ಮುಂಬೈ(ಡಿ.01): ಸಾಕು ನಾಯಿ(pet Dog) ಕುಟುಂಬ ಸದಸ್ಯರಿದ್ದಂತೆ. ಅವುಗಳ ತುಂಟಾಟಗಳು, ಪ್ರೀತಿ ತೋರುವ, ಮುದ್ದಾಡುವ ರೀತಿ ಎಲ್ಲವೂ ಇಷ್ಟವಾಗುತ್ತದೆ. ಸಾಕು ನಾಯಿ ಉತ್ತಮ ಸ್ನೇಹಿತ ಕೂಡ ಹೌದು. ಸಾಕು ನಾಯಿಗಳ ಹಲವು ವಿಡಿಯೋಗಳು ವೈರಲ್(Viral video) ಆಗಿದೆ. ಇದೀಗ ಸಾಕು ನಾಯಿಯೊಂದು ಮೇಕ್ಅಪ್ ಅರ್ಟಿಸ್ಟ್(Makeup artist) ಆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
ಇನ್‌ಸ್ಟಾಗ್ರಾಂನಲ್ಲಿ ಮುಕುಲ್ ರಿಚರ್ಡ್ಸ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸಾಕು ನಾಯಿ ಬನ್ನಿ, ಮುಕುಲ್ ರಿಚರ್ಡ್ಸ್‌ಗೆ ಮೇಕ್ ಅಪ್ ಮಾಡಲು ನೆರವಾಗುತ್ತಿದೆ. ಮುಕುಲ್ ಮೇಕ್ ಅಪ್ ಮಾಡಲು ಬಿಡದೆ ತಾನು ಮೇಕ್ಅಪ್ ಮಾಡಲು ಉತ್ಸಾಹ ತೋರುತ್ತಿರುವ ನಾಯಿಗೆ ಯಾವ ರೀತಿ ಮೇಕ್ ಅಪ್ ಮಾಡಬೇಕು ಅನ್ನೋದನ್ನು ಮುಕುಲ್ ರಿಚರ್ಡ್ಸ್ ಹೇಳಿಕೊಟ್ಟಿದ್ದಾರೆ.
Russia: ನಾಲ್ಕೂ ಕಾಲು ಕಳೆದುಕೊಂಡಿದ್ದ ಶ್ವಾನ ಮೋನಿಕಾಗೆ ಮರು ಜೀವ ಕೊಟ್ಟ ವೈದ್ಯರು!
ಮೇಕ್ ಅಪ್ ಮಾಡಲು ಬಿಡದ ಪ್ರೀತಿಯ ನಾಯಿಗೆ ಮುಕುಲ್ ಐಯ್‌ಲ್ಯಾಶ್ ಹಾಕುವುದನ್ನು ಹೇಳಿಕೊಟ್ಟಿದ್ದಾರೆ. ಮುಕುಲ್ ಮಾತುಗಳನ್ನು ಗಂಭೀರವಾಗಿ ಕೇಳಿಸಿಕೊಂಡ ಬನ್ನಿ, ಬಳಿಕ ಮುಕುಲ್ ಕೆನ್ನೆ ನೆಕ್ಕಿ ಹಾಕಿ ಮೇಕ್ಅಪ್ ಅರ್ಧ ತಗೆದಿದೆ. ಈ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋಗೆ ಕ್ಷಣಾರ್ಧದಲ್ಲಿ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ(Social media) ಹರಿದಾಡಿದೆ. ಹಲವರು ನಾಯಿಯ ಪ್ರೀತಿಗೆ ಫಿದಾ ಆಗಿದ್ದಾರೆ.
ನೀರಿನ ಬಾಟಲಿ ತರುವುದು, ಬ್ಯಾಗ್, ಕೋಲು ಹಿಡಿದು ಸಾಗುತ್ತಿರುವ ವಿಡಿಯೋ, ಪ್ರೀತಿ ತೋರುತ್ತಿರುವ, ಬೈಗುಳನ್ನು ಕೇಳಿಸಿಕೊಂಡು ಸುಮ್ಮನಿರುವ ನಾಯಿಗಳ ವಿಡಿಯೋಗಳ ವೈರಲ್ ಆಗಿವೆ. ಇದೇ ಮೊದಲ ಬಾರಿಗೆ ನಾಯಿಯೊಂದು ಮೇಕ್ಅಪ್ ಆರ್ಟಿಸ್ಟ್ ಆದ ವಿಡಿಯೋ ಸಂಚಲನ ಸೃಷ್ಟಿಸಿದೆ. ಮುಕುಲ್ ರಿಚರ್ಡ್ಸ್ ನಾಯಿ ಬನ್ನಿ ಇದೀಗ ಭಾರತದ(India) ನಾಯಿ ಪ್ರೀಯರ ಮೆಚ್ಚುಗೆಗೆ ಪಾತ್ರವಾಗಿದೆ. ಇದೇ ವೇಳೆ ಮುಕುಲ್ ರಿಚರ್ಡ್ಸ್ ನಾಯಿಗೆ ನೀಡುತ್ತಿರುವ ಪ್ರಾತಿನಿದ್ಯ, ಪ್ರೀತಿ ಕುರಿತು ಮೆಚ್ಚುಗೆ ವ್ಯಕ್ತವಾಗಿದೆ. ಈ ಪ್ರೀತಿ, ಮುದ್ದಾಟ ಇದೇ ರೀತಿ ಇರಲಿ ಎಂದು ಹಲವರು ಆಶಿಸಿದ್ದಾರೆ.
ಮನುಷ್ಯನ ಜೊತೆ ನಿಕಟ ಸಂಪರ್ಕದಲ್ಲಿರುವ ನಾಯಿ, ಮಾನವನ ಭಾಷೆ, ಸಂಕೇತ, ಸಂಜ್ಞೆಗಳನ್ನು ಅರ್ಥ ಮಾಡಿಕೊಳ್ಳ ಸಾಮರ್ಥ್ಯ ಹೊಂದಿದೆ. ಹಲವರ ಮನೆಯಲ್ಲಿನ ಸಣ್ಣ ಪುಟ್ಟ ಕೆಲಸಗಳನ್ನು ನಾಯಿ ಮಾಡಿಮುಗಿಸುತ್ತದೆ. ಅಷ್ಟರ ಮಟ್ಟಿಗೆ ನಾಯಿ ಮಾನವನ ಜೊತೆ ಬೆರೆತು ಹೋಗಿದೆ.
ಇತ್ತೀಚೀಗೆ ವ್ಯಾಯಾಮ(exercise) ಮಾಡುತ್ತಿರುವ ವ್ಯಕ್ತಿಯ ಬಳಿ ಬಂದ ಸಾಕು ನಾಯಿ ಆತನ ಮುಖಕ್ಕೆ ಪ್ರೀತಿಯ ಮುತ್ತುಗಳನ್ನು ನೀಡಿ ವ್ಯಾಯಾಮಕ್ಕೆ ಅಡ್ಡಿಪಡಿಸಿದ ವಿಡಿಯೋ ಭಾರಿ ವೈರಲ್ ಆಗಿತ್ತು. ನಾಯಿ ಪ್ರೀತಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಕ್ಕೊ ಮೊದಲು ನಾಯಿ ಮರಿಗಳಿಗೆ(Pet swims) ಈಜು ಕಲಿಸುತ್ತಿರುವ ವಿಡಿಯೋ ಕೂಡ ಸಾಮಾಜಿಕ ಜಾಲಾತಾಣದಲ್ಲಿ ಸದ್ದು ಮಾಡಿತ್ತು.
ನಾಯಿ ಮರಿ ಅಂದಕೊಂಡು ಮನೆಗೆ ತಂದರು : ಬಾತುಕೋಳಿ ತಿಂದಾಗಲೇ ಗೊತ್ತಾಗಿದ್ದು ನರಿ ಎಂದು!
ಇದೇ ವೇಳೆ ನಾಯಿ ಮೇಲೆ ಕ್ರೂರತ್ವ ಮೆರೆದ, ನಾಯಿ ಕತ್ತು ಸೀಳಿ ಕೊಂದಿರುವ ಸೇರಿದಂತೆ ಹಲವು ಘಟನಗಳು ವರದಿಯಾಗಿದೆ. ನಾಯಿ ಮೇಲೆ ನಡೆಯುತ್ತಿರುವ ದೌರ್ಜನ್ಯ, ಕ್ರೂರತ್ವದ ವಿರುದ್ಧ ಪ್ರತಿಭಟನೆ, ದೂರು, ಪ್ರಕರಣಗಳು ದಾಖಲಾಗಿದೆ. ಇದರ ವಿರುದ್ಧ ಹಲವು ಪ್ರಾಣಿ ದಯಾ ಸಂಘಟನೆಗಳು ಸತತ ಹೋರಾಟ ಮಾಡುತ್ತಿದೆ. ಆದರೂ ಘಟನೆಗಳು ವರದಿಯಾಗುತ್ತಲೇ ಇದೆ. ಹಲವು ಕಡೆಗಳಲ್ಲಿ ಜಾಗತಿ ಮೂಡಿಸುವ ಕಾರ್ಯಗಳು ನಡೆಯುತ್ತಿದೆ. ಈ ಮೂಲಕ ನಾಯಿ ಮೇಲೆ ಮನುಷ್ಯನ ಕ್ರೂರ ವರ್ತನೆ ನಿಲ್ಲಿಸಲು ಮನವಿ ಮಾಡಲಾಗುತ್ತಿದೆ. ಈ ಪ್ರಯತ್ನಗಳಿಂದ ಸದ್ಯ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ.