Bihar ರೈಲ್ವೆ ಸ್ಟೇಷನ್‌ನಲ್ಲಿ ಅಶ್ಲೀಲ ವಿಡಿಯೋ ಪ್ರಸಾರ: ಅದು ನನ್ನದಿರಬಹುದು ಎಂದ ಪೋರ್ನ್ ಸ್ಟಾರ್‌

By BK Ashwin  |  First Published Mar 22, 2023, 1:28 PM IST

ಬಿಹಾರದ ಪಾಟ್ನಾ ಜಂಕ್ಷನ್ ರೈಲು ನಿಲ್ದಾಣದಲ್ಲಿ ಭಾನುವಾರ ಮೂರು ನಿಮಿಷಗಳ ಕಾಲ ಟಿವಿ ಪರದೆಯ ಮೇಲೆ ಪೋರ್ನ್‌ ಚಿತ್ರದ ವಿಡಿಯೋ ಪ್ರದರ್ಶನವಾಗಿದೆ. ಬೆಳಗ್ಗೆ 9.30ರ ಸುಮಾರಿಗೆ ಎಲ್‌ಸಿಡಿ ಪರದೆಯ ಮೇಲೆ ಜಾಹೀರಾತುಗಳ ಬದಲಾಗಿ ಅಶ್ಲೀಲ ವಿಡಿಯೋ ಕ್ಲಿಪ್ ಸುಮಾರು ಮೂರು ನಿಮಿಷಗಳ ಕಾಲ ಪ್ಲೇ ಆಗುತ್ತಿತ್ತು.


ನವದೆಹಲಿ (ಮಾರ್ಚ್‌ 22, 2023): ಯಾರೋ ಮಾಡಿದ ಹಿರಿಮೆಯನ್ನು ಇನ್ಯಾರೋ ಹೊತ್ತುಕೊಳ್ಳುವುದು ರಾಜಕೀಯದಲ್ಲಿ ಹಳೆಯ ವಿದ್ಯಮಾನ. ಆದರೆ ಇತ್ತೀಚೆಗೆ ಪಟನಾ ರೈಲ್ವೆ ನಿಲ್ದಾಣದ ಟೀವಿಗಳಲ್ಲಿ ಪ್ರಸಾರವಾದ ಅಶ್ಲೀಲ ಚಿತ್ರ ತನ್ನದೇ ಇರಬಹುದು ಎಂದು ನೀಲಿ ಚಿತ್ರಗಳ ಖ್ಯಾತ ತೆರೆ ಕೇಂದ್ರ ಲಸ್ಟ್ ಹೇಳಿಕೊಂಡಿದ್ದಾರೆ. ಪಟನಾದ ವಿಡಿಯೋ ಸುದ್ದಿಯನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಕೇಂದ್ರ ಲಸ್ಟ್, ಆ ವಿಡಿಯೋ ನನ್ನದ್ದೇ ಆಗಿರಲಿ ಎಂದು ಆಶಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಅವರ ಈ ಪೋಸ್ಟ್‌ಗೆ ಅಭಿಮಾನಿಗಳು ನಾನಾ ರೀತಿಯಲ್ಲಿ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.

ಬಿಹಾರದ ಪಾಟ್ನಾ ಜಂಕ್ಷನ್ ರೈಲು ನಿಲ್ದಾಣದಲ್ಲಿ ಭಾನುವಾರ ಮೂರು ನಿಮಿಷಗಳ ಕಾಲ ಟಿವಿ ಪರದೆಯ ಮೇಲೆ ಪೋರ್ನ್‌ ಚಿತ್ರದ ವಿಡಿಯೋ ಪ್ರದರ್ಶನವಾಗಿದೆ. ಬೆಳಗ್ಗೆ 9.30ರ ಸುಮಾರಿಗೆ ಎಲ್‌ಸಿಡಿ ಪರದೆಯ ಮೇಲೆ ಜಾಹೀರಾತುಗಳ ಬದಲಾಗಿ ಅಶ್ಲೀಲ ವಿಡಿಯೋ ಕ್ಲಿಪ್ ಸುಮಾರು ಮೂರು ನಿಮಿಷಗಳ ಕಾಲ ಪ್ಲೇ ಆಗುತ್ತಿತ್ತು.

Tap to resize

Latest Videos

ಇದನ್ನು ಓದಿ: ಛೀ ಪಾಪಿ..! ಬಿಹಾರದಲ್ಲಿ ಬೀದಿ ನಾಯಿಯ ಮೇಲೆ ಕಾಮುಕನಿಂದ ಅತ್ಯಾಚಾರ: ವಿಡಿಯೋ ವೈರಲ್‌ ಬಳಿಕ ಪೊಲೀಸರಿಂದ ತನಿಖೆ

ಈ ವೇಳೆ ರೈಲ್ವೇ ನಿಲ್ದಾಣದಲ್ಲಿದ್ದವರೊಬ್ಬರು ವಿಡಿಯೋ ಸೆರೆ ಹಿಡಿದಿದ್ದು, ಈ ವಿಡಿಯೋ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಗಮನ ಸೆಳೆದಿದೆ. ಈ ಘಟನೆಯ ನಂತರ, ಪೋರ್ನ್ ಸ್ಟಾರ್ ಕೇಂದ್ರ ಲಸ್ಟ್ ತನ್ನ ಫೋಟೋವನ್ನು ಟ್ವಿಟ್ಟರ್‌ನಲ್ಲಿ 'ಬಿಹಾರ ರೈಲು ನಿಲ್ದಾಣ' ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಹಂಚಿಕೊಂಡಿದ್ದಾರೆ. ಅಲ್ಲದೆ, ಆ ವಿಡಿಯೋ ತನ್ನದೇ ಇರಬಹುದು ಎಂದೂ ಆಶಿಸಿದ್ದಾಳೆ. 

ವಯಸ್ಕ ತಾರೆಯ ಟ್ವೀಟ್‌ಗಳಿಗೆ ಸಾಕಷ್ಟು ಕಾಮೆಂಟ್‌ಗಳು ಬಂದಿದ್ದು, ಮತ್ತು ಬಳಕೆದಾರರೊಬ್ಬರು ‘’ಇದು ನಿಮ್ಮ ವಿಡಿಯೋ, ಇದು ನಿಮಗೆ ತಿಳಿದಿದೆಯೇ" ಎಂದು ಬರೆದಿದ್ದಾರೆ. ಅದಕ್ಕೆ ಕೇಂದ್ರ ಲಸ್ಟ್, "ನಾನು ಹಾಗೆ ಭಾವಿಸುತ್ತೇನೆ, lol" ಎಂದು ಉತ್ತರಿಸಿದ್ದಾರೆ.

India 🇮🇳 pic.twitter.com/R2Mxfbfarc

— Kendra Lust™ (@KendraLust)

ಇದನ್ನೂ ಓದಿ: ರೈಲು ನಿಲ್ದಾಣದಲ್ಲಿ 3 ನಿಮಿಷ ಪೋರ್ನ್‌ ಪ್ಲೇ... ಮಕ್ಕಳ ಕರೆದುಕೊಂಡು ಓಡಿದ ಜನ

ಅವರು ಘಟನೆಯ ಬಗ್ಗೆ ನೇರ ಉಲ್ಲೇಖವನ್ನು ಮಾಡದಿದ್ದರೂ, ಜನರು ಅವರ ಟ್ವೀಟ್‌ಗೆ ಪ್ರಶ್ನೆಗಳು ಮತ್ತು ಸಲಹೆಗಳೊಂದಿಗೆ ಪ್ರತಿಕ್ರಿಯಿದ್ದು, ಅದಕ್ಕೆ ಅವರು "ನಾನು ಭಾವಿಸುತ್ತೇನೆ, lol" ಎಂದು ಉತ್ತರಿಸಿದರು. ಈ ಘಟನೆಯನ್ನು ರೈಲ್ವೇ ನಿಲ್ದಾಣದಲ್ಲಿದ್ದವರೊಬ್ಬರು ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಶೀಘ್ರವಾಗಿ ಈ ವಿಡಿಯೋ ಗಮನ ಸೆಳೆದಿತ್ತು. 

ದತ್ತಾ ಕಮ್ಯುನಿಕೇಷನ್ ಎಂಬ ಸಂಸ್ಥೆ ಈ ಟಿವಿಗಳಲ್ಲಿ ಜಾಹೀರಾತು ಪ್ರಸಾರದ ಉಸ್ತುವಾರಿಯನ್ನು ಗುತ್ತಿಗೆ ಪಡೆದಿತ್ತು. ಆ ಸಂಸ್ಥೆಯ ಸಿಬ್ಬಂದಿಯೇ ಈ ಅವಾಂತರವೆಬ್ಬಿಸಿದ್ದಾರೆ. ಇದರ ವಿರುದ್ಧ  ಸರ್ಕಾರಿ ರೈಲ್ವೆ ಪೊಲೀಸ್ ಕ್ರಮ ಕೈಗೊಳ್ಳಲು ನಿಧಾನ ಮಾಡಿದ ಹಿನ್ನೆಲೆಯಲ್ಲಿ  ರೈಲ್ವೆ ಪೊಲೀಸ್ ಪೋರ್ಟ್‌ ಈ ದತ್ತಾ ಕಮ್ಯುನಿಕೇಷನ್ ಸಂಸ್ಥೆಯನ್ನು ಸಂಪರ್ಕಿಸಿ ಪೋರ್ನ್‌ ಪ್ರಸಾರ ಆಗುತ್ತಿರುವ ವಿಚಾರ ತಿಳಿಸಿದೆ. ನಂತರವಷ್ಟೇ ಸಂಸ್ಥೆ ಅಶ್ಲೀಲ ಚಿತ್ರ ಪ್ರದರ್ಶನವನ್ನು ನಿಲ್ಲಿಸಿದೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: ಬಿಹಾರ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಮನೆ ಮೇಲೆ ಸಿಬಿಐ ರೇಡ್‌: ರಾಬ್ಢಿ ದೇವಿ ವಿಚಾರಣೆ

ಇನ್ನು, ಈ ಸಂಬಂಧ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಮತ್ತು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಗೆ ದೂರು ನೀಡಲಾಗಿದೆ. ಮೂಲಗಳ ಪ್ರಕಾರ, ಸಂಪೂರ್ಣ ತನಿಖೆಯ ನಂತರ, ರೈಲ್ವೆ ಅಧಿಕಾರಿಗಳು ರೈಲ್ವೆ ನಿಲ್ದಾಣದಲ್ಲಿ ದೂರದರ್ಶನ ಪರದೆಯ ಮೇಲೆ ಜಾಹೀರಾತುಗಳನ್ನು ಪ್ರಸಾರ ಮಾಡಲು ಏಜೆನ್ಸಿಗೆ ನೀಡಲಾಗಿದ್ದ ಗುತ್ತಿಗೆಯನ್ನು ರದ್ದುಗೊಳಿಸಿದ್ದಾರೆ.

click me!