MEA ಬದಲಾಗಿದೆ ನಿಜ, ಅಹಂಕಾರವಲ್ಲ ಅದು ಆತ್ಮವಿಶ್ವಾಸ, ರಾಹುಲ್ ಆರೋಪಕ್ಕೆ ಜೈಶಂಕರ್ ತಿರುಗೇಟು!

By Suvarna NewsFirst Published May 21, 2022, 7:15 PM IST
Highlights
  • ಲಂಡನ್‌ನಲ್ಲಿನ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಆರೋಪ
  • ವಿದೇಶಾಂಗ ನೀತಿ, ಮೋದಿ ಸರ್ಕಾರ ಟೀಕಿಸಿದ ರಾಹುಲ್
  • ರಾಹುಲ್ ಹೇಳಿಕೆಗೆ ಜೈಶಂಕರ್ ತಿರುಗೇಟು 
     

ನವದೆಹಲಿ(ಮೇ.21): ವಿದೇಶಾಂಗ ಇಲಾಖೆ ಹಾಗೂ ಅಧಿಕಾರಿಗಳು ಅಹಂಕಾರಿಗಳು ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ತಿರುಗೇಟು ನೀಡಿದ್ದಾರೆ. ರಾಷ್ಟ್ರೀಯ ಹಿತಾಸಕ್ತಿ ಕಾಪಾಡುತ್ತಿರುವ ವಿದೇಶಾಂಗ ಇಲಾಖೆ ಹಿಂದೆಂಗಿತಲೂ ಆತ್ಮವಿಶ್ವಾಸದಲ್ಲಿ ಕಾರ್ಯನಿರ್ವಹಿಸುತ್ತಿದೆ. ಅಹಂಕಾರದಿಂದ ಅಲ್ಲ ಎಂದು ಸಚಿವ ಜೈಶಂಕರ್ ಹೇಳಿದ್ದಾರೆ.

ಲಂಡನ್‌ನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಕ ಇಲಾಖೆ, ಸರ್ಕಾರದ ಯೋಜನೆಗಳ ವಿರುದ್ಧ ಹರಿಹಾಯ್ದರು. ಯೊರೋಪ್‌ನ ಹಲವು ಅಧಿಕಾರಿಗಳ ಜೊತೆ ಮಾತನಾಡುವಾಗ ಎಲ್ಲರೂ ಭಾರತದ ವಿದೇಶಾಂಗ ಇಲಾಖೆ ಕುರಿತು ದೂರುಗಳನ್ನು ಹೇಳಿದ್ದಾರೆ. ಭಾರತೀಯ ವಿದೇಶಾಂಗ ಇಲಾಖೆ ಬದಲಾಗಿದೆ. ಅಧಿಕಾರಿಗಳು ಅಂಹಕಾರಿಗಳಾಗಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. 

Latest Videos

ಭಾರತದ ಪರಿಸ್ಥಿತಿ ಚೆನ್ನಾಗಿಲ್ಲ, ಬಿಜೆಪಿ ದೇಶಾದ್ಯಂತ 'ಸೀಮೆಎಣ್ಣೆ' ಸಿಂಪಡಿಸಿದೆ: ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ರಾಗಾ!

ವಿದೇಶಾಂಗ ಇಲಾಖೆ ನಮ್ಮ ಮಾತನ್ನು ಕೇಳುತ್ತಿಲ್ಲ. ಸರ್ಕಾರ ಹೇಳಿದ್ದನ್ನು ಕೇಳುತ್ತಿದ್ದಾರೆ. ಯಾವುದೇ ಸಂಭಾಷಣೆ ಇಲ್ಲ. ಇದು ಸರಿಯಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ರಾಹುಲ್ ಮಾತಿಗೆ ಗರಂ ಆದ ಸಚಿವ ಜೈಶಂಕರ್, ಮೋದಿ ಸರ್ಕಾರದ ಅಡಿಯಲ್ಲಿ ಭಾರತೀಯ ವಿದೇಶಾಂಗ ಇಲಾಖೆ ಅಧಿಕಾರಿಗಳು ತೋರುತ್ತಿರುವುದು ದುರಂಹಕಾರವಿಲ್ಲ, ಆತ್ಮವಿಶ್ವಾಸ. ನೀವು ಹೇಳಿದ ರೀತಿ ಭಾರತೀಯ ವಿದೇಶಾಂಗ ಇಲಾಖೆ ಬದಲಾಗಿದೆ. ಸರ್ಕಾರದ ಆದೇಶಗಳನ್ನು ಇಲಾಕೆ ಪಾಲಿಸುತ್ತದೆ. ಯುರೋಪಿಯನ್ ಅಧಿಕಾರಿಗಳು ನಿರೀಕ್ಷಿಸಿದ ರೀತಿಯಲ್ಲಿ ಯಾವುದೇ ವಿಚಾರವನ್ನು ಕಣ್ಣುಚ್ಚಿ ಒಪ್ಪಿಕೊಳ್ಳುವುದಿಲ್ಲ, ಹೇಳುವುದನ್ನೆಲ್ಲಾ ಕೇಳಿಸಿಕೊಂಡು ನಮ್ಮ ಸಾರ್ವಭೌಮತ್ವಕ್ಕೆ, ರಾಷ್ಟ್ರೀಯ ಹಿತಾಸಕ್ತಿ ಧಕ್ಕೆ ತರುವುದಿಲ್ಲ ಎಂದು ಜೈಶಂಕರ್ ಹೇಳಿದ್ದಾರೆ.

ಇದೇ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡಸಿದ್ದಾರೆ. ಮೋದಿ ಟೀಕಿಸುವ ಭರದಲ್ಲಿ ರಾಹುಲ್ ಗಾಂಧಿ ಭಾರತದಲ್ಲಿ ಸಂಘರ್ಷಗಳೇ ನಡೆಯುತ್ತಿದೆ. ಇಲ್ಲಿ ಶಾಂತಿಯೇ ಇಲ್ಲದಾಗಿದೆ ಎಂದಿದ್ದಾರೆ. ಕೇಂದ್ರ ಸರ್ಕಾರ ದೇಶದ ಎಲ್ಲೆಡೆ ಸೀಮೆ ಎಣ್ಣೆ ಹರಡಿದ್ದಾರೆ. ಒಂದು ಕಿಡಿ ಸಾಕು ದೇಶವೇ ಹೊತ್ತಿ ಉರಿಯಲಿದೆ ಎಂದಿದ್ದಾರೆ 

ಕಾಂಗ್ರೆಸ್‌ನ ‘ಒಂದು ಕುಟುಂಬ, ಒಂದು ಟಿಕೆಟ್‌’ ಈ ಪ್ರಮುಖ ಐವರಿಗೆ ಅನ್ವಯವಾಗಲ್ಲ!

ರಾಹುಲ್ ಗಾಂಧಿ ಮಾತಿಗೆ ಬಿಜೆಪಿ ತಿರುಗೇಟು ನೀಡಿದೆ. 1984ರಲ್ಲಿ ಸಿಖ್ ವಿರೋಧಿ ದಂಗೆಯನ್ನು ಪ್ರಚೋದಿಸಲು ಕಾಂಗ್ರೆಸ್ ಸೀಮೆ ಎಣ್ಣೆ ಒಯ್ದಿತ್ತು. ವಿದೇಶಕ್ಕೆ ಭಾರತ ವಿರುದ್ಧ ಹೇಳಿಕೆ ನೀಡುತ್ತಾರೆ. ಮೋದಿಯನ್ನು ಟೀಕಿಸುವ ಭರದಲ್ಲಿ ಭಾರತವನ್ನೇ ತೆಗಳುತ್ತಿದ್ದಾರೆ ಎಂದು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಹೇಳಿದ್ದಾರೆ.

ಭಾರತ ದೇಶ ಬಹುತೇಕ ಲಂಕಾದಂತೆ ಕಾಣುತ್ತಿದೆ
ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಬುಧವಾರ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದು, ಹಣದುಬ್ಬರ ಹಾಗೂ ನಿರುದ್ಯೋಗ ಏರಿಕೆಯೊಂದಿಗೆ ಭಾರತವು ಬಹುತೇಕ ಶ್ರೀಲಂಕಾದಂತೆ ಕಾಣುತ್ತಿದೆ ಎಂದಿದ್ದಾರೆ. ರಾಹುಲ್‌, ಭಾರತದಲ್ಲಿ ನಿರುದ್ಯೋಗ, ಪೆಟ್ರೋಲ್‌ ಬೆಲೆಯೇರಿಕೆ ಪ್ರತಿಭಟನೆಗಳು ಹಾಗೂ ಕೋಮುಗಲಭೆಯ ಚಿತ್ರಗಳೊಂದಿಗೆ ಶ್ರೀಲಂಕಾದಲ್ಲಿ ಪರಿಸ್ಥಿತಿಯನ್ನು ವ್ಯಕ್ತಪಡಿಸುವ ಚಿತ್ರಗಳನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಪಡಿಸಿದ ಅವರು ‘ಜನರ ಗಮನವನ್ನು ಬೇರೆಡೆ ಸೆಳೆಯುವುದರಿಂದ ಸತ್ಯ ಬದಲಾಗುವುದಿಲ್ಲ. ಭಾರತವು ಬಹುತೇಕ ಶ್ರೀಲಂಕಾದಂತೆ ಕಾಣುತ್ತಿದೆ’ ಟ್ವೀಟ್‌ ಮಾಡಿದ್ದಾರೆ. ಬೆಲೆಯೇರಿಕೆ ಹಾಗೂ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸಲು ವಿಫಲವಾದ ಸರ್ಕಾರ ಜನರ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
 

click me!