೆ ಹೆಣ್ಣು ಹೆಲಿಕಾಪ್ಟರ್‌ನಲ್ಲಿ, ಬುಲೆಟ್‌ನಲ್ಲಿ, ಎತ್ತಿಗಾಡಿಯಲ್ಲಿ ಹೀಗೆ ವರ ಜೆಸಿಬಿಯಲ್ಲಿ ಬಂದಂತಹ ಹಲವು ವಿಡಿಯೋಗಳನ್ನು ನೀವು ಈಗಾಗಲೇ ನೋಡಿದ್ದೀರಿ. ಅಲ್ಲದೇ ವಧು ಡಾನ್ಸ್ ಮಾಡುತ್ತಾ ಮದ್ವೆ ಮಂಟಪಕ್ಕೆ ಎಂಟ್ರಿ ಕೊಟ್ಟಿದ್ದನ್ನು ನೋಡಿದ್ದೀರಿ. ಅದೇ ರೀತಿ ಕೆಲ ದಿನಗಳ ಹಿಂದೆ ವಧುವೊಬ್ಬಳು ಯಾವ ಸಿನಿಮಾ ನಟಿಗೂ ಕಡಿಮೆ ಇಲ್ಲದಂತೆ ಡಾನ್ಸ್‌ ಮಾಡುತ್ತಾ ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಕಪ್ಪು ಬಣ್ಣದ ಕನ್ನಡಕ ಧರಿಸಿರುವ ವಧು ಕೆಂಪು ಬಣ್ಣದ ಲೆಹೆಂಗಾ ಹಾಗೂ ಚಿನ್ನಾಭರಣವನ್ನು ತೊಟ್ಟು ರಾಣಿಯಂತೆ ಕಂಗೊಳಿಸುತ್ತಿದ್ದು, ತನ್ನ ಸಹೋದರಿಯರು ಹಾಗೂ ಸಹೋದರರು ಮತ್ತು ಕುಟುಂಬದವರೊಂದಿಗೆ ಹೂವಿನ ಹಾಸಿನ ಮೇಲೆ ಡಾನ್ಸ್‌ ಮಾಡುತ್ತಾ ನಡೆದು ಬರುತ್ತಿದ್ದಾಳೆ. ಈ ವೇಳೆ ಬಾಲಿವುಡ್ ಹಾಡೊಂದಕ್ಕೆ ಆಕೆ ಸಖತ್ ಆಗಿ ಡಾನ್ಸ್ ಮಾಡುತ್ತಿದ್ದು, ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದಾಳೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರ್ನಾಟಕಕ್ಕೆ ಶೀತ ಅಲೆಯ ಕಂಟಕ: ರಾಯಚೂರಿನಲ್ಲಿ 9.4 ಡಿಗ್ರಿಗೆ ಕುಸಿದ ತಾಪಮಾನ! ಎಲ್ಲೆಲ್ಲಿ ಆರೆಂಜ್ ಅಲರ್ಟ್?
ಮುಕೇಶ್ ಅಂಬಾನಿ 68ರಲ್ಲೂ ಫಿಟ್ & ಎನರ್ಜಿಟಿಕ್‌ ಆಗಿರಲು ಬೆಳಗ್ಗಿನ ಈ ಅಭ್ಯಾಸ ಕಾರಣ!