ಶ್ರೀರಾಮ ಭಕ್ತರಿಗೆ ಅಯೋಧ್ಯೆಯಿಂದ ಪ್ರಧಾನಿ ಮೋದಿ ವಿಶೇಷ ಮನವಿ!

By Santosh NaikFirst Published Dec 30, 2023, 7:16 PM IST
Highlights


ಜನವರಿ 22 ರಂದು ಅಯೋಧ್ಯೆಗೆ ಬರಲು ನಿರ್ಧರಿಸಬೇಡಿ ಎಂದು ದೇಶದ ಎಲ್ಲಾ ರಾಮ ಭಕ್ತರಿಗೆ ಪ್ರಧಾನಿ ಮೋದಿ ಅಯೋಧ್ಯೆಯಿಂದಲೇ ಮನವಿ ಮಾಡಿದ್ದಾರೆ. "ಭಕ್ತರು ಶ್ರೀರಾಮನಿಗೆ ತೊಂದರೆ ನೀಡುವ ಯಾವುದನ್ನೂ ಮಾಡೋದಿಲ್ಲ" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
 

ನವದೆಹಲಿ (ಡಿ.30): ಅಯೋಧ್ಯೆಯಲ್ಲಿ ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣವನ್ನು ಶನಿವಾರ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ರೈಲುಗಳು ಮತ್ತು ನವೀಕರಿಸಿದ ರೈಲು ನಿಲ್ದಾಣ ಸೇರಿದಂತೆ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟನೆ ಮಾಡಿದ್ದು ಮಾತ್ರವಲ್ಲದೆ, ದೇಶದ ಶ್ರೀರಾಮ ಭಕ್ತರಿಗೆ ವಿಶೇಷ ಮನವಿ ಮಾಡಿದ್ದಾರೆ. ಭಗವಾನ್‌ ರಾಮನ ಭಕ್ತರು ಅಯೋಧ್ಯೆಯಲ್ಲಿ ತೊಂದರೆಯಾಗುವಂಥ ಯಾವುದನ್ನೂ ಮಾಡಬಾರದು ಎಂದು ಹೇಳಿದ್ದಾರೆ. 'ನಾನು ನಿಮಗೆ ಕೈಮುಗಿದು ಮನವಿ ಮಾಡುತ್ತೇನೆ. ಜನವರಿ 22 ರಂದು ಯಾವುದೇ ಕಾರಣಕ್ಕೂ ರಾಮ ಮಂದಿರಕ್ಕೆ ಬರುವ ನಿರ್ಧಾರ ಮಾಡಬೇಡಿ. ಮೊದಲಿಗೆ ಈ ಕಾರ್ಯಕ್ರಮ ಯಶಸ್ವಿಯಾಗುವ ಅವಕಾಶ ನೀಡಿ. ಜನವರಿ 23 ರ ನಂತರ ನೀವು ಯಾವಾಗ ಬೇಕಾದರೂ ಬರಬಹುದು. ಪ್ರತಿಯೊಬ್ಬರೂ ಕಾರ್ಯಕ್ರಮಕ್ಕೆ ಹಾಜರಾಗಲು ಬಯಸುತ್ತಾರೆ, ಆದರೆ ಅದು ಲಾಜಿಸ್ಟಿಕ್ಸ್ ಮತ್ತು ಭದ್ರತಾ ಕಾರಣಗಳಿಂದಾಗಿ ಎಲ್ಲರಿಗೂ ಅವಕಾಶ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ನೀವು 550 ವರ್ಷಗಳಿಗೂ ಹೆಚ್ಚು ಕಾಲ ಕಾಯುತ್ತಿದ್ದೀರಿ. ಇನ್ನೂ ಸ್ವಲ್ಪ ಸಮಯ ಕಾಯಿರಿ" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

'ಅಯೋಧ್ಯೆಗೆ ಬರುವ ಬದಲು ಜನವರಿ 22 ರಂದು ಮನೆಯಲ್ಲಿ ದೀಪವನ್ನು ಬೆಳಗಿಸಿ. ಆ ದಿನ ಭಾರತದಾದ್ಯಂತ ದೀಪಾವಳಿಯಾಗಬೇಕು" ಎಂದು ಪ್ರಧಾನಿ ಮೋದಿ ದೇಶವಾಸಿಗಳಲ್ಲಿ ಮನವಿ ಮಾಡಿದ್ದಾರೆ.

ಅದ್ಧೂರಿ ಕಾರ್ಯಕ್ರಮಕ್ಕೆ ಸಿದ್ಧತೆಗಳು ವರ್ಷಗಳಿಂದ ನಡೆಯುತ್ತಿದೆ. ಇದಕ್ಕೆ ಯಾವುದೇ ಅಡ್ಡಿ ಉಂಟಾಗಬಾರದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 'ಇಲ್ಲಿ ಜನಸಂದಣಿ ಮಾಡಬೇಡಿ. ದೇವಸ್ಥಾನ ಎಲ್ಲಿಯೂ ಹೋಗೋದಿಲ್ಲ. ಇದು ಶತಮಾನಗಳವರೆಗೆ ಇರುತ್ತದೆ. ನೀವು ಜನವರಿ, ಫೆಬ್ರವರಿ, ಅಥವಾ ಮಾರ್ಚ್ ಅಥವಾ ಮುಂದಿನ ವರ್ಷ ಯಾವಾಗ ಬೇಕಾದರೂ ಬರಬಹುದು. ಆದರೆ ಜನವರಿ 22 ರಂದು ಬರಬೇಡಿ. ದೇವಾಲಯದ ಆಡಳಿತ ಮಂಡಳಿಗೆ ಸಮಸ್ಯೆ ಆಗುವಂಥ ಯಾವುದೇ ಕೆಲಸವನ್ನು ಭಕ್ತಾದಿಗಳು ಮಾಡಬಾರದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಸಮಾರಂಭಕ್ಕೆ ಕೆಲವೇ ಜನರನ್ನು ಆಹ್ವಾನಿಸಲಾಗಿದೆ ಮತ್ತು 23 ರ ನಂತರ ಭೇಟಿ ನೀಡಲು ಸುಲಭವಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

| Ayodhya, Uttar Pradesh: PM Narendra Modi says, "I have a request to all. Everyone has a wish to come to Ayodhya to be a part of the event on 22 January. But you know it is not possible for everyone to come. Therefore, I request all Ram devotees that once the formal… pic.twitter.com/pbL81WrsbZ

— ANI (@ANI)

Latest Videos

ಹಿಂದು ಧರ್ಮಕ್ಕೆ ಸೇರಿದ 9 ಸದಸ್ಯರ ಮುಸ್ಲಿಂ ಕುಟುಂಬ!

ಅಯೋಧ್ಯಾ ನಗರವನ್ನು ದೇಶದಲ್ಲೇ ಅತ್ಯಂತ ಸ್ವಚ್ಛ ನಗರವನ್ನಾಗಿ ಮಾಡಬೇಕು ಎಂದು ಅಯೋಧ್ಯೆ ಜನರನ್ನು ಒತ್ತಾಯಿಸಿದ ಪ್ರಧಾನಿ ಮೋದಿ, “ಅಯೋಧ್ಯೆ ಈಗ ಲಕ್ಷಗಟ್ಟಲೆ ಸಂದರ್ಶಕರಿಗೆ ಆತಿಥ್ಯ ವಹಿಸಲು ಸಿದ್ಧರಾಗಿರಬೇಕು ಮತ್ತು ಅದು ಶಾಶ್ವತವಾಗಿ ಮುಂದುವರಿಯುತ್ತದೆ. ಅಯೋಧ್ಯೆಯನ್ನು ದೇಶದ ಅತ್ಯಂತ ಸ್ವಚ್ಛ ನಗರವನ್ನಾಗಿ ಮಾಡಲು ಅಯೋಧ್ಯೆಯ ಜನರು ಪ್ರತಿಜ್ಞೆ ಮಾಡಬೇಕಾಗಿದೆ' ಎಂದು ಹೇಳಿದ್ದಾರೆ.

Video: ಜೈ ಶ್ರೀರಾಮ್‌ ಘೋಷಣೆಯೊಂದಿಗೆ ದೆಹಲಿಯಿಂದ ಅಯೋಧ್ಯೆಗೆ ಹೊರಟ ಮೊದಲ ವಿಮಾನ

ಜನವರಿ 14 ರಿಂದ ಎಲ್ಲಾ ದೇವಾಲಯಗಳಲ್ಲಿ ಸ್ವಚ್ಛತಾ ಅಭಿಯಾನ: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಗೆ ಮುಂಚಿತವಾಗಿ, ಭಾರತದ ಎಲ್ಲಾ ದೇವಾಲಯಗಳು ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಬೇಕು ಎಂದು ಪ್ರಧಾನಿ ಮೋದಿ ಹೇಳಿದರು ಮತ್ತು ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಜನವರಿ 14 ರಿಂದ 8 ದಿನಗಳ ಸ್ವಚ್ಛತಾ ಅಭಿಯಾನವನ್ನು ಘೋಷಣೆ ಮಾಡಿದ್ದಾರೆ. “ರಾಮನು ಇಡೀ ದೇಶಕ್ಕೆ ಸೇರಿದವನು. ಮತ್ತು ಈಗ ಅವರು ಬರುತ್ತಿದ್ದಾರೆ, ಯಾವುದೇ ದೇವಾಲಯವು ಎಷ್ಟೇ ಚಿಕ್ಕದಾಗಿರಲಿ ಅಥವಾ ದೊಡ್ಡದಿರಲಿ ಕೊಳಕು ಉಳಿಯಬಾರದು ಎಂದು ಪ್ರಧಾನಿ ಮೋದಿ ಹೇಳಿದರು.

click me!