ನವದೆಹಲಿ (ಜು.03): ಭಾರತದಲ್ಲಿ ಶುಕ್ರವಾರ ಕೊರೋನಾಕ್ಕೆ 853 ಮಂದಿ ಮೃತಪಟ್ಟಿದ್ದು, ಮೃತರ ಸಂಖ್ಯೆ 4 ಲಕ್ಷ ಗಡಿ ದಾಟಿದೆ. ಇದರೊಂದಿಗೆ ಭಾರತವು ಕೊರೋನಾದಿಂದ 4 ಲಕ್ಷಕ್ಕೂ ಹೆಚ್ಚು ಮಂದಿ ಬಲಿ ಆದ 3ನೇ ದೇಶ ಎನ್ನಿಸಿಕೊಂಡಿದೆ. ಕೊರೋನಾ ಎರಡನೇ ಅಲೆಗೆ, ಇದರ ಅರ್ಧದಷ್ಟು(ಸುಮಾರು 2 ಲಕ್ಷ) ಜನರು ಬಲಿಯಾಗಿದ್ದರೆ, ಕಳೆದ 39 ದಿನದಲ್ಲೇ 1 ಲಕ್ಷ ಜನ ಸಾವನ್ನಪ್ಪಿದ್ದಾರೆ.
ಅಮೆರಿಕದಲ್ಲಿ 6.20 ಲಕ್ಷ, ಬ್ರೆಜಿಲ್‌ನಲ್ಲಿ 5.20 ಲಕ್ಷ ಮಂದಿ ಕೊರೋನಾಕ್ಕೆ ಬಲಿ ಆಗಿದ್ದಾರೆ. ಭಾರತದಲ್ಲಿ ಈವರಗೆ 4,00,312 ಮಂದಿ ಕೊರೋನಾಕ್ಕೆ ಬಲಿ ಆಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
undefined
ಕರ್ನಾಟಕದಲ್ಲಿ ಶೇ.1.92ಕ್ಕೆ ಇಳಿದ ಕೊರೋನಾ ಪಾಸಿಟಿವಿಟಿ ದರ ...
ಈ ನಡುವೆ, ದೈನಂದಿನ ಕೊರೋನ ವೈರಸ್ ಪ್ರಕರಣಗಳಲ್ಲಿ ಕೊಂಚ ಇಳಿಕೆ ಕಂಡುಬಂದಿದ್ದು, ಶುಕ್ರವಾರ ಮುಂಜಾನೆ 8 ಗಂಟೆಗೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ 46,617 ಕೇಸ್‌ಗಳು ಪತ್ತೆ ಆಗಿದೆ. ಈ ಮೂಲಕ ಒಟ್ಟು ಈವರೆಗಿನ ಪ್ರಕರಣಗಳ ಸಂಖ್ಯೆ 3.04 ಕೋಟಿಗೆ ಹೆಚ್ಚಳಗೊಂಡಿದೆ.
ದೇಶದಲ್ಲೀಗ ಸಕ್ರಿಯ ಪ್ರಕರಣಗಳ ಸಂಖ್ಯೆ 5.09 ಲಕ್ಷಕ್ಕೆ ಇಳಿಕೆ ಕಂಡಿದ್ದು, ಚೇತರಿಕೆ ಪ್ರಮಾಣ ಶೇ.97.01ಕ್ಕೆ ತಲುಪಿದೆ. ಒಟ್ಟು ಪ್ರಕರಣಗಳ ಪೈಕಿ ಸಕ್ರಿಯ ಪ್ರಕರಣಗಳ ಪಾಲು ಕೇವಲ ಶೇ.1.67ರಷ್ಟಿದೆ. ಸತತ 25 ದಿನಗಳಿಂದ ಪಾಸಿಟಿವಿಟಿ ದರ ಶೇ.5ಕ್ಕಿಂತಲೂ ಕಡಿಮೆ ದಾಖಲಾಗಿದೆ.