ಹೊಸ ವರ್ಷಾಚರಣೆಗೆ ವಾರ್ನಿಂಗ್,4 ಸಾವಿರ ಗಡಿ ತಲುಪಿದ ಸಕ್ರೀಯ ಕೋವಿಡ್ ಪ್ರಕರಣ!

By Suvarna News  |  First Published Dec 30, 2023, 8:55 PM IST

ಹೊಸ ವರ್ಷಾಚರಣೆಗೆ ತಯಾರಿ ಜೋರಾಗಿದೆ. ಪಬ್, ಕ್ಲಬ್, ಬಾರ್ ಫುಲ್ ಬುಕ್ ಆಗಿದೆ. ಸಾರ್ವಜನಿಕ ಪಾರ್ಟಿಗಳ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಆದರೆ ಇದರ ಬೆನ್ನಲ್ಲೇ ಕೋವಿಡ್ ಆತಂಕವೂ ಹೆಚ್ಚಾಗಿದೆ.  ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 743 ಕೋವಿಡ್ ಪ್ರಕರಣ ದಾಖಲಾಗಿದೆ. 
 


ನವದೆಹಲಿ(ಡಿ.30) ವಿಶ್ವವೇ ಹೊಸ ವರ್ಷಾಚರಣೆಗೆ ಸಜ್ಜಾಗಿದೆ. ಇದಕ್ಕೆ ಭಾರತವೂ ಹೊರತಾಗಿಲ್ಲ. ಬೆಂಗಳೂರು ಸೇರಿದಂತೆ ಹಲವು ನಗರದಲ್ಲಿ ಬಹುದೊಡ್ಡ ಪಾರ್ಟಿಗಳನ್ನು ಆಯೋಜಿಸಲಾಗುತ್ತಿದೆ. ಇದರ ನಡುವೆ ಕೋವಿಡ್ ಆತಂಕವೂ ಹೆಚ್ಚಾಗಿದೆ. ಕಳೆದ 24 ಗಂಟೆಯಲ್ಲಿ 743 ಕೋವಿಡ್ ಪ್ರಕರಣ ದಾಖಲಾಗಿದೆ. ಇದೀಗ ಭಾರತದಲ್ಲಿ ಕೋವಿಡ್ ಸಕ್ರೀಯ ಪ್ರಕರಣಗಳ ಸಂಖ್ಯೆ 3,997ಕ್ಕೆ ಏರಿಕೆಯಾಗಿದೆ. ಈ ಮೂಲಕ 2020ರಿಂದ ಇಲ್ಲೀವರೆಗೆ ಭಾರತದಲ್ಲಿ ದಾಖಲಾದ ಕೋವಿಡ್ ಪ್ರಕರಣ ಸಂಖ್ಯೆ 4,50,12,484. 

ಕಳೆದ 24 ಗಂಟೆಯಲ್ಲಿ ಕೋವಿಡ್‌ನಿಂದ 7 ಮಂದಿ ಮೃತಪಟ್ಟಿದ್ದಾರೆ. ಕೇರಳದಲ್ಲಿ 3, ಕರ್ನಾಟಕದಲ್ಲಿ 2 ಹಾಗೂ ಚತ್ತೀಸಘಡ ಹಾಗೂ ತಮಿಳುನಾಡಿನಲ್ಲಿ ಒಂದೊಂದು ಸಾವು ಸಂಭವಿಸಿದೆ. ಕರ್ನಾಟದಲ್ಲಿಂದು 201 ಕೋವಿಡ್ ಪ್ರಕರಣ ದಾಖಲಾಗಿದೆ. ಕರ್ನಾಟಕದ ಸಕ್ರೀಯ ಪ್ರಕರಣ ಸಂಖ್ಯೆ 833ಕ್ಕೆ ಏರಿಕೆಯಾಗಿದೆ. ಇತ್ತ ಗೋವಾದಲ್ಲಿ ಹೊಸ ಕೋವಿಡ್ ತಳಿ JN.1 ಪ್ರಕರಣ ಸಂಖ್ಯೆ 47ಕ್ಕೆ ಏರಿಕೆಯಾಗಿದೆ. 

Latest Videos

undefined

ಕೋವಿಡ್ ಮೇಲೆ ನಿಗಾ ಹೆಚ್ಚಿಸಿ: ಭಾರತ ಸೇರಿ ಆಗ್ನೇಯ ಏಷ್ಯಾದ ದೇಶಗಳಿಗೆ WHO ಎಚ್ಚರಿಕೆ

ಶುಕ್ರವಾರ(ಡಿ.29) ಮುಂಜಾನೆ 8 ಗಂಟೆಗೆ ದಾಖಲಾದ 24 ಗಂಟೆಗಳಲ್ಲಿ ಒಟ್ಟು 797 ಹೊಸ ಪ್ರಕರಣಗಳು ದಾಖಲಾಗಿತ್ತು. ಇದು ಕಳೆದ 225 ದಿನಗಳಲ್ಲೇ, ಅಂದರೆ ಸುಮಾರು 8 ತಿಂಗಳಲ್ಲೇ ದಾಖಲಾದ ಗರಿಷ್ಠ ಕೋವಿಡ್ ಸಂಖ್ಯೆಯಾಗಿದೆ. ಅದಾಗ್ಯೂ ಹೆಚ್ಚಿನ ಸೋಂಕಿತರು ರೋಗದಿಂದ ಗುಣಮುಖರಾಗುತ್ತಿರುವುದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 4,091ಕ್ಕೆ ಇಳಿಕೆಯಾಗಿದೆ. ಗುರುವಾರ ಈ ಸಂಖ್ಯೆಯು 4,097ರಷ್ಟಿತ್ತು. ಇದೇ ವೇಳೆ ಕೇರಳದ 2, ಮಹಾರಾಷ್ಟ್ರ, ಪಾಂಡಿಚೇರಿ ಮತ್ತು ತಮಿಳುನಾಡಲ್ಲಿ ತಲಾ 1 ಸೇರಿ ಒಟ್ಟು ಐವರು ಸೋಂಕಿತರು ಸಾವನ್ನಪ್ಪಿದ್ದಾರೆ.

ಬೆಂಗಳೂರಿನ ಎಂಜಿ ರಸ್ತೆ, ಚರ್ಚ್‌ಸ್ಟ್ರೀಟ್‌ನಲ್ಲಿ ಆಯೋಜಿಸಲಾಗಿರುವ ಹೊಸ ವರ್ಷದ ಸಂಭ್ರಮಾಚರಣೆಗೆ ತಡೆ ಕೋರಲು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ಹೈಕೋರ್ಟ್, ಪಾರ್ಟಿಗೆ ತಡೆ ನೀಡಲು ನಿರಾಕರಿಸಿದೆ. ಸರ್ಕಾರ ಯಾವುದೇ ಸಂಭ್ರಮಾಚರಣೆ ಅಥವಾ ಜನ ಸೇರುವಿಕೆಗೆ ನಿರ್ಬಂಧ ವಿಧಿಸಿಲಿಲ್ಲ. ಹೀಗಾಗಿ ಕೋರ್ಟ್ ತಡೆ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

 

ಮೈಸೂರಿನಲ್ಲಿ 7 ಕೊರೋನಾ ಪ್ರಕರಣ, ಆತಂಕ ಪಡುವ ಅಗತ್ಯ ಇಲ್ಲ: ಡಿಸಿ

ತಜ್ಞ ವೈದ್ಯರ ಜೊತೆ ಹಲವು ಸುತ್ತಿನ ಸಭೆ ನಡಸಲಾಗಿದೆ. ನಿರ್ಬಂಧನೆ ವಿಧಿಸುವ ಕುರಿತು ಪ್ರಸ್ತಾಪ ಬಂದಿಲ್ಲ. ಮೈಲ್ಡ್ ಸಿಂಪ್ಟಮ್ಸ್ ಕಾರಣ ಆಸ್ಪತ್ರೆ ದಾಖಲಾಗುವ ಪ್ರಮೇಯ ಇಲ್ಲ. ಹೀಗಾಗಿ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ವೈದ್ಯರ ತಂಡ ಸಲಹೆ ನೀಡಿದೆ ಎಂದು ಸರ್ಕಾರದ ಪರ ವಕೀಲರು ಹೈಕೋರ್ಟ್ ವಿಚಾರಣೆ ವೇಳೆ ಹೇಳಿದ್ದರು.

click me!