ಪತಿಯೊಂದಿಗೆ ಜಗಳ : 65 ಕಿ.ಮೀ ನಡೆದು ಬಂದು ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

By Anusha Kb  |  First Published May 16, 2022, 11:37 AM IST
  • ಗಂಡನೊಂದಿಗೆ ಜಗಳ, 65 ಕಿ.ಮೀ ನಡೆದ ತುಂಬು ಗರ್ಭಿಣಿ
  • ಆಂಬುಲೆನ್ಸ್ ಕರೆಸಿ ಆಸ್ಪತ್ರೆಗೆ ಕಳುಹಿಸಿದ ಅಪರಿಚಿತ
  • ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

ಆಂಧ್ರಪ್ರದೇಶ: ನಾಯ್ಡುಪೇಟೆಯಲ್ಲಿ ಪತಿಯೊಂದಿಗೆ ಜಗಳವಾಡಿದ ಮನೆಯಿಂದ ಹೊರ ನಡೆದ ಒಂಭತ್ತು ತಿಂಗಳ ತುಂಬು ಗರ್ಭಿಣಿ ಮಹಿಳೆ ಸುಮಾರು 65 ಕಿ.ಮೀ ನಡೆದು ಬಂದು ಮಗುವಿಗೆ ಜನ್ಮ ನೀಡಿದ್ದಾರೆ. ತಿರುಪತಿ ಜಿಲ್ಲೆಯ ನಾಯ್ಡುಪೇಟೆಯ ನಿವಾಸಿಯಾಗಿರುವ ಗರ್ಭಿಣಿ ಪತ್ನಿ ಪತಿಯೊಂದಿಗೆ ಜಗಳವಾಡಿಕೊಂಡು ಎರಡು ದಿನಗಳ ಕಾಲ ನಿರಂತರವಾಗಿ 65 ಕಿಲೋಮೀಟರ್ ನಡೆದಿದ್ದಾರೆ. ವರ್ಷಿಣಿ ಎಂಬಾಕೆಯೇ ಹೀಗೆ ನಡೆದು ಬಂದು ಮಗುವಿಗೆ ಜನ್ಮ ನೀಡಿದ ಮಹಿಳೆ. 

ಶುಕ್ರವಾರ ರಾತ್ರಿ ಗಂಡ ಹೆಂಡಿರ ಮಧ್ಯೆ ಜಗಳ ನಡೆದಿದ್ದು, ಬಳಿಕ ವರ್ಷಿಣಿ ಮನೆ ಬಿಟ್ಟು ಹೊರಟಿದ್ದಾರೆ. ಹೀಗೆ ಹೊರಟವರು ಸುಮಾರು  65 ನಡೆದು ನೈಡುಪೇಟೆಯ ಸಣ್ಣದಾದ ಬಸ್‌ ನಿಲ್ದಾಣ ತಲುಪಿದ್ದಾರೆ ಅಲ್ಲಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಅವರು ಆಸ್ಪತ್ರೆಗೆ ತಲುಪುವ ಸಲುವಾಗಿ ಅನೇಕ ವಾಹನಗಳನ್ನು ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಆದರೆ ಎಲ್ಲ ತಮ್ಮ ಪ್ರಯತ್ನ ವಿಫಲವಾಗಿ ಕೈ ಚೆಲ್ಲಿದ್ದಾಗ ಓರ್ವ ತರುಣ ಆಂಬುಲೆನ್ಸ್‌ಗೆ ಕರೆ ಮಾಡುವ ಮೂಲಕ ಆಕೆಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ. 

Tap to resize

Latest Videos

ಪ್ರೆಗ್ನೆನ್ಸಿಯಲ್ಲಿ ಫಿಟ್ನೆಸ್ ಎಷ್ಟು ಮುಖ್ಯ.? ಸ್ಪೆಷಲ್ ಟಿಪ್ಸ್ ಕೊಟ್ಟ ಪ್ರಣಿತಾ ಸುಭಾಷ್..!

ನಂತರ ಆಂಬುಲೆನ್ಸ್ ಮೂಲಕ ಮಹಿಳೆಯನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಸ್ಪತ್ರೆಗೆ ತಲುಪುತ್ತಿದ್ದಂತೆ ಮಹಿಳೆ ಆರೋಗ್ಯಯುತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಮಗುವಿನ ತೂಕ ಸ್ವಲ್ಪ ಕಡಿಮೆ ಇದ್ದು ತಾಯಿ ಹಾಗೂ ಮಗು ಇಬ್ಬರ ಆರೋಗ್ಯವೂ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ನಂತರ ಮಗುವನ್ನು ಹೆಚ್ಚಿನ ಚಿಕಿತ್ಸೆಗೆ ನೆಲ್ಲೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಬಗ್ಗೆ ಆಸ್ಪತ್ರೆ ಸಿಬ್ಬಂದಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಮಗುವಿನ ಜನನದ ನಂತರ ಮಹಿಳೆ ಮಾನಸಿಕ ಹಾಗೂ ದೈಹಿಕವಾಗಿ ಸುಧಾರಿಸಲು ಆಕೆಗೆ ಸ್ಥೈರ್ಯ ತುಂಬಿದ್ದಾರೆ.

ಪ್ರಾಥಮಿಕ ತನಿಖೆಯಿಂದ ತಿಳಿದು ಬಂದ ಮಾಹಿತಿ ಪ್ರಕಾರ ಮಹಿಳೆ ತನ್ನ ಗಂಡನೊಂದಿಗೆ ತಿರುಪತಿಯಲ್ಲಿ ವಾಸಿಸುತ್ತಿದ್ದಳು. ಅಲ್ಲಿ ಆಕೆಯ ಪತಿ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಆದರೆ ಗಂಡ ಹೆಂಡತಿ ನಡುವಿನ ನಿರಂತರ ಕಿತ್ತಾಟದ ಬಳಿಕ ಪತ್ನಿ ತನ್ನ ಕಂದನ ಬದುಕಿಗೆ ಅಪಾಯವಾಗುವ ಸಾಧ್ಯತೆಯ ಚಿಂತೆಗೀಡಾಗಿದ್ದು, ಕೈಯಲ್ಲಿ ಒಂದು ರೂಪಾಯಿಯೂ ಇಲ್ಲದೇ  ಮನೆ ಬಿಟ್ಟು ಹೋಗುವ ನಿರ್ಧಾರ ಮಾಡಿದ್ದಾಳೆ. ಆದಾಗ್ಯೂ ಮಹಿಳೆ ತನ್ನ ಪತಿ ಹಾಗೂ ಮನೆಯವರು ವಿಳಾಸ ನೀಡಲು ಮನಸ್ಸು ಮಾಡುತ್ತಿಲ್ಲ. ಮಹಿಳೆಯರ ರಕ್ಷಣೆಗೆ ಇರುವ ದಿಶಾ ಪೊಲೀಸ್ ಈ ಮಹಿಳೆ ಬಗ್ಗೆ ಮುತುವರ್ಜಿ ವಹಿಸಿದೆ. ಅಲ್ಲದೇ ಆಕೆಯ ಪತಿ ಮನೆಯವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಪ್ರಯತ್ನಿಸುತ್ತಿದ್ದಾರೆ. 

Women Health : ಟೈಂ ಪಾಸ್ ಆಗ್ತಿಲ್ಲ ಅಂತಾ ಮೊಬೈಲ್ ಹಿಡಿಯೋ ಗರ್ಭಿಣಿಯರೇ ಇದನ್ನೋದಿ
 

ಕಳೆದ ಏಪ್ರಿಲ್‌ನಲ್ಲಿ ದೆಹಲಿಯ ಆನಂದ್ ವಿಹಾರ್‌ ಮೆಟ್ರೋ ನಿಲ್ದಾಣದಲ್ಲಿ ಗರ್ಭಿಣಿಯೊಬ್ಬರು (Pregnant) ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿತ್ತು. ಕೂಡಲೇ ಮಹಿಳಾ ಸಿಐಎಸ್‌ಎಫ್ ಸಿಬ್ಬಂದಿ ಮತ್ತು ಇತರ ಮಹಿಳಾ ಪ್ರಯಾಣಿಕರು ಆಕೆಯ ನೆರವಿಗೆ ಧಾವಿಸಿ ಬಂದು ಮಾನವೀಯತೆ ಮೆರೆದರು. 22 ವರ್ಷದ ಮಹಿಳೆಯೊಬ್ಬರು ಗುರುವಾರ ಆನಂದ್ ವಿಹಾರ್ ಮೆಟ್ರೋ ನಿಲ್ದಾಣದ ಪ್ಲಾಟ್‌ಫಾರ್ಮ್ ನಂಬರ್ 3ರಲ್ಲಿ ಮೆಟ್ರೋಗಾಗಿ ಕಾಯುತ್ತಿದ್ದಾಗ ಹೆರಿಗೆ ನೋವು ಕಾಣಿಸಿಕೊಂಡಿದೆ. ನಂತರ ಶಿಫ್ಟ್ ಇನ್‌ಚಾರ್ಜ್‌ನ ನಿರ್ದೇಶನದ ಮೇರೆಗೆ ಸಿಐಎಸ್‌ಎಫ್ ಕಾನ್‌ಸ್ಟೆಬಲ್ ಅನಾಮಿಕಾ ಕುಮಾರಿ ತಕ್ಷಣ ಸ್ಥಳಕ್ಕೆ ತಲುಪಿದರು. ಇತರ ಮಹಿಳಾ ಪ್ರಯಾಣಿಕರ ಸಹಾಯದಿಂದ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಪ್ಲಾಟ್‌ಫಾರ್ಮ್‌ನಲ್ಲಿಯೇ ಮಗುವನ್ನು ಹೆರಿಗೆ ಮಾಡಿಸಿದರು.

ಸಿಐಎಸ್‌ಎಫ್‌ ಈ ವಿಚಾರವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಮಾಡಿದೆ. CISF ಸಿಬ್ಬಂದಿಯ ತ್ವರಿತ ಪ್ರತಿಕ್ರಿಯೆ ಮತ್ತು ಅಗತ್ಯ ನೆರವು ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ತುರ್ತು ಹೆರಿಗೆಗೆ ಒಳಗಾಗಲು ಸಹಾಯ ಮಾಡಿದೆ @ ಆನಂದ್ ವಿಹಾರ್ ISBT, ಮೆಟ್ರೋ ನಿಲ್ದಾಣ. ನವಜಾತ ಶಿಶುವಿನ ಜೊತೆಗೆ ತಾಯಿಯನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ
ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
 

click me!