ಪ್ರಧಾನಿ ಮೋದಿ ವಿರುದ್ಧ ದೆಹಲಿಯಲ್ಲಿ ಪೋಸ್ಟರ್‌, 100 ಎಫ್‌ಐಆರ್‌ ದಾಖಲು!

By Santosh NaikFirst Published Mar 22, 2023, 1:28 PM IST
Highlights

ಪ್ರಧಾನಿ ನರೇಂದ್ರ ಮೋದಿಯನ್ನು ವಿರೋಧಿಸಿ ದೆಹಲಿಯಲ್ಲಿ ಆಮ್‌ ಆದ್ಮಿ ಪಾರ್ಟಿಯಿಂದ ಬೃಹತ್‌ ಪೋಸ್ಟರ್‌ ಅಭಿಯಾನ ನಡೆಸಲಾಗಿದೆ. ಮೋದಿ ಹಟಾವೋ ದೇಶ್‌ ಬಚಾವೋ ಎನ್ನುವ ಬರಹವಿದ್ದ ಪೋಸ್ಟರ್‌ಅನ್ನು ದೆಹಲಿಯಲ್ಲಿ ಎಲ್ಲೆಡೆ ಅಂಟಿಸಲಾಗಿದ್ದು, ಈ ಕುರಿತಾಗಿ 100 ಎಫ್‌ಐಆರ್‌ ದಾಖಲಾಗಿದ್ದು 6 ಮಂದಿಯನ್ನು ಬಂಧಿಸಲಾಗಿದೆ.
 

ನವದೆಹಲಿ (ಮಾ.22): ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪೋಸ್ಟರ್ ಅಂಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 100 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಪ್ರಿಂಟಿಂಗ್ ಪ್ರೆಸ್ ಆಕ್ಟ್ ಮತ್ತು ಅರಣ್ಯನಾಶ ಕಾಯ್ದೆಯಡಿ ಎಲ್ಲಾ ಪ್ರಕರಣಗಳನ್ನು ದಾಖಲಿಸಲಾಗಿದೆ. ಆಮ್ ಆದ್ಮಿ ಪಕ್ಷದ (ಎಎಪಿ) ಕಚೇರಿಯಿಂದ ಹೊರಟ ವ್ಯಾನ್‌ನಿಂದ ಪೋಸ್ಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ 6 ಮಂದಿಯನ್ನು ಬಂಧಿಸಲಾಗಿದೆ. ಪೊಲೀಸರ ಪ್ರಕಾರ, ದೆಹಲಿಯ ಕೆಲವು ಭಾಗಗಳಲ್ಲಿ 'ಮೋದಿ ಹಟಾವೋ ದೇಶ್ ಬಚಾವೋ' ಘೋಷಣೆಯೊಂದಿಗೆ ಪೋಸ್ಟರ್‌ಗಳನ್ನು ಹಾಕಲಾಗಿದೆ. ಈ ಪೋಸ್ಟರ್‌ಗಳಲ್ಲಿ ಪ್ರಿಂಟಿಂಗ್ ಪ್ರೆಸ್‌ನ ವಿವರ ಇರಲಿಲ್ಲ. ಐಪಿ ಸ್ಟೇಟ್ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಪೋಸ್ಟರ್ ಹಾಕುವಾಗ ಪಪ್ಪು ಮೆಹ್ತಾ ಎಂಬ ವ್ಯಕ್ತಿಯನ್ನು ಹಿಡಿದಿದ್ದಾರೆ. ಪಪ್ಪು ಜತೆ 38 ಪೋಸ್ಟರ್ ಬಂಡಲ್‌ಗಳು ಪತ್ತೆಯಾಗಿವೆ. ಮೋದಿ ಹಠಾವೊ ದೇಶ್ ಬಚಾವೋ ಸ್ಲೋಗನ್‌ ಇರುವ 2000 ಕ್ಕೂ ಹೆಚ್ಚು ಪೋಸ್ಟರ್ ಗಳು ದೆಹಲಿಯಲ್ಲಿ ಕಂಡುಬಂದಿದೆ

ಈ ಪೈಕಿ ಇಬ್ಬರು ಪ್ರಿಂಟಿಂಗ್ ಪ್ರೆಸ್ ಮಾಲೀಕರನ್ನ ಸಹ ವಶಕ್ಕೆ ಪಡೆಯಲಾಗಿದೆ. ಉಳಿದಂತೆ ಆಮ್ ಆದ್ಮಿ ಕಚೇರಿಗೆ ಈ ಪೋಸ್ಟರ್ ಗಳನ್ನ ಹೊತ್ತು ಸಾಗುತ್ತಿದ್ದ ವ್ಯಾನ್ ವೊಂದನ್ನು ಸಹ ಪೊಲೀಸರು ಸೀಜ್ ಮಾಡಿದ್ದಾರೆ ಸಾರ್ವಜನಿಕ ಆಸ್ತಿಯನ್ನ ವಿರೂಪಗೊಳಿಸಿದ ಹಿನ್ನೆಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ 50000 ಕ್ಕೂ ಅಧಿಕ ಪೋಸ್ಟರ್ ಪ್ರಿಂಟ್ ಮಾಡುವಂತೆ ಪ್ರಿಂಟಿಂಗ್ ಪ್ರೆಸ್ ಗೆ ಆರ್ಡರ್ ನೀಡಲಾಗಿತ್ತು ಎಂದು ತನಿಖೆ ವೇಳೆ ತಿಳಿದುಬಂದಿದೆ. ಸದ್ಯ ದೆಹಲಿಯ ವಿವಿಧ ಭಾಗಗಳಲ್ಲಿ ಅಂಟಿಸಲಾದ ಪೋಸ್ಟರ್ ಗಳನ್ನ ತೆಗೆದುಹಾಕಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಆಪ್, ಇದೊಂದು ಸರ್ವಾಧಿಕಾರಿ ಧೋರಣೆ. ಮೋದಿ ಸರ್ಕಾರ ಸರ್ವಾಧಿಕಾರಿ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೊಲೀಸರ ಕ್ರಮವನ್ನು ಆಪ್‌ ಟೀಕಿಸಿದೆ. ಮೋದಿ ಸರ್ಕಾರದ ಸರ್ವಾಧಿಕಾರವು ಉತ್ತುಂಗದಲ್ಲಿದೆ. ಪೋಸ್ಟರ್ ಹಾಕಿದ್ದಕ್ಕೆ ಮೋದಿ ಜೀ 100 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಇದರಲ್ಲಿ ಆಕ್ಷೇಪಾರ್ಹ ಏನಿದೆ? ಪ್ರಧಾನಿ ಮೋದಿಯವರಿಗೆ ಗೊತ್ತಿರಲಿಕ್ಕಿಲ್ಲ, ಆದರೆ ಭಾರತ ಪ್ರಜಾಸತ್ತಾತ್ಮಕ ದೇಶ, ಪೋಸ್ಟರ್‌ಗೆ ಇಷ್ಟೊಂದು ಭಯ ಯಾಕೆ? ಎಂದು ಪ್ರಶ್ನೆ ಮಾಡಿದೆ. ಪೋಸ್ಟರ್ ವಿಚಾರಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷ ಗುರುವಾರ ಪ್ರತಿಭಟನೆ ನಡೆಸಲಿದೆ. ದೆಹಲಿಯ ಜಂತರ್ ಮಂತರ್ ನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಅರವಿಂದ್ ಕೇಜ್ರಿವಾಲ್ ಜೊತೆಗೆ ಪಂಜಾಬ್ ಸಿಎಂ ಭಗವಂತ್ ಮಾನ್ ಕೂಡ ಭಾಗವಹಿಸಲಿದ್ದಾರೆ.

ಮಾ. 26ರಿಂದ ಕೆ.ಆರ್‌.ಪುರ-ವೈಟ್‌ಫೀಲ್ಡ್ ಮೆಟ್ರೋ ಆರಂಭ: ನಮ್ಮ ಮೆಟ್ರೋಗೆ ಚಾಲನೆ ನೀಡುತ್ತಿರುವ ಮೊದಲ ಪ್ರಧಾನಿ ಮೋದಿ!

ಸುದ್ದಿ ಸಂಸ್ಥೆ ಎಎನ್‌ಐ ಈ ಕುರಿತಾಗಿ ವರದಿ ಮಾಡಿದ್ದು ವಿಶೇಷ ಪೊಲೀಸ್ ಆಯುಕ್ತ ದೀಪೇಂದ್ರ ಪಾಠಕ್, 'ಇಂತಹ 50 ಸಾವಿರ ಪೋಸ್ಟರ್‌ಗಳನ್ನು ತಯಾರಿಸಲು ಎರಡು ಪ್ರಿಂಟಿಂಗ್ ಪ್ರೆಸ್ ಸಂಸ್ಥೆಗಳು ಆರ್ಡರ್‌ ಪಡೆದಿದ್ದವು. ಕಂಪನಿಗಳಿಗೆ ಸಂಬಂಧಿಸಿದ ಉದ್ಯೋಗಿಗಳು ಭಾನುವಾರ ತಡರಾತ್ರಿಯಿಂದ ಸೋಮವಾರ ಬೆಳಗಿನವರೆಗೆ ನಗರದ ವಿವಿಧ ಪ್ರದೇಶಗಳಲ್ಲಿ ಈ ಪೋಸ್ಟರ್‌ಗಳನ್ನು ಹಾಕಿದ್ದಾರೆ. ಪ್ರಿಂಟಿಂಗ್ ಪ್ರೆಸ್ ಹೆಸರು ಪ್ರಕಟಿಸದ ಕಾರಣಕ್ಕೆ ಮಾಲೀಕರನ್ನು ಪೊಲೀಸರು ಬಂಧಿಸಿದ್ದಾರೆ.

ಇಂಡೋ-ಪಾಕ್ ಪಂದ್ಯ ನಡೆಯಲು ಮೋದಿ ಸಾಹೇಬ್ ಅವಕಾಶ ಮಾಡಿಕೊಡಿ: ಅಫ್ರಿದಿ ಮನವಿ

ಪೋಸ್ಟರ್ ಮುದ್ರಿಸಲು ಮಾರ್ಚ್ 17 ರಂದು ಆದೇಶ ಬಂದಿತ್ತು: ಮಾರ್ಚ್ 17 ರಂದು ಪೋಸ್ಟರ್ ಮುದ್ರಿಸಲು ಆದೇಶ ಬಂದಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಪೋಸ್ಟರ್ ಅಂಟಿಸುವ ಕಾರ್ಯ ಮಾರ್ಚ್ 20ರ ಬೆಳಗಿನ ಜಾವದವರೆಗೂ ನಡೆದಿದೆ ಎನ್ನಲಾಗಿದೆ.

click me!