ಗಣತಂತ್ರ ದಿನ ರಾಜಪಥದಲ್ಲಿ 'ಪರಶುರಾಮನ' ಪರಾಕ್ರಮ!

By Suvarna NewsFirst Published Jan 25, 2021, 6:35 PM IST
Highlights

ವಿಂಟೇಜ್ ಏರ್‌ಕ್ರಾಫ್ಟ್ ಡಕೋಟಾ ಇದೀಗ ಪರಶುರಾಮನಾಗಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಹಾರಾಟ ನಡೆಸಲಿದೆ. ಇದೇ ಮೊದಲ ಬಾರಿಗೆ ಪರೇಡ‌ನಲ್ಲಿ ಪಾಲ್ಗೊಳ್ಳುತ್ತಿರುವ ಈ ಪರಶುರಾಮನ ಪರಾಕ್ರಮ ಏಂತದ್ದು? ಈ ಕುರಿತ ಕುತೂಹಲ ಮಾಹಿತಿ ಇಲ್ಲಿದೆ.
 

ನವದೆಹಲಿ(ಜ.25): ಉಗ್ರರು ಹಾಗೂ ಪಾಕಿಸ್ತಾನದಿಂದ ಶ್ರೀನಗರವನ್ನು ಕಾಪಾಡಿದ, ಬಾಂಗ್ಲಾದೇಶವನ್ನು ವಿಮೋಚನೆಗೊಳಿಸಿದ, 1940ರ ವಿಂಟೇಜ್ ಡಕೋಟಾ ಏರ್‌ಕ್ರಾಫ್ಟ್(ಪರಶುರಾಮ) ರಾಜಪಥದಲ್ಲಿ ಇದೇ ಮೊದಲ ಬಾರಿಗೆ ಹಾರಾಟ ನಡೆಸಲು ರೆಡಿಯಾಗಿದೆ. 

"

ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪರಶುರಾಮನ ಹಾರಾಟ

ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನ ಮತ್ತೊಂದು ವಿಶೇಷತೆ ಎಂದರೆ ಈ ಡಕೋಟಾ ಏರ್‌ಕ್ರಾಫ್ಟ್  ರುದ್ರ ಫಾರ್ಮೇಶನ್‌ನಲ್ಲಿ ಹಾರಾಟ ನಡೆಸಲಿದದೆ. ಡಕೋಟಾ ಎರಡೂ ಬದಿಯಲ್ಲಿ ರಷ್ಯಾ ಮೂಲದ ಗಾರ್ಡ್ ಸಿಗಲಿದೆ.

1947-48ರಿಂದ ಭಾರತೀಯ ವಾಯುಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಡಕೋಟಾ ಏರ್‌ಕ್ರಾಫ್ಟ್‌ನ್ನು 2011ರಲ್ಲಿ ಗುಜುರಿಗೆ ಹಾಕಲಾಗಿತ್ತು. ಆದರೆ ರಾಜ್ಯಸಭಾ ಸದಸ್ಯ, ಬಿಜೆಪಿ ರಾಷ್ಟ್ರೀಯ ವಕ್ತಾರ ರಾಜೀವ್ ಚಂದ್ರಶೇಖರ್, ಡಕೋಟಾ ಏರ್‌ಕ್ರಾಫ್ಟ್ ಖರೀದಿಸಿ, ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಡಕೋಟಾ ವಿಮಾನವನ್ನು ಹಾರಾಡುವಂತೆ ಮಾಡಲಾಯಿತು. 

ರಾಜಪಥದಲ್ಲಿ ಹಾರಲಿದೆ ಶ್ರೀನಗರ ಕಾಪಾಡಿದ, ಬಾಂಗ್ಲಾಗೆ ಸ್ವಾತಂತ್ರ್ಯ ಕೊಟ್ಟ ವಿಂಟೇಜ್ ಡಕೋಟಾ!..

ಡಕೋಟಾ ಏರ್‌ಕ್ರಾಫ್ಟ್‌ನ್ನು ಗುಜುರಿಯಿಂದ ಮತ್ತೆ ಹಾರಾಟದ ಸ್ಥಿತಿಗೆ ತಂದ ರಾಜೀವ್ ಚಂದ್ರಶೇಖರ್, ಭಾರತೀಯ ವಾಯುಸೇನೆಗೆ ಉಡುಗೊರೆಯಾಗಿ ನೀಡಿದರು. 

ಪುನರ್ನಜನ್ನ ಪಡೆದ ಟೈಲ್ ನಂ. VP 905 ಡಕೋಟಾ ಏರ್‌ಕ್ರಾಫ್ಟ್ 2018ರಲ್ಲಿ ಮೊತ್ತ ಮೊದಲ ಬಾರಿಗೆ ಭಾರತೀಯ ವಾಯುಸೇನಾ ದಿನಾಚರಣೆಯಲ್ಲಿ ಹಾರಾಟ ನಡೆಸಿತು. 

ಭಾರತೀಯ ವಾಯುಸೇನಾ ಇತಿಹಾಸದಲ್ಲಿ ಡಕೋಟಾ ಏರ್‌ಕ್ರಾಫ್ಟ್‌ಗೆ ವಿಶೇಷ ಸ್ಥಾನವಿದೆ. ಕಾರಣ ಇದೇ ಡಕೋಟಾ ಇಲ್ಲದಿದ್ದರೆ, ಇಂದು ಶ್ರೀನಗರ ಭಾರತದ ಅಂಗವಾಗಿ ಇರುತ್ತಿರಲಿಲ್ಲ. ಪಾಕಿಸ್ತಾನದ ಬುಡಕಟ್ಟು ಉಗ್ರರು ಶ್ರೀನಗರ ಹಾಗೂ ಇಲ್ಲಿನ ವಿಮಾನ ನಿಲ್ದಾಣ ಮತ್ತಿಗೆ ಹಾಕಿ ಪಾಕಿಸ್ತಾನಕ್ಕೆ ಸೇರಿಸಲು ಮುಂದಾಗಿತ್ತು. ಇದೇ ಡಕೋಟಾ ಏರ್‌ಕ್ರಾಫ್ಟ್ ಮೂಲಕ ಸೈನಿಕರು ಶ್ರೀನಗರಕ್ಕೆ ತಲುಪಿ, ಭಾರತ ಅಧಿಪತ್ಯ ಸಾಧಿಸಿತ್ತು. 

ಕಳೆದ ತಿಂಗಳು(ಡಿಸೆಂಬರ್, 2020) ದೇಶ ಸ್ವರ್ಣಿಮ್ ವಿಜಯ್ ದಿವಸ್ ಆಚರಿಸಿತ್ತು. ಈ ಸಂಭ್ರಮಕ್ಕೆ ಪ್ರಮುಖ ಕಾರಣ ಇದೇ ಡಕೋಟಾ ಏರ್‌ಕ್ರಾಫ್ಟ್.  1971ರ ಯುದ್ಧದ ಕಾರ್ಯಚರಣೆಯಲ್ಲಿ ಪ್ರಮುಖ ಪಾತ್ರನಿರ್ವಹಿಸಿದ ಡಕೋಟಾ,  MI 171V ಏರ್‌ಕ್ರಾಫ್ಟ್‌ನಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿಗಳು ಕುಳಿತಿದ್ದರು. 

click me!