
ತನ್ನನ್ನು ಗರ್ಭಿಣಿಯಾಗಿಸಿದ ಗೆಳೆಯನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಎಸ್ಕೇಪ್ ಆದಂತಹ ಆಘಾತಕಾರಿ ಘಟನೆ ಛತ್ತೀಸ್‌ಗಢದ ರಾಯ್ಪುರದಲ್ಲಿ ನಡೆದಿದೆ. 16 ವರ್ಷದ ಗರ್ಭಿಣಿ ತನ್ನ 20 ವರ್ಷದ ಬಾಯ್‌ಫ್ರೆಂಡ್‌ಗೆ ಚಾಕುವಿನಿಂದ ಹಲವು ಬಾರಿ ಇರಿದು ಕೊಲೆ ಮಾಡಿದ್ದಾಳೆ. ರಾಯ್ಪುರದ ಸ್ಟೇಷನ್ ರಸ್ತೆಯ ಲಾಡ್ಜೊಂದರಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.
ಪೊಲೀಸರು ಕೊಲೆಯಾದ ಯುವಕನನ್ನು ಮೊಹಮ್ಮದ್ ಸದ್ದಾಂ ಎಂದು ಗುರುತಿಸಿದ್ದು, ಬಿಹಾರ ಮೂಲದ ಈತ ರಾಯ್ಪುರ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ. ಪ್ರಾಥಮಿಕ ತನಿಖೆಯ ಪ್ರಕಾರ, ಸದ್ದಾಂ ಹಾಗೂ ಆತನ ಗೆಳತಿ 16ರ ಹರೆಯದ ಬಾಲಕಿ ಸೆಪ್ಟೆಂಬರ್ 27ರಂದು ಇಲ್ಲಿನ ಸ್ಟೇಷನ್ ರಸ್ತೆಯ ಲಾಡ್ಜೊಂದಕ್ಕೆ ಬಂದಿದ್ದರು. ಸಿಸಿಟಿವಿಯಲ್ಲಿ ಅವರು ಕೊಠಡಿಯಿಂದ ಒಮ್ಮೆ ಹೊರಬಂದಿರುವ ದೃಶ್ಯ ಸೆರೆಯಾಗಿದೆ. ಆದರೆ ಸೆಪ್ಟೆಂಬರ್ 28ರಂದು ಈ ಯುವತಿ ಮಾತ್ರ ಲಾಡ್ಜ್‌ನಿಂದ ಹೊರಹೋಗಿದ್ದು, ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ ಮರುದಿನ ಇಬ್ಬರೂ ಬಾರದೇ ಹೋದಾಗ ಅನುಮಾನಗೊಂಡ ಲಾಡ್ಜ್ ಸಿಬ್ಬಂದಿ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ನಂತರ ಸೆಪ್ಟೆಂಬರ್ 29ರಂದು ಗಂಜ್ ಪೊಲೀಸರು ನಕಲಿ ಕೀ ಬಳಸಿ ಇವರು ಉಳಿದಿದ್ದ ಲಾಡ್ಜ್ ರೂಮ್‌ನ ಬಾಗಿಲು ತೆರೆದಾಗ ಸದ್ದಾಂ ದೇಹ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಾಣಿಸಿದೆ.
ಆತನ ಕುತ್ತಿಗೆ ಬೆನ್ನು, ಹಾಗೂ ದೇಹದ ಇತರ ಭಾಗಗಳು ಸೇರಿ ಸುಮಾರು 5 ಕಡೆ ಇರಿತದ ಗುರುತುಗಳಿದ್ದವು. ಘಟನಾ ಸ್ಥಳವೂ ಇಬ್ಬರ ನಡುವೆ ಭಾರಿ ಜಗಳ ಆಗಿರುವುದನ್ನು ಸೂಚಿಸುತ್ತಿತ್ತು. ಬಾಯ್‌ಫ್ರೆಂಡ್‌ಗೆ ಇರಿದು ಕೊಲೆ ಮಾಡಿದ ನಂತರ ಬಾಲಕಿ ಘಟನೆ ನಡೆದ ಕೋಣೆಯ ಬಾಗಿಲಿಗೆ ಹೊರಗಿನಿಂದ ಬೀಗ ಹಾಕಿ ಬೀಗದ ಕೀಯನ್ನು ರೈಲ್ವೆ ಹಳಿಯ ಮೇಲೆ ಎಸೆದು ಬಿಲಾಸ್‌ಪುರಕ್ಕೆ ರೈಲು ಏರಿದ್ದಳು. ನಂತರ ಆಕೆ ಕೋನಿ ಎಂಬಲ್ಲಿರುವ ತನ್ನ ಮನೆಗೆ ಹೋಗಿದ್ದು, ತಾಯಿಯ ಬಳಿ ತಾನು ಮಾಡಿದ ಕೃತ್ಯದ ಬಗ್ಗೆ ಹೇಳಿಕೊಂಡಿದ್ದಾಳೆ. ತಾಯಿ ಆಕೆಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರ ತಿಳಿಸಿ ಮಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮದುವೆ ವಿಚಾರಕ್ಕೆ ಗಲಾಟೆ: ಚಾಕುವಿನಿಂದ ಇರಿದು ಕೊಲೆ ಮಾಡಿದ ಅಪ್ರಾಪ್ತೆ
ತಾನು ಆತನಿಂದ ಗರ್ಭಿಣಿಯಾಗಿದ್ದೆ. ಮದುವೆಯ ವಿಚಾರವಾಗಿ ನಮ್ಮ ಮಧ್ಯೆ ಜಗಳ ನಡೆದಿತ್ತು ಎಂದು ಆ 16ರ ಹರೆಯದ ಹುಡುಗಿ ಪೊಲೀಸರಿಗೆ ಹೇಳಿದ್ದಾಳೆ. ಲಾಡ್ಜ್‌ನಲ್ಲಿ ನಡೆದ ತೀವ್ರ ವಾಗ್ವಾದದ ಸಂದರ್ಭದಲ್ಲಿ ಸದ್ದಾಂ ಮೊಹಮ್ಮದ್ ನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ ಇದರಿಂದ ಜೀವಭಯವಾಗಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಸದ್ದಾಂ ನಿದ್ದೆ ಮಾಡುತ್ತಿದ್ದಾಗಲೇ ಆತನ ಮೇಲೆ ಹಲ್ಲೆ ಮಾಡಿ ಆತನನ್ನು ಕೊಲೆ ಮಾಡಿದ್ದಾಗಿ 16ರ ಹುಡುಗಿ ಹೇಳಿದ್ದಾಳೆ. ಕೊಲೆಯ ನಂತರ ಬಾಲಕಿ ತನ್ನೊಂದಿಗೆ ಕೊಂಡೊಯ್ದಿದ್ದ ಸದ್ದಾಂನ ಫೋನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗರ್ಭಿಣಿ ಬಾಲಕಿ ಅಪ್ರಾಪ್ತೆಯಾಗಿರುವುದರಿಂದ ಆಕೆಯನ್ನು ಬಿಲಾಸ್ಪುರ ಪೊಲೀಸರು ವಿಚಾರಣೆಗಾಗಿ ರಾಯ್ಪುರದ ಗಂಜ್ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಇದನ್ನೂ ಓದಿ: ದಿನಾ ಮನೆ ಕೆಲಸಕ್ಕೆ ಸಹಾಯ ಮಾಡುವ ಮಕ್ಕಳು ಬದುಕಿನಲ್ಲಿ ಹೆಚ್ಚು ಯಶಸ್ವಿಯಾಗ್ತಾರೆ: ಅಧ್ಯಯನ ವರದಿ
ಇದನ್ನೂ ಓದಿ: ಗರ್ಭ ನಿರೋಧಕ ಕಾಪರ್ ಟಿಯನ್ನು ಕೈಯಲ್ಲಿ ಹಿಡಿದುಕೊಂಡೆ ಜನಿಸಿದ ಮಿರಾಕಲ್ ಬೇಬಿ!
ಇದನ್ನೂ ಓದಿ:ಒಬ್ಬನೇ ಪ್ರಯಾಣಿಸುವ ಕಾರುಗಳಿಗೆ ವಾಹನ ದಟ್ಟಣೆ ತೆರಿಗೆ ವಿಧಿಸಲು ಮುಂದಾದ ರಾಜ್ಯ ಸರ್ಕಾರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ