ಕೊರೋನಾ ಹೆಚ್ಚಳಕ್ಕೆ ಮಾಲಿನ್ಯವೇ ಕಾರಣ : ಅಧ್ಯಯನ

By Kannadaprabha NewsFirst Published Jul 3, 2021, 9:23 AM IST
Highlights
  • ಮಾಲಿನ್ಯದಿಂದ ಕೊರೋನಾ ಸೋಂಕಿಗೆ ತುತ್ತಾಗುವ ಸಾಧ್ಯತೆ ಅಧಿಕ
  • ಮಾಲಿನ್ಯಕಾರಕ ಪಿಎಂ 2.5 ಸೂಕ್ಷ್ಮ ಕಣಗಳಗೆ ಹೆಚ್ಚಾಗಿ ತೆರೆದುಕೊಳ್ಳುವುದೆ ಕಾರಣ
  •  16 ಪ್ರಮುಖ ನಗರಗಳಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಿರುವುದಕ್ಕೆ ಮಾಲಿನ್ಯ ಕಾರಣ

ನವದೆಹಲಿ (ಜು.03): ರಾಷ್ಟ್ರ ರಾಜಧಾನಿ ದೆಹಲಿ, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ತಮಿಳುನಾಡು ಈ ರಾಜ್ಯಗಳಲ್ಲಿ ಜನರು ಮಾಲಿನ್ಯಕಾರಕ ಪಿಎಂ 2.5 ಸೂಕ್ಷ್ಮ ಕಣಗಳಗೆ ಹೆಚ್ಚಾಗಿ ತೆರೆದುಕೊಳ್ಳುವ ಕಾರಣ ಕೊರೋನಾ ಸೋಂಕಿಗೆ ತುತ್ತಾಗುವ ಸಾಧ್ಯತೆ ಅಧಿಕಾಗಿದೆ ಎಂದು ಅಧ್ಯಯನವೊಂದು ತಿಳಿಸಿದೆ.

ಅಲ್ಲದೇ ಬೆಂಗಳೂರು, ಮುಂಬೈ, ಚೆನ್ನೈ, ಕೋಲ್ಕತಾ, ಪುಣೆ, ಅಹಮದಾಬಾದ್‌ ಸೇರಿದಂತೆ 16 ಪ್ರಮುಖ ನಗರಗಳಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಿರುವುದಕ್ಕೆ ಪಿಎಂ 2.5 ಸೂಕ್ಷ್ಮ ಕಣಗಳ ಹೊರಸೂಸುವಿಕೆ ಅಧಿಕ ಪ್ರಮಾಣದಲ್ಲಿರುವುದೇ ಕಾರಣ. ವಾಹನಗಳಿಂದ ಉಂಟಾಗುವ ಹೊಗೆಯಿಂದಾಗಿ ಪಿಎಂ 2.5 ಸೂಕ್ಷ್ಮ ಕಣಗಳ ಸಂದ್ರತೆ ಈ ನಗರಗಳಲ್ಲಿ ಅಧಿಕವಾಗಿದೆ. ಈ ಕಣಗಳು ಶ್ವಾಸಕೋಶದೊಳಕ್ಕೆ ಸೇರಿ ಉರಿಊತಕ್ಕೆ ಕಾರಣವಾಗುತ್ತದೆ. ಇದರಿಂದ ರೋಗನಿರೋಧಕ ಶಕ್ತಿ ಕುಂದಿ ಉಸಿರಾಟ ತೊಂದರೆ ಉಂಟಾಗುವ ಅಪಾಯ ಇರುತ್ತದೆ ಎಂದು ಅಧ್ಯಯನ ತಿಳಿಸಿದೆ.

ಇಂತಹ ಆರೋಗ್ಯ ಸಮಸ್ಯೆ ಇರೋರಲ್ಲೇ ಕೊರೋನಾ ಸೋಂಕು ಹೆಚ್ಚಳ..! .

ಭಾರತದಾದ್ಯಂತ 721 ಜಿಲ್ಲೆಗಳಲ್ಲಿ ನಡೆಸಲಾದ ಅಧ್ಯಯನದ ವೇಳೆ ಪಿಎಂ 2.5 ಸೂಕ್ಷ್ಮ ಕಣಗಳ ಹೊರಸೂಸುವಿಕೆಯ ಪ್ರಮಾಣ ಹಾಗೂ ಕೊರೋನಾ ಸೋಂಕಿಗೂ ಸಂಬಂಧ ಇರುವುದು ಹಾಗೂ ಇದರ ಪರಿಣಾಮವಾಗಿ ಸಾವು ಸಂಭವಿಸುತ್ತಿವುದಕ್ಕೆ ಬಲವಾದ ನಂಟು ಇರುವುದು ಕಂಡುಬಂದಿದೆ.

ಜಗತ್ತಿನ ಅತಿ ಮಲಿನ ರಾಜಧಾನಿ ದೆಹಲಿ! ...

ಪುಣೆ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಐಐಟಿ ಭುವನೇಶ್ವರ್‌ ಸೇರಿದಂತೆ ಹಲವು ವಿಶ್ವವಿದ್ಯಾಲಯಗಳ ಸಂಶೋಧಕರು ಈ ಜಲ್ಲೆಗಳಲ್ಲಿ ಕಳೆದ ವರ್ಷ ನವೆಂಬರ್‌ ವರೆಗಿನ ವಾಯುಮಾಲಿನ್ಯ ಮಟ್ಟಮತ್ತು ಕೊರೋನಾ ಪ್ರಕರಣಗಳು ಮತ್ತು ಸಾವುಗಳಿಗೆ ಸಂಬಂಧಿಸಿದ ದತ್ತಾಂಶಗಳನ್ನು ಅಧ್ಯಯನ ನಡೆಸಿ ಈ ವರದಿಯನ್ನು ಸಿದ್ಧಪಡಿಸಿದ್ದಾರೆ.

click me!