ಪ್ರೀತಿಪಾತ್ರರನ್ನು ಕಳೆದುಕೊಂಡ ಕ್ಷಣವನ್ನು ಎದುರಿಸುವುದು ಬದುಕಿನ ಅತೀ ಕಷ್ಟದ ಕೆಲಸ. ತಮ್ಮವರನ್ನು ಕಳೆದುಕೊಂಡು ದಿಕ್ಕು ತೋಚದೇ ಕೂರುವ ಕ್ಷಣ ಇಡೀ ಜಗತ್ತೇ ಕತ್ತಲೆನಿಸುವುದು. ಶೋಕವನ್ನು ತಡೆದುಕೊಳ್ಳುವುದಕ್ಕೆ ಆಧ್ಯಾತ್ಮ ಧೈರ್ಯ ನೀಡುವುದು. ಈ ಕಾರಣಕ್ಕೆ ಮನೆಯಲ್ಲಿ ಯಾರಾದರೂ ತೀರಿ ಕೊಂಡರೆ ಭಜನೆ ಪೂಜೆ, ಕುರಾನ್ ಓದೋದು ಬೈಬಲ್ ಓದುವುದು ಮಾಡುವ ಸಂಪ್ರದಾಯ ಆಯಾಯ ಧರ್ಮಗಳಲ್ಲಿದೆ. ಸಾವಿಗೀಡಾದವರನ್ನು ಗೌರವಯುತವಾಗಿ ಕಳಿಸಿಕೊಡುವುದು ಎಲ್ಲಾ ಧರ್ಮಗಳ ಸಂಪ್ರದಾಯ. ಅದರಲ್ಲೂ ಹಿಂದೂ ಸಮುದಾಯದಲ್ಲಿ ತಮಟೆ, ಚೆಂಡೆ, ಬಡಿಯುತ್ತಾ ಶವಯಾತ್ರೆ ಮುಂದೆ ಕುಣಿದು ಕುಪ್ಪಳಿಸುತ್ತಾ ಮೃತರನ್ನು ಕಳಿಸಿ ಕೊಡುತ್ತಾರೆ. ಆಯಾಯ ಪ್ರದೇಶಕ್ಕೆ ತಕ್ಕಂತೆ ಸಂಪ್ರದಾಯಗಳು ಬದಲಾಗುತ್ತವೆ. ಆದರೆ ಇಲ್ಲೊಂದು ಕಡೆ ಸಾವಿನ ಮನೆಯದ್ದು ಎನ್ನಲಾದ ವೀಡಿಯೋವೊಂದು ವೈರಲ್ ಆಗಿದ್ದು ಬೆಚ್ಚಿ ಬೀಳಿಸುವಂತಿದೆ.
ಅಂತ್ಯಕ್ರಿಯೆಗೆ ಆಯೋಜಿಸಿದ ಸಮಾರಂಭದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್‌ರ ವಾಂಟೆಡ್ ಹಾಡಿಗೆ ಯುವತಿಯೊಬ್ಬಳು ಬೆಲ್ಲಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋದಲ್ಲಿ ಕಾಣಿಸುವಂತೆ ಶ್ರದ್ದಾಂಜಲಿ ಸಮಾರಂಭ ಎಂದು ವೇದಿಕೆಯ ಹಿಂಭಾಗದಲ್ಲಿ ಬ್ಯಾನರ್ ಇದೆ. ಮುಂದೆ ಹುಡುಗಿ ಸಖತ್ ಆಗಿ ಬೆಲ್ಲಿ ಡಾನ್ಸ್ ಮಾಡುತ್ತಿದ್ದಾಳೆ. ಲೇ ಲೇ ಮಜಾ ಲೆ ಎಂಬ ಹಾಡಿಗೆ ನೃತ್ಯಗಾತಿ ಕುಣಿಯುತ್ತಿದ್ದರೆ ವಿಡಿಯೋಗ್ರಾಫರ್ ಆಕೆಯ ನೃತ್ಯವನ್ನು ವಿಡಿಯೋ ಮಾಡುತ್ತಿದ್ದಾರೆ.
ಮೀಮ್ ಪೇಜೊಂದು ಈ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದೆ. ವಿಡಿಯೋ ವೈರಲ್ ಆಗಿದ್ದು ಇದು ಯಾವ ರೀತಿಯ ಶ್ರದ್ಧಾಂಜಲಿ ಸಭೆ ಎಂದು ಜನರು ಬೆಚ್ಚಿ ಬಿದ್ದಿದ್ದಾರೆ. ಹಲವರು ಇದನ್ನು ಅಗೌರವ ಎಂದು ಕರೆದರೆ, ಇತರರು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಶ್ರದ್ದಾಂಜಲಿ ಕೆ ನಾಮ್ ಪೆ ಶ್ರದ್ಧಾ ಔರ್ ಅಂಜಲಿ ಕೊ ನಾಚಾ ದಿಯಾ (ಶ್ರದ್ದಾಂಜಲಿ ಸಮಾರಂಭದಲ್ಲಿ ಶ್ರದ್ಧಾ ಹಾಗೂ ಅಂಜಲಿಯ ನೃತ್ಯ) ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ತಮಾಷೆಯಾಗಿ 'ಹಮಾರಿ ಆಖ್ರಿ ಇಚ್ಚಾ ಹೈ ಕಿ ಮರ್ನೆ ಕೆ ಬಾದ್ ಕೋಯಿ ನಾ ರೋಯೆ' (ನಮ್ಮ ಸಾವಿನ ನಂತರ ಯಾರೂ ಅಳಬಾರದು ಎಂಬುದು ನಮ್ಮ ಕೊನೆ ಆಸೆ) ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು 'ದಾದಾ ಜಿ ಕಿ ಅಖ್ರಿ ಇಚ್ಚಾ ಯಾಹಿ ಥಿ' (ತಾತ ನ ಕೊನೆ ಆಸೆ ಇದೆ ಆಗಿತ್ತು) ಎಂದು ಕಾಮೆಂಟ್ ಮಾಡಿದ್ದಾರೆ.
ಮಹಿಳೆಯೊಂದಿಗೆ ಅಂಕಲ್ ಡ್ಯಾನ್ಸ್ : ತಳ್ಳಾಡಿದ್ದಕ್ಕೆ ಬಿತ್ತು ಯುವಕನಿಂದ ಒದೆ
ಮದುವೆ ಇರಲಿ ಮಸಣಕ್ಕೆ ಹೋಗುವುದೇ ಇರಲಿ ಡಾನ್ಸ್ ವೊಂದು ಇರಲೇಬೇಕು. ಮದುವೆಯಲ್ಲೂ ಡಾನ್ಸ್ ಮಾಡ್ತಾರೆ. ಶವಯಾತ್ರೆಯಲ್ಲೂ ಡಾನ್ಸ್ ಮಾಡ್ತಾರೆ. ಇತ್ತೀಚೆಗೆ ಮದುವೆ ಮನೆಯೊಂದರ ಡಾನ್ಸೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮದುವೆ ಅಂದ ಮೇಲೆ ಅಲ್ಲಿ ಮೋಜು ಮಸ್ತಿ ಕುಡಿತ ಕುಣಿತ ಎಲ್ಲಾ ಸಾಮಾನ್ಯವಾಗಿದೆ. ಆದರೆ ಒಡಿಶಾದಲ್ಲಿ ನಡೆದ ಮದುವೆಯೊಂದರಲ್ಲಿ ಇವಿಷ್ಟೇ ಅಲ್ಲದೇ ಮದುವೆಗೆ ವಿಶೇಷ ಅತಿಥಿಯೊಬ್ಬರನ್ನು ಕರೆತಂದಿದ್ದರು. ಹಾವು, ಹೌದು ನಾಗರಹಾವು. ವರನ ಕಡೆಯ ದಿಬ್ಬಣದವರು ವಧುವಿನ ಮನೆಗೆ ಬಂದಾಗ ಅಲ್ಲಿ ಹಾವಾಡಿಗನನ್ನು ಕರೆಸಿದ ವಧುವಿನ ಕಡೆಯವರು ಅಲ್ಲಿ ಸಖತ್ ಮನೋರಂಜನೆ ನೀಡಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ಹಾವಾಡಿಗ ಬಿದಿರಿನ ಬುಟ್ಟಿಯೊಂದರಲ್ಲಿ ಜೀವಂತ ಹಾವನ್ನು ಇರಿಸಿದ್ದು ಅದರೆದುರು ಪುಂಗಿ ಊದುತ್ತಾ ಡಾನ್ಸ್ ಮಾಡುತ್ತಿದ್ದಾನೆ.
ಏನ್ ಸ್ಟೆಪ್ ಗುರು: ಬಸ್ ಸ್ಟ್ಯಾಂಡ್‌ನಲ್ಲಿ ತಾತನ ಡಾನ್ಸ್‌ಗೆ ಯುವಕರೇ ಪೆಚ್ಚು
ಹಾವು ಇರುವ ಬುಟ್ಟಿಯನ್ನು ಡಾನ್ಸ್ ಮಾಡುವವರ ಮಧ್ಯದಲ್ಲಿ ಇಡಲಾಗಿದೆ. ಜೊತೆಗೆ ಹಾವಾಡಿಗ ಪುಂಗಿ ಊದುತ್ತಿದ್ದರೆ ಅಲ್ಲಿ ಸೇರಿದ ವರನ ಕಡೆಯ ನೂರಾರು ಜನ ಯುವಕರು ಪುಂಗಿ ಸದ್ದಿಗೆ ತಕ್ಕಂತೆ ಸಖತ್ ಆಗಿ ಕುಣಿಯುತ್ತಿದ್ದಾರೆ. ಅಲ್ಲಿ ಸೇರಿದ ಬಹುತೇಕರು ಹಾವಿನಂತೆಯೇ ಡಾನ್ಸ್ ಮಾಡುತ್ತಿದ್ದು, ಇದು ನೋಡುಗರಿಗೆ ಮನೋರಂಜನೆ ನೀಡುತ್ತಿದೆ.