ಬಿಹಾರದಲ್ಲಿ ಮರಳಿ ಬಂತಲ್ಲ ಜಂಗಲ್‌ ರಾಜ್‌? ರಾತ್ರೋರಾತ್ರಿ ಕೆರೆಯನ್ನೇ ಕದ್ದ ಖದೀಮರು!

By Santosh NaikFirst Published Dec 30, 2023, 10:00 PM IST
Highlights

ಹಲವಾರು ದಿನಗಳಿಂದ ರಾತ್ರಿ ಸಮಯದಲ್ಲಿ ಈ ಪ್ರದೇಶದಲ್ಲಿ ಟ್ರಕ್‌ಗಳು ಮತ್ತು ಯಂತ್ರೋಪಕರಣಗಳ ಸಂಚಾರದ ಬಗ್ಗೆ ಸ್ಥಳೀಯ ನಿವಾಸಿಗಳು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ನವದೆಹಲಿ (ಡಿ.30): ಅಚ್ಚರಿಯ ಬೆಳವಣಿಗೆಯಲ್ಲಿ ಬಿಹಾರದ ದರ್ಭಂಗಾ ಪ್ರದೇಶದಲ್ಲಿ ರಾತ್ರೀರಾತ್ರಿ ಕೆರೆಯನ್ನೇ ಖದೀಮರು ಕದ್ದಿದ್ದಾರೆ. ಹೌದು.. ನೀವು ಕೇಳ್ತಿರೋದು ಸತ್ಯ. ಇದರೊಂದಿಗೆ ಬಿಹಾರದಲ್ಲಿ ಜಂಗಲ್‌ ರಾಜ್‌ ಮತ್ತೆ ಆರಂಭವಾಗಿರುವ ಲಕ್ಷಣ ಕಂಡಿದೆ. ವಿಶ್ವವಿದ್ಯಾಲಯ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಕದಿರಾಬಾದ್ ಪ್ರದೇಶದಲ್ಲಿ 'ನೀಮ್ ಪೋಖರ್' ಹೆಸರಿನ ಕೆರೆಯಿತ್ತು. ದರ್ಬಂಗಾ ನಗರ ಪ್ರದೇಶದ ವಾರ್ಡ್ ಸಂಖ್ಯೆ 4 ಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಡಿಎಸ್ಪಿ ಅಮಿತ್ ಕುಮಾರ್ ಅವರು ನೀಮ್‌ ಪೋಖರ್ ಕೆರೆ ನಾಪತ್ತೆಯಾಗಿರುವುದನ್ನು ಗಮನಿಸಿದ್ದಾರೆ. ವರದಿಗಳ ಪ್ರಕಾರ, ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವ ಗುಂಪೊಂದು ಈ ಭೂಮಿಯನ್ನು ಅತಿಕ್ರಮಿಸಿದ್ದು, ಕೆರೆಗೆ ಮಣ್ಣು ತುಂಬಿದೆ. ಹಲವಾರು ದಿನಗಳಿಂದ ರಾತ್ರಿ ಸಮಯದಲ್ಲಿ ಈ ಪ್ರದೇಶದಲ್ಲಿ ಟ್ರಕ್‌ಗಳು ಮತ್ತು ಯಂತ್ರೋಪಕರಣಗಳ ಸಂಚಾರದ ಬಗ್ಗೆ ಸ್ಥಳೀಯ ನಿವಾಸಿಗಳು ಅಧಿಕಾರಿಗಳಿಗೆ ಅಲರ್ಟ್‌ ನೀಡಿದ್ದರು.

 ಪೊಲೀಸರ ಪ್ರಕಾರ, ಈ ಕರೆ ಅಥವಾ ಕೊಳ ಸರ್ಕಾರಕ್ಕೆ ಸೇರಿದ್ದು, ಆಡಳಿತವು ಅದರ ದಾಖಲೆಯನ್ನು ಕೂಡ ಹೊಂದಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಯಾವುದೇ ಕೆರೆ ಅಥವಾ ಕೊಳ ಕಾಣುತ್ತಿರಲಿಲ್ಲ.ಅದರ ಬದಲು ತಾತ್ಕಾಲಿಕ ಗುಡಿಸಲನ್ನು ನಿರ್ಮಿಸಿ ಅಲ್ಲಿ ಬೇಲಿ ಹಾಕಲಾಗಿತ್ತು. ನಿವಾಸಿಗಳಿಂದ ಹಲವಾರು ದೂರುಗಳ ಬಳಿಕ, ಕೆರೆಯನ್ನೂ ಸಂಪೂರ್ಣವಾಗಿ ಮಣ್ಣಿನಿಂದ ತುಂಬಿದ ನಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ನಿವಾಸಿಗಳ ಹೇಳುವ ಪ್ರಕಾರ, ಕಳೆದ ಒಂದರಿಂದ ಎರಡು ವಾರಗಳಿಂದ ಕೆರೆಯನ್ನು ಅನಧಿಕೃತವಾಗಿ ತುಂಬಿಸಲಾಗುತ್ತಿದೆ.

'ಅಬ್‌ ಲಂಚ್‌ ತುಮ್‌ ಆಮೇಲ್‌ ಆನಾ..' ಬ್ಯಾಂಕ್‌ನಲ್ಲಿ ಹೀಗ್‌ ಮಾತಾಡಿ ಕೆಲ್ಸ ಪಡ್ಕೊಂಡ ನಂದಿನಿ!

ರಾಜ್ಯದಲ್ಲಿ ಹಾಡಹಗಲಲ್ಲೇ ಇಂಥ ದಂಧೆ ಹೆಚ್ಚಾಗುತ್ತಿರುವಾಗಲೇ ಭೂಮಾಫಿಯಾಗಳು ಮತ್ತೆ ಸಕ್ರಿಯವಾಗಿದ್ದು, ವರ್ಷಗಟ್ಟಲೆ ಗಮನಿಸದೆ ಬಿಟ್ಟರೆ ಸರ್ಕಾರಿ ಭೂಮಿ ಮಾತ್ರವಲ್ಲದೆ ಖಾಸಗಿಯವರ ಜಮೀನುಗಳನ್ನೂ ಒತ್ತುವರಿ ಮಾಡಿಕೊಳ್ಳುತ್ತಿವೆ. ಹೂಡಿಕೆದಾರರ ಶೃಂಗಸಭೆಗಳ ಮೂಲಕ ಬಿಹಾರ ತನ್ನ ಇಮೇಜ್ ಅನ್ನು ಸುಧಾರಿಸಲು ಪ್ರಯತ್ನಿಸುತ್ತಿರುವಾಗ, ಅಂತಹ ಸುದ್ದಿ ಯಾವುದೇ ನಿರೀಕ್ಷಿತ ಹೂಡಿಕೆದಾರರಿಗೆ ನೆಗೆಟಿವ್‌ ಆಗಿ ಕಾರ್ಯನಿರ್ವಹಿಸಬಹುದು.

72 ಲಕ್ಷ ವೋಟ್‌ ಪಡೆದ ಬಿಗ್‌ ಬಾಸ್‌ ಸ್ಪರ್ಧಿ, ಕಿಚ್ಚ ರಿವಿಲ್‌ ಮಾಡಿದ್ರು ಅಚ್ಚರಿಯ ನಂಬರ್‌!

ಬಿಹಾರದಲ್ಲಿ ಇಂತಹ ಘಟನೆ ಇದೇ ಮೊದಲಲ್ಲ. ಇದಕ್ಕೂ ಮೊದಲು, ಇಡೀ ರೈಲು ಹಳಿ, ರೈಲು, ರೈಲು ಎಂಜಿನ್ ಮತ್ತು ರಸ್ತೆಯನ್ನು ಸಹ ಬಿಹಾರದಲ್ಲಿ ಕದಿಯಲಾಗಿತ್ತು.
 

click me!