ಗರ್ಭಿಣಿಯರಿಗೆ ಕೊರೋನಾ ಲಸಿಕೆ : ಕೇಂದ್ರ ಅನುಮತಿ

By Kannadaprabha NewsFirst Published Jul 3, 2021, 8:41 AM IST
Highlights
  • ರಾಷ್ಟ್ರೀಯ ಸಲಹಾ ಸಮಿತಿಯ ಶಿಫಾರಸುಗಳನ್ನು ಒಪ್ಪಿಕೊಂಡಿರುವ ಕೇಂದ್ರ
  • ಆರೋಗ್ಯ ಸಚಿವಾಲಯ ಗರ್ಭಿಣಿಯರಿಗೆ ಲಸಿಕೆ ನೀಡಲು ಅನುಮೋದನೆ
  • ತಾವು ಲಸಿಕೆಯನ್ನು ಪಡೆಯಬೇಕೇ ಅಥವಾ ಬೇಡವೇ ಎಂಬ ನಿರ್ಧಾರ ಗರ್ಭಿಣಿಯರಿಗೇ ಬಿಟ್ಟಿದ್ದು

ನವದೆಹಲಿ (ಜು.03): ಮಹತ್ವದ ಬೆಳವಣಿಗೆಯೊಂದರಲ್ಲಿ ರಾಷ್ಟ್ರೀಯ ಸಲಹಾ ಸಮಿತಿಯ ಶಿಫಾರಸುಗಳನ್ನು ಒಪ್ಪಿಕೊಂಡಿರುವ ಕೇಂದ್ರ ಆರೋಗ್ಯ ಸಚಿವಾಲಯ ಗರ್ಭಿಣಿಯರಿಗೆ ಲಸಿಕೆ ನೀಡಲು ಅನುಮೋದನೆ ನೀಡಿದೆ.

ತಾವು ಲಸಿಕೆಯನ್ನು ಪಡೆಯಬೇಕೇ ಅಥವಾ ಬೇಡವೇ ಎಂಬ ನಿರ್ಧಾರ ಗರ್ಭಿಣಿಯರಿಗೇ ಬಿಟ್ಟಿದ್ದು, ಅವರು ತಮ್ಮ ಆಯ್ಕೆಯನ್ನು ಪ್ರಕಟಿಸಬಹುದಾಗಿದೆ. ಒಂದು ವೇಳೆ ಗರ್ಭಿಣಿಯರು ಸಲಿಕೆ ಪಡೆಯಲು ಬಯಸಿದರೆ ಕೋವಿನ್‌ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಂಡು ಸಮೀಪದ ಲಸಿಕಾ ಕೇಂದ್ರಕ್ಕೆ ತೆರಳಿ ಸಲಿಕೆ ಹಾಕಿಸಿಕೊಳ್ಳಬಹುದಾಗಿದೆ. ಈ ಸಂಬಂಧ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಾಹಿತಿಯನ್ನು ರವಾನಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರಾಜ್ಯದಾದ್ಯಂತ ಕೋವಿಡ್‌ ಲಸಿಕೆ ಕೊರತೆ, ಜನರ ಪರದಾಟ ...

ಇದುವರೆಗೆ 18 ವರ್ಷ ಮೇಲ್ಪಟ್ಟಎಲ್ಲಾ ವಯೋಮಾನದವರಿಗೆ ಲಸಿಕೆ ಪಡೆಯಲು ಅನುಮತಿ ನೀಡಿದ ಹೊರತಾಗಿಯೂ ಗರ್ಭಿಣಿಯರಿಗೆ ಮಾತ್ರ ಲಸಿಕೆ ಪಡೆಯಲು ಅನುಮತಿ ನೀಡಿರಲಿಲ್ಲ.

ರಾಜ್ಯಕ್ಕೆ ಲಸಿಕೆ ನೀಡಿಕೆಯಲ್ಲಿ ತಾರತಮ್ಯ: ಸಚಿವ ಸುಧಾಕರ್‌ ಪ್ರತಿಕ್ರಿಯೆ

ಗರ್ಭಿಣಿಯರಲ್ಲಿ ಕೊರೋನಾ ಸೋಂಕು ಹೆಚ್ಚಿನ ಅಪಾಯ ಉಂಟು ಮಾಡುವ ಸಾಧ್ಯತೆ ಇರುತ್ತದೆ. ಗರ್ಭಿಣಿಯರು ಲಸಿಕೆ ಪಡೆಯುವುದರಿಂದ ಸಂಭವನೀಯ ಅಪಾಯದಿಂದ ಪಾರಾಗಬಹುದು. ಹೀಗಾಗಿ ಸರ್ಕಾರ ಗರ್ಭಿಣಿಯರಿಗೆ ಲಸಿಕೆಯರನ್ನು ಲಸಿಕೆ ಪಡೆಯುವಂತೆ ಪ್ರೇರೇಪಿಸಬೇಕು. ಲಸಿಕೆ ಪಡೆಯುವುದರಿಂದ ಅವರ ಆರೋಗ್ಯದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ. ಜೊತೆ ಭ್ರೂಣಕ್ಕೂ ಯಾವುದೇ ಅಪಾಯ ಇಲ್ಲ ಎಂದು ತಜ್ಞರ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.

click me!