ಗಣರಾಜ್ಯೋತ್ಸ 2021, ರಾಷ್ಟ್ರಪತಿ ಕೋವಿಂದ್ ಭಾಷಣ; ಗಡಿ ವಿಚಾರದಲ್ಲಿ ಖಡಕ್ ಸಂದೇಶ!

Published : Jan 25, 2021, 08:23 PM IST
ಗಣರಾಜ್ಯೋತ್ಸ 2021, ರಾಷ್ಟ್ರಪತಿ ಕೋವಿಂದ್ ಭಾಷಣ; ಗಡಿ ವಿಚಾರದಲ್ಲಿ ಖಡಕ್ ಸಂದೇಶ!

ಸಾರಾಂಶ

72ನೇ ಗಣರಾಜ್ಯೋತ್ಸವ ಆಚರಣೆಗೆ ದೇಶ ರೆಡಿಯಾಗಿದೆ. ಗಣತಂತ್ರ ದಿನದ ಅಂಗವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ದೇಶವನ್ನುದ್ದೇಶಿ ಭಾಷಣ ಮಾಡಿದ್ದಾರೆ. ಈ ಬಾರಿ ಕೋವಿಂದ್ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ರಾಷ್ಟ್ರಪತಿ ಭಾಷಣದ ಪ್ರಮುಖ ಅಂಶ ಇಲ್ಲಿದೆ.

ನವದೆಹಲಿ(ಜ.25):  ಕೊರೋನಾ ವೈರಸ್ ನಡುವೆ ಭಾರತ 72ನೇ ಗಣರಾಜ್ಯೋತ್ಸವ ಆಚರಿಸುತ್ತಿದೆ. ಇದೇ ಮೊದಲ ಬಾರಿಗೆ ವಿದೇಶಿ ಅತಿಥಿಗಳಿಲ್ಲದೆ ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ. ನೆರೆ ರಾಷ್ಟ್ರಗಳಿಂದ ಗಡಿ ವಿಸ್ತರಣೆ, ಘರ್ಷಣೆ, ಉಗ್ರರ ನುಸುಳುವಿಕೆ, ಅಪ್ರಚೋದಿತ ದಾಳಿ ಸೇರಿದಂತೆ ಹಲವು ಸವಾಲುಗಳನ್ನು ಭಾರತ ವೀರ ಯೋಧರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದು 72ನೇ ಗಣತಂತ್ರ ದಿನದ ಅಂಗವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ದೇಶವನ್ನುದ್ದೇಶಿ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ.

ಗಣರಾಜ್ಯೋತ್ಸವಕ್ಕೆ ಕರಾಚಿ ಬಂದರು ದಾಳಿ ಸ್ಥಬ್ಧಚಿತ್ರ; ಇಂಡೋ-ಪಾಕ್ ಯುದ್ಧ ಮೆಲುಕು ಹಾಕಲಿದೆ ನೌಕಾಪಡೆ!.

ದೇಶದ ಗಡಿ ರಕ್ಷಣೆಯಲ್ಲಿ ನಮ್ಮ 20 ಯೋಧರು ಹುತಾತ್ಮರಾಗಿದ್ದಾರೆ. ಧೈರ್ಯಶಾಲಿ ಯೋಧರಿಗೆ ದೇಶ ಕೃತಜ್ಞರಾಗಿರಬೇಕು ಎಂದು ರಾಮನಾಥ್ ಕೋವಿಂದ್ ತಮ್ಮ ಭಾಷಣದಲ್ಲಿ ಪ್ರಮುಖವಾಗಿ ಉಲ್ಲೇಖಿಸಿದ್ದಾರೆ. ಇನ್ನು ದೇಶ ಎದುರಿಸುತ್ತಿರುವ ಕೊರೋನಾ ವೈರಸ್ ಕರಿತು ಮುನ್ನಚ್ಚೆರಿಕೆ ಪಾಲಿಸಲು ಮನವಿ ಮಾಡಿದ್ದಾರೆ.

 

ಕೊರೋನಾದಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ಸಂತಾಪ ಸೂಚಿಸಿದ ಕೋವಿಂದ್, ಕೊರೋನಾ ವಾರಿಯರ್ಸ್ ಕಾರ್ಯವನ್ನು ಶ್ಲಾಘಿಸಿದ್ದಾರೆ. ಎಲ್ಲಾ ಕ್ಷೇತ್ರಗಳು ಕೊರೋನಾದಿಂದ ಸಮಸ್ಯೆ ಎದುರಿಸಿದೆ. ಇದರಲ್ಲಿ ಶಿಕ್ಷಣ ಕೂಡ ಪ್ರಮುಖವಾಗಿದೆ. ಕೊರೋನಾ ಮುಕ್ತ ಮಾಡಲು ಲಸಿಕೆ ಪಡೆಯುವಂತೆ ಸೂಚಿಸಿದ್ದಾರೆ.

ರೈತರ ಕುರಿತು ಕೋವಿಂದ್ ಹಲವು ಪ್ರಮುಖ ವಿಚಾರಗಳ ಕುರಿತು ಬೆಳಕು ಚೆಲ್ಲಿದ್ದಾರೆ. ರೈತರ ದೇಶಕ್ಕೆ ನೀಡುತ್ತಿರುವ ಕೊಡುಗೆ ಸ್ಮರಿಸಿದ ಕೋವಿಂದ್, ಕೊರೋನಾ ಸಂಕಷ್ಟದ ಸಮಯದಲ್ಲೂ ರೈತರ ಬೆಳೆ ಬೆಳೆದಿದ್ದಾರೆ. ಈ ರೈತರ ಅಭಿವೃದ್ಧಿಗೆ ಭಾರತ ಬದ್ಧವಾಗಿದೆ ಎಂದು ರಾಮನಾಥ್ ಕೋವಿಂದ್ ಹೇಳಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!